ಕೆಎನ್ಎನ್ಡಿಜಿಟಲ್ ಡೆಸ್ಕ್ : ಬೆಂಜಮಿನ್ ನೆತನ್ಯಾಹು ಶೀಘ್ರದಲ್ಲೇ ಇಸ್ರೇಲ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೆತನ್ಯಾಹು ತಡರಾತ್ರಿ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವ್ರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಇನ್ನು ಕುರಿತು ನೆತನ್ಯಾಹು ಟ್ವೀಟ್ ಮಾಡಿದ್ದು, “ಚುನಾವಣೆಯಲ್ಲಿ ನಮಗೆ ದೊರೆತ ಅಪಾರ ಜನಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇಸ್ರೇಲ್ ಪ್ರಜೆಗಳ ಹಿತದೃಷ್ಟಿಯಿಂದ ಕೆಲಸ ಮಾಡುವ ಇಂತಹ ಸರಕಾರ ಸ್ಥಾಪನೆಯಾಗಲಿದೆ” ಎಂದಿದ್ದಾರೆ.
ಅಮೆರಿಕದ ಮಾಧ್ಯಮ ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ, ಸಮ್ಮಿಶ್ರಕ್ಕಾಗಿ ನಡೆಯುತ್ತಿರುವ ಮಾತುಕತೆಗಳ 38 ದಿನಗಳ ನಂತ್ರ ನೆತನ್ಯಾಹು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೆತನ್ಯಾಹು ಅವರ ಘೋಷಣೆಯ ನಂತ್ರ ಮತ್ತೊಮ್ಮೆ ಬಲಪಂಥೀಯ ಪಕ್ಷವು ಇಸ್ರೇಲ್ನ ಅಧಿಕಾರವನ್ನು ವಶಪಡಿಸಿಕೊಳ್ಳಲಿದೆ.
ವರದಿಗಳ ಪ್ರಕಾರ, ಸರ್ಕಾರ ರಚಿಸಲು ನೀಡಲಾದ ಸಮಯ ಮುಗಿಯುವ 20 ನಿಮಿಷಗಳ ಮೊದಲು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಗೆ ನೆತನ್ಯಾಹು ಕರೆ ಬಂದಿದೆ. ಹೊಸ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸುವ ಮೊದಲು ವಿವಾದಾತ್ಮಕ ಕಾನೂನುಗಳನ್ನ ಅಂಗೀಕರಿಸುವ ಷರತ್ತಿನ ಮೇಲೆ ಅನೇಕ ಪಕ್ಷಗಳು ನೆತನ್ಯಾಹು ಅವರನ್ನ ಬೆಂಬಲಿಸಿವೆ. ಈಗ ಈ ಹೊಸ ಕಾನೂನುಗಳನ್ನ ಜನವರಿಯ ಆರಂಭದಲ್ಲಿಯೇ ಅಂಗೀಕರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಮುಂದಿನ ವಾರ ಸಾಧ್ಯವಾದಷ್ಟು ಬೇಗ ಪ್ರಕ್ರಿಯೆಯನ್ನ ಪೂರ್ಣಗೊಳಿಸಲು ಉದ್ದೇಶಿಸಿರುವುದಾಗಿ ನೆತನ್ಯಾಹು ಘೋಷಿಸಿದರು. ಇನ್ನು ಪ್ರಮಾಣ ವಚನ ಸ್ವೀಕಾರದ ದಿನಾಂಕವನ್ನ ಪ್ರಕಟಿಸಿಲ್ಲ. ಆದ್ರೆ, ಜನಾದೇಶವನ್ನ ಸ್ವೀಕರಿಸಿದ ಒಂದು ವಾರದ ನಂತರ ನೆತನ್ಯಾಹು ಹೊಸ ಸರ್ಕಾರವನ್ನ ರಚಿಸಲು ಯೋಜಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
Shocking News : ಪೋಷಕರೇ ಎಚ್ಚರ ; ಕೆಮ್ಮಿನ ಸಿರಪ್ ಕುಡಿದ 2 ವರ್ಷದ ಬಾಲಕಿಗೆ ‘ಹೃದಯ ಸ್ತಂಭನ’
BIGG NEWS : ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಬೆಂಬಲ ಬೆಲೆ ಯೋಜನೆಯಡಿ ಭತ್ತ, ಬಿಳಿಜೋಳ ಖರೀದಿಗೆ ನೋಂದಣಿ ಆರಂಭ