Author: KNN IT TEAM

ಮಧ್ಯಪ್ರದೇಶ : ಶಿವಪುರಿ ಪ್ರದೇಶದಲ್ಲಿಅಂಗಡಿಯೊಂದರ ಬೀಗ ಮುಗಿದು ದರೋಡೆ ನಡೆಸಿ,  ಗುಟ್ಕಾ ತಿನ್ನುತ್ತ ಡ್ಯಾನ್ಸ್‌ ಮಾಡಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವೀಡಿಯೊ ವೀಕ್ಷಿಸಿ:  https://twitter.com/fpjindia/status/1611309315377483776?s=20&t=yYNnSuI5peOvlXY5A7NyrA ಮಧ್ಯಪ್ರದೇಶ ಶಿವಪುರಿ ಪ್ರದೇಶದಲ್ಲಿ ಅಂಗಡಿಯಲ್ಲಿ ನಗದು ಮತ್ತು ವಸ್ತುಗಳನ್ನು ಕಳ್ಳತನ ಮಾಡಿದ್ದಾನೆ. ಬಳಿಕ ಆತ ಕೈಗೆ  ಗುಟ್ಕಾ ಹಾಕಿ ತಿನ್ನುತ್ತಾನೆ , ಕಳ್ಳತನ ಮಾಡಿದ ಕುಷಿಗೆ ಕುಣಿದಿರುವುದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಸಂಬಂಧ  ಅಂಗಡಿ ಮಾಲೀಕ ಸೋಮಿ ಜೈನ್ ಅವರು ಜನವರಿ 5ರ ಗುರುವಾರದಂದು ಸಿಸಿಟಿವಿಯ ದೃಶ್ಯ ಆಧಾರದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿದ್ದು,  ಬೀಗವನ್ನು ಮುರಿಯುವ ಮೂಲಕ ಅಂಗಡಿಯನ್ನು ಪ್ರವೇಶಿಸಿದ್ದಾರೆ ಮತ್ತು ಸುಮಾರು ಮೂರು ಗಂಟೆಗಳ ಕಾಲ ಅಲ್ಲಿಯೇ ಇದ್ದನು ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ಅಂಗಡಿ ಮಾಲೀಕರ ದೂರಿನ ನಂತರ, ಪೊಲೀಸರು ಕಳ್ಳನನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನುಮುಂದುವರಿಸಿದ್ದು, ಖೈಯಾಧಾನ ಗ್ರಾಮದ ನಿವಾಸಿ ಗೋಲು ಯಾದವ್ ಕಳ್ಳನನ್ನು ಬಂಧಿಸಲಾಗಿದೆ

Read More

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ( Six-time world champion Mary Kom ) ಗಾಯದಿಂದಾಗಿ ಈ ವರ್ಷದ ಬಾಕ್ಸಿಂಗ್ ಮಹಿಳಾ ವಿಶ್ವ ಚಾಂಪಿಯನ್ಶಿಪ್ನಿಂದ ( boxing Women’s World Championship ) ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ವರ್ಲ್ಡ್ಸ್ನಲ್ಲಿ ಒಟ್ಟು ಎಂಟು ಪದಕಗಳನ್ನು ಗೆದ್ದಿರುವ 40 ವರ್ಷದ ಈ ಆಟಗಾರ್ತಿ ಗಾಯದ ಸ್ವರೂಪವನ್ನು ನಿರ್ದಿಷ್ಟಪಡಿಸಿಲ್ಲ, ಆದರೆ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಈ ವರ್ಷ ಮೇ 1 ರಿಂದ 14 ರವರೆಗೆ ಉಜ್ಬೇಕಿಸ್ತಾನದ ತಾಷ್ಕೆಂಟ್ನಲ್ಲಿ ಐಬಿಎ ವಿಶ್ವ ಚಾಂಪಿಯನ್ಶಿಪ್ ನಡೆಯಲಿದೆ. “ಗಾಯದಿಂದಾಗಿ ಐಬಿಎ ಮಹಿಳಾ ವಿಶ್ವ ಚಾಂಪಿಯನ್ಶಿಪ್ 2023 ರಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗುವುದಿಲ್ಲ. ನಾನು ಶೀಘ್ರದಲ್ಲೇ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಈ ಚಾಂಪಿಯನ್ ಶಿಪ್ ನಿಂದ ನಾವು ಹೆಚ್ಚು ಚಾಂಪಿಯನ್ ಗಳನ್ನು ಪಡೆಯಬಹುದು ಎಂದು ನಾನು ಭಾವಿಸುತ್ತೇನೆ. ಸ್ಪರ್ಧಿಗಳಿಗೆ ನಾನು ಶುಭ ಹಾರೈಸುತ್ತೇನೆ” ಎಂದು ಮೇರಿ ಎಎನ್ಐಗೆ ತಿಳಿಸಿದ್ದಾರೆ. https://twitter.com/ANI/status/1611927824478404609 ಮೊಣಕಾಲಿನ ಗಾಯದಿಂದಾಗಿ ಆಯ್ಕೆ ಟ್ರಯಲ್ಸ್…

Read More

ತುಮಕೂರು : ಜಿಲ್ಲೆಯ ಕುಣಿಗಲ್‌ ತಾಲೂಕಿನ  ಮುದ್ದಲಿಂಗಯ್ಯನದೊಡ್ಡಿ ಬಳಿ ತಡ ರಾತ್ರಿ ಮನೆಗೆ ಚಿರತೆಯೊಂದು ನುಗ್ಗಿದನ್ನು ಕಂಡು ಗ್ರಾಮಸ್ಥರು ಭಯಭೀತರಾದ  ಘಟನೆ ಬೆಳಕಿಗೆ ಬಂದಿದೆ.  https://kannadanewsnow.com/kannada/the-ashes-of-siddheshwara-sri-of-jnana-yogaashrama-are-immersed-at-the-confluence-of-krishna-malaprabha-and-ghataprabha-rivers/ ಮುದ್ದಲಿಂಗಯ್ಯನದೊಡ್ಡಿ ಬಳಿ ನಿನ್ನೆ ರಾತ್ರಿ ತಡ ಏಕಾಏಕಿ ಶಿವಣ್ಣ ಎಂಬುವರ ಚಿರತೆ ಮನೆಗೆ ನುಗ್ಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಕೂಡಿ ಹಾಕಿ ಹೊರಗೆ ಓಡೋಡಿ ಬಂದಿದ್ದಾರೆ. ಬಳಿಕ ಶಿವಣ್ಣ ಅವರ ಕುಟುಂಬ ಕೂಡಲೇ  ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಚಿರತೆಯ ಸೆರೆ ಹಿಡಿದ ಕಾರಣದಿಂದಾಗಿ ಮುದ್ದಲಿಂಗಯ್ಯನ ದೊಡ್ಡಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆ ಸಂಬಂಧ ಹುಲಿಯಾರು ದುರ್ಗ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. https://kannadanewsnow.com/kannada/the-ashes-of-siddheshwara-sri-of-jnana-yogaashrama-are-immersed-at-the-confluence-of-krishna-malaprabha-and-ghataprabha-rivers/

