ಬಾಗಲಕೋಟೆ : ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸರ್ಕಾರಿ ಐಬಿ ಯಲ್ಲಿದಾರರ ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದ ಇಂಜಿನಿಯರ್ಸ್ ಗಳನ್ನು ಇದೀಗ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹೌದು ಮೇ 22ರಂದು ಜಮಖಂಡಿಯ ಸರ್ಕಾರಿ ಐಬಿಯಲ್ಲಿ ಮಧ್ಯದ ಪಾರ್ಟಿ ಮಾಡಿದ್ದರು.ಬಾಗಲಕೋಟೆ ಜಿಲ್ಲಾ ಪಂಚಾಯತ್ ವಿಭಾಗದ ಜಮಖಂಡಿ ವಿಭಾಗದ ಎಇಇ ಎಂ ಎಸ್ ನಾಯಕ್, ಇಂಜಿನಿಯರ್ ಗಳಾದ ರಾಮಪ್ಪ ರಾಥೋಡ್, ಗಜಾನನ ಪಾಟೀಲ್ ಹಾಗೂ ಜಗದೀಶ್ ನಾಡಗೌಡ್ ಐಬಿ ಕೀ ಕೊಡುವಂತೆ ಸಿಬ್ಬಂದಿಗೆ ಸೂಚಿಸಿದ್ದಕ್ಕೆ ಪಿಡಬ್ಲ್ಯೂಡಿ ಎಇ ಜಂಬಗಿ ಕೂಡ ಸಸ್ಪೆಂಡ್ ಅಮಾನತುಗೊಳಿಸಿ ಡಿಸಿ ಕೆಎಂ ಜಾನಕಿ ಆದೇಶ ಹೊರಡಿಸಿದ್ದಾರೆ.
ಮೇ 22 ರಂದು ಜಮಖಂಡಿ ಸರಕಾರಿ ಐಬಿಯಲ್ಲಿ ಮದ್ಯದ ಪಾರ್ಟಿ ಮಾಡಿದ್ದರು.ಗುತ್ತಿಗೆದಾರರ ಜೊತೆ ಸೇರಿ ಇಂಜಿನಿಯರ್ ಗಳು ಮಧ್ಯ ಸೇವನೆ ಮಾಡಿದ್ದರು. ಕರ್ತವ್ಯಕ್ಕೆ ಚಕ್ಕರ್ ಹಾಕಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಧ್ಯಪಾನ ಮಾಡಿದ್ದರು. ಮರುದಿನ ಘಟನೆ ಕುರಿತಂತೆ ಉತ್ತರ ನೀಡಿ ಎಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಸಮರ್ಪಕ ಉತ್ತರ ನೀಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಇದೀಗ ಡಿಸಿ ಕೆ. ಎಂ ಜಾನಕೀ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.