Subscribe to Updates
Get the latest creative news from FooBar about art, design and business.
Author: KNN IT TEAM
ಬಾಗಲಕೋಟೆ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿ ನಾಲ್ಕು ದಿನಗಳು ಕಳೆದ್ರೂ ಭಕ್ತರ ಸಂಖ್ಯೆ ಕೊಂಚವೂ ಕಡಿಮೆ ಆಗಿಲ್ಲ. https://kannadanewsnow.com/kannada/bigg-news-moral-education-for-school-children-education-minister-b-c-nagesh-to-chair-crucial-meeting-tomorrow/ ಪ್ರತಿನಿತ್ಯ ಸಾವಿರರಾರು ಜನರು ಮಠಕ್ಕೆ ಬಂದು ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ. ಇದೀಗ ಅವರ ಚಿತಾಭಸ್ಮವನ್ನು ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ. .ಜ್ಞಾನ ಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಬಳಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಮಠಾಧೀಶರು ವಿಶೇಷ ವಾಹನಗಳಲ್ಲಿ ಚಿತಾಭಸ್ಮ ತಂದು ಬೋಟ್ಗಳಲ್ಲಿ ತೆರಳಿ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿದ್ದಾರೆ. https://kannadanewsnow.com/kannada/bigg-news-moral-education-for-school-children-education-minister-b-c-nagesh-to-chair-crucial-meeting-tomorrow/ ಮೊದಲಿಗೆ ಕೂಡಲಸಂಗಮೇಶ್ವರನ ಆವರಣದಲ್ಲಿ ಪೂಜೆ ಪುನಸ್ಕಾರ ಸಲ್ಲಿಸಿ ಬಳಿಕ ತ್ರಿವೇಣಿ ಸಂಗಮದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಈ ಪುಣ್ಯ ಕಾರ್ಯದಲ್ಲಿ ಬಸವಲಿಂಗ ಸ್ವಾಮೀಜಿ, ಪಂಚಮಸಾಲಿ ಬಸವಜಯಮೃತ್ಯುಂಜಯ ಸ್ವಾಮೀಜಿ, ಜ್ಞಾನಯೋಗಾಶ್ರಮದ ಸ್ವಾಮೀಜಿಗಳು ಭಾಗಿಯಾಗಿದ್ದರು.
ಹಾವೇರಿ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಇಂದು ಬೆಳಗ್ಗೆ 9 ಗಂಟೆಯಿಂದ ಹಲವು ಗೋಷ್ಠಿಗಳು ನಡೆಯಲಿದ್ದು, ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 5 ರಿಂದ 8-30ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಗೌರವ ಉಪಸ್ಥಿತಿಯಲ್ಲಿ, ಗೌರವ ಅತಿಥಿಗಳಾಗಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ, ಕರ್ನಾಟಕ ವಿಧಾನಸಭೆ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯಸಭಾ ಸದಸ್ಯ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಎ.ನಾರಾಯಣಸ್ವಾಮಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಖಾತೆ ಸಚಿವ ಬಿ.ಸಿ.ನಾಗೇಶ ಅವರು ಭಾಗವಹಿಸಲಿದ್ದಾರೆ. ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವರು ಸಮಾರೋಪ…
ನವದೆಹಲಿ: ರೈಲು ಪ್ರಯಾಣದ ವೇಳೆ ಪ್ರಯಾಣಿಕರು ಸಾಮಾನುಗಳನ್ನು ಮರೆಯುವುದು, ಕಳೆದುಕೊಳ್ಳುವುದು ತೀರಾ ಸಾಮಾನ್ಯ. ಆ ವಸ್ತಗಳು ನಮಗೆ ವಾಪಸ್ ಸಿಗೋದಿಲ್ಲ ಅನ್ನೋದು ಪಕ್ಕಾ. ಆದ್ರೆ, ಇಲ್ಲೊಂದು ಅಪರೂಪದ ಘಟನೆಯಲ್ಲಿ, ಕಳೆದುಹೋದ ವಸ್ತುವೊಂದನ್ನು ಸ್ವತಃ ರೈಲ್ವೆ ಅಧಿಕಾರಿಗಳೇ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಹೌದು, ಜನವರಿ 4, 2023 ರಂದು ಕುಟುಂಬವೊಂದು ಸಿಕಂದರಾಬಾದ್-ಅಗರ್ತಲಾ ವಿಶೇಷ ರೈಲು ಕೋಚ್‌ನಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ ಆ ಕುಟುಂಬದ ಮಗುವೊಂದು ಆಟಿಕೆಯೊಂದಿಗೆ ಆಟವಾಡುತ್ತಿತ್ತು. ಕುಟುಂಬವು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಅಲಿಯಾಬುರಿ ರೈಲು ನಿಲ್ದಾಣದಲ್ಲಿ ಇಳಿದಿದೆ. ಆದ್ರೆ, ರೈಲಿನಿಂದ ಇಳಿಯುವಾಗ ಕುಟುಂಬ ಸದಸ್ಯರು ಆಟಿಕೆ ತೆಗೆದುಕೊಂಡು ಹೋಗುವುದನ್ನು ಮರೆತಿದ್ದಾರೆ. ಇದನ್ನು ಗಮನಿಸಿದ ಸಹ ಪ್ರಯಾಣಿಕ ಭೂಸಿನ್ ಪಟ್ನಾಯಕ್, ಮಗುವಿನ ಆಟಿಕೆಯನ್ನು ಹೇಗಾದರೂ ಮಾಡಿ ಅವರಿಗೆ ತಲುಪಿಸಬೇಕೆಂದು ಬಯಸಿದ್ದರು. ಕೂಡಲೇ ‘ರೈಲ್ ಮದದ್’ ಆ್ಯಪ್ ಮೂಲಕ 139ಕ್ಕೆ ಕರೆ ಮಾಡಿ ಸಿಕಂದರಾಬಾದ್ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಆ ಕುಟುಂಬದ ಬಗ್ಗೆ ಯಾವುದೇ ವಿವರ ಗೊತ್ತಿಲ್ಲ. ಸೀಟ್…
ಬೆಂಗಳೂರು : ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಸಂಬಂಧ ಚರ್ಚೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಜನವರಿ 9 ರ ನಾಳೆ ಸಮಾಜದ ಎಲ್ಲ ಧರ್ಮಗಳು, ಮಠಾಧೀಶರು, ಮುಖಂಡರ ಸಭೆ ಕರೆಯಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಆದಿಚುಂಚನಗಿರಿ ಸ್ವಾಮೀಜಿ, ಸಿದ್ದಗಂಗಾ ಸ್ವಾಮೀಜಿ ಸೇರಿ ಎಲ್ಲ ಧರ್ಮಗಳ ಪ್ರಮುಖ ಧರ್ಮ ಗುರುಗಳು, ಮುಖಂಡರಿಗೆ ಆಹ್ವಾನ ಕಳಿಸಲಾಗಿದೆ. ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಆರಂಭಿಸುವುದಾಗಿ ಶಿಕ್ಷಣ ಇಲಾಖೆ ಕೆಲ ತಿಂಗಳ ಹಿಂದೆಯೇ ಘೋಷಣೆ ಮಾಡಿತ್ತು. ಹೀಗಾಗಿ ಈ ಸಂಬಂಧ ಸಮಾಜದ ಧರ್ಮಗುರುಗಳು, ಮಠಾಧೀಶರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲು ಸಭೆ ಆಯೋಜಿಸಲಾಗಿದೆ. https://kannadanewsnow.com/kannada/20-flights-delayed-at-delhi-airport-amid-orange-alert-42-trains-late-in-northern-railway-region/ https://kannadanewsnow.com/kannada/bigg-news-chief-ministers-amrit-jeevan-yojana-applications-invited-for-setting-up-of-cow-buffalo-unit/
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ( cold wave ) ಸಹಿತ ಕೊರೆವ ಚಳಿಗೆ ಜನತೆ ತತ್ತರಿಸಿ ಹೋಗಿದ್ದಾರೆ. ಇದಲ್ಲದೇ ದಟ್ಟ ಮಂಜು ಮುಸುಕಿದ ವಾತಾವರಣದಿಂದಾಗಿ 20 ವಿಮಾನ ಹಾಗೂ 42 ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿರೋದಾಗಿ ತಿಳಿದು ಬಂದಿದೆ. ಕಡಿಮೆ ಗೋಚರತೆಯು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಇಂದು ಸುಮಾರು 20 ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿವೆ ಎಂದು ದೆಹಲಿ ವಿಮಾನ ನಿಲ್ದಾಣದ ( Delhi airport ) ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. https://twitter.com/ANI/status/1611918330453168128 ಇನ್ನೂ ರೈಲ್ವೆ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಮಂಜು ಕವಿಕ ಕಾರಣ 42 ರೈಲುಗಳು ತಡವಾಗಿ ಚಲಿಸುತ್ತಿವೆ ಎಂದು ಉತ್ತರ ರೈಲ್ವೆ ತಿಳಿಸಿದೆ ಎಂದು ಎಎನ್ಐ ವರದಿ ಮಾಡಿದೆ. https://twitter.com/ANI/status/1611921325400158208 ಹಲವಾರು ರೈಲುಗಳು ವಿಳಂಬವಾಗುತ್ತಿರುವುದರಿಂದ ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುತ್ತಾರೆ. https://twitter.com/ANI/status/1611918879177216001 ಹವಾಮಾನ ಇಲಾಖೆ ದೆಹಲಿ ಮತ್ತು ಉತ್ತರ ಭಾರತದ ಇತರ ಕೆಲವು…