Read More

ಬಾಗಲಕೋಟೆ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿ ನಾಲ್ಕು ದಿನಗಳು ಕಳೆದ್ರೂ ಭಕ್ತರ ಸಂಖ್ಯೆ ಕೊಂಚವೂ ಕಡಿಮೆ ಆಗಿಲ್ಲ. https://kannadanewsnow.com/kannada/bigg-news-moral-education-for-school-children-education-minister-b-c-nagesh-to-chair-crucial-meeting-tomorrow/ ಪ್ರತಿನಿತ್ಯ ಸಾವಿರರಾರು ಜನರು ಮಠಕ್ಕೆ ಬಂದು ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ. ಇದೀಗ ಅವರ ಚಿತಾಭಸ್ಮವನ್ನು ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ. .ಜ್ಞಾನ ಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಬಳಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಮಠಾಧೀಶರು ವಿಶೇಷ ವಾಹನಗಳಲ್ಲಿ ಚಿತಾಭಸ್ಮ ತಂದು ಬೋಟ್​ಗಳಲ್ಲಿ ತೆರಳಿ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿದ್ದಾರೆ. https://kannadanewsnow.com/kannada/bigg-news-moral-education-for-school-children-education-minister-b-c-nagesh-to-chair-crucial-meeting-tomorrow/ ಮೊದಲಿಗೆ ಕೂಡಲಸಂಗಮೇಶ್ವರನ ಆವರಣದಲ್ಲಿ ಪೂಜೆ ಪುನಸ್ಕಾರ ಸಲ್ಲಿಸಿ ಬಳಿಕ ತ್ರಿವೇಣಿ ಸಂಗಮದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ. ಈ ಪುಣ್ಯ ಕಾರ್ಯದಲ್ಲಿ ಬಸವಲಿಂಗ ಸ್ವಾಮೀಜಿ, ಪಂಚಮಸಾಲಿ ಬಸವಜಯಮೃತ್ಯುಂಜಯ ಸ್ವಾಮೀಜಿ, ಜ್ಞಾನಯೋಗಾಶ್ರಮದ ಸ್ವಾಮೀಜಿಗಳು ಭಾಗಿಯಾಗಿದ್ದರು.

Read More

ಹಾವೇರಿ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಇಂದು ಬೆಳಗ್ಗೆ 9 ಗಂಟೆಯಿಂದ ಹಲವು ಗೋಷ್ಠಿಗಳು ನಡೆಯಲಿದ್ದು, ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 5 ರಿಂದ 8-30ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಗೌರವ ಉಪಸ್ಥಿತಿಯಲ್ಲಿ, ಗೌರವ ಅತಿಥಿಗಳಾಗಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ, ಕರ್ನಾಟಕ ವಿಧಾನಸಭೆ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯಸಭಾ ಸದಸ್ಯ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಎ.ನಾರಾಯಣಸ್ವಾಮಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಖಾತೆ ಸಚಿವ ಬಿ.ಸಿ.ನಾಗೇಶ ಅವರು ಭಾಗವಹಿಸಲಿದ್ದಾರೆ. ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವರು  ಸಮಾರೋಪ…

Read More

ನವದೆಹಲಿ: ರೈಲು ಪ್ರಯಾಣದ ವೇಳೆ ಪ್ರಯಾಣಿಕರು ಸಾಮಾನುಗಳನ್ನು ಮರೆಯುವುದು, ಕಳೆದುಕೊಳ್ಳುವುದು ತೀರಾ ಸಾಮಾನ್ಯ. ಆ ವಸ್ತಗಳು ನಮಗೆ ವಾಪಸ್‌ ಸಿಗೋದಿಲ್ಲ ಅನ್ನೋದು ಪಕ್ಕಾ. ಆದ್ರೆ, ಇಲ್ಲೊಂದು ಅಪರೂಪದ ಘಟನೆಯಲ್ಲಿ, ಕಳೆದುಹೋದ ವಸ್ತುವೊಂದನ್ನು ಸ್ವತಃ ರೈಲ್ವೆ ಅಧಿಕಾರಿಗಳೇ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಹೌದು, ಜನವರಿ 4, 2023 ರಂದು ಕುಟುಂಬವೊಂದು ಸಿಕಂದರಾಬಾದ್-ಅಗರ್ತಲಾ ವಿಶೇಷ ರೈಲು ಕೋಚ್‌ನಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ ಆ ಕುಟುಂಬದ ಮಗುವೊಂದು ಆಟಿಕೆಯೊಂದಿಗೆ ಆಟವಾಡುತ್ತಿತ್ತು. ಕುಟುಂಬವು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಅಲಿಯಾಬುರಿ ರೈಲು ನಿಲ್ದಾಣದಲ್ಲಿ ಇಳಿದಿದೆ. ಆದ್ರೆ, ರೈಲಿನಿಂದ ಇಳಿಯುವಾಗ ಕುಟುಂಬ ಸದಸ್ಯರು ಆಟಿಕೆ ತೆಗೆದುಕೊಂಡು ಹೋಗುವುದನ್ನು ಮರೆತಿದ್ದಾರೆ. ಇದನ್ನು ಗಮನಿಸಿದ ಸಹ ಪ್ರಯಾಣಿಕ ಭೂಸಿನ್ ಪಟ್ನಾಯಕ್, ಮಗುವಿನ ಆಟಿಕೆಯನ್ನು ಹೇಗಾದರೂ ಮಾಡಿ ಅವರಿಗೆ ತಲುಪಿಸಬೇಕೆಂದು ಬಯಸಿದ್ದರು. ಕೂಡಲೇ ‘ರೈಲ್ ಮದದ್’ ಆ್ಯಪ್ ಮೂಲಕ 139ಕ್ಕೆ ಕರೆ ಮಾಡಿ ಸಿಕಂದರಾಬಾದ್ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಆ ಕುಟುಂಬದ ಬಗ್ಗೆ ಯಾವುದೇ ವಿವರ ಗೊತ್ತಿಲ್ಲ. ಸೀಟ್…

Read More

ಬೆಂಗಳೂರು : ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಸಂಬಂಧ ಚರ್ಚೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು  ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಜನವರಿ 9 ರ ನಾಳೆ ಸಮಾಜದ ಎಲ್ಲ ಧರ್ಮಗಳು, ಮಠಾಧೀಶರು, ಮುಖಂಡರ ಸಭೆ ಕರೆಯಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಆದಿಚುಂಚನಗಿರಿ ಸ್ವಾಮೀಜಿ, ಸಿದ್ದಗಂಗಾ ಸ್ವಾಮೀಜಿ ಸೇರಿ ಎಲ್ಲ ಧರ್ಮಗಳ ಪ್ರಮುಖ ಧರ್ಮ ಗುರುಗಳು, ಮುಖಂಡರಿಗೆ ಆಹ್ವಾನ ಕಳಿಸಲಾಗಿದೆ. ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಆರಂಭಿಸುವುದಾಗಿ ಶಿಕ್ಷಣ ಇಲಾಖೆ ಕೆಲ ತಿಂಗಳ ಹಿಂದೆಯೇ ಘೋಷಣೆ ಮಾಡಿತ್ತು. ಹೀಗಾಗಿ ಈ ಸಂಬಂಧ ಸಮಾಜದ ಧರ್ಮಗುರುಗಳು, ಮಠಾಧೀಶರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲು ಸಭೆ ಆಯೋಜಿಸಲಾಗಿದೆ. https://kannadanewsnow.com/kannada/20-flights-delayed-at-delhi-airport-amid-orange-alert-42-trains-late-in-northern-railway-region/ https://kannadanewsnow.com/kannada/bigg-news-chief-ministers-amrit-jeevan-yojana-applications-invited-for-setting-up-of-cow-buffalo-unit/

Read More

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ( cold wave ) ಸಹಿತ ಕೊರೆವ ಚಳಿಗೆ ಜನತೆ ತತ್ತರಿಸಿ ಹೋಗಿದ್ದಾರೆ. ಇದಲ್ಲದೇ ದಟ್ಟ ಮಂಜು ಮುಸುಕಿದ ವಾತಾವರಣದಿಂದಾಗಿ 20 ವಿಮಾನ ಹಾಗೂ 42 ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿರೋದಾಗಿ ತಿಳಿದು ಬಂದಿದೆ. ಕಡಿಮೆ ಗೋಚರತೆಯು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಇಂದು ಸುಮಾರು 20 ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿವೆ ಎಂದು ದೆಹಲಿ ವಿಮಾನ ನಿಲ್ದಾಣದ ( Delhi airport ) ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. https://twitter.com/ANI/status/1611918330453168128 ಇನ್ನೂ ರೈಲ್ವೆ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಮಂಜು ಕವಿಕ ಕಾರಣ 42 ರೈಲುಗಳು ತಡವಾಗಿ ಚಲಿಸುತ್ತಿವೆ ಎಂದು ಉತ್ತರ ರೈಲ್ವೆ ತಿಳಿಸಿದೆ ಎಂದು ಎಎನ್ಐ ವರದಿ ಮಾಡಿದೆ. https://twitter.com/ANI/status/1611921325400158208 ಹಲವಾರು ರೈಲುಗಳು ವಿಳಂಬವಾಗುತ್ತಿರುವುದರಿಂದ ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುತ್ತಾರೆ. https://twitter.com/ANI/status/1611918879177216001 ಹವಾಮಾನ ಇಲಾಖೆ ದೆಹಲಿ ಮತ್ತು ಉತ್ತರ ಭಾರತದ ಇತರ ಕೆಲವು…

Read More

ದಾವಣಗೆರೆ : 2022-23 ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಹಸು/ಎಮ್ಮೆ ಘಟಕ ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 16 ಅರ್ಜಿ ಸಲ್ಲಿಸಲು ಕೊನೆಯ ದಿನ. ಸಾಮಾನ್ಯ, ಪ.ಜಾ/ಪ.ಪಂ, ಮತ್ತು ಅಲ್ಪಸಂಖ್ಯಾತ, ಕೂಲಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಆಯ್ಕೆ ಮಾಡಲಾಗುವುದು. ಪಶುಸಂಗೋಪನಾ ಇಲಾಖೆಯಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ  ಜ.16 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ವೈದ್ಯಕೀಯ ಸಂಸ್ಥೆಯ ವೈದ್ಯಾಧಿಕಾರಿಗಳನ್ನು  ಸಂಪರ್ಕಿಸಬೇಕು ಎಂದು ಹೊನ್ನಾಳಿ ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ. https://kannadanewsnow.com/kannada/big-relief-for-those-involved-in-blast-case-owner-not-responsible-for-irregularities-of-employees-hc/ https://kannadanewsnow.com/kannada/good-news-for-women-looking-forward-to-open-university-studies-15-fee-waiver-from-ksou/

Read More

ಬೆಂಗಳೂರು: ಸ್ಪೋಟಕ ವಸ್ತುಗಳ ಮಾರಾಟ ಪರವಾನಗಿ ಪಡೆದವರ ಬಳಿ ಕೆಲಸ ಮಾಡುವ ನೌಕರ, ಮಾಲೀಕರ ಅರಿವಿಗೆ ಬಾರದಂತೆ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದರೇ, ಅದಕ್ಕೆ ಪರವಾನಗಿದಾರರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ. ಈ ಮೂಲಕ ಸ್ಪೋಟ ಪ್ರಕರಣದಲ್ಲಿ ಸಿಲುಗಿದ್ದವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಈ ಸಂಬಂಧ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಎಸ್ ಎಲ್ ಎನ್ ಕಂಪನಿಯ ಪಿ ಸುನೀಲ್ ಕುಮಾರ್ ಹಾಗೂ ಅವರ ತಂದೆ ಎಂ ಪ್ರಕಾಶ್ ರಾವ್ ಸಲ್ಲಸಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ನಡೆಸಿತು. ಪಿ.ಸುನೀಲ್ ಕುಮಾರ್ ಹಾಗೂ ಎಂ ಪ್ರಕಾಶ್ ರಾವ್ ಅವರು ಕ್ವಾರಿ ಗುತ್ತಿಗೆದಾರರಿಗೆ ಸ್ಪೋಟಕ ಮಾರಾಟ ಮಾಡುವಂತ ಪರವಾನಗಿ ಹೊಂದಿದ್ದರು. ಕಳೆದ ಆಗಸ್ಟ್ 16, 2021ರಂದು ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಂತಿದ್ದ ಕಾರೊಂದು ಸ್ಪೋಟಗೊಂಡು, ವ್ಯಕ್ತಿಯೊಬ್ಬ ಮೃತಪಟ್ಟಿದ್ದನು. ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಂತ…

Read More