ವಾಷಿಂಗ್ಟನ್: ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ಮತ್ತು ರಷ್ಯಾ ನಡುವಿನ ಸುದೀರ್ಘ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಕರೆ ನಡೆಸಿದ ನಂತರ, ಉಕ್ರೇನ್‌ನಲ್ಲಿ ತಕ್ಷಣದ ಕದನ ವಿರಾಮಕ್ಕೆ (Ceasefire) ಟ್ರಂಪ್ ಒತ್ತು ನೀಡಿದ್ದಾರೆ.
ಉಕ್ರೇನ್‌ಗೆ ನೀಡುತ್ತಿರುವ ಅಮೆರಿಕದ ನೆರವಿನ ಕುರಿತು ಮಾತನಾಡಿದ ಟ್ರಂಪ್, “ನಾನು ನಿಮಗೆ ಸಹಾಯ ಮಾಡುವ ಮುನ್ನ, ಈ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತೇನೆ” ಎಂದು ಹೇಳುವ ಮೂಲಕ ಕಠಿಣ ಸಂದೇಶ ರವಾನಿಸಿದ್ದಾರೆ.
ಪುಟಿನ್ ಜೊತೆಗಿನ ಮಾತುಕತೆಯ ವೇಳೆ ಯುದ್ಧ ಭೂಮಿಯಲ್ಲಿ ರಕ್ತಪಾತ ನಿಲ್ಲಿಸುವ ಕುರಿತು ಸಮಾಲೋಚನೆ ನಡೆಸಲಾಗಿದ್ದು, ಕದನ ವಿರಾಮಕ್ಕೆ ಬೇಕಾದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದು ಕಡೆ ಉಕ್ರೇನ್ ಯುದ್ಧ ನಿಲ್ಲಿಸಲು ಮುಂದಾಗಿರುವ ಟ್ರಂಪ್, ಮತ್ತೊಂದೆಡೆ ಇರಾನ್ ವಿರುದ್ಧ ತನ್ನ ಕಠಿಣ ನಿಲುವನ್ನು ಮುಂದುವರಿಸಿದ್ದಾರೆ. ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಗಳಿಗೆ ಬ್ರೇಕ್ ಹಾಕಲು ತಾವು ಬದ್ಧವಾಗಿದ್ದು, ಆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.








