ಬೆಂಗಳೂರು: ನಗರದಲ್ಲಿ ನಡುರಸ್ತೆಯಲ್ಲೇ ಬಿಎಂಟಿಸಿ ಬಳಿಕ, ಇದೀಗ ಪೊಲೀಸರ ಹೊಯ್ಸಳ ವಾಹನ ( Hoysala Vehicle ) ಕೂಡ ಬೆಂಕಿ ಹೊತ್ತಿಕೊಂಡು ಧಗಧಗಿಸಿ ಉರಿದಿರುವ ಘಟನೆ ನಡೆದಿದೆ.
ಬೆಂಗಳೂರಿನ ಸಿಟಿ ಮಾರುಕಟ್ಟೆಯ ( Bengaluru City Market ) ಬಳಿಯಲ್ಲಿನ ವೃತ್ತದಲ್ಲಿ ಇಂದು ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯ ( Police Station ) ಹೊಯ್ಸಳ-79 ವಾಹನದಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಕೂಡಲೇ ಅದರಲ್ಲಿದ್ದಂತ ಪೊಲೀಸರು ಕೆಳಗೆ ಇಳಿಯುತ್ತಿದ್ದಂತೇ ವಾಹನ ಹೊತ್ತಿ ಉರಿದಿದೆ.
ಉತ್ತರ ಕನ್ನಡ ಜನತೆಯ ಬೆಂಬಲಕ್ಕೆ ನಿಂದ ಮಾಜಿ ಸಿಎಂ ಕುಮಾರಸ್ವಾಮಿ: ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಾಗಿ ಆಗ್ರಹ
ಈ ಘಟನೆಯನ್ನು ಕಂಡಂತ ಸ್ಥಳೀಯರು, ಕೂಡಲೇ ಹೊಯ್ಸಳ ವಾಹನಕ್ಕೆ ಹೊತ್ತಿಕೊಂಡಿದ್ದಂತ ಬೆಂಕಿಯನ್ನು ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿ ಹೊತ್ತಿಕೊಂಡ ಪರಿಣಾಮ, ಹೊಯ್ಸಳ-79 ವಾಹನ ಸುಟ್ಟು ಕರಕಲಾಗಿದೆ.
ಪತ್ನಿಯ ಮರಣದ ನಂತ್ರ ಮಗಳನ್ನೂ ತೊರೆದ ತಂದೆ: CBSE 10ನೇ ತರಗತಿ ಪರೀಕ್ಷೆಯಲ್ಲಿ 99.4% ಅಂಕ ಗಳಿಸಿದ ಬಾಲಕಿ!
ಸದ್ಯಕ್ಕೆ ದೊರತೆ ಮಾಹಿತಿ ಪ್ರಕಾರ ಪೊಲೀಸ್ ಸಿಬ್ಬಂದಿಯೋರ್ವರು ಮಾತ್ರವೇ ಬೆಂಕಿಗೆ ಆಹುತಿಯಾದಂತ ಹೊಯ್ಸಳ ವಾಹನದಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿ ಮಾಹಿತಿ ತಿಳಿದು ಬರಬೇಕಿದೆ.