ಬೆಂಗಳೂರು: ನಗರದಲ್ಲಿ ಇಂದು ಬಿಲ್ಡರ್ ಹಾಗೂ ಕಟ್ಟಡ ಮಾಲೀಕರ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ ( Gun Firing ) ನಡೆಸಲಾಗಿದೆ. ಈ ಮೂಲಕ ಸಿಲಿಕಾನ್ ಸಿಟಿ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.
ಇಂದು ಕೆ ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಲ್ಡರ್ ಅಶೋಕ್ ಹಾಗೂ ಕಟ್ಟಡದ ಮಾಲೀಕ ಶಿವಾರೆಡ್ಡಿ ಮೇಲೆ ಮನಸೋ ಇಚ್ಚೆ ದುಷ್ಕರ್ಮಿಗಳು ಗುಂಡಿನ ದಾಳಿಯನ್ನು ನಡೆಸಿದ್ದಾರೆ.
Gujarat Election Results: ಇದು ಕರ್ನಾಟಕದ ಪಾಲಿಗೆ ದಿಕ್ಸೂಚಿ – ಬಿಜೆಪಿ
ಕೆ ಆರ್ ಪುರಂನ ಸೀಗೇಹಳ್ಳಿ ಬಳಿಯ ಹ್ಯಾಪಿ ಗಾರ್ಡನ್ ನಲ್ಲಿ ಈ ಘಟನೆ ನಡೆದಿದೆ. ಬಿಲ್ಡರ್ ಅಶೋಕ್ ಮೇಲೆ ಒಂದು ಸುತ್ತು ಗುಂಡಿನ ದಾಳಿ ನಡೆಸಿದ್ದರೇ, ಕಟ್ಟಡದ ಮಾಲೀಕ ಶಿವಾರೆಡ್ಡಿ ಮೇಲೆ ನಾಲ್ಕೈದು ಸುತ್ತು ಗುಂಡಿನ ದಾಳಿಯನ್ನೇ ನಡೆಸಲಾಗಿದೆ.
ದುಷ್ಕರ್ಮಿಗಳ ಗುಂಡಿನ ದಾಳಿಯಿಂದಾಗಿ ಬಿಲ್ಡರ್ ಅಶೋಕ್ ಹಾಗೂ ಕಟ್ಟಡದ ಮಾಲೀಕ ಶಿವಾರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಕೆ ಆರ್ ಪುರಂ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತದಲ್ಲಿ 31% ಮಹಿಳೆಯರು ಮಾತ್ರ ಮೊಬೈಲ್ ಫೋನ್ ಹೊಂದಿದ್ದಾರೆ: ಆಕ್ಸ್ಫಾಮ್ ವರದಿ