ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ( Bengaluru Rain ) ತತ್ತರಿಸಿ ಹೋಗಿದೆ. ಅಲ್ಲದೇ ವರುಣನ ಆರ್ಭಟದಿಂದಾಗಿ ಜಾಗತಿಕ ಮಟ್ಟದಲ್ಲಿಯೂ ಚರ್ಚೆಯಾಗುತ್ತಿದೆ. ಇದಲ್ಲದೇ ಜೂನ್ ನಿಂದ ಸೆಪ್ಟೆಂಬರ್ 7ರವರೆಗೆ ಬೆಂಗಳೂರಿನಲ್ಲಿ 103 ಸೆಂ.ಮೀಟ ಮಳೆಯಾಗಿದ್ದು, ದು ಈ ಅವಧಿಯಲ್ಲಿ ಐತಿಹಾಸಿಕ ದಾಖಲೆಯಾಗಿದೆ.
BIG NEWS: ಐಟಿ ಕಂಪನಿಗಳಿಗೆ ಸರ್ಕಾರದ ಅಭಯ: ಮುಂದಿನ ಮಳೆಗಾಲಕ್ಕೆ ಸಮಸ್ಯೆ ಪರಿಹಾರ
ಇದಷ್ಟೇ ಅಲ್ಲದೇ ಮುಂಗಾರು ಹಂಗಾಮಿನ ಸಾರ್ವಕಾಲಿಕ ದಾಖಲೆಯಾದ 114.98 ಸೆ.ಮೀ ಮಳೆಯಾಗೋ ಮೂಲಕ ಈ ಹಿಂದಿನ ದಾಖಲೆಯನ್ನು ಮುರಿದು ಬೀಳುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ.
ಇಂಧನ ಸಚಿವ ಸುನೀಲ್ ಕುಮಾರ್ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ಧಾಳಿ
ಅಂದಹಾಗೇ ಬೆಂಗಳೂರಿನಲ್ಲಿ 1998ರಲ್ಲಿ ಜೂನ್ ನಿಂದ ಆಗಸ್ಟ್ ವರೆಗೆ 91 ಸೆಂ. ಮೀಟರ್ ಮಳೆ ಆಗಿದ್ದು, ಈವರೆಗಿನ ದಾಖಲೆಯಾಗಿತ್ತು. ಆದ್ರೇ ಈ ವರ್ಷ ಇದೇ ಅವಧಿಯಲ್ಲಿ 88 ಸೆಂ. ಮೀ ಮಳೆಯಾಗಿದೆ. ಅದ್ರೇ ಅದರ ನಂತ್ರದ 1 ವಾರದಲ್ಲಿ ಮತ್ತೆ 15 ಸೆ. ಮೀ ಮಳೆಯಾಗಿದ್ದು, ಇದು ಹಿಂದೆಂದಿಗಿಂತ ಹೆಚ್ಚು ಆಗಿದೆ.
ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಅನಾಹುತಗಳ ಅಧ್ಯಯನ ನಡೆಸಲು, ಕೇಂದ್ರ ಸರ್ಕಾರದ ತಂಡ ಬುಧವಾರ ಬೆಂಗಳೂರಿಗೆ ಆಗಮಿಸಿದೆ. ಈ ತಂಡದ ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಸಭೆ ನಡೆಸಿದ್ದರು. ತಂಡಗಳು ಗುರುವಾರದಿಂದ 3 ದಿನಗಳ ಕಾಲ ವಿವಿಧ ಜಿಲ್ಲೆಗಳಿಗೆ ತೆರಳಿ, ಮಳೆಹಾನಿ ಪರಿಶೀಲನೆ ನಡೆಸಲಿವೆ