Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆನಡಾದಲ್ಲಿ ವಾಸಿಸುವ ಕನಸು ಕಾಣುತ್ತಿದ್ದೀರಾ.? ಶಾಶ್ವತ ನಿವಾಸಕ್ಕೆ ಅರ್ಜಿ ಸಲ್ಲಿಸಲು 6,000 ವಿದೇಶಿಯರಿಗೆ ಆಹ್ವಾನ!

12/12/2025 10:05 PM

ಮದ್ಯಕ್ಕಿಂತ ಅಪಾಯಕಾರಿ ಈ ‘ಪಾನೀಯ’, ಕುಡಿದ್ರೆ ನಿಮ್ಮ ಕಿಡ್ನಿ ಹಾಳಾಗುತ್ವೆ!

12/12/2025 9:50 PM

ನಿಮ್ಮ ಹಳೆ ಫೋನ್ ಅದ್ಭುತ ಮಾಡುತ್ತೆ! ನಿಮಿಷದಲ್ಲೇ ಮನೆಯ ‘ಸೆಕ್ಯೂರಿಟಿ ಕ್ಯಾಮೆರಾ’ವನ್ನಾಗಿ ಪರಿವರ್ತಿಸ್ಬೋದು!

12/12/2025 9:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ನಗರದ ತಲಾದಾಯ ಕುಸಿತ: ಛಲವಾದಿ ನಾರಾಯಣಸ್ವಾಮಿ ವಾಗ್ಧಾಳಿ
KARNATAKA

ಬೆಂಗಳೂರು ನಗರದ ತಲಾದಾಯ ಕುಸಿತ: ಛಲವಾದಿ ನಾರಾಯಣಸ್ವಾಮಿ ವಾಗ್ಧಾಳಿ

By kannadanewsnow0908/11/2025 5:00 PM

ಬೆಂಗಳೂರು: ಬೆಂಗಳೂರು ನಗರದ ತಲಾದಾಯ ಕುಸಿತಗೊಂಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಆರ್ಥಿಕ ದಿಕ್ಕು ತಪ್ಪಿಸುತ್ತಿದೆ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಕರ್ನಾಟಕದ ಅಭಿವೃದ್ಧಿಯ ನಾಡಿಯಾದ ಬೆಂಗಳೂರು ನಗರ, ರಾಜ್ಯದ ಆರ್ಥಿಕ ಪ್ರಗತಿಯ “ಕೇಂದ್ರೀಯ ಶಕ್ತಿ” ಎಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ಕರ್ನಾಟಕ ಆರ್ಥಿಕ ಸಮೀಕ್ಷೆ 2023-24 ಈ ವಾಸ್ತವವನ್ನು ಪ್ರಶ್ನಿಸುವಂತಾಗಿದೆ ಎಂದಿದ್ದಾರೆ.

📉 2021-22 ರಲ್ಲಿ ಬೆಂಗಳೂರು ನಗರ ಜಿಲ್ಲೆಯ ತಲಾಆದಾಯ ₹6,21,131,
📉 2022-23 ರಲ್ಲಿ ಬೆಂಗಳೂರು ನಗರ ಜಿಲ್ಲೆಯ ತಲಾಆದಾಯ ₹7,60,362 ಇದ್ದು,
📉 2023-24 ರಲ್ಲಿ ಅದು ₹7,38,910 ಕ್ಕೆ ಕುಸಿದಿದೆ!

ಪ್ರಸಕ್ತ ವರ್ಷದಲ್ಲಿ ಜಿಲ್ಲಾ ತಲಾಆದಾಯ ಇನ್ನಷ್ಟು ಕುಸಿಯುವ ವಾತಾವರಣವನ್ನು ಕಾಂಗ್ರೆಸ್ ಸರ್ಕಾರವು ನಿರ್ಮಾಣ ಮಾಡಿರುವುದಂತೂ ಸತ್ಯ ಸಂಗತಿಯಾಗಿದೆ.

