ಬೆಂಗಳೂರು: ನಾಳೆಯಿಂದ ಬೆಂಗಳೂರಿನ ಜನತೆಗೆ ಅನುಕೂಲವಾಗಿಸೋ ನಿಟ್ಟಿನಲ್ಲಿ ಸೆಪ್ಟೆಂಬರ್ 18ರವರೆಗೆ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡೋದಕ್ಕೆ ಬಿಬಿಎಂಪಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿನ ವಿಶೇಷ ಅಭಿಯಾನ ನಡೆಸಲಾಗುತ್ತಿದೆ.
ಈ ಕುರಿತಂತೆ ಬೆಂಗಳೂರಿನ ಅಪರ ಜಿಲ್ಲಾ ಚುನಾವಣಾ ಅಧಿಕಾರಿ(ಕೇಂದ್ರ) ಹಾಗೂ ವಿಶೇಷ ಆಯುಕ್ತರಾದ ರಂಗಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ: 23/Inst/2022-ERS ದಿನಾಂಕ: 04.07.2022. ನಿರ್ದೇಶನದಂತೆ, ಮತದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಿನಾಂಕ: 01.08.2022 ರಂದು ಭಾರತಾದ್ಯಂತ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದನ್ನು ಕಾರ್ಯರೂಪಕ್ಕೆ ತರಲಾಗಿರುತ್ತದೆ ಎಂದಿದ್ದಾರೆ.
ಅರವಿಂದ ಲಿಂಬಾವಳಿ ಸಾರ್ವಜನಿಕ ಕ್ಷೇತ್ರದಲ್ಲಿ ಇರಲು ನಾಲಾಯಕ್ – ದಿನೇಶ್ ಗುಂಡೂರಾವ್ ವಾಗ್ಧಾಳಿ
ಮುಂದುವರೆದಂತೆ, ದಿನಾಂಕ: 04.09.2022 ಹಾಗೂ 18.09.2022 ರಂದು ವಾರದ ಮೊದಲನೇ ಭಾನುವಾರ ಮತ್ತು ಮೂರನೇ ಭಾನುವಾರಗಳಂದು ಜಿಲ್ಲಾ ಚುನಾವಣಾಧಿಕಾರಿ ಬೆಂಗಳೂರು ಬಿ.ಬಿ.ಎಂ.ಪಿ. ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿನ ಮತಗಟ್ಟೆಗಳಲ್ಲಿ ಸ್ವಯಂ ಪ್ರೇರಿತ ಆಧಾರ್ ಜೋಡಣೆ ವಿಶೇಷ ಅಭಿಯಾನ ಸಮಯ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ರವರಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿದೆ . ಇದರ ಸದುಪಯೋಗವನ್ನು ಸಾರ್ವಜನಿಕರು ಹಾಗೂ ಮತದಾರರು ಪಡೆದುಕೊಳ್ಳಲು ಕೋರಿದ್ದಾರೆ.
BIG NEWS : ನಾಸಾ ಮಹತ್ವಾಕಾಂಕ್ಷೆಯ ‘Artemis-1’ ಉಡಾವಣೆ ಮತ್ತೆ ಮುಂದೂಡಿಕೆ ; ನಾಸಾ |Artemis moon rocket