Subscribe to Updates
Get the latest creative news from FooBar about art, design and business.
Author: KNN IT TEAM
ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮೂರನೇ ದಿನದ ವಿಚಾರಣೆಯ ನಂತರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ದೆಹಲಿಯ ಜಾರಿ ನಿರ್ದೇಶನಾಲಯ ಕಚೇರಿಯಿಂದ ನಿರ್ಗಮಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಇನ್ನು ಸೋನಿಯಾರನ್ನ ಕೇಂದ್ರ ತನಿಖಾ ಸಂಸ್ಥೆ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿತು. ಇನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಗೆ ಇಡಿ ಈವರೆಗೂ ಯಾವುದೇ ಹೊಸ ಸಮನ್ಸ್ ಜಾರಿ ಮಾಡಿಲ್ಲ. ಹಾಗಾಗಿ ಇಂದೇ ವಿಚಾರಣೆ ಅಂತ್ಯವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. https://twitter.com/ANI/status/1552212734132965376?s=20&t=PYRdN_OOlzv_wbqMWrIrcw
ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿ ಅಂತಿಮ ದರ್ಶನದ ಸ್ಥಳಕ್ಕೆ ಸಚಿವ ನಳೀನ್ ಕುಮಾರ್ ಕಟೀಲ್, ಸಚಿವ ಸುರೇಶ್ ಸೇರಿದಂತೆ ಆಗಮಿಸುತ್ತಿದ್ದಂತೆ ಬೆಳ್ಳಾರೆಯಲ್ಲಿ ಭುಗಿಲೆದ್ದ ಆಕ್ರೋಶದ ಕಿಚ್ಚು ಹೆಚ್ಚಾಗಿದೆ. https://kannadanewsnow.com/kannada/praveens-murder-youth-in-car-thrashes-mla-harish-poonja/ ಜಮಾಯಿಸಿದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರ ಲಾಠಿ ಬೀಸಿದ್ದಾರೆ. ಈ ಸ ಸಂದರ್ಭದಲ್ಲಿ ಮಸೀದಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಮಸೀದಿ ಬಳಿಯಿಂದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆ ವೇಳೆ ಬಿಜೆಪಿ ಕಾರ್ಯಕರ್ತನ ತಲೆಗೆ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. https://kannadanewsnow.com/kannada/praveens-murder-youth-in-car-thrashes-mla-harish-poonja/
ಬೆಂಗಳೂರು: ರಾಜ್ಯದಲ್ಲಿ ಯುವಕರ ಕೊಲೆಗಳ ಸರಣಿಯೇ ಮುಂದುವರಿದಿದ್ದು, ಇನ್ನೊಂದು ಜೀವ ಹೋಗಿದೆ. ಈ ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ? ಕೊಲೆ ಅದ ಮೇಲೆ ನಡೆಯುವ ಹೇಳಿಕೆಗಳ ಭರಾಟೆ, ಕೂಗಾಟದಿಂದ ಪ್ರಯೋಜನ ಏನು? ಶಿವಮೊಗ್ಗದಲ್ಲಿ ಹರ್ಷ ಕೊಲೆ ಅದ ಮೇಲೆ ಬಿಜೆಪಿ ಸರಕಾರ ಮೈಮರೆತಿದ್ದು ಯಾಕೆ? ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ಕಿಡಿಕಾರಿದ್ದಾರೆ. https://twitter.com/hd_kumaraswamy/status/1552202494327013376?t=XAqG77x88GCDWo6OOf2cFg&s=19 ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, ಪ್ರತಿ ಕೊಲೆ ಅದ ಮೇಲೆಯೂ ಮೈ ಕೊಡವಿಕೊಂಡು ಎದ್ದೇಳುವ ಬಿಜೆಪಿ ಸರಕಾರ, ಕೊಲೆಯೇ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿಲ್ಲ, ಏಕೆ? ಕೊಲೆಗಳೆಂದರೆ ಕೆಲವರಿಗೇಕೆ ಇಷ್ಟೊಂದು ಇಷ್ಟ? ಚುನಾವಣೆ ಹತ್ತಿರ ಆದಂತೆಲ್ಲ ನೆತ್ತರ ಓಕುಳಿ ಹರಿಯುತ್ತಿದೆ! ಈ ನೆತ್ತರ ಮೇಲೆ ರಾಜಕೀಯ ಆಟ ವಿಜೃಂಭಿಸುತ್ತಿದೆ ಎಂದು ಹೇಳಿದ್ದಾರೆ. https://twitter.com/hd_kumaraswamy/status/1552202496742789121?t=t0swZC6ys_VnyfAL96inAw&s=19 ಈ ಮೊದಲು ಕೊಲೆಯಾಗಿದ್ದ ಮಸೂದ್ ಕೂಡ ಬಡವ, ಈಗ ಕೊಲೆಯಾದ ಪ್ರವೀಣ್ ನೆಟ್ಟಾರು ಕೂಡ ಬಡ ಕುಟುಂಬದವರೇ. ಶ್ರಮಜೀವಿಗಳ ಕುಟುಂಬದ…
ನವದೆಹಲಿ : ದೆಹಲಿಯ ತಿಹಾರ್ ಜೈಲಿನಲ್ಲಿ ಉಪವಾಸ ಕೂತಿದ್ದ ಭಯೋತ್ಪಾದಕ ಯಾಸಿನ್ ಮಲಿಕ್ ರಕ್ತದೊತ್ತಡದಲ್ಲಿ ಏರುಪೇರಾದ ಪರಿಣಾಮ ದೆಹಲಿಯ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. “ಬಿಪಿ ಮಟ್ಟದಲ್ಲಿನ ಏರಿಳಿತದ ನಂತ್ರ ಆತನನ್ನ ಮಂಗಳವಾರ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ. ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (JKLF) ಮುಖ್ಯಸ್ಥ ಮಲಿಕ್ (56) ರುಬೈಯಾ ಸಯೀದ್ ಅಪಹರಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಮ್ಮು ನ್ಯಾಯಾಲಯಕ್ಕೆ ಭೌತಿಕವಾಗಿ ಹಾಜರಾಗಲು ಅವಕಾಶ ನೀಡಬೇಕು ಎಂಬ ಅವರ ಮನವಿಗೆ ಕೇಂದ್ರವು ಸ್ಪಂದಿಸದ ನಂತ್ರ ಶುಕ್ರವಾರ ಬೆಳಿಗ್ಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನ ಪ್ರಾರಂಭಿಸಿದ್ದ ಎನ್ನಲಾಗ್ತಿದೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ತಿಹಾರ್‌ನ ಜೈಲು ಸಂಖ್ಯೆ 7ರಲ್ಲಿರುವ ಹೈ-ರಿಸ್ಕ್ ಸೆಲ್‌ನಲ್ಲಿ ಏಕಾಂತ ಬಂಧನದಲ್ಲಿದ್ದ ಕಾಶ್ಮೀರಾ ಪ್ರತ್ಯೇಕತಾವಾದಿಯನ್ನ ಜೈಲಿನ ವೈದ್ಯಕೀಯ ತನಿಖಾ (ಎಂಐ) ಕೊಠಡಿಗೆ ಸ್ಥಳಾಂತರಿಸಿ 4 ದ್ರವಗಳನ್ನ ನೀಡಲಾಗಿತ್ತು. ಸಧ್ಯ ಈ ಭಯೋತ್ಪಾದಕ, ಭಯೋತ್ಪಾದನೆಗೆ ಧನಸಹಾಯ ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಉತ್ತರ ಫಿಲಿಪೈನ್ಸ್ : ಇಲ್ಲಿನ ಲುಜಾನ್ ದ್ವೀಪದಲ್ಲಿ ಇಂದು ಮುಂಜಾನೆ ಸಂಭವಿಸಿದ 7 ತೀವ್ರತೆಯ ಪ್ರಬಲ ಭೂಕಂಪದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. https://kannadanewsnow.com/kannada/union-minister-shobha-karandlaje-bjp-leader-praveen-nettarus-murder-was-pre-planned/ ಗಾಯಾಳುಗಳನ್ನು