ರಾಜ್ಯದ ಅತ್ಯಂತ ಶ್ರೀಮಂತ ಜಿಲ್ಲೆಯೇ ಆದಾಯ ಕುಸಿತ ಕಂಡರೆ, ಉಳಿದ ಜಿಲ್ಲೆಗಳ ಸ್ಥಿತಿ ಊಹಿಸಲು ಅಸಾಧ್ಯ. ಇದಕ್ಕಿಂತ ದುಃಖದ ಸಂಗತಿ — “ಕಲಬುರಗಿ ಜಿಲ್ಲೆ” ತಲಾದಾಯದ ದೃಷ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ!

🔸 ತಲಾದಾಯದ ಅರ್ಥ ಮತ್ತು ಅದರ ಪ್ರಾಮುಖ್ಯತೆ.

ತಲಾದಾಯ (Per Capita Income) ಎಂದರೆ ಒಂದು ಪ್ರದೇಶದ ಆರ್ಥಿಕ ಶಕ್ತಿಯ ಪ್ರತೀಕ. ಇದು ಜನರ ಸರಾಸರಿ ಆದಾಯ, ಜೀವನಮಟ್ಟ, ಉದ್ಯೋಗಾವಕಾಶ, ಕೈಗಾರಿಕಾ ಬೆಳವಣಿಗೆ, ಶಿಕ್ಷಣ ಮತ್ತು ಮೂಲಸೌಕರ್ಯಗಳ ಮಟ್ಟವನ್ನು ತೋರಿಸುತ್ತದೆ.

ತಲಾದಾಯ ಹೆಚ್ಚಾಗಿರುವುದು ಆ ಪ್ರದೇಶದ ಆರ್ಥಿಕ ಚಟುವಟಿಕೆಗಳು ಸಕ್ರಿಯವಾಗಿವೆ ಎಂಬುದನ್ನು ಸೂಚಿಸುತ್ತದೆ. ಆದರೆ ಬೆಂಗಳೂರು ನಗರದಲ್ಲೇ ತಲಾದಾಯ ಕುಸಿತ ಕಂಡಿರುವುದು —
➡️ ಉದ್ಯೋಗ ಸೃಷ್ಟಿ ಕುಂಠಿತವಾಗಿದೆ,
➡️ ಹೂಡಿಕೆಗಳು ಸ್ತಬ್ಧವಾಗಿವೆ,
➡️ ಕೈಗಾರಿಕಾ ನೀತಿಗಳು ಅಸ್ಪಷ್ಟವಾಗಿವೆ,
➡️ ಆಡಳಿತದ ಅಸಮರ್ಥತೆ ಮತ್ತು ರಾಜಕೀಯ ನಿರ್ಲಕ್ಷ್ಯ ಹೆಚ್ಚಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

🔸 ಜಿಲ್ಲಾ ಮಟ್ಟದ ಅಭಿವೃದ್ಧಿಯ ಅಗತ್ಯ.

ಪ್ರತಿಯೊಂದು ಜಿಲ್ಲೆಗೂ ವಿಶಿಷ್ಟವಾದ ಸಂಪನ್ಮೂಲಗಳು ಮತ್ತು ಬೆಳವಣಿಗೆ ಸಾಮರ್ಥ್ಯವಿದೆ. ಆ ಸಾಮರ್ಥ್ಯವನ್ನು ಪರಿಣಾಮಕಾರಿ ಯೋಜನೆಗಳ ಮೂಲಕ ರೂಪಾಂತರಗೊಳಿಸಲು ಜಿಲ್ಲಾ ಯೋಜನಾ ಸಮಿತಿಗಳು (District Planning Committees) ಪ್ರಮುಖ ಪಾತ್ರವಹಿಸಬೇಕು. ಈ ಸಮಿತಿಗಳು ಸ್ಥಳೀಯ ಅಗತ್ಯಗಳಿಗೆ ಅನುಗುಣವಾದ ಯೋಜನೆಗಳನ್ನು ರೂಪಿಸಿ:
✅ ಉದ್ಯೋಗಾವಕಾಶಗಳು,
✅ ಮೂಲಸೌಕರ್ಯ ಅಭಿವೃದ್ಧಿ,
✅ ಕೃಷಿ ಹಾಗೂ ಕೈಗಾರಿಕಾ ವಲಯಗಳ ಏಳಿಗೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು.