ದಾವಣಗೆರೆ : 2022-23 ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಹಸು/ಎಮ್ಮೆ ಘಟಕ ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 16 ಅರ್ಜಿ ಸಲ್ಲಿಸಲು ಕೊನೆಯ ದಿನ. ಸಾಮಾನ್ಯ, ಪ.ಜಾ/ಪ.ಪಂ, ಮತ್ತು ಅಲ್ಪಸಂಖ್ಯಾತ, ಕೂಲಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಆಯ್ಕೆ ಮಾಡಲಾಗುವುದು. ಪಶುಸಂಗೋಪನಾ ಇಲಾಖೆಯಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜ.16 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ವೈದ್ಯಕೀಯ ಸಂಸ್ಥೆಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಹೊನ್ನಾಳಿ ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ. https://kannadanewsnow.com/kannada/big-relief-for-those-involved-in-blast-case-owner-not-responsible-for-irregularities-of-employees-hc/ https://kannadanewsnow.com/kannada/good-news-for-women-looking-forward-to-open-university-studies-15-fee-waiver-from-ksou/
ಬೆಂಗಳೂರು: ಸ್ಪೋಟಕ ವಸ್ತುಗಳ ಮಾರಾಟ ಪರವಾನಗಿ ಪಡೆದವರ ಬಳಿ ಕೆಲಸ ಮಾಡುವ ನೌಕರ, ಮಾಲೀಕರ ಅರಿವಿಗೆ ಬಾರದಂತೆ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದರೇ, ಅದಕ್ಕೆ ಪರವಾನಗಿದಾರರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ. ಈ ಮೂಲಕ ಸ್ಪೋಟ ಪ್ರಕರಣದಲ್ಲಿ ಸಿಲುಗಿದ್ದವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಈ ಸಂಬಂಧ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಎಸ್ ಎಲ್ ಎನ್ ಕಂಪನಿಯ ಪಿ ಸುನೀಲ್ ಕುಮಾರ್ ಹಾಗೂ ಅವರ ತಂದೆ ಎಂ ಪ್ರಕಾಶ್ ರಾವ್ ಸಲ್ಲಸಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ನಡೆಸಿತು. ಪಿ.ಸುನೀಲ್ ಕುಮಾರ್ ಹಾಗೂ ಎಂ ಪ್ರಕಾಶ್ ರಾವ್ ಅವರು ಕ್ವಾರಿ ಗುತ್ತಿಗೆದಾರರಿಗೆ ಸ್ಪೋಟಕ ಮಾರಾಟ ಮಾಡುವಂತ ಪರವಾನಗಿ ಹೊಂದಿದ್ದರು. ಕಳೆದ ಆಗಸ್ಟ್ 16, 2021ರಂದು ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಂತಿದ್ದ ಕಾರೊಂದು ಸ್ಪೋಟಗೊಂಡು, ವ್ಯಕ್ತಿಯೊಬ್ಬ ಮೃತಪಟ್ಟಿದ್ದನು. ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಂತ…
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 12ರಿಂದ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನ ಉತ್ಸವದ ಲೋಗೋ ಮತ್ತು ಮ್ಯಾಸ್ಕಾಟ್ ಅನ್ನು ಬಿಡುಗಡೆ ಮಾಡಿದರು. ಈ ವರ್ಚುವಲ್ ಕಾರ್ಯಕ್ರಮದಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಮತ್ತು ಖ್ಯಾತ ನಟಿ ತಾರಾ ಅನೂರಾಧ ಭಾಗವಹಿಸಿದ್ದರು. ರಾಜ್ಯದಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಕ್ರೀಡಾಕೂಟ ಆಯೋಜನೆ ಹಾಗೂ ಇದೀಗ ಈ ವರ್ಷ ಯುವಜನ ಉತ್ಸವ ಆಯೋಜನೆಗೆ ಅವಕಾಶ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಯವರು ಕೃತಜ್ಞತೆ ಸಲ್ಲಿಸಿದರು. ಹಾಗೂ ಯುವಜನ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಯುವ ಜನಪ್ರತಿನಿಧಿಗಳ ಗೋಷ್ಠಿ ಈ ಸಂದರ್ಭದಲ್ಲಿ ಯುವಜನ ಉತ್ಸವ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.…