ರಾಜಧಾನಿಯಲ್ಲಿರುವ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಡೊಲೊರೆಸ್‌ನಲ್ಲಿ ಭೂಕಂಪನದ ಅನುಭವವಾದ ನಂತರ ಭಯಭೀತರಾದ ಜನರು ತಮ್ಮ ಕಟ್ಟಡಗಳ ಹೊರಗೆ ಓಡಿಹೋದರು ಮತ್ತು ಸ್ಥಳೀಯ ಮಾರುಕಟ್ಟೆಯ ಕಿಟಕಿಗಳು ಒಡೆದುಹೋದವು ಎಂದು ಪೊಲೀಸ್ ಮೇಜರ್ ಎಡ್ವಿನ್ ಸೆರ್ಗಿಯೊ ತಿಳಿಸಿದ್ದಾರೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಮಾಹಿತಿ ಪ್ರಕಾರ, ಭೂಕಂಪವು ಡೊಲೊರೆಸ್ ಪಟ್ಟಣದ ಆಗ್ನೇಯಕ್ಕೆ 10 ಕಿಮೀ (6 ಮೈಲುಗಳು) ಆಳದಲ್ಲಿ ಅಪ್ಪಳಿಸಿದೆ ಎಂದು ತಿಳಿಸಿದೆ. ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳ ಕಿಟಕಿಗಳು ಒಡೆದು ಹೋಗಿವೆ. ಭೂ ಕಂಪನ ಕೇಂದ್ರ ಬಿಂದುವಿನಿಂದ 300 ಕಿಲೋ ಮೀಟರ್ ದೂರದಲ್ಲಿರುವ ರಾಜಧಾನಿ ಮನಿಲಾದಲ್ಲಿ ಎತ್ತರದ ಕಟ್ಟಡಗಳು ಕಂಪಿಸಿವೆ. https://kannadanewsnow.com/kannada/bigg-news-praveen-nettaru-murder-case-this-is-a-heinous-act-of-fanatic-forces-to-break-the-unity-of-hindus-minister-sunil-kumar/ ಆಳವಿಲ್ಲದ ಆದರೆ ಶಕ್ತಿಯುತವಾದ ಭೂಕಂಪವು ಲುಜಾನ್ ಮುಖ್ಯ ದ್ವೀಪದಲ್ಲಿ ಬೆಳಗ್ಗೆ 8:43 ರ ಸುಮಾರಿಗೆ ಪರ್ವತ ಪ್ರಾಂತ್ಯದ ಅಬ್ರಾವನ್ನು ಅಪ್ಪಳಿಸಿತು, ಆರಂಭದಲ್ಲಿ ಭೂಕಂಪನೆ ತೀವ್ರತೆ…
ಮಧ್ಯಪ್ರದೇಶ: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಕೊಟ್ಖೇಡಿ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ಸಹೋದರಿಯರ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತರನ್ನು ಸಹೋದರಿಯರಾದ ಸೋನು, ಸಾವಿತ್ರಿ ಮತ್ತು ಲಲಿತಾ ಎಂದು ಗುರುತಿಸಲಾಗಿದ್ದು, ಅವರು ತಮ್ಮ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದರು. ಆದ್ರೆ, ಇದೀಗ ಮೂವರು ಕೂಡ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗದ ಕಾರಣ ಸಾವಿನ ಹಿಂದಿನ ಪ್ರಮುಖ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. https://kannadanewsnow.com/kannada/azadi-ka-amrit-mahotsav-itbp-troops-wave-the-tiranga-at-12000-feet/ https://kannadanewsnow.com/kannada/i-didnt-say-bulldozer-should-run-over-rss-siddaramaiah-warns-of-legal-action-if-viral-post-is-not-stopped/ https://kannadanewsnow.com/kannada/man-gets-hired-by-google-after-39-attempts-his-story-is-now-viral/
ಬೆಂಗಳೂರು: ಶ್ರೀರಾಮಸೇನೆ,ಬಜರಂಗದಳ, ಆರ್ ಎಸ್ ಎಸ್ ( RSS ) ಮೇಲೆ ಬುಲ್ಡೋಜರ್ ನುಗ್ಗಿಸಬೇಕು ಎಂದು ನಾನು ಕರೆಕೊಟ್ಟಿದ್ದೇನೆ ಎಂಬ ಅರ್ಥದಲ್ಲಿ ಪ್ರಕಟವಾಗಿದ್ದ ಪತ್ರಿಕಾ ವರದಿಯನ್ನು ಬಹಳಷ್ಟು ಬಿಜೆಪಿ ಬೆಂಬಲಿಗರು ಹಂಚಿಕೊಂಡು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ.ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಈ ವೈರಲ್ ಪೋಸ್ಟ್ ( Viral Post ) ನಿಲ್ಲಿಸದೇ ಹೋದ್ರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಖಡಕ್ ಎಚ್ಚರಿಕೆ ನೀಡಿದ್ದಾರೆ. https://kannadanewsnow.com/kannada/bigg-news-good-news-for-scheduled-caste-community-from-state-government-shubh-lagna-mass-marriage-scheme/ ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ವಿರೋಧ ಪಕ್ಷದವರು, ಅಲ್ಪಸಂಖ್ಯಾತರು, ಸೈದ್ದಾಂತಿಕ ವಿರೋಧಿಗಳ ಮನೆಮೇಲೆ ಬುಲ್ ಡೋಜರ್ ಹರಿಸುತ್ತೇವೆ ಎಂಬ ಹಿಂಸಾತ್ಮಕ ಹೇಳಿಕೆಗಳೇ ತಪ್ಪು, ಇಂತಹ ಹೇಳಿಕೆಗಳಿಂದ ಪ್ರಚೋದನೆಗೀಡಾಗಿ ಇನ್ನೊಂದು ಗುಂಪಿನವರು ಶ್ರೀರಾಮಸೇನೆ, ಬಜರಂಗದಳದವರ ಮನೆ ಮೇಲೆ ಬುಲ್ಡೋಜರ್ ಹರಿಸುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ ಯಾರೂ ಅವಕಾಶ ನೀಡಬಾರದು” ಎಂದಷ್ಟೇ ನಾನು ಹೇಳಿದ್ದು ಎಂದು ತಿಳಿಸಿದ್ದಾರೆ. https://kannadanewsnow.com/kannada/bjp-worker-praveens-brutal-killing-bjp-members-offer-to-resign/ ನನ್ನ ಹೇಳಿಕೆಯನ್ನು ತಿರುಚಿ ಪ್ರಕಟವಾದ ವರದಿಯನ್ನು…
ನವದೆಹಲಿ : ಕೆ.ಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಸಂಪೂರ್ಣ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಸಧ್ಯ ರಾಹುಲ್ ಕೋವಿಡ್‌ನಿಂದ ಚೇತರಿಸಿಕೊಂಡಿದ್ರೂ ಬಿಸಿಸಿಐ ವೈದ್ಯಕೀಯ ತಂಡವು ಎಲ್ಎಸ್ಜಿ ನಾಯಕನಿಗೆ ಮತ್ತೊಂದು ವಾರ ವಿಶ್ರಾಂತಿ ನೀಡುವಂತೆ ಸಲಹೆ ನೀಡಿದೆ ಎನ್ನಲಾಗ್ತಿದೆ. ಈ ಮೊದಲು ತಮ್ಮ ಫಿಟ್ನೆಸ್ ಸಾಬೀತುಪಡಿಸಿದ ನಂತ್ರ ರಾಹುಲ್ ಕಳೆದ ಎರಡು ಟಿ20ಗಳಿಗಾಗಿ ವೆಸ್ಟ್ ಇಂಡೀಸ್‌ಗೆ ಹಾರುತ್ತಾರೆ ಎಂದು ನಂಬಲಾಗಿತ್ತು. ಆಗಸ್ಟ್ 18 ರಿಂದ ಪ್ರಾರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರಾಹುಲ್ ಈಗ ಬಲವಾದ ಪುನರಾಗಮನವನ್ನ ಮಾಡುವ ಗುರಿಯನ್ನು ಹೊಂದಿದ್ದಾರೆ. ಕೆಎಲ್ ರಾಹುಲ್‌ಗೆ ಒಂದೆರಡು ತಿಂಗಳು ಕಠಿಣವಾಗಿದೆ. ಬಲಗೈ ಬ್ಯಾಟ್ಸ್ಮನ್ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20ಐ ತವರಿನ ಸರಣಿಯಲ್ಲಿ ಭಾರತವನ್ನ ಮುನ್ನಡೆಸಲು ಸಜ್ಜಾಗಿದ್ದರು. ಆದ್ರೆ, ಐಪಿಎಲ್ 2022ರ ನಂತ್ರ ತೊಡೆಸಂದು ಸಮಸ್ಯೆಯಿಂದ ದುರದೃಷ್ಟವಶಾತ್ ಹೊರಗುಳಿದರು.