ಇದರಿಂದ ನೀತಿ ಆಯೋಗದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ “District as a Fulcrum of Development” ಗೆ ಸಹಕಾರಿಯಾಗುವುದರೊಂದಿಗೆ ಜಿಲ್ಲಾ ಮತ್ತು ರಾಜ್ಯ ಆದಾಯವನ್ನು ಹೆಚ್ಚಿಸಬಹುದಾಗಿದೆ ಹಾಗೂ ನೀತಿ ಆಯೋಗದ ಈ ಕಾರ್ಯಕ್ರಮ ನಿಜವಾದ ಅರ್ಥದಲ್ಲಿ ಕಾರ್ಯರೂಪ ಪಡೆಯುತ್ತದೆ. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಈ ರೀತಿಯ ಯೋಜಿತ ಕಾರ್ಯಪದ್ಧತಿ ಕಾಣಿಸದಿರುವುದು ವಿಷಾದನೀಯ!

ನೀತಿ ಆಯೋಗ ಸಭೆಗೆ ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳೇ ಗೈರು — ಅಭಿವೃದ್ಧಿಯ ಕಡೆ ನಿರ್ಲಕ್ಷ್ಯ!

ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ನೀತಿ ಆಯೋಗ ಸಭೆಗೆ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಜರಾಗದೇ ಇರುವುದು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದ ಪರಮಾವಧಿಯಾಗಿದೆ.

ರಾಜ್ಯ ಮತ್ತು ಕೇಂದ್ರದ ಸಹಯೋಗದ ವೇದಿಕೆಯಲ್ಲಿ ಭಾಗವಹಿಸದೇ ಇರುವುದರಿಂದ:
🔸 ಕರ್ನಾಟಕ ತನ್ನ ಹಕ್ಕಿನ ಯೋಜನೆಗಳು ಮತ್ತು ನಿಧಿಗಳಿಂದ ವಂಚಿತವಾಗುತ್ತಿದೆ,
🔸 ರಾಜ್ಯದ ಆರ್ಥಿಕ ಅಭಿವೃದ್ಧಿ ನಿಧಾನಗೊಳ್ಳುತ್ತಿದೆ,
🔸 ಜನರ ಹಿತದ ಕುರಿತ ಸ್ಪಷ್ಟ ದೃಷ್ಟಿಕೋನ ಕಾಂಗ್ರೆಸ್ ಸರ್ಕಾರದಲ್ಲಿ ಕಾಣುತ್ತಿಲ್ಲ.

ಇದು ಕೇವಲ ಆಡಳಿತದ ವಿಫಲತೆ ಅಲ್ಲ — 👉 ಇದು ರಾಜ್ಯದ ಹಿತದ ವಿರುದ್ಧವಾದ ಕಾಂಗ್ರೆಸ್ ಸರ್ಕಾರದ ರಾಜಕೀಯ ಅಲಕ್ಷ್ಯ!

Indian National Congress – Karnataka ಸರ್ಕಾರವು ತನ್ನ ಚುನಾವಣಾ ಸರಕಾದ ಗ್ಯಾರಂಟಿಗಳ ರಾಜಕೀಯ ಗುಂಗಿನಿಂದ ಹಾಗೂ ದ್ವೇಷದ ರಾಜಕಾರಣದಿಂದ ಹೊರಬಂದು, ಜನರ ಆದಾಯ ಹೆಚ್ಚಿಸುವ, ಉದ್ಯೋಗ ಸೃಷ್ಟಿಸುವ ಹಾಗೂ ಜಿಲ್ಲಾಮಟ್ಟದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವ ಕಾರ್ಯಪ್ರವೃತ್ತಿಯನ್ನು ತಕ್ಷಣ ಆರಂಭಿಸಬೇಕೆಂದು ಹಾಗೂ,

