ಹಾವೇರಿ : 86ನೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. ಕನ್ನಡ ಹಬ್ಬದ ಹಿನ್ನೆಲೆ ಇಡೀ ನಗರ ವಧುವಿನಂತೆ ಕಂಗೊಳಿಸುತ್ತಿದೆ. ಜನವರಿ 6, 7 ಮತ್ತು 8ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಹಾವೇರಿಯ ಅಜ್ಜಯ್ಯನ ಗದ್ದುಗೆ ಮೈದಾನದಲ್ಲಿ ಸಾಹಿತ್ಯ ಸಮ್ಮೇಳನ ಚಾಲನೆ ನೀಡಿದ ಬಳಿಕ ಸಿಎಂ ಬಸವರಾಜ ಮಾತನಾಡಿ, ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಗುತ್ತಿರುವುದು ಅತ್ಯಂತ ಔಚಿತ್ಯ ಪೂರ್ಣ. ಕನ್ನಡ ಇಡೀ ಜಗತ್ತಿನಲ್ಲೇ ಅತ್ಯಂತ ಪ್ರಾಚೀನವಾದ ಭಾಷೆಯಾಗಿದೆ. ಕನ್ನಡಿಗರ ಬದುಕು ಬಹಳ ಪುರಾತನ ಶ್ರೇ಼ಷ್ಠ ಎಂದು ಅರ್ಥವಾಗುತ್ತದೆ.
ಕನ್ನಡ ಸಂಸ್ಕೃತಿ ದೊಡ್ಡ ಚರಿತ್ರೆಯನ್ನು ಹೊಂದಿದೆ. ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ಬಹಳ ದೊಡ್ಡದಿದೆ. ಉಳಿಸಿಕೊಂಡು ಹೋಗುವ ಜವಾಬ್ದಾರಿ ಸಮ್ಮೇಳನದ ಮೇಲಿದೆ.
ಕನ್ನಡ ಭಾಷೆಯನ್ನು ಇಡೀ ಭಾರತದಲ್ಲಿ ಆಳವಾಗಿ ಬಿತ್ತಬೇಕಿದೆ. ಅದೇ ನಿಟ್ಟಿನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೀತಿದೆ. ಡೊಡ್ಡರಂಗೇಗೌಡರು ತಮ್ಮ ಹೆಸರಿನಷ್ಟೇ ದೊಡ್ಡ ಸಾಹಿತಿಗಳು. ಎಲ್ಲಾ ಕ್ಷೇತ್ರಗಳಲ್ಲೂ ಖ್ಯಾತಿ೯ ಪಡೆದವರು. ಜನಸಮಾನ್ಯರಿಗೆ ಸರಳ ಭಾಷೆಯಲ್ಲಿ ಮಾರ್ಮಿಕವಾಗಿ ಎಂದು ತಿಳಿಸಿದ್ದಾರೆ