Author: KNN IT TEAM

ಕೊಪ್ಪಳ : ಜಿಲ್ಲೆಯ  ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಲಕ್ಷಾಂತರ ಭಕ್ತರ ಆಗಮನ ಹಿನ್ನಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ಹೆಚ್ಚುವರಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. https://kannadanewsnow.com/kannada/watch-diver-rescues-fish-stuck-in-plastic-bag-in-sea-shocking-video-goes-viral/ ಜನವರಿ 8, 9 ಮತ್ತು 10ರಂದು ಗವಿಸಿದ್ದೇಶ್ವರ ಜಾತ್ರೆ ನಡೆಯಲಿದ್ದು, ನಾನಾ ಜಿಲ್ಲೆಗಳಿಂದ ಭಕ್ತ ಆಗಮನ ಹೆಚ್ಚಾಗುವ ಹಿನ್ನೆಲೆ ಹೆಚ್ಚುವರಿ ಬಸ್ ಓಡಾಟ ವ್ಯವಸ್ಥೆ ಮಾಡಲಾಗಿದೆ.  ಹೆಚ್ಚುವರಿ ಬಸ್‌ಗಳು ಗದಗ, ಯಲಬುರ್ಗಾ, ಕುಕನೂರ ಕಡೆಗೆ ಮತ್ತು ಅಳವಂಡಿ, ಮುಂಡರಗಿ ಕಡೆಗೆ ಕೊಪ್ಪಳ ಕೇಂದ್ರೀಯ ಬಸ್‌ನಿಲ್ದಾಣದಿಂದ ಹೊರಡಲಿವೆ. ಹೊಸಪೇಟೆ, ಗಂಗಾವತಿ ಮಾರ್ಗಗಳಿಗೆ ನಗರದ ಹೊಸಪೇಟೆ ರಸ್ತೆಯ ಮಾತಾ ಹೋಟೆಲ್ ಹತ್ತಿರ ಬಸ್ ಹೊರಡುವ ವ್ಯವಸ್ಥೆ ಮಾಡಲಾಗಿದೆ. https://kannadanewsnow.com/kannada/watch-diver-rescues-fish-stuck-in-plastic-bag-in-sea-shocking-video-goes-viral/ ಕುಷ್ಟಗಿ ಮಾರ್ಗಕ್ಕೆ ನಗರದ ಕಾಳಿದಾಸ ನಗರದ ಹತ್ತಿರದಲ್ಲಿ ಬಸ್ ಹೊರಡಲಿದೆ. ಅಲ್ಲದೇ ಹ್ಯಾಟಿ, ಗೊಂಡಬಾಳ, ಕರ್ಕಿಹಳ್ಳಿ ಕಡೆಗೆ ಹೋಗುವ ಮಾರ್ಗಗಳಿಗೆ ನಗರದ ಗಡಿಯಾರ ಕಂಬದ ಹತ್ತಿರದಲ್ಲಿ ವ್ಯವಸ್ಥೆ ಇದೆ.   ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಈ ಹಿಂದೆಯೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ…

Read More

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಡಾಬಾ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷನನ್ನು ದುಷ್ಕರ್ಮಿಗಳು ಕೊಲೆ ಮಾಡಿರವ ಘಟನೆ ನಡೆದಿದೆ. 30 ವರ್ಷದ ಗೌರಿಪುರ ಗ್ರಾಮದ ರಾಮಕೃಷ್ಣ ಮೃತಪಟ್ಟಿದ್ದಾರೆ. ಅರ್ಜುನ್ ಮತ್ತು ಪ್ರಶಾಂತ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಜಗಳೂರು ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ತಾಲೂಧ್ಯಕ್ಷರಾಗಿದ್ದ ರಾಮಕೃಷ್ಣ, ಇತ್ತೀಚಿಗೆ ಗ್ರಾಮ ಪಂಚಾಯತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದೂರು ನೀಡಿದ್ದರು. ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. https://kannadanewsnow.com/kannada/fire-breaks-out-in-bike-parked-in-hassan-as-soon-as-you-look-at-it-youre-on-fire/

