Subscribe to Updates
Get the latest creative news from FooBar about art, design and business.
Author: KNN IT TEAM
ಹಾವೇರಿ : 86ನೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. ಕನ್ನಡ ಹಬ್ಬದ ಹಿನ್ನೆಲೆ ಇಡೀ ನಗರ ವಧುವಿನಂತೆ ಕಂಗೊಳಿಸುತ್ತಿದೆ. ಜನವರಿ 6, 7 ಮತ್ತು 8ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. https://kannadanewsnow.com/kannada/the-young-man-who-badmouthed-puneeth-do-you-know-what-the-angry-appu-fan-did/ ಹಾವೇರಿಯ ಅಜ್ಜಯ್ಯನ ಗದ್ದುಗೆ ಮೈದಾನದಲ್ಲಿ ಸಾಹಿತ್ಯ ಸಮ್ಮೇಳನ ಚಾಲನೆ ನೀಡಿದ ಬಳಿಕ ಸಿಎಂ ಬಸವರಾಜ ಮಾತನಾಡಿ, ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಗುತ್ತಿರುವುದು ಅತ್ಯಂತ ಔಚಿತ್ಯ ಪೂರ್ಣ. ಕನ್ನಡ ಇಡೀ ಜಗತ್ತಿನಲ್ಲೇ ಅತ್ಯಂತ ಪ್ರಾಚೀನವಾದ ಭಾಷೆಯಾಗಿದೆ. ಕನ್ನಡಿಗರ ಬದುಕು ಬಹಳ ಪುರಾತನ ಶ್ರೇ಼ಷ್ಠ ಎಂದು ಅರ್ಥವಾಗುತ್ತದೆ. ಕನ್ನಡ ಸಂಸ್ಕೃತಿ ದೊಡ್ಡ ಚರಿತ್ರೆಯನ್ನು ಹೊಂದಿದೆ. ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ಬಹಳ ದೊಡ್ಡದಿದೆ. ಉಳಿಸಿಕೊಂಡು ಹೋಗುವ ಜವಾಬ್ದಾರಿ ಸಮ್ಮೇಳನದ ಮೇಲಿದೆ. https://kannadanewsnow.com/kannada/the-young-man-who-badmouthed-puneeth-do-you-know-what-the-angry-appu-fan-did/ ಕನ್ನಡ ಭಾಷೆಯನ್ನು ಇಡೀ ಭಾರತದಲ್ಲಿ ಆಳವಾಗಿ ಬಿತ್ತಬೇಕಿದೆ. ಅದೇ ನಿಟ್ಟಿನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೀತಿದೆ. ಡೊಡ್ಡರಂಗೇಗೌಡರು ತಮ್ಮ ಹೆಸರಿನಷ್ಟೇ ದೊಡ್ಡ ಸಾಹಿತಿಗಳು. ಎಲ್ಲಾ ಕ್ಷೇತ್ರಗಳಲ್ಲೂ ಖ್ಯಾತಿ೯…
ಬೆಂಗಳೂರು : ಕಳೆದ ಕೆಲವು ದಿನಗಳಿಂದ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ನಡುವೆ ವಾಕ್ಸಮರ ನಡೆಯುತ್ತಿದೆ. ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ದರ್ಶನ್ ಅಭಿಮಾನಿಗಳು ಅಪ್ಪು ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದರು.ಇದಾದ ಬಳಿಕ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡ ಯುವಕನೊಬ್ಬ ಪುನೀತ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇದು. ಅಪ್ಪು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ಈತನನ್ನು ಭಾರೀ ಹುಡುಕುತ್ತಿದ್ದ ಅಪ್ಪು ಅಭಿಮಾನಿಗಳು ಕೊನೆಗೂ ಆತನನ್ನು ಅಪ್ಪು ಸಮಾಧಿ ಬಳಿ ಕರೆತಂದು ಕೂರಿಸಿ ಕ್ಷಮೆ ಕೇಳಿಸಿದ್ದಾರೆ . ಎಣ್ಣೆ ಮತ್ತಿನಲ್ಲಿ ಫೇಸ್ ಬುಕ್ನಲ್ಲಿ ಕೆಟ್ಟ ಕೆಟ್ಟ ವಿಡಿಯೋ ವಿಡಿಯೋ ನೋಡಿ ಹೀಗೆ ಮಾಡಿದ್ದೆ. ಅವತ್ತಿಂದ ಅಪ್ಪು ಅಭಿಮಾನಿಗಳು ಕರೆ ಮಾಡುತ್ತಲೇ ಇದ್ದರು. ಇದೀಗ ಕ್ಷಮೆ ಕೇಳುತ್ತಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. https://kannadanewsnow.com/kannada/cricket-tournament-for-vedic-pandits-with-sanskrit-commentary-begins-in-bhopal-video/ https://kannadanewsnow.com/kannada/mp-sumalatha-revealed-the-secret-of-joining-bjp/
ನವದೆಹಲಿ: ಉತ್ತರ ಭಾರತದ ಕೆಲವು ಭಾಗಗಳಲ್ಲಿ ಶುಕ್ರವಾರವೂ ದಟ್ಟವಾದ ಮಂಜು ಆವರಿಸಿರುವ ಕಾರಣ ದೆಹಲಿಯಲ್ಲಿ ಸುಮಾರು 35 ವಿಮಾನಗಳು ವಿಳಂಬವಾಗಿವೆ. ಅಲ್ಲದೆ, ಮಂಜು ಕವಿದ ವಾತಾವರಣದಿಂದಾಗಿ 26 ರೈಲುಗಳು ಒಂದರಿಂದ 10 ಗಂಟೆಗಳ ಕಾಲ ವಿಳಂಬವಾಗಿವೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ. https://kannadanewsnow.com/kannada/a-series-of-fatal-accidents-near-devanahalli-airport-tipper-collides-with-7-cars-including-bmw-completely-damaged/ ಭಾರತೀಯ ಹವಾಮಾನ ಇಲಾಖೆ (IMD) ಅಂಕಿಅಂಶಗಳ ಪ್ರಕಾರ, ಶುಕ್ರವಾರದಂದು ದೆಹಲಿಯಲ್ಲಿ ಎರಡನೇ ದಿನವೂ ಶೀತ ಅಲೆ ದಾಖಲಾಗಿದೆ, ನೈಋತ್ಯ ದೆಹಲಿಯ ಅಯಾನಗರದಲ್ಲಿ ಕನಿಷ್ಠ ತಾಪಮಾನವು 1.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. https://kannadanewsnow.com/kannada/a-series-of-fatal-accidents-near-devanahalli-airport-tipper-collides-with-7-cars-including-bmw-completely-damaged/ ದಟ್ಟವಾದ ಮಂಜಿನ ಪದರವು ವಾಯುವ್ಯ ಭಾರತದ ಮೇಲೆ ಮತ್ತು ದೇಶದ ಮಧ್ಯ ಮತ್ತು ಪೂರ್ವ ಭಾಗಗಳಿಗೆ ಹೊಂದಿಕೊಂಡಿದೆ, ರಸ್ತೆ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. https://kannadanewsnow.com/kannada/a-series-of-fatal-accidents-near-devanahalli-airport-tipper-collides-with-7-cars-including-bmw-completely-damaged/
ಚಿಕ್ಕಬಳ್ಳಾಪುರ: ಬೆಂಗಳುರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಏರ್ ಪೋರ್ಟ್ ಬಳಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಟಿಪ್ಪರ್ ಲಾರಿ 7 ಕಾರುಗಳಿಗೆ ಡಿಕ್ಕಿ ಹೊಡೆದಿದ್ದು ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಿಎಂಡಬ್ಲ್ಯೂ, ಸ್ಯಾಂಟ್ರೋ, ಎಟಿಯೋಸ್ ಲಿವಾ, ಸ್ವಿಫ್ಟ್, ಇಂಡಿಕಾ, ಥಾರ್ ಕಾರುಗಳಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಬೆಂಗಳೂರು ಕಡೆಯಿಂದ ದೇವನಹಳ್ಳಿ ಕಡೆಗೆ ಬರ್ತಿದ್ದ ಟಿಪ್ಪರ್ ಲಾರಿ ಸಿಗ್ನಲ್‍ನಲ್ಲಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಒಂದಕ್ಕೊಂದು ಕಾರುಗಳು ಪರಸ್ಪರ ಹಿಂಬದಿಯಿಂದ ಡಿಕ್ಕಿಯಾಗಿ 7 ಕಾರುಗಳ ಮುಂಭಾಗ ಹಿಂಭಾಗ ಜಖಂಗೊಂಡಿವೆ. https://kannadanewsnow.com/kannada/i-am-happy-that-the-conference-is-being-held-in-our-village-kannada-bill-should-be-discussed-extensively-cm-bommai/ ದೇವನಹಳ್ಳಿ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/i-am-happy-that-the-conference-is-being-held-in-our-village-kannada-bill-should-be-discussed-extensively-cm-bommai/
ಮಂಡ್ಯ : ಬಿಜೆಪಿ ಸೇರ್ಪಡೆ ಕುರಿತು ಸಂಸದೆ ಸುಮಲತಾ ಜೊತೆ ಪಕ್ಷದ ವರಿಷ್ಠರು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದರು. ಇದೀಗ ಈ ಕುರಿತು ಸಂಸದೆ ಸುಮಲತಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ನಾನು ಬಿಜೆಪಿ ಸೇರ್ಪಡೆಯ ಬಗ್ಗೆ ಯೋಚನೆ ಮಾಡಿಲ್ಲ. ಬಿಜೆಪಿ ನಾಯಕರು ಸಹ ಈ ಬಗ್ಗೆ ಮಾತನಾಡಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆ ಇಲ್ಲ , ಫ್ಲೆಕ್ಸ್ ನಲ್ಲಿ ನನ್ನ ಮೇಲಿರುವ ಅಭಿಮಾನಕ್ಕೆ ಫೋಟೋ ಹಾಕಿದ್ದಾರೆ ಅಷ್ಟೇ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸೇರ್ಪಡೆ ವದಂತಿಗೆ ತೆರೆ ಎಳೆದಿದ್ದಾರೆ. ಪಕ್ಷಕ್ಕೆ ಸೇರುವ ಪರಿಸ್ಥಿತಿ ಬಂದಾಗ ಹೇಗೆ ಮಾಡಬೇಕೆಂದು ಯೋಚನೆ ಮಾಡ್ತೀನಿ. ಯೋಗೇಶ್ವರ್ ಅವರಿಗೆ ಬಿಜೆಪಿಗೆ ನಾನು ಬರಬೇಕು ಎಂಬ ಆಸೆ ಇದೆ ಅದೇ ರೀತಿ ಹಲವು ನಾಯಕರು ನನ್ನನ್ನು ಮಾತಾಡಿಸಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ. ಸುಮಲತಾ…
ಭೋಪಾಲ್: ಸಂಸ್ಕೃತವನ್ನು ಉತ್ತೇಜಿಸುವ ದೃಷ್ಟಿಯಿಂದ ನಾಲ್ಕು ದಿನಗಳ ಕ್ರಿಕೆಟ್ ಪಂದ್ಯಾವಳಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯುತ್ತಿದೆ ಭೋಪಾಲ್‌ನ ಅಂಕುರ್ ಮೈದಾನದಲ್ಲಿ ವೈದಿಕ ಪಂಡಿತರಿಗಾಗಿ ‘ಮಹರ್ಷಿ ಕಪ್’ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಆಟಗಾರರು ವೇದಗಳ ಪ್ರಕಾರ ಆಚರಣೆಗಳನ್ನು ಮಾಡಿದರು. ಅವರು ಸಂಸ್ಕೃತದಲ್ಲಿ ಪರಸ್ಪರ ಮಾತನಾಡುತ್ತಾರೆ ಮತ್ತು ಪಂದ್ಯದ ವಿವರಣೆಯು ಸಂಸ್ಕೃತದಲ್ಲಿದೆ. ಆಟದಲ್ಲಿ ಅಂಪೈರಿಂಗ್ ಕೂಡ ಸಂಸ್ಕೃತದಲ್ಲಿ ಮಾಡಲಾಗುತ್ತದೆ. #WATCH | Madhya Pradesh: ‘Maharshi Cup’, with Cricket commentary and umpiring in the Sanskrit language, started in Bhopal today. The players played the match while wearing a dhoti-kurta. pic.twitter.com/ChGodvioMF — ANI MP/CG/Rajasthan (@ANI_MP_CG_RJ) January 5, 2023 ಇದು ಮಹರ್ಷಿ ಕಪ್‌ನ ಮೂರನೇ ವರ್ಷ. ನಾಲ್ಕು ದಿನಗಳ ಪಂದ್ಯಾವಳಿಯನ್ನು ಆಯೋಜಿಸುವ ಗುರಿಯು ಪ್ರಾಚೀನ ಸಂಸ್ಕೃತ ಭಾಷೆ ಮತ್ತು ವೈದಿಕ ಕುಟುಂಬದಲ್ಲಿ ಕ್ರೀಡಾ ಮನೋಭಾವವನ್ನು ಉತ್ತೇಜಿಸುವುದು. ವಿಜೇತ ತಂಡಗಳಿಗೆ ನಗದು ಬಹುಮಾನಗಳಲ್ಲದೆ, ಆಟಗಾರರಿಗೆ ವೇದ…
ಬೆಂಗಳೂರು : ವಿಧಾನಸಭೆ ಚುನಾವಣೆ ಹೊತ್ತಲ್ಲೇ 1.9 ಕೋಟಿ ನಕಲಿ ಹಣ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಂಬಂಧ ಪಿಚ್ಚಿ ಮುತ್ತು ಎಂಬಾತನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಡಿಸೆಂಬರ್ 28 ರಂದು ಈತ ಬ್ಯಾಗ್ ನಲ್ಲಿ ನಕಲಿ ನೋಟುಗಳನ್ನು ತುಂಬಿಸಿಕೊಂಡು ಬರುತ್ತಿರುವ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಈತನನ್ನು ಬಲೆಗೆ ಬೀಳಿಸಿದ್ದಾರೆ. 2000 ಮುಖ ಬೆಲೆಯ 623 ನಕಲಿ ನೋಟು ಹಾಗೂ 500 ಮುಖ ಬೆಲೆಗೆ 174 ನಕಲಿ ನೋಟುಗಳು ಪತ್ತೆಯಾಗಿದೆ. ಆರೋಪಿಯು ತಮಿಳುನಾಡಿನ ತೂತ್ತುಕುಡಿಯಿಂದ ನಕಲಿ ನೋಟುಗಳನ್ನು ತರುತ್ತಿದ್ದನು ಎನ್ನಲಾಗಿದೆ. ಈ ಕುರಿತು ಸಿದ್ದಾಪುರ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಆರೋಪಿ ಬಾಯ್ಬಿಟ್ಟಿಲ್ಲ ಎಂಬುದಾಗಿ ತಿಳಿದು ಬಂದಿದೆ. ತನಿಖೆ ಮುಂದುವರೆದಿದೆ. https://kannadanewsnow.com/kannada/bail-for-accused-in-psi-recruitment-scam-congress-slams-bjp-in-tweet/ https://kannadanewsnow.com/kannada/a-foreigner-meets-a-hindu-girl-gets-beaten-up-serious/
ನವದೆಹಲಿ: ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ(Suniel Shetty) #BoycottBollywood ಪ್ರವೃತ್ತಿಯನ್ನು ತಡೆಯಲು ಸಹಾಯ ಮಾಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಅವರನ್ನು ಒತ್ತಾಯಿಸಿದ್ದಾರೆ ಮತ್ತು ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಂತೆ ಕೋರಿದ್ದಾರೆ. #BoycottBollywood ಪ್ರವೃತ್ತಿಯ ಬಗ್ಗೆ ಮಾತನಾಡಿದ ನಟ ಸುನೀಲ್ ಶೆಟ್ಟಿ, ʻ#ಬಾಲಿವುಡ್ ಅನ್ನು ಬಹಿಷ್ಕರಿಸಿʼ ಇಂತಹ ಟ್ರೆಂಡ್ ಬಾಲಿವುಡ್‌ಗೆ ಒಳ್ಳೆಯದಲ್ಲ. ನೀವು ಅದನ್ನು ನಿಲ್ಲಿಸಬಹುದು. ಟ್ವಿಟ್ಟರ್‌ನಲ್ಲಿನ ಟ್ರೆಂಡ್‌ಗಳನ್ನು ನಿಲ್ಲಿಸಬಹುದು. ಯುಪಿ ಜನರ ಬಗ್ಗೆ ಮಾಡಿರುವ ಗ್ರಹಿಕೆಗೆ ನನಗೆ ಬೇಸರವಾಗಿದೆ. ನಮ್ಮ ಸಂಗೀತ ಮತ್ತು ಕಲೆಯಿಂದ ಭಾರತವನ್ನು ವಿಶ್ವದಲ್ಲಿ ಹೆಮ್ಮೆ ಪಡುವಂತೆ ಮಾಡುವುದು ನಾವೇ. ನೀವು ಪ್ರಧಾನಿಯವರೊಂದಿಗೆ ಮಾತನಾಡಿದರೆ ಅದು ಸಹಾಯಕವಾಗುತ್ತದೆ” ಎಂದಿದ್ದಾರೆ. ನಟರನ್ನು ಟಾರ್ಗೆಟ್ ಮಾಡಬೇಡಿ. ಇಂತಹ ಟ್ರೆಂಡ್‌ಗಳಿಂದ ಲಕ್ಷಾಂತರ ಜನರು ತೊಂದರೆಗೀಡಾಗುತ್ತಾರೆ. ಬಹಿಷ್ಕಾರವು ಪರಿಹಾರವಲ್ಲ. ಇದು ಈಗಾಗಲೇ ಚಲನಚಿತ್ರಗಳ ಮೇಲೆ ಪರಿಣಾಮ ಬೀರಿದೆ. ಎಲ್ಲರಿಗೂ ಹಾನಿ ಮಾಡಬೇಡಿ. ನಾವೆಲ್ಲರೂ ಒಗ್ಗೂಡಬೇಕುʼ ಎಂದಿದ್ದಾರೆ. #BoycottBollywood ಟ್ರೆಂಡ್‌ನಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದ್ದು,…
