ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಕುಖ್ಯಾತ ಕಳ್ಳನನ್ನು ಬಂಧಿಸಿದ್ದು, ಈತನ ಟಾರ್ಗೆಟ್ ಕೇವಲ ದುಬಾರಿ ಬೆಳೆಯ ಮೊಬೈಲ್ ಗಳು ಆಗಿದ್ದವು ಎನ್ನಲಾಗಿದೆ.ಆರೋಪಿಯನ್ನು ಬಂದಿಸಿದ ಪೊಲೀಸರು ಆತನ ಬಳಿ ಇದ್ದ ಬರೊಬ್ಬರೆ 19.50 ಲಕ್ಷ ಮೌಲ್ಯದ 32 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಹೌದು ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದು, ಆರೋಪಿ ಪಂಕಜ ಸಿಂಗನನ್ನು ಸಿದ್ದಾಪುರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಆರೋಪಿ ಬಳಿಯಿಂದ 19.50 ಲಕ್ಷ ಮೌಲ್ಯದ 32 ಮೊಬೈಲ್ ಗಳನ್ನು ಪಡೆದುಕೊಂಡಿದ್ದಾರೆ. ಇನ್ನು ತಲೆಮರಿಸಿಕೊಂಡ ಮೂರು ಆರೋಪಿಗಳಿಗೆ ಇದೀಗ ಪೊಲೀಸರು ಶೋಧ ನಡೆಸುತ್ತಿದ್ದಾರೆ.