ಬೆಂಗಳೂರು : ಬಿಬಿಎಂಪಿ ಚುನಾವಣೆಗೆ ಅಂತಿಮ ಮತದಾರರ ಪಟ್ಟಿ ( |BBMP Election ) ಪ್ರಕಟವಾಗಿದೆ.
ಚುನಾವಣೆ ಆಯೋಗದ ಪ್ರಕಾರ 243 ವಾರ್ಡ್ಗಳಲ್ಲಿ ಒಟ್ಟು 79,19,563 ಮತದಾರರು ಇದ್ದಾರೆ. ಈ ಪೈಕಿ 41,14,383 ಪುರುಷರು, 38,03,747 ಮಹಿಳೆಯರು ಹಾಗೂ 1433 ಇತರೆ ಮತದಾರರು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ವೆಬ್ಸೈಟ್ bbmp.gov.in ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಹೊಸದಾಗಿ ಮತದಾರರಾಗಿ ನೊಂದಾಯಿಸಿಕೊಳ್ಳಲು ಮೊಬೈಲ್ Voter Helpline App ಮತ್ತು NVSP Portal ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರ ನಡುವೆ ಬಿಬಿಎಂಪಿಯ ವಾರ್ಡ್ ಮೀಸಲಾತಿ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಇಂದು ಹೈಕೋರ್ಟ್ ನಡೆಸಿತು. ಈ ಬಳಿಕ ತನ್ನ ತೀರ್ಪನ್ನು ಸೆಪ್ಟೆಂಬರ್ 30ಕ್ಕೆ ಕಾಯ್ದಿರಿಸಿದೆ. ಸೆಪ್ಟೆಂಬರ್ 30ರ ಬೆಳಿಗ್ಗೆ 10.30ಕ್ಕೆ ತನ್ನ ಆದೇಶವನ್ನು ಪ್ರಕಟಿಸಲಿದೆ.
ಇಂದು ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಪೀಠವು ವಿಚಾರಣೆ ನಡೆಸಿತು. ಈ ವೇಳೆ ನಾಳೆ ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುವುದು ಎಂಬುದಾಗಿ ನ್ಯಾಯಪೀಠಕ್ಕೆ ವಕೀಲ ಫಣೀಂದ್ರ ಮನವಿ ಮಾಡಿದರು.
ಹೈಕೋರ್ಟ್ ಪೀಠಕ್ಕೆ ಸರ್ಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ಅವರು ಒಬಿಸಿಗೆ ಸೂಕ್ತವಾಗ ಮೀಸಲಾತಿ ನೀಡಲು ಸರ್ಕಾರ ಸಿದ್ಧವಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಬಿಸಿ ಮೀಸಲಾತಿ ನೀಡಲಾಗುತ್ತದೆ. 2 ತಿಂಗಳಲ್ಲಿ ಟ್ರಿಪಲ್ ಟೆಸ್ಟ್ ಪ್ರಕಾರವೇ ಮೀಸಲಾತಿ ಒದಗಿಸುತ್ತೇವೆ ಎಂಬುದಾಗಿ ತಿಳಿಸಿದರು. ಈ ವೇಳೆ ಹೈಕೋರ್ಟ್, ಈ ವರ್ಷದೊಳಗೆ ಬಿಬಿಎಂಪಿ ಚುನಾವಣೆ ನಡೆಯಲೇಬೇಕು. ಒಬಿಸಿ ಅಂಕಿ ಅಂಶ ಒದಗಿಸಿ ಹೊಸದಾಗಿ ಮೀಸಲಾತಿ ಸಾಧ್ಯವೇ ಎಂದು ಪ್ರಶ್ನಿಸಿದರು. ಅಲ್ಲದೇ ಹೊಸ ಮೀಸಲಾತಿ ರೂಪಿಸಲು ಎಷ್ಟು ಕಾಲಾವಾಕಾಶ ಬೇಕು? ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿತು. ಅಲ್ಲದೇ ಅಲ್ಲಿಯವರೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸದಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿ, ಸೆ.30ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿತು.
ಯಾರಿಗುಂಟು ಯಾರಿಗಿಲ್ಲಾ ಈ ಆಫರ್ : 500 ರೂ ಕೊಟ್ರೆ ಒಂದು ರಾತ್ರಿ ಜೈಲಲ್ಲಿ ತಂಗಲು ಅವಕಾಶ..!
|