Author: kannadanewsnow57

ಬೆಂಗಳೂರು : ಬೆಂಗಳೂರಿನಲ್ಲಿ ಯುವಕನೋರ್ವ ಬುದ್ದಿವಂತ ಸಿನಿಮಾ ಶೈಲಿಯಲ್ಲಿ ಯುವತಿಯರಿಗೆ ವಂಚಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೌದು, ಬೆಂಗಳೂರಿನ ಪಟ್ಟೇಗಾರಪಾಳ್ಯ ನಿವಾಸಿ ಮಿಥುನ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಈತ ಸುಂದರವಾಗಿರುವ ಯುವತಿಯರನ್ನು ಬಲೆಗೆ ಬೀಳಿಸಿಕೊಂಡು ಪ್ರೀತಿಯ ನಾಟಕ ಮಾಡಿ ಅವರ ಜೊತೆ ಮದುವೆ ಆಗಿ. 5-6 ತಿಂಗಳು ಸಂಸಾರ ಮಾಡಿ. ನಂತರ ಅವರ ಬಳಿ ಇರುವ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ. ಈತ ಇಂತಹ ಕೇಸ್ ನಲ್ಲಿ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. ಈ ಹಿಂದೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಮಿಥುನ್ ವಿರುದ್ಧ ಲವ್ ಸೆಕ್ಸ್ ದೋಖಾ ಕೇಸ್ ದಾಖಲಾಗಿದ್ದು, 6 ತಿಂಗಳು ಜೈಲುಶಿಕ್ಷೆ ಅನುಭವಿಸಿ ಹೊರಗಡೆ ಬಂದಿದ್ದನು. ಇದೀಗ ಮತ್ತೋರ್ವ ಯುವತಿಗೆ ಈತ ವಂಚಿಸಿರುವ ಆರೋಪ ಕೇಳಿಬಂದಿದೆ. ಮತ್ತೆ ಯುವತಿಯನ್ನು ವಂಚಿಸಿ ಪರಾರಿಯಾಗಿದ್ದ ಯುವಕನನ್ನು ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ ಐ…

Read More

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಘಟನೆ ನಡೆದು 3 ತಿಂಗಳ ನಂತರ ಆರ್ ಸಿಬಿ ಮತ್ತೊಂದು ಪೋಸ್ಟ್ ಹಂಚಿಕೊಂಡಿದೆ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಆರ್ ಸಿಬಿ, ಜೂನ್ 4, 2025 – ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ… ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು, ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ ₹25 ಲಕ್ಷ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ. ಇದು ಆರ್‌ಸಿಬಿ ಕೇರ್ಸ್‌ನ ಆರಂಭವೂ ಹೌದು. ಅವರ…

Read More

ನವದೆಹಲಿ : ಕಳೆದ 1 ವರ್ಷದಲ್ಲಿ ಸಿಮೆಂಟ್ 8% ರಷ್ಟು ದುಬಾರಿಯಾಗಿದೆ, ಅದರ ಸರಾಸರಿ ಬೆಲೆ 5/2025 ರಲ್ಲಿ ಪ್ರತಿ ಚೀಲಕ್ಕೆ 360 ರೂ. ತಲುಪಿದೆ. ಇಂಧನ ಮತ್ತು ಜಿಪ್ಸಮ್ ದರಗಳಲ್ಲಿನ ಹೆಚ್ಚಳದಿಂದಾಗಿ ಸಿಮೆಂಟ್ ಬೆಲೆಗಳು ಹೆಚ್ಚಾದವು. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಏರಿಕೆ ಕಂಡುಬಂದಿದೆ. ಒಂದು ಚೀಲ ₹ 20 ರಷ್ಟು ದುಬಾರಿಯಾಗಿದ್ದರೂ, ಪಾಶ್ಚಿಮಾತ್ಯ ಮಾರುಕಟ್ಟೆಗಳಲ್ಲಿ ಬೆಲೆ ₹ 3 ರಷ್ಟು ಹೆಚ್ಚಾಗಿದೆ, 5 ನೇ ತಿಂಗಳಲ್ಲಿ ಸಿಮೆಂಟ್ ಬೇಡಿಕೆ 9% ಕ್ಕಿಂತ ಹೆಚ್ಚು ಹೆಚ್ಚಾಗಿ ದೇಶಾದ್ಯಂತ 39.6 ಟನ್‌ಗಳಿಗೆ ತಲುಪಿದೆ. 2025 ರ ಹಣಕಾಸು ವರ್ಷದಲ್ಲಿ ತೀವ್ರ ಕುಸಿತದ ನಂತರ, 2026 ಮತ್ತು 2027 ರ ಹಣಕಾಸು ವರ್ಷದಲ್ಲಿ ಸಿಮೆಂಟ್ ಬೆಲೆಗಳು ಸುಧಾರಿಸುವ ನಿರೀಕ್ಷೆಯಿದೆ. ಆಗಸ್ಟ್‌ನಲ್ಲಿ ಬೆಲೆಗಳು ತಿಂಗಳಿನಿಂದ ತಿಂಗಳು ಸ್ಥಿರವಾಗಿರುತ್ತವೆ. ಆದರೆ ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರಾದೇಶಿಕ ಪ್ರವೃತ್ತಿಗಳಲ್ಲಿ ವ್ಯತ್ಯಾಸಗಳನ್ನು ಗಮನಿಸಲಾಗಿದೆ. ಮಾರುಕಟ್ಟೆಯಾದ್ಯಂತ ಆರಂಭಿಕ ಮಳೆಯಿಂದಾಗಿ ಬೇಡಿಕೆ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಬೆಲೆ ಪ್ರತಿ ಚೀಲಕ್ಕೆ…

