ಬಾಗಲಕೋಟೆ : ಇತ್ತೀಚಿನ ದಿನಮಾನಗಳು ಬಹಳ ಸೂಕ್ಷ್ಮವಾಗಿವೆ ಎಂದರೆ ತಪ್ಪಾಗಲಾರದು. ಏಕೆಂದರೆ ಚಿಕ್ಕ ಚಿಕ್ಕ ವಿಷಯಗಳಿಗೂ ಕೊಲೆ ನಡೆಯುತ್ತಿವೆ. ಅದಕ್ಕೆ ಉದಾಹರಣೆ ಇದೀಗ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಸನಾಳದಲ್ಲಿ ತಂದೆಯೇ ಮಗನನ್ನು ಶುಲ್ಲಕ ಕಾರಣಕ್ಕೆ ಕೊಡಲಿಯಿಂದ ಹಲ್ಲೆ ಮಾಡಿ ಕೊಂದಿರುವ ಘಟನೆ ನಡೆದಿದೆ.
ಕರಿಯಪ್ಪ ಬೀಳಗಿ (21) ಎಂಬ ಯುವಕ ತನ್ನ ತಂದೆ ಡೊಂಗರೆಪ್ಪ ಬೀಳಗಿ ಎಂಬಾತನಿಂದ ಕೊಲೆಯಾದವ ಎಂದು ಹೇಳಲಾಗುತ್ತಿದೆ. ಹೌದು ಬಾಗಲಕೋಟೆ ಜಿಲ್ಲೆಯ ಬೆಳಗಿ ತಾಲೂಕಿನ ಬಸನಾಳ ಎಂಬ ಗ್ರಾಮದಲ್ಲಿ ಊಟದಲ್ಲಿ ಹಾಲು ಹಾಕಿಕೊಂಡು ತಿನ್ನಬೇಡ ಎಂದು ತಂದೆ ಮಗನಿಗೆ ಹೇಳಿದ್ದಾನೆ. ಇದೇ ವಿಚಾರವಾಗಿ ತಂದೆ ಹಾಗೂ ಮಗನ ಮಧ್ಯೆ ಗಲಾಟೆ ಶುರುವಾಗಿದೆ. ಇದರಿಂದ ಕುಪಿತ ಗೊಂಡ ತಂದೆ ಮಗನಿಗೆ ಬುದ್ಧಿ ಕಲಿಸಲು ಪ್ಲಾನ್ ಮಾಡಿದ್ದಾನೆ.
ಮಗನ ಜೊತೆ ಗಲಾಟೆ ಆಗಿದ್ದಕ್ಕೆ ಕೋಪಗೊಂಡಿದ್ದ ಡೊಂಗರೆಪ್ಪ, ರಾತ್ರಿ ಮಗ ಮಲಗಿದ್ದಾಗ ಕಂಠಪೂರ್ತಿ ಕುಡಿದು ಬಂದ ತಂದೆ, ಕೊಡಲಿಯಿಂದ ಮುಖ ಹಾಗೂ ಕತ್ತಿಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ. ಘಟನೆ ಕುರಿತಂತೆ ಬೀಳಗೀ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.