ಬೆಂಗಳೂರು : ಕಳೆದ ಕೆಲವು ದಿನಗಳಿಂದ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ನಡುವೆ ವಾಕ್ಸಮರ ನಡೆಯುತ್ತಿದೆ.
ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ದರ್ಶನ್ ಅಭಿಮಾನಿಗಳು ಅಪ್ಪು ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದರು.ಇದಾದ ಬಳಿಕ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡ ಯುವಕನೊಬ್ಬ ಪುನೀತ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇದು. ಅಪ್ಪು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು.
ಈತನನ್ನು ಭಾರೀ ಹುಡುಕುತ್ತಿದ್ದ ಅಪ್ಪು ಅಭಿಮಾನಿಗಳು ಕೊನೆಗೂ ಆತನನ್ನು ಅಪ್ಪು ಸಮಾಧಿ ಬಳಿ ಕರೆತಂದು ಕೂರಿಸಿ ಕ್ಷಮೆ ಕೇಳಿಸಿದ್ದಾರೆ . ಎಣ್ಣೆ ಮತ್ತಿನಲ್ಲಿ ಫೇಸ್ ಬುಕ್ನಲ್ಲಿ ಕೆಟ್ಟ ಕೆಟ್ಟ ವಿಡಿಯೋ ವಿಡಿಯೋ ನೋಡಿ ಹೀಗೆ ಮಾಡಿದ್ದೆ. ಅವತ್ತಿಂದ ಅಪ್ಪು ಅಭಿಮಾನಿಗಳು ಕರೆ ಮಾಡುತ್ತಲೇ ಇದ್ದರು. ಇದೀಗ ಕ್ಷಮೆ ಕೇಳುತ್ತಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
WATCH VIDEO: ಕ್ರಿಕೆಟ್ ಪಂದ್ಯದಲ್ಲಿ ಸಂಸ್ಕೃತದಲ್ಲೇ ಕಾಮೆಂಟ್ರಿ ಮಾಡಿದ ವ್ಯಕ್ತಿ…. ವಿಡಿಯೋ ವೈರಲ್
BIGG NEWS : ಬಿಜೆಪಿ ಸೇರ್ಪಡೆ ಗುಟ್ಟು ಬಿಚ್ಚಿಟ್ಟ ಸಂಸದೆ ಸುಮಲತಾ |Sumalatha