ಬೆಳಗಾವಿ : ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಲಾಂಗು ಕಟ್ಟಿಗೆ ಹಿಡಿದು ಮಾರಮಾರಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದ ಬಿಲಕಾರ ತೋಟದಲ್ಲಿ ನಡೆದಿದೆ. ಸತ್ಯಪ್ಪ ಬಿಲಾಕರ ಇವರ ಜಮೀನನ್ನು ಪರಮಪ್ಪ ಹರಿಜನ ಹಾಗೂ ಲಕ್ಷ್ಮಿತಾಯಿ ಹರಿಜನ ಎಂಬ ದಂಪತಿ ಉಳುಮೆ ಮಾಡುತ್ತಿದ್ದರು.
ಜಮೀನಿನಲ್ಲಿ ಅರಿಶಿಣ ಬೆಳೆಯನ್ನು ಬೆಳೆದಿದ್ದರು. ಇಂದು ಏಕಾಏಕಿ ಬಂದು ಜಮೀನು ಬಿಟ್ಟು ಹೋಗಿ ಅಂತ ಸತ್ಯಪ್ಪ ಹಲ್ಲೆ ನಡೆಸಿದ್ದಾರೆ. ದೊಣ್ಣೆ, ಮಚ್ಚು ಕಲ್ಲುಗಳಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಸವರಾಜ್ ವಿವೇಕಾನಂದ ಸೇರಿ 8 ಜನರಿಂದ ಹಲ್ಲೆ ಮಾಡಿದ್ದಾರೆ. ಹೊಡೆದಾಟದ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸದ್ಯ ಗಾಯಳುಗಳನ್ನ ಗೋಕಾಕ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ








