ಬೆಳಗಾವಿ : ಬೆಳಗಾವಿಯಲ್ಲಿ ಸತತ ಎರಡು ದಿನಗಳಿಂದ ಭಾರಿ ಮಳೆ ಆಗುತ್ತಿದ್ದು ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಮೃಗಾಳಿ ಸಹಿತ ಭಾರಿ ಮಳೆಗೆ ಮರ ಒಂದು ಬಿದ್ದು ಊರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಗಾಳಿ ಮಳೆಗೆ ಮರ ಬಿದ್ದು ಓರ್ವ ಸಾವನಪ್ಪಿದ್ದು ಇಬ್ಬರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ.ಕರಲೇ ಗ್ರಾಮದ ಸೋಮನಾಥ ಮುಚ್ಛಂಡೇಕರ್ (21) ಸಾವನಪ್ಪಿದ್ದಾನೆ. ಅಲ್ಲದೆ ವಿಠಲ ತಳವಾರ್, ಸ್ವಪ್ನಿಲ್ ದೇಸಾಯಿ ಎಂಬವರಿಗೆ ಗಂಭೀರವಾದ ಗಾಯಗಳಾಗಿವೆ. ಮೂವರು ಬೈಕ್ ನಲ್ಲಿ ಬೆಳಗಾವಿಗೆ ತೆರಳುತ್ತಿದ್ದಾಗ ಮರ ಬಿದ್ದು ಈ ದುರಂತ ಸಂಭವಿಸಿದೆ.