Read More

ಚಿಕ್ಕಬಳ್ಳಾಪುರ: ಜಿಲ್ಲೆಯ ಫಾರ್ಮ್ ಹೌಸ್ ಒಂದರಲ್ಲಿನ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿತ್ತು. ಈ ಜ್ವರದಿಂದಾಗಿ 100ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದವು. ಇಂತಹ ರೋಗಗ್ರಸ್ತ ಹಂದಿಗಳನ್ನು ಕೆರೆಗೆ ಬಿಸಾಡಿ ಅಮಾನವೀಯ ಕೃತ್ಯವನ್ನು ಎಸಗಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಹೆಬ್ಬರಿ ಬಳಿಯ ಕೆರೆಗೆ ರೋಗಗ್ರಸ್ತ ಹಂದಿಗಳನ್ನು ಎಸೆದು ಅಮಾನವೀಯ ಕೃತ್ಯವನ್ನು ಎಸಗಲಾಗಿದೆ. ಹೆಬ್ಬರಿ ಬಳಿಯಿರುವಂತ ಕೆರೆಗೆ ರೋಗಗ್ರಸ್ತ ಹಂದಿಗಳನ್ನು ಮಾಲೀಕ ಬಿಸಾಡಿದ್ದಾರೆ. ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದರಿಂದ 100 ಹಂದಿಗಳು ಮೃತಪಟ್ಟಿದ್ದವು. ಮೃತಪಟ್ಟ ಹಂದಿಗಳನ್ನು ಕೆರೆಗೆ ಬಿಸಾಕಿ ಮಾಲೀಕ ಅವಿವೇಕತನ ಮೆರೆದಿದ್ದಾನೆ. ಇದರಿಂದಾಗಿ ಜನ, ಜಾನುವಾರ ನೀರು ಬಳಸಿದ್ರೆ ಅಪಾಯ ಎದುರಾಗುವಂತ ಆತಂಕ ಉಂಟಾಗಿದೆ. ಕೆರೆಯಲ್ಲಿ ಹಂದಿಗಳ ಶವ ತೇಲುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ಹೆಬ್ಬರಿ ಗ್ರಾಮದ ಕೆರೆ ಬಳಿಗೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಪಶುಸಂಗೋಪನೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತಂಕ ವ್ಯಕ್ತ ಪಡಿಸಿದ ಸಚಿವ ಎಂ.ಸಿ ಸುಧಾಕರ್…

Read More

ಬೆಂಗಳೂರು : ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲ ವರ್ಗದ ಯುವಜನರಿಗೆ ಸಮಾನ ಅವಕಾಶಗಳನ್ನು ನೀಡಿ, ಅವರನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸದೃಢವಾಗಿಸಿ, ಸರ್ವರನ್ನು ಒಳಗೊಂಡ ಸಶಕ್ತ ಕರ್ನಾಟಕವನ್ನು ನಿರ್ಮಾಣ ಮಾಡುವಲ್ಲಿ ರಾಜ್ಯ ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ. ಜನಪ್ರಿಯ ಗ್ಯಾರಂಟಿ ಯೋಜನೆಯೊಂದಿಗೆ ಕ್ರೀಡಾ ಕ್ಷೇತ್ರಕ್ಕೂ ಅಪಾರ ಬೆಂಬಲವನ್ನು ನೀಡುತ್ತಿದೆ. ಈವರೆಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದ ವಿಜೇತರಿಗೆ ₹5 ಲಕ್ಷ , ಬೆಳ್ಳಿ ಪದಕ ಪಡೆದವರಿಗೆ ₹3 ಲಕ್ಷ ಹಾಗೂ ಕಂಚಿನ ಪದಕ ಗೆದ್ದವರಿಗೆ ₹2 ಲಕ್ಷ ನಗದು ಬಹುಮಾನವನ್ನು ಸರ್ಕಾರದಿಂದ ನೀಡಲಾಗುತ್ತಿತ್ತು. ಆದರೆ, ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಸಲುವಾಗಿ ನಗದು ಪುರಸ್ಕಾರವನ್ನು ಹೆಚ್ಚಿಸಿ, ಚಿನ್ನ ಪದಕ ವಿಜೇತರಿಗೆ ₹7 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ₹5 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ ₹3 ಲಕ್ಷ ನೀಡಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಬಜೆಟ್‌ನಲ್ಲೂ ಕ್ರೀಡಾಕ್ಷೇತ್ರಕ್ಕೆ ವಿಶೇಷ ಅನುದಾನ, ಬೆಂಬಲವನ್ನು ನೀಡಲಾಗಿದೆ. ಈ ಮೂಲಕ ಯುವ…

Read More

ನವದೆಹಲಿ : ಹಿಂದೂ ವಿವಾಹವನ್ನು ಧಾರ್ಮಿಕ ಉದ್ದೇಶವೆಂದು ಪರಿಗಣಿಸಲಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಒಂದು ದೊಡ್ಡ ಆದೇಶ ನೀಡಿದ್ದು, ದೇವಾಲಯದ ನಿಧಿಯಿಂದ ವಿವಾಹ ಮಂಟಪಗಳನ್ನು ನಿರ್ಮಿಸಬೇಕೆಂಬ ಸರ್ಕಾರದ ಆದೇಶವನ್ನು ನ್ಯಾಯಾಲಯ ತಿರಸ್ಕರಿಸಿದೆ. ದೇವಾಲಯಗಳಿಗೆ ಬರುವ ಕಾಣಿಕೆಗಳು ಮತ್ತು ದೇಣಿಗೆಗಳನ್ನು ಧಾರ್ಮಿಕ ಮತ್ತು ದತ್ತಿ ಕಾರ್ಯಗಳಲ್ಲಿ ಮಾತ್ರ ಖರ್ಚು ಮಾಡಬಹುದು, ವಾಣಿಜ್ಯ ಚಟುವಟಿಕೆಗಳಲ್ಲಿ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ವರದಿಯ ಪ್ರಕಾರ, ತಮಿಳುನಾಡು ಸರ್ಕಾರವು ಐದು ವಿಭಿನ್ನ ದೇವಾಲಯಗಳ ನಿಧಿಯಿಂದ ವಿವಾಹ ಮಂಟಪಗಳನ್ನು ನಿರ್ಮಿಸಲು ಅನುಮತಿ ನೀಡುವ ಆದೇಶ (ಜಿಒ) ಹೊರಡಿಸಿದೆ. ಇದು ಹಿಂದೂ ಸಮಾಜಕ್ಕೆ ಕಡಿಮೆ ವೆಚ್ಚದಲ್ಲಿ ಮದುವೆಯಾಗಲು ಸೌಲಭ್ಯವನ್ನು ಒದಗಿಸುತ್ತದೆ ಎಂದು ಸರ್ಕಾರ ವಾದಿಸಿತು. ದೇವಾಲಯದ ಹಣವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ಹೇಳಿದ ಈ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಯಿತು. ನ್ಯಾಯಮೂರ್ತಿ ಎಸ್.ಎಂ. ನ್ಯಾಯಮೂರ್ತಿ ಸುಬ್ರಮಣಿಯಂ ಮತ್ತು ನ್ಯಾಯಮೂರ್ತಿ ಜಿ. ಅರುಲ್ ಮುರುಗನ್ ಅವರ ಪೀಠವು ಹಿಂದೂ ವಿವಾಹವನ್ನು ಸಂಸ್ಕಾರವೆಂದು ಪರಿಗಣಿಸಲಾಗಿದ್ದರೂ, ಅದು ಒಪ್ಪಂದದ ಅಂಶಗಳನ್ನು ಸಹ…

Read More

ಟೋಕಿಯೋ : ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಜಪಾನ್‌ಗೆ ಆಗಮಿಸಿದ್ದಾರೆ. ಅವರಿಗೆ ಇಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು. ಟೋಕಿಯೊದಲ್ಲಿ ಪ್ರಧಾನಿ ಮೋದಿ ಅವರಿಗೆ ವಿಶೇಷ ಉಡುಗೊರೆ ಸಿಕ್ಕಿತು. ಈ ಉಡುಗೊರೆ ‘ದರುಮ ಗೊಂಬೆ’