ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ( Kempegowda International Airport ) ಸತತ ಎರಡನೇ ಬಾರಿಗೆ ಪೆರಿಷಬಲ್ ಸರಕು ಸಾಗಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷದಲ್ಲಿ 48,130 ಟನ್ಗಳಷ್ಟು ಸಾಗಣೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿತ್ತು. 2021-22 ಹಣಕಾಸು ವರ್ಷದಲ್ಲಿ 52,366 ಮೆಟ್ರಿಕ್ ಟನ್ನಷ್ಟು ಬೇಗ ಕ್ಷಯಿಸಲ್ಲ ಹಣ್ಣೂ ತರಕಾರಿ, ಹೂ ನಂತಹ ಪೆರಿಷಬಲ್ ಸರಕು ಸಾಗಣೆ ಮಾಡುವ ಮೂಲಕ ಮತ್ತೊಮ್ಮೆ ಮೊದಲ ಸ್ಥಾನ ಪಡೆದುಕೊಂಡಿದೆ.
ಪ್ರತಿ ನಿತ್ಯ ಬೆಂಗಳೂರಿನಿಂದ 33 ಸರಕು ಸಾಗಣೆ ವಿಮಾನಗಳು ಲಂಡನ್, ಸಿಂಗಾಪುರ ಸೇರಿದಂತೆ ಒಟ್ಟು 48 ವಿದೇಶಗಳಿಗೆ ರಫ್ತು ಮಾಡುತ್ತಿದೆ. ದಕ್ಷಿಣ ಭಾರತದಿಂದಲೇ ಒಟ್ಟು ಶೇ.41ರಷ್ಟು ಪ್ರಮಾಣದಲ್ಲಿ ಪೆರಷಬಲ್ ಸರಕನ್ನು ರಫ್ತು ಮಾಡಲಾಗಿದೆ. ಅದರಲ್ಲಿ 36, 493 ಎಂ.ಟಿ. ಪೌಲ್ಟ್ರಿ ಹಾಗೂ 1,952 ಎಂ.ಟಿ.ಹೂಗಳನ್ನು ರಫ್ತು ಮಾಡಲಾಗಿದೆ ಎಂದು ಬಿಐಎಎಲ್ನ ಮೂಖ್ಯ ಡೆವಲಪರ್ ಆಫೀಸರ್ ಸತ್ಯಕಿ ರಘುನಾಥ್ ತಿಳಿಸಿದ್ದಾರೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆಯನ್ನು ಇನ್ನಷ್ಟು ಸುಲಭಗೊಳಿಸಲು ಏರ್ಪೋರ್ಟ್ ಕಾರ್ಗೋ ಕಮ್ಯುನಿಟಿ ಸಿಸ್ಟಂ (ಎಸಿಎಸ್)ನನ್ನು ಅಳವಡಿಸಿದ್ದು, ಇದು ಸರಕನ್ನು ಪತ್ತೆ ಮಾಡಲು ಸಹಾಯ ಮಾಡಲಿದ್ದು, ಅನವಶ್ಯಕ ಚೆಕ್ಕಿಂಗ್ ಇರುವುದಿಲ್ಲ. ಕೃಷಿ ಸಂಸ್ಕೃರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ, ಇಂಡಿಯನ್ ಕಸ್ಟಮ್ಸ್, ಪ್ಲಾಂಟ್ ಕ್ವಾರೆಂಟೈನ್ ಆಫೀಸ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದಿಂದ ಇಂದು ಬಿಐಎಎಲ್ ಸರಕು ಸಾಗಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಶ್ಲಾಘಿಸಿದರು.
BREAKING: ಗಂಟುರೋಗದಿಂದ ಮೃತಪಟ್ಟ ದನಗಳಿಗೆ 20 ಸಾವಿರ ರೂ ಪರಿಹಾರ – ಸಿಎಂ ಬೊಮ್ಮಾಯಿ ಘೋಷಣೆ | Lumpy Skin Disease
ಎಪಿಇಡಿಎ ಅಧ್ಯಕ್ಷ ಡಾ.ಎಂ. ಅಂಗಮುತ್ತು ಮಾತನಾಡಿ, ಈ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಯಲ್ಲಿ ಕೃಷಿ ಉತ್ಪನ್ನಗಳ ಸಾಗಣೆ ದೊಡ್ಡಮಟ್ಟದಲ್ಲಿ ಸಾಧನೆ ಮಾಡಿರುವುದು ದೇಶಕ್ಕೆ ಕೀರ್ತಿ ತಂದಿದೆ ಎಂದರು. ಪ್ರಸ್ತುತ ಬಿಐಎಎಲ್ನಲ್ಲಿ 60 ಸಾವಿರ ಎಂಟಿ ಸಾಮರ್ಥದ ಶೀತಲ ಸರಕನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಈಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ಇಂಗಿತ ಹೊಂದಿದ್ದೇವೆ ಎಂದರು.
BREAKING NEWS: ರಾಜ್ಯದ ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ‘7 ಗಂಟೆ ವಿದ್ಯುತ್’ ಸರಬರಾಜು – ಸಿಎಂ ಬೊಮ್ಮಾಯಿ ಆದೇಶ