Read More

ಧಾರವಾಡ : ವಿದೇಶದಲ್ಲಿ ಉದ್ಯೋಗ ಮಾಡುವುದು ಈಗಿನ ಯುವಜನತೆಯ ಕನಸಾಗಿದೆ. ಆದರೆ ಹಲವು ಬಾರಿ ವಿದೇಶದಲ್ಲಿ ಉದ್ಯೋಗ ಬಯಸಿ ಹೋದವರು ತೊಂದರೆಗೆ ಉಂಟಾಗುವುದು ಎಲ್ಲರಿಗು ತಿಳಿದ ವಿಷಯವಾಗಿದೆ. ಇಂತಹ ತೊಂದರೆಗಳನ್ನು ನಿವಾರಿಸಿ ಸಾಮಾನ್ಯ ಜನರಿಗೆ ವಿದೇಶದಲ್ಲಿ ಸುರಕ್ಷಿತವಾದ ಉದ್ಯೋಗವನ್ನು ಪಡೆಯಲು ಉಪಯುಕ್ತವಾಗಲೆಂದು ಸರಕಾರ ನೂತನವಾಗಿ ಅಂತಾರಾಷ್ಟ್ರೀಯ ವಲಸೆ ಕೇಂದ್ರಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಿದೆ. ಧಾರವಾಡ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯ ಅಂಗವಾಗಿ ಪ್ರಾದೇಶಿಕ ಅಂತಾರಾಷ್ಟ್ರೀಯ ವಲಸೆ ಕೇಂದ್ರವನ್ನು ಧಾರವಾಡದಲ್ಲಿ ತರೆಲಾಗಿದೆ. ಜಿಲ್ಲೆಯ ಯುವಜನತೆ ವಿದೇಶದಲ್ಲಿ ಉದ್ಯೋಗ ಬಯಸಿದಲ್ಲಿ ಸರಕಾರದ ಸುವ್ಯವಸ್ಥೆಯಲ್ಲಿ, ಕಾನೂನುಬದ್ಧ ಮತ್ತು ಮಾನವೀಯ ವಲಸೆಗೆ ಪ್ರಾಮುಖ್ಯತೆಯನ್ನು ನೀಡಲಾಗುವುದು. ಈ ಕೇಂದ್ರವು ಮಧ್ಯವರ್ತಿಗಳ ಹಾವಳಿಯಿಂದ ಜನರನ್ನು ಕಾಪಾಡುವಲ್ಲಿ ಸರಕಾರದ ಒಂದು ಯೋಜನೆಯಾಗಿದೆ. ಈ ಕೇಂದ್ರಗಳ ಮೂಲಕ ಕರ್ನಾಟಕದ ಯುವಜನತೆಗೆ ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಕರ್ನಾಟಕವನ್ನು ಜಾಗತಿಕ ಮಾರುಕಟ್ಟೆಯಲ್ಲಿ ನುರಿತ ತರಬೇತಿ ಪಡೆದ ಹಾಗೂ ಪ್ರಮಾಣೀಕೃತ ಕಾರ್ಮಿಕರ ಕೇಂದ್ರವಾಗಿಸುವ ಗುರಿಯನ್ನು ಹೊಂದಿದೆ. ವಿದೇಶದಲ್ಲಿ…

Read More

ನವದೆಹಲಿ: 2021ರಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ತಾಯಿಗೆ ಗುಂಡಿಕ್ಕಿ ಗಾಯಗೊಳಿಸಿದ ಘಟನೆ ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ ನಡೆದಿದೆ. ಈಶಾನ್ಯ ದೆಹಲಿಯ ಉತ್ತರ ಘೋಂಡಾ ಪ್ರದೇಶದಲ್ಲಿ 5:30 ರ ಸುಮಾರಿಗೆ ಘಟನೆ ನಡೆದಿದೆ. ಈ 50 ವರ್ಷದ ಮಹಿಳೆಯ ಮಗ 2 ವರ್ಷಗಳ ಹಿಂದೆ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಇದರಿಂದ ನೊಂದಿದ್ದ ಬಾಲಕಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾಳೆ ಎಂದು ತಿಳಿದುಬಂದಿದೆ. ಮಹಿಳೆಯನ್ನು ಸುಭಾಷ್ ಮೊಹಲ್ಲಾ ನಿವಾಸಿ ಖುರ್ಷಿದಾ ಎಂದು ಗುರುತಿಸಲಾಗಿದೆ. ಖುರ್ಷಿದಾ ದಿನಸಿ ಅಂಗಡಿ ನಡೆಸುತ್ತಿದ್ದು, ಅತ್ಯಾಚಾರದ ಆರೋಪಿಯಾಗಿರುವ ಆಕೆಯ ಮಗ ನಾಪತ್ತೆಯಾಗಿದ್ದಾನೆ. ಮಹಿಳೆಯನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಬಾಲಕಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ. https://kannadanewsnow.com/kannada/veteran-journalist-k-sathyanarayana-passes-away-today/ https://kannadanewsnow.com/kannada/watch-diver-rescues-fish-stuck-in-plastic-bag-in-sea-shocking-video-goes-viral/ https://kannadanewsnow.com/kannada/veteran-journalist-k-sathyanarayana-passes-away-today/ https://kannadanewsnow.com/kannada/watch-diver-rescues-fish-stuck-in-plastic-bag-in-sea-shocking-video-goes-viral/

Read More

ಬೆಂಗಳೂರು: ಹಿರಿಯ ಪತ್ರಕರ್ತರು ಮತ್ತು ಕನ್ನಡಪ್ರಭ ಪತ್ರಿಕೆಯ ಮಾಜಿ ಸಂಪಾದಕರಾದ ಕೆ. ಸತ್ಯನಾರಾಯಣ ಅವರು ಇಂದು ನಿಧನರಾಗಿರೋದಾಗಿ ತಿಳಿದು ಬಂದಿದೆ. ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳುತ್ತಿದ್ದಂತ ಅವರು, ಇಂದು ತಮ್ಮ ಜಯನಗರದ ಎಲ್ ಐಸಿ ಕಾಲೋನಿ ನಿವಾಸದಲ್ಲಿ ನಿಧನರಾಗಿದ್ದಾರೆ. ಅಂದಹಾಗೇ, ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅವರು, ಕನ್ನಡ‌ಪ್ರಭ ಕಚೇರಿಯಿಂದ ಬಗಲ ಚೀಲ ನೇತಾಡಿಸಿಕೊಂಡು ನಡೆದುಕೊಂಡೇ ತೆರಳುತ್ತಿದ್ದರಂತೆ. ಎರಡು ಹೋಳು ಬ್ರೆಡ್ ಒಂದು ಕಾಫಿ ಅವರ ಸಂಜೆಯ ಆಹಾರವಾಗಿತ್ತಂತೆ. ಅ ಚ , ಸಾ ಚ , ಸಂಕ್ಲಾಪುರ, ಹೀರೇಮಠ ಮುಂತಾದ ವಿಧಾನ ಸೌಧ ರೌಂಡ್ ಹೊಡೆಯುವವರನ್ನು ಹುಡುಕಿ ಬಂದು ಮಾತಾಡಿಸಿ ವಿಷಯ ಸಂಗ್ರಹಣೆ ಮಾಡುತ್ತಿದ್ದರಂತೆ. ಗುರುವಾರದ ಅವರ ಕಾಲಂ ಓದಿದ ನಂತರವೇ ದೇವೇಗೌಡರು ಸೇರಿದಂತೆ ಹಲವರ ದಿನಚರಿ ಆರಂಭವಾಗುತ್ತಿತ್ತಂತೆ. ಹಲವಾರು ಪತ್ರಕರ್ತ ಸತ್ಯ ಗಳಿದ್ದರಿಂದ ಇವರನ್ನು ಕನ್ನಡಪ್ರಭ ಸತ್ಯ, ಕುಳ್ಳ ಸತ್ಯ ಎಂದು ಕರೆಯುತ್ತಿದರು ಎಂಬುದಾಗಿ ತಿಳಿದು ಬಂದಿದೆ. ಇಂತಹ ಕೆ.ಸತ್ಯನಾರಾಯಣ ಅವರು ಇಂದು ನಿಧನರಾಗುವ ಮೂಲಕ, ಇನ್ನಿಲ್ಲವಾಗಿದ್ದಾರೆ. https://kannadanewsnow.com/kannada/bigg-news-national-youth-festival-to-be-held-on-jan-12-cm-bommai-to-release-logo-and-mascot/ https://kannadanewsnow.com/kannada/20-flights-delayed-at-delhi-airport-amid-orange-alert-42-trains-late-in-northern-railway-region/ https://kannadanewsnow.com/kannada/good-news-for-women-looking-forward-to-open-university-studies-15-fee-waiver-from-ksou/

Read More

ವೈರಲ್‌ ನ್ಯೂಸ್‌ : ಪ್ಲಾಸ್ಟಿಕ್‌ನನ್ನು ಎಲ್ಲೆಂದರಲ್ಲಿ ಎಸೆಯೋದ್ರಿಂದ  ಹಸುಗಳು ಮತ್ತು ಜಲಚರ ಪ್ರಾಣಿಗಳ ಸೇರಿದಂತೆ ಎಲ್ಲಾ ಪ್ರಾಣಿಗಳಿಗೆ ತುಂಬಾ ಅಪಾಯಕಾರಿಯಾಗಿದೆ. . ಪ್ಲಾಸ್ಟಿಕ್ ಮಾಲಿನ್ಯವು ಎಷ್ಟು ಅಪಾಯಕಾರಿಯಾಗಿದೆಯೆಂದರೆ ಪ್ಲಾಸ್ಟಿಕ್ ತುಂಡುಗಳು ನೀರೊಳಗೆ ಇದ್ದಾಗ ಇದಕ್ಕೆ ಜಲಚರ ಜೀವಿಗಳು ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪುತ್ತದೆ. ಇಂತಹದ್ದೇ ಅಘಾತಕಾರಿ ಘಟನೆಯೊಂದು ನಡೆದಿದೆ. https://kannadanewsnow.com/kannada/watch-cctv-video-of-khatarnak-thief-who-broke-the-lock-of-the-shop-robbed-and-danced-viral/ ಇದೇ ರೀತಿಯ ವೀಡಿಯೊದಲ್ಲಿ ಮೀನು ಪ್ಲಾಸ್ಟಿಕ್ ಚೀಲದಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನಪ್ಪೋದಕ್ಕೆ ಚಡಪಡಿಸುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೂಡಲೇ ಆ ಮೀನನ್ನು ರಕ್ಷಿಸಿದ ಸಮುದ್ರದಲ್ಲಿ ಈಜಾಡುತ್ತಿದ್ದ ಡೈವರ್‌ ಒಬ್ಬರು ರಕ್ಷಿಸಿದ್ದು ಅದರ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಅವರ  ಪ್ರಯತ್ನಕ್ಕೆ ಧನ್ಯವಾದವನ್ನು ಸಲ್ಲಿಸಲಾಗಿದೆ https://twitter.com/MikeHudema/status/1607416989571481602?ref_src=twsrc%5Etfw%7Ctwcamp%5Etweetembed%7Ctwterm%5E1607416989571481602%7Ctwgr%5E2cc49730b242318bfccfa5765c0c5ba824037c33%7Ctwcon%5Es1_c10&ref_url=https%3A%2F%2Fwww.freepressjournal.in%2Fviral%2Fwatch-diver-rescues-a-fish-trapped-in-a-plastic-bag-in-ocean ಈ ವೀಡಿಯೊವನ್ನು ಡಿಸೆಂಬರ್ 26, 2022 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಈ ವೀಡಿಯೊ 48.7 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಸುಮಾರು 1,700 ಲೈಕ್ಗಳನ್ನು ಗಳಿಸಿದೆ, ಇದು ಪ್ರತಿದಿನ ಹೆಚ್ಚುತ್ತಿದೆ. ವೀಡಿಯೊಗೆ ಪ್ರತಿಕ್ರಿಯಿಸುವಾಗ ಜನರು ವಿವಿಧ ಕಾಮೆಂಟ್…

Read More

ಮಂಡ್ಯ: ಜಿಲ್ಲೆಯಲ್ಲಿ ಮತದಾರ ಉಡುಗೋರೆಗಳಿಗೆ ಕಟ್ಟು ಬಿದ್ದು, ಯಾರಿಗೆ ಮತ ಹಾಕಬೇಕು ಎಂಬ ಗೊಂದಲಕ್ಕೆ ಬಿದ್ದಂತಿದೆ. ಆಫರ್ ಮೇಲೆ ಆಫರ್ ಕೊಟ್ಟಿರೋ ಅಭ್ಯರ್ಥಿಗಳಿಗೆಲ್ಲರಿಗೂ ವೋಟ್ ಹಾಕೋದಾಗಿ ಹೇಳಿರುವಂತ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು.. ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಲ್ಲಿ ಸಾಮಾನ್ಯ ಮತದಾರ ಗೊಂದಲಕೀಡಾಗುವಂತೆ ಆಗಿದೆ. ಉಚಿತ ಉಡುಗೊರೆಗೆ ಕಟ್ಟು ಬಿದ್ದು ಮತದಾರ ಕಂಗಾಲಾಗಿದ್ದಾರೆ ಎನ್ನಲಾಗುತ್ತಿದೆ. ಕ್ಷೇತ್ರದ ಅಭ್ಯರ್ಥಿಗಳ ಋಣದಲ್ಲಿ ಮತದಾರ ಯಾರಿಗೆ ವೋಟ್ ಹಾಕಬೇಕು ಎಂಬುದೇ ತಿಳಿಯುತ್ತಿಲ್ಲ ಎಂದಿದ್ದಾನೆ. ವೈರಲ್ ಆಗಿರೋ ವೀಡಿಯೋದಲ್ಲಿ ಧರ್ಮಸ್ಥಳ ಯಾತ್ರೆ, ಮಹದೇಶ್ವರ ಬೆಟ್ಟದ ಯಾತ್ರೆ, ಕಂಬಳಿ ಸೇರಿದಂತೆ ಹಲವು ಗಿಫ್ಟ್ ಕೊಟ್ಟಿರೋ ಬಗ್ಗೆ ಪ್ರಸ್ತಾಪಿಸಲಾಗಿದೆ. ಹೀಗಾಗಿ ಒಬ್ಬೊಬ್ಬ ಅಭ್ಯರ್ಥಿಗಳ ಋಣ ತೀರಿಸೋದಕ್ಕೆ ಎಲ್ಲರಿಗೂ ವೋಟ್ ಹಾಕುವಂತ ಕಾಲ ಬರಲಪ್ಪ ಎಂಬುದಾಗಿಯೂ ಕೋರಿದ್ದಾನೆ. ಮತದಾರನ ಮನಸ್ಥಿತಿಯ ವೀಡಿಯೋ ವೈರಲ್ ಆಗುತ್ತಿದ್ದಂತೇ, ಈಗ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರ ಪ್ರಭುಗಳು ಯಾರಿಗೆ ವೋಟ್ ಹಾಕಲಿದ್ದಾರೋ ಎಂಬ ಆಂತಕವನ್ನು ಹುಟ್ಟುಹಾಕುವಂತೆ ಆಗಿದೆ. ಹಾಗಾದ್ರೇ…

Read More

ಬೆಂಗಳೂರು : ವಿಧಾನಸೌಧದ ಎದುರು ಬಸವೇಶ್ವರರ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನುಪ್ರತಿಷ್ಠಾಪಿಸುವ ಸಂಬಂಧ ಕಂದಾಯ ಸಚಿವ ಅರ್. ಅಶೋಕ್ ಹಾಗೂ ಸಚಿವ ಸಿ.ಸಿ. ಪಾಟೀಲ್ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಕಂದಾಯ ಸಚಿವ ಆರ್. ಅಶೋಕ್ ಮತ್ತು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಅವರು ಶನಿವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀಲನಕ್ಷೆ ಪರಿಶೀಲಿಸಿ, ಸ್ಥಳಕ್ಕೆ ಜಂಟಿಯಾಗಿ ಭೇಟಿ ನೀಡಿ ತಪಾಸಣೆ ನಡೆಸಿದರು. ಬಸವಣ್ಣನವರ ಮತ್ತು ಕೆಂಪೇಗೌಡರ ಪ್ರತಿಮೆಗಳ ಮಾದರಿಯನ್ನು ಸಿದ್ಧಪಡಿಸಿ ವಿಧಾನಸೌಧದ ಮುಂಭಾಗದಲ್ಲಿ ಸೂಕ್ತ ಸ್ಥಳ ನಿಗದಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿತ್ತು. ಅದರಂತೆ ಅವರು  ಸಿದ್ಧಪಡಿಸಿಕೊಂಡು ತಂದಿರುವ ನೀಲನಕ್ಷೆ ಮತ್ತು ಪ್ರತಿಮೆಗಳ ಮಾದರಿಗಳನ್ನು ಉಭಯ ಸಚಿವರೂ ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. https://kannadanewsnow.com/kannada/fire-breaks-out-in-bike-parked-in-hassan-as-soon-as-you-look-at-it-youre-on-fire/

