Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಇಂದಿನಿಂದ 3,991 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ : ಅಭ್ಯರ್ಥಿಗಳಿಗೆ ಈ ದಾಖಲೆಗಳು ಕಡ್ಡಾಯ.!

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ನೋಂದಣಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಮಾವು ಪ್ರಿಯರೇ ಗಮನಿಸಿ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಹೀಗೆ ಗುರುತಿಸಿ.!
KARNATAKA

ALERT : ಮಾವು ಪ್ರಿಯರೇ ಗಮನಿಸಿ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಹೀಗೆ ಗುರುತಿಸಿ.!

By kannadanewsnow57

ಬೆಂಗಳೂರು: ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ತರಹೇವಾರಿ ಮಾವಿನ ಹಣ್ಣುಗಳು ಲಭ್ಯವಿವೆ. ಆದರೆ, ಮಾವಿನ ಹಣ್ಣಿನ ಮೇಲಿರುವ ಮೋಹದಿಂದ ನೀವು ಮಾರುಕಟ್ಟೆಗೆ ಹೋದಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹಣ್ಣುಗಳನ್ನು ಬೇಗ ಹಣ್ಣಾಗಿಸಲು ವ್ಯಾಪಾರಿಗಳು ಬಳಸುತ್ತಿರುವ ಅಪಾಯಕಾರಿ ರಾಸಾಯನಿಕಗಳು ನಿಮ್ಮ ಹೊಟ್ಟೆಯನ್ನು ಸೇರುತ್ತಿವೆ.

ಕ್ಯಾಲ್ಸಿಯಂ ಕಾರ್ಬೈಡ್ ಎಂಬ ‘ನಿಧಾನ ವಿಷ’

ಹೆಚ್ಚಿನ ಲಾಭದ ಆಸೆಗೆ ಬಿದ್ದ ಕೆಲವು ವ್ಯಾಪಾರಿಗಳು ಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಬಿಡದೆ, ಕ್ಯಾಲ್ಸಿಯಂ ಕಾರ್ಬೈಡ್ (Calcium Carbide) ಎಂಬ ರಾಸಾಯನಿಕವನ್ನು ಬಳಸುತ್ತಿದ್ದಾರೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ‘ಮಸಾಲೆ’ ಎನ್ನಲಾಗುತ್ತದೆ.ಇದರಲ್ಲಿ ಆರ್ಸೆನಿಕ್ ಮತ್ತು ಫಾಸ್ಫರಸ್ ಅಂಶಗಳಿದ್ದು, ಇದು ಮಾನವನ ಆರೋಗ್ಯಕ್ಕೆ ತೀವ್ರ ಹಾನಿಕಾರಕ.

ಈ ಹಣ್ಣುಗಳನ್ನು ಸೇವಿಸುವುದರಿಂದ ತಲೆತಿರುಗುವಿಕೆ, ವಾಂತಿ, ಅತಿಸಾರ ಮತ್ತು ದೀರ್ಘಕಾಲದ ಬಳಕೆಯಿಂದ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.

ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಗುರುತಿಸುವುದು ಹೇಗೆ?

ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಖರೀದಿಸುವಾಗ ಈ ಕೆಳಗಿನ ವ್ಯತ್ಯಾಸಗಳನ್ನು ಗಮನಿಸಿ:

ಬಣ್ಣದ ಮೋಸ: ನೈಸರ್ಗಿಕವಾಗಿ ಹಣ್ಣಾದ ಮಾವು ಅಲ್ಲಲ್ಲಿ ಹಸಿರು ಮತ್ತು ಹಳದಿ ಬಣ್ಣದ ಮಿಶ್ರಣ ಹೊಂದಿರುತ್ತದೆ. ಆದರೆ ರಾಸಾಯನಿಕ ಬಳಸಿ ಹಣ್ಣಾಗಿಸಿದ ಮಾವು ಸಂಪೂರ್ಣವಾಗಿ ಗಾಢ ಹಳದಿ ಬಣ್ಣದಲ್ಲಿರುತ್ತದೆ.

ಕಪ್ಪು ಚುಕ್ಕೆಗಳು: ಕಾರ್ಬೈಡ್ ಬಳಸಿದ ಹಣ್ಣುಗಳ ಮೇಲೆ ಅಲ್ಲಲ್ಲಿ ಕಪ್ಪು ಬಣ್ಣದ ಸಣ್ಣ ಸಣ್ಣ ಕಲೆಗಳು ಕಾಣಿಸಿಕೊಳ್ಳುತ್ತವೆ.

ರುಚಿಯಲ್ಲಿ ವ್ಯತ್ಯಾಸ: ನೈಸರ್ಗಿಕ ಹಣ್ಣುಗಳು ಸವಿಯಾದ ಸಿಹಿ ಹೊಂದಿರುತ್ತವೆ. ಆದರೆ ರಾಸಾಯನಿಕ ಮಿಶ್ರಿತ ಹಣ್ಣುಗಳನ್ನು ತಿಂದಾಗ ನಾಲಿಗೆಯ ಮೇಲೆ ಸ್ವಲ್ಪ ಉರಿ ಅಥವಾ ವಿಚಿತ್ರವಾದ ರುಚಿ ಅನುಭವವಾಗಬಹುದು.

ತೇಲುವ ಪರೀಕ್ಷೆ: ಒಂದು ಬಕೆಟ್ ನೀರಿನಲ್ಲಿ ಮಾವಿನ ಹಣ್ಣನ್ನು ಹಾಕಿ. ಹಣ್ಣು ತಳಕ್ಕೆ ಹೋದರೆ ಅದು ನೈಸರ್ಗಿಕವಾಗಿ ಹಣ್ಣಾಗಿದೆ ಎಂದು ಅರ್ಥ. ಒಂದು ವೇಳೆ ಹಣ್ಣು ನೀರಿನ ಮೇಲೆ ತೇಲಿದರೆ ಅದು ಕೃತಕವಾಗಿ ಹಣ್ಣಾಗಿಸಲ್ಪಟ್ಟಿದೆ ಎಂದು ತಿಳಿಯಬಹುದು.

ಹಣ್ಣುಗಳನ್ನು ಬಳಸುವ ಮುನ್ನ ಈ ಮುನ್ನೆಚ್ಚರಿಕೆ ವಹಿಸಿ:

ಮಾರುಕಟ್ಟೆಯಿಂದ ತಂದ ಹಣ್ಣುಗಳನ್ನು ಕನಿಷ್ಠ 2 ರಿಂದ 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.

ನಂತರ ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆದು ಬಳಸಿ.

ಹಣ್ಣಿನ ಸಿಪ್ಪೆಯನ್ನು ಸಾಧ್ಯವಾದಷ್ಟು ತೆಗೆದು ಸೇವಿಸುವುದು ಉತ್ತಮ.

ಗಮನಿಸಿ: ಆರೋಗ್ಯವೇ ಭಾಗ್ಯ. ಸುಂದರವಾಗಿ ಕಾಣುವ ಎಲ್ಲ ಹಣ್ಣುಗಳು ಆರೋಗ್ಯಕರವಾಗಿರುವುದಿಲ್ಲ. ಹಾಗಾಗಿ ಹಣ್ಣುಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಿ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ALERT: Mango lovers take note: This is how to identify artificially ripened mangoes!
Share. Facebook Twitter LinkedIn WhatsApp Email

Related Posts

BIG NEWS : ಇಂದಿನಿಂದ 3,991 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ : ಅಭ್ಯರ್ಥಿಗಳಿಗೆ ಈ ದಾಖಲೆಗಳು ಕಡ್ಡಾಯ.!

2 Mins Read

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ನೋಂದಣಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

1 Min Read

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

4 Mins Read
Recent News

BIG NEWS : ಇಂದಿನಿಂದ 3,991 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ : ಅಭ್ಯರ್ಥಿಗಳಿಗೆ ಈ ದಾಖಲೆಗಳು ಕಡ್ಡಾಯ.!

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ನೋಂದಣಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

Let’s Talk Sex: ಕಡಿಮೆ ನಿದ್ದೆಯಿಂದ ಲೈಂಗಿಕ ಹಾರ್ಮೋನ್ ಗಳ ಮಟ್ಟ ಕುಸಿತ್ತದೆಯೇ? ಇಲ್ಲಿದೆ ತಜ್ಞರ ಮಾಹಿತಿ

State News
KARNATAKA

BIG NEWS : ಇಂದಿನಿಂದ 3,991 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ : ಅಭ್ಯರ್ಥಿಗಳಿಗೆ ಈ ದಾಖಲೆಗಳು ಕಡ್ಡಾಯ.!

By kannadanewsnow57 KARNATAKA 2 Mins Read

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭರ್ಜರಿ ಸಿಹಿ ಸುದ್ದಿ ನೀಡಿದೆ. ಒಟ್ಟು…

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ನೋಂದಣಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

‘ಐಐಟಿ ರೂರ್ಕಿ’ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್’, ಏನಿದರ ಉದ್ದೇಶ? 

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.