ಮಂಗಳೂರು : ರಾಜ್ಯ ಸರ್ಕಾರವು ದಲಿತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಸಪ್ತಪದಿ ಮಾದರಿಯಲ್ಲೇ ಶುಭಲಗ್ನ ಹೆಸರಿನಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜನೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ. https://kannadanewsnow.com/kannada/bigg-news-good-news-for-sc-st-community-students-applications-invited-for-incentives/ ಈ ಕುರಿತು ಮಾಹಿತಿ ನೀಡಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಶುಭಲಗ್ನ ಯೋಜನೆ ಶೀಘ್ರವೇ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಶುಭಲಗ್ನಿ ಯೋಜನೆಯಿಂದ ಎಸ್ ಸಿ ಸಮುದಾಯದ ಕುಟುಂಬಗಳಿಗೆ ನೆರವಾಗಲಿದೆ ಎಂದು ತುಳಿಸಿದ್ದಾರೆ. https://kannadanewsnow.com/kannada/praveens-murder-youth-in-car-thrashes-mla-harish-poonja/ ಈಗಾಗಲೇ ರಾಜ್ಯದ ಪ್ರತಿ ಜಿಲ್ಲೆಗಳಿಂದ ಪರಿಶಿಷ್ಟ ಜಾತಿ, ಉಪಜಾತಿಗಳ ಸಮಗ್ರ ವರದಿಯನ್ನು ತರಿಸಿಕೊಂಡಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ಶುಭಲಗ್ನ ಘೋಷಣೆ ಆಗಲಿದೆ. ಶುಭಲಗ್ನ ಕಾರ್ಯಕ್ರಮಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ. ಶುಭ ಲಗ್ನ ಯೋಜನೆಯಿಂದ ಪರಿಶಿಷ್ಟ ಜಾತಿಗೆ ಸೇರಿದ 28-30 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು, ಈ ವಿಭಾಗದಲ್ಲಿ ಹಲವು ಮಂದಿ ಆರ್ಥಿಕವಾಗಿ ದುರ್ಬಲರಾದವರಿಗೆ ನೆರವು ದೊರೆಯಲಿದೆ. ಸಪ್ತಪದಿ ಯೋಜನೆಯ ಮಾದರಿಯಲ್ಲೇ ಶುಭ ಲಗ್ನ ಯೋಜನೆಯಲ್ಲಿಯೂ ವಧು-ವರರಿಗೆ…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿಷ್ಠಿತ ಕಂಪನಿಗಳಲ್ಲಿಉನ್ನತ್ತವಾದ ಹುದ್ದೆಯನ್ನು ಪಡೆಯಬೇಕೆಂದು ಪ್ರತಿಯೊಬ್ಬರಿಗೆ ಕನಸಿರುತ್ತದೆ. ಅದಕ್ಕಾಗಿ ಸಾಕಷ್ಟು ಪ್ರಯತ್ನ ಪಡುತ್ತಾರೆ. ಅದರಂತೆ ವ್ಯಕ್ತಿಯೊಬ್ಬ ಗೂಗಲ್ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಒಂದಲ್ಲ, ಎರಡಲ್ಲ ಬರೋಬ್ಬರಿ 39ನೇ ಪ್ರಯತ್ನದಲ್ಲಿ ಕೆಲಸ ಪಡೆದಿದ್ದಾನೆ. ಈತನ ಕಥೆ ಜನರನ್ನು ಪ್ರೇರಿಪಿಸುತ್ತಿದೆ. https://kannadanewsnow.com/kannada/gold-prices-today-fall-for-3rd-day-in-a-row-down-%e2%82%b95000-in-4-months/ ಫ್ರಾನ್ಸಿಸ್ಕೋದ ನಿವಾಸಿಯಾದ ಟೈಲರ್ ಕೋಹೆನ್ ಎಂಬಾತ ಟೆಕ್ ದೈತ್ಯ ಕಂಪನಿ ಗೂಗಲ್ನಲ್ಲಿ ಕೆಲಸ ಪಡೆಯಲು ಸತತ 39 ಬಾರಿ ಅರ್ಜಿ ಸಲ್ಲಿಸಿದ್ದರಂತೆ. ಅಂತಿಮವಾಗಿ ಜುಲೈ 19 ರಂದು ಅವರು ಕೆಲಸ ಪಡೆದಿದ್ದಾರೆ. ಈ ಕುರಿತಂತೆ ತಮ್ಮ ಎಲ್ಲಾ ಇಮೇಲ್ ಸಂವಹನದ ಸ್ಕ್ರೀನ್‌ಶಾಟ್ ಅನ್ನು ಗೂಗಲ್ನೊಂದಿಗೆ ಹಂಚಿಕೊಂಡಿದ್ದಾರೆ. ಈ ಮೊದಲು ಡೋರ್‌ಡ್ಯಾಶ್‌ನಲ್ಲಿ ಅಸೋಸಿಯೇಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. https://kannadanewsnow.com/kannada/union-minister-shobha-karandlaje-bjp-leader-praveen-nettarus-murder-was-pre-planned/ ಪರಿಶ್ರಮ ಮತ್ತು ಹುಚ್ಚುತನದ ನಡುವೆ ಉತ್ತಮವಾದ ಗೆರೆ ಇದೆ. ನಾನು ಯಾವುದನ್ನು ಹೊಂದಿದ್ದೇನೆ ಎಂಬುದನ್ನು ಕಂಡುಹಿಡಿಯಲು ನಾನು ಇನ್ನೂ ಪ್ರಯತ್ನಿಸುತ್ತಿದ್ದೇನೆ. 39 ನಿರಾಕರಣೆಗಳಲ್ಲಿ ಒಂದು ಸ್ವೀಕೃತಗೊಂಡಿದೆ ಎಂದು ಅವರು ಕಿರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಇದೀಗ ಈಗ…