Read More

ಲಕ್ನೋ (ಉತ್ತರ ಪ್ರದೇಶ): ಬಿಜೆಪಿಯ ಹಿರಿಯ ನಾಯಕ ಮತ್ತು ಯುಪಿ ವಿಧಾನಸಭೆಯ ಮಾಜಿ ಸ್ಪೀಕರ್ ಕೇಶರಿ ನಾಥ್ ತ್ರಿಪಾಠಿ (Keshari Nath Tripathi) ಇಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕೊನೆಯುಸಿಳೆದಿದ್ದಾರೆ. ಕೇಶರಿ ನಾಥ್ ತ್ರಿಪಾಠಿ(88) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ʻಶ್ರೀ ಕೇಸರಿ ನಾಥ್ ತ್ರಿಪಾಠಿ ಜಿ ಅವರ ಸೇವೆ ಮತ್ತು ಬುದ್ಧಿವಂತಿಕೆಗಾಗಿ ಗೌರವಾನ್ವಿತರಾಗಿದ್ದರು. ಅವರು ಸಾಂವಿಧಾನಿಕ ವಿಷಯಗಳನ್ನು ಚೆನ್ನಾಗಿ ತಿಳಿದಿದ್ದರು. ಅವರು ಯುಪಿಯಲ್ಲಿ ಬಿಜೆಪಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ರಾಜ್ಯದ ಪ್ರಗತಿಗೆ ಶ್ರಮಿಸಿದರು. ಅವರ ನಿಧನಕ್ಕೆ ಸಂತಾಪಗಳು. ಓಂ ಶಾಂತಿ” ಎಂದು ತಿಳಿಸಿದ್ದಾರೆ. ಇನ್ನೂ, ತ್ರಿಪಾಠಿ ನಿಧನಕ್ಕೆ ಸಂತಾಪ ಸೂಚಿಸಿರುವ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ʻಹಿರಿಯ ರಾಜಕಾರಣಿ, ಬಿಜೆಪಿ ಪರಿವಾರದ ಹಿರಿಯ ಸದಸ್ಯರಾದ ಗೌರವಾನ್ವಿತ ಕೇಶರಿ ನಾಥ್ ತ್ರಿಪಾಠಿ ಅವರ ನಿಧನ ಬಹಳ ದುಃಖ ತಂದಿದೆ. ಭಗವಾನ್ ಶ್ರೀರಾಮನು ಅಗಲಿದ ಪುಣ್ಯಾತ್ಮನಿಗೆ ಅವರ ಪವಿತ್ರ ಪಾದಗಳಲ್ಲಿ ಸ್ಥಾನ ಮತ್ತು…

Read More

ಹಾಸನ: ಜಿಲ್ಲೆಯ ಕೋರವಂಗಲ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ ನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಜೋಡಿ ಕೃಷ್ಣಾಪುರದ ನಿವಾಸಿ ಚಿದಾನಂದ್‌ ಎಂಬುವವರಿಗೆ ಸೇರಿದ ಬೈಕ್‌ ಆಗಿದೆ. ಈ ಅವಘಡದಿಂದ ಬೈಕ್‌ ಸಂಪೂರ್ಣ ಸುಟ್ಟು ಕರಕಲಾಗಿದೆ.ಕಡೂರಿನಿಂದ ಜೋಡಿ ಕೃಷ್ಣಾಪುರಕ್ಕೆ ಗ್ರಾಮಕ್ಕೆ ತೆರಳುತ್ತಿದ್ದ ಚಿದಾನಂದ್‌ ಅವರುನಡುವೆ ಕೋರವಂಗಲ ಗೇಟ್‌ ಬಳಿ ಬೈಕ್‌ ನಿಲ್ಲಿಸಿ ಬೇಕರಿಗೆ ಹೋಗಿದ್ದರು. https://kannadanewsnow.com/kannada/the-ashes-of-siddheshwara-sri-of-jnana-yogaashrama-are-immersed-at-the-confluence-of-krishna-malaprabha-and-ghataprabha-rivers/ ಈ ವೇಳೆ ಬೈಕ್‌ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೈಕ್‌ ಹೊತ್ತಿ ಉರಿಯುವುದನ್ನು ಕಂಡು ಬೈಕ್‌ ಸವಾರ ಹಾಗೂ ಮಾಲೀಕ ಚಿದಾನಂದ್‌ ಕಣ್ಣೀರಿಟ್ಟಿದ್ದಾರೆ. ಯಾರಾದ್ರೂ ಆರಿಸಿ ಎಂದು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ದುದ್ದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/the-ashes-of-siddheshwara-sri-of-jnana-yogaashrama-are-immersed-at-the-confluence-of-krishna-malaprabha-and-ghataprabha-rivers/

Read More