ಹಾವೇರಿ: ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ನಮ್ಮೂರಿನಲ್ಲಿ ಸಮ್ಮೇಳನ ನಡೆಯುತ್ತಿರುವುದು ಖುಷಿ ವಿಚಾರವಾಗಿದೆ ಎಂದು ಹೇಳಿದ್ದಾರೆ.ಹಾವೇರಿ ಸಾಹಿತಿಗಳ ನಾಡು, ಈ ನೆಲದ ಅಸ್ಮಿತೆ ಎತ್ತಿ ಹಿಡಿಯುತ್ತಿದೆ. ಕನ್ನಡ , ಕನ್ನಡ ಸಾಹಿತ್ಯ, ರಚನೆ ಬಹಳ ಮುಖ್ಯ ಎಂದಿದ್ದಾರೆ. ಕನ್ನಡದ ಮಸೂದೆ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು. https://kannadanewsnow.com/kannada/human-beings-do-not-have-the-same-rule-as-dogs-it-is-not-right-to-say-this-in-the-mouths-of-statesmen-g-t-devegowda/ ಬೆಂಗಳೂರಿನಲ್ಲಿ ಪರ್ಯಾಯಸಮ್ಮೇಳನ ಆಯೋಜನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹಿಂದೆಯೂ ಇಂತಹ ಪರ್ಯಾಯ ಸಮ್ಮೇಳನ ಬಹಳಷ್ಟು ನಡೆದಿದೆ. ಅಲ್ಲಿ ಚರ್ಚೆ ಆಗುವ ವಿಷಯಗಳನ್ನ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂದರು.ಇನ್ನು ಸಿಎಂ ಮೂಗಿನ ನೇರದಲ್ಲಿ ಭ್ರಷ್ಟಾಚಾರ ಎಂದು ಆರೋಪ ವಿಚಾರವಾಗಿ, ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದ್ದಾರೆ. ನಾನು ಒಳ್ಳೆಯ ಕೆಲಸಕ್ಕೆ ಬಂದಿದ್ದೇನೆ ಆ ಬಗ್ಗೆ ನಾನು ಇಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. https://kannadanewsnow.com/kannada/human-beings-do-not-have-the-same-rule-as-dogs-it-is-not-right-to-say-this-in-the-mouths-of-statesmen-g-t-devegowda/
ದೆಹಲಿ: ಮೇಯರ್ ಚುನಾವಣೆಗೆ ಮುನ್ನವೇ ಹೈಡ್ರಾಮ ಸೃಷ್ಟಿಯಾಗಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ), ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸದಸ್ಯರು ನಾಗರಿಕ ಕೇಂದ್ರ(civic center)ದೊಳಗೆ ನಾಮನಿರ್ದೇಶಿತ ಕೌನ್ಸಿಲರ್‌ಗಳ ಪ್ರಮಾಣ ವಚನ ಸಂಬಂಧಿಸಿ ಭಾರಿ ಗದ್ದಲವನ್ನು ಸೃಷ್ಟಿಸಿದ್ದಾರೆ. ಜಗಳವಾಡಿದ ವಿಡಿಯೋ ವೈರಲ್ ಆಗಿದೆ https://twitter.com/ANI/status/1611246097674153984?s=20&t=aZkqzkDOkvtSRJb-LbO6Yg https://kannadanewsnow.com/kannada/bail-for-accused-in-psi-recruitment-scam-congress-slams-bjp-in-tweet/