ಬೆಂಗಳೂರು : ಜೈಲು ವಾರ್ಡನಿಂದಲೇ ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ ಮಾಡಲಾಗುತ್ತಿದ್ದೂ, ತಂಬಾಕು, ಮಾದಕ ವಸ್ತು ಪೂರೈಸುತ್ತಿದ್ದ ವಾರ್ಡನ್ ಕಲ್ಲಪ್ಪ ಎನ್ನುವನನ್ನು ಅರೆಸ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಂದ ಆರೋಪಿ ಕಲ್ಲಪ್ಪನನ್ನ ಅರೆಸ್ಟ್ ಮಾಡಲಾಗಿದೆ.ಆರೋಪಿ ಕಲ್ಲಪ್ಪನನ್ನು ಬಂಧಿಸಿ 100 ಗ್ರಾಂ ಆಶಿಶ್ ಆಯಿಲ್ ಜಪ್ತಿ ಮಾಡಿಕೊಳ್ಳಲಾಗಿದೆ.
ಆರೋಪಿ ಕಲ್ಲಪ್ಪ ಮಾದಕ ವಸ್ತು ಕಾಶೀಶೈಲ್ ತಂಬಾಕು ಯಾರಿಂದ ಪಡೆಯುತ್ತಿದ್ದ ಹಾಗೂ ಜೈಲಿನಲ್ಲಿರುವ ಯಾವ ಕೈದಿಗಳಿಗೆ ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 2018 ರಲ್ಲಿ ಕಾರಾಗೃಹದ ಇಲಾಖೆಗೆ ಸೇರಿದ ಕೆಲತಿಗಳಿಂದ ಸೆಪ್ಟೆಂಬರ್ 7 ರಂದು ಸಂಜೆ ಜೈಲಿನ ಪ್ರವೇಶ ದ್ವಾರದ ಬಳಿ ಕಲ್ಲಪ್ಪನನ್ನು ಪರಿಶೀಲನೆ ಮಾಡಲಾಯಿತು. ಡ್ಯೂಟಿಗೆ ಬರುವ ವೇಳೆ ಸಿಐಎಸ್ಎಫ್ ಸಿಬ್ಬಂದಿಗಳು ಕಳ್ಳಪ್ಪನನ್ನು ಪರಿಶೀಲನೆ ಮಾಡಿದ್ದಾರೆ, ಈ ವೇಳೆ ತಂಬಾಕು ಹಾಗು ಆಶಿಶ್ ಪತ್ತೆಯಾಗಿದೆ