ನವದೆಹಲಿ: ಜುಲೈ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಪಾಟ್ನಾ ಭೇಟಿ ಅಡ್ಡಿಪಡಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ರೂಪಿಸಿದ್ದ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶನಿವಾರ ನಾಲ್ವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಪಾಟ್ನಾದ ಮುಸ್ಲಿಂ ರಾಘೋಪುರ ಗ್ರಾಮದ ಅಥರ್ ಪರ್ವೇಜ್, ಪಾಟ್ನಾದ ಫುಲ್ವಾರಿಶರೀಫ್‌ನ ಎಂಡಿ ಜಲಾಲುದ್ದೀನ್ ಖಾನ್, ದರ್ಭಾಂಗದ ಲಾಲ್‌ಬಾಗ್‌ನ ನೂರುದ್ದೀನ್ ಜಂಗಿ ಮತ್ತು ಫುಲ್ವಾರಿಶರೀಫ್‌ನ ಅರ್ಮಾನ್ ಮಲಿಕ್ ಅಲಿಯಾಸ್ ಎಂಡಿ ಇಮ್ತೇಯಾಜ್ ಅನ್ವರ್ ಆರೋಪಿಗಳಾಗಿದ್ದಾರೆ. ಇವರುಗಳು PFIನೊಂದಿಗೆ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ. ಚಾರ್ಜ್‌ಶೀಟ್ ಪ್ರಕಾರ, ಪ್ರಧಾನಿ ಮೋದಿಯವರು ಬಿಹಾರಕ್ಕೆ ಭೇಟಿ ನೀಡುವ ಒಂದು ದಿನದ ಮೊದಲು (2022 ರ ಜುಲೈ 12 ರಂದು) ಪಾಟ್ನಾದ ಫುಲ್ವಾರಿಶರೀಫ್ ಪ್ರದೇಶದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ನಿವೃತ್ತ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್, ಅಥೇರ್ ಪರ್ವೇಜ್‌ನನ್ನು ಬಂಧಿಸಿದ್ದರು. ಜಲಾವುದ್ದೀನ್‌ಗೆ ಸಿಮಿ ಉಗ್ರ ಸಂಘಟನೆ ಜೊತೆಗೆ ನಿಕಟ ಸಂಪರ್ಕ ಇತ್ತು ಎಂದು ತನಿಖಾಧಿಕಾರಿ ಮನೀಶ್ ಕುಮಾರ್…
ಬೆಂಗಳೂರು: ಮಹಿಳಾ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ವಿವಿಧ ಪದವಿ, ಸ್ನಾತಕೋತ್ತರ ಪದವಿ ಪ್ರವೇಶದ ಶುಲ್ಕದಲ್ಲಿ ಶೇ.15ರಷ್ಟು ವಿನಾಯಿತಿ ನೀಡಿದೆ. ಈ ಬಗ್ಗೆ ಕೆ ಎಸ್ ಒ ಯುನ ಪ್ರಾದೇಶಿಕ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದು, ವಿವಿಧ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಬಿಪಿಎಲ್ ಕಾರ್ಡ್ ಹೊಂದಿರುವಂತ ಮಹಿಳಾ ಅಭ್ಯರ್ಥಿಗಳಿಗೆ ಶೇ.15ರಷ್ಟು ಬೋಧನಾ ಶುಲ್ಕದಲ್ಲಿ ವಿನಾಯ್ತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಭ್ಯರ್ಥಿಗಳು ದ್ವಿತೀಯ ಬಿಎಸ್ಸಿ, ತೃತೀಯ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ ಹಾಗೂ ಅಂತಿಮ ಸ್ನಾತಕೋತ್ತರ ಪದವಿಗಳಾದಂತ ಎಂ.ಎ, ಎಂಸಿಜೆ, ಎಂಕಾಂ, ಎಂಬಿಎ, ಎಂಎಸ್ಸಿ ಸೇರಿದಂತೆ ವಿವಿಧ ಕೋರ್ಸ್ ಗಳ ಪ್ರವೇಶಕ್ಕೆ ದಂಡ ಶುಲ್ಕವಿಲ್ಲದೇ ಜನವರಿ 15ರೊಳಗಾಗಿ ಪ್ರವೇಶ ಪಡೆಯುವಂತೆ ಕೋರಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿಯ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ದೂರವಾಣಿ ಸಂಖ್ಯೆ 080-23448811ಗೆ ಕರೆ ಮಾಡಿ, ಮಾಹಿತಿ ಪಡೆಯಬಹುದಾಗಿದೆ. https://kannadanewsnow.com/kannada/police-search-the-drain-for-1-hour-after-listening-to-a-mentally-challenged-man-read-this-news-to-know-why/ https://kannadanewsnow.com/kannada/good-news-for-metro-commuters-whatsapp-qr-code-allowed-to-buy-tickets-at-once/