✅ ಜಿಲ್ಲಾ ಯೋಜನಾ ಸಮಿತಿಗಳಿಗೆ ಅಧಿಕಾರ ಮತ್ತು ಸಂಪನ್ಮೂಲ ಬಲ ನೀಡಬೇಕು.
✅ ಕೈಗಾರಿಕಾ ಹೂಡಿಕೆಗಳನ್ನು ಆಕರ್ಷಿಸಲು ಸ್ಪಷ್ಟ, ನಂಬಿಕೆಯುತ ನೀತಿ ರೂಪಿಸಬೇಕು.
✅ ಕೃಷಿ, ಶಿಕ್ಷಣ ಮತ್ತು ತಂತ್ರಜ್ಞಾನ ವಲಯಗಳ ಸಮತೋಲನ ಬೆಳವಣಿಗೆಗೆ ಆದ್ಯತೆ ನೀಡಬೇಕು.
✅ ರಾಜ್ಯ-ಕೇಂದ್ರ ಸಹಯೋಗದ ವೇದಿಕೆಗಳಾದ ನೀತಿ ಆಯೋಗದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.

“ರಾಜ್ಯದ ಅತ್ಯಂತ ಅಭಿವೃದ್ಧಿ ಹೊಂದಿದ ಜಿಲ್ಲೆಯ ತಲಾದಾಯವೇ ಕುಸಿದರೆ, ಉಳಿದ ಜಿಲ್ಲೆಗಳ ಜನರ ಬದುಕು ಹೇಗೆ ಸುಧಾರಿಸಬಹುದು?”

ಈ ಮೇಲಿನ ಎಲ್ಲಾ ಪ್ರಶ್ನೆಗೆ ಉತ್ತರ ನೀಡಬೇಕಾದವರು — 👉 ರಾಜ್ಯದ ಆರ್ಥಿಕ ದಿಕ್ಕು ತಪ್ಪಿಸಿದ “ಕಾಂಗ್ರೆಸ್ ಸರ್ಕಾರವೇ” ಎಂಬುದಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಗುಡುಗಿದ್ದಾರೆ.

ಬೆಂಗಳೂರು ನಗರದ ತಲಾದಾಯ ಕುಸಿತ — ರಾಜ್ಯದ ಆರ್ಥಿಕ ದಿಕ್ಕು ತಪ್ಪಿಸಿದ ಕಾಂಗ್ರೆಸ್ ಸರ್ಕಾರ!

ಕರ್ನಾಟಕದ ಅಭಿವೃದ್ಧಿಯ ನಾಡಿಯಾದ ಬೆಂಗಳೂರು ನಗರ, ರಾಜ್ಯದ ಆರ್ಥಿಕ ಪ್ರಗತಿಯ "ಕೇಂದ್ರೀಯ ಶಕ್ತಿ" ಎಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ಕರ್ನಾಟಕ ಆರ್ಥಿಕ ಸಮೀಕ್ಷೆ 2023-24 ಈ ವಾಸ್ತವವನ್ನು ಪ್ರಶ್ನಿಸುವಂತಾಗಿದೆ!

📉 2021-22 ರಲ್ಲಿ… pic.twitter.com/PtgzSuyVlp

— Chalavadi Narayanaswamy (@NswamyChalavadi) November 8, 2025

BREAKING: ರಾಜ್ಯ ಸರ್ಕಾರದಿಂದ ‘ಕಬ್ಬಿಗೆ ಹೆಚ್ಚುವರಿ ಬೆಲೆ’ ನಿಗದಿಗೊಳಿಸಿ ಅಧಿಕೃತ ಆದೇಶ

ಉಡುಪಿಯ ಕುಂದಾಪುರ ಉಪ ವಿಭಾಗದ ಗ್ರೇಡ್-2 ತಹಶೀಲ್ದಾರ್ ಮಲ್ಲಿಕಾರ್ಜುನ್ ಸಸ್ಪೆಂಡ್

Share. Facebook Twitter LinkedIn WhatsApp Email

Related Posts

BREAKING: ರಾಜ್ಯಾದ್ಯಂತ ‘ಸರ್ಕಾರಿ ಶಾಲೆ’ಗಳಲ್ಲಿ ‘2,200 ಕೊಠಡಿ’ಗಳ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ

12/12/2025 8:56 PM5 Mins Read

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಕರ್ನಾಟಕ ಸರ್ಕಾರ ಆದೇಶ

12/12/2025 8:53 PM2 Mins Read

ಇಂದು ಶಿಗ್ಗಾಂವಿ ಕ್ಷೇತ್ರದ ಜನತೆಯ ಬಹುದಿನದ ಕನಸು ನನಸು: ಸಂಸದ ಬಸವರಾಜ ಬೊಮ್ಮಾಯಿ

12/12/2025 8:22 PM1 Min Read
Recent News

ಕೆನಡಾದಲ್ಲಿ ವಾಸಿಸುವ ಕನಸು ಕಾಣುತ್ತಿದ್ದೀರಾ.? ಶಾಶ್ವತ ನಿವಾಸಕ್ಕೆ ಅರ್ಜಿ ಸಲ್ಲಿಸಲು 6,000 ವಿದೇಶಿಯರಿಗೆ ಆಹ್ವಾನ!

12/12/2025 10:05 PM

ಮದ್ಯಕ್ಕಿಂತ ಅಪಾಯಕಾರಿ ಈ ‘ಪಾನೀಯ’, ಕುಡಿದ್ರೆ ನಿಮ್ಮ ಕಿಡ್ನಿ ಹಾಳಾಗುತ್ವೆ!

12/12/2025 9:50 PM

ನಿಮ್ಮ ಹಳೆ ಫೋನ್ ಅದ್ಭುತ ಮಾಡುತ್ತೆ! ನಿಮಿಷದಲ್ಲೇ ಮನೆಯ ‘ಸೆಕ್ಯೂರಿಟಿ ಕ್ಯಾಮೆರಾ’ವನ್ನಾಗಿ ಪರಿವರ್ತಿಸ್ಬೋದು!

12/12/2025 9:10 PM

BREAKING: ರಾಜ್ಯಾದ್ಯಂತ ‘ಸರ್ಕಾರಿ ಶಾಲೆ’ಗಳಲ್ಲಿ ‘2,200 ಕೊಠಡಿ’ಗಳ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ

12/12/2025 8:56 PM
State News
KARNATAKA

BREAKING: ರಾಜ್ಯಾದ್ಯಂತ ‘ಸರ್ಕಾರಿ ಶಾಲೆ’ಗಳಲ್ಲಿ ‘2,200 ಕೊಠಡಿ’ಗಳ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ

By kannadanewsnow0912/12/2025 8:56 PM KARNATAKA 5 Mins Read

ಬೆಂಗಳೂರು: ರಾಜ್ಯ ಸರ್ಕಾರವು 2025-26ನೇ ಸಾಲಿನಲ್ಲಿ ಹೊಸ ಶಆಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.…

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಕರ್ನಾಟಕ ಸರ್ಕಾರ ಆದೇಶ

12/12/2025 8:53 PM

ಇಂದು ಶಿಗ್ಗಾಂವಿ ಕ್ಷೇತ್ರದ ಜನತೆಯ ಬಹುದಿನದ ಕನಸು ನನಸು: ಸಂಸದ ಬಸವರಾಜ ಬೊಮ್ಮಾಯಿ

12/12/2025 8:22 PM

ಚಿಕ್ಕಮಗಳೂರಿನಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ‘ಸ್ಪೈಸ್ ಪಾರ್ಕ್’ ಅಭಿವೃದ್ಧಿ: ಸಚಿವ ರಾಮಲಿಂಗಾರೆಡ್ಡಿ

12/12/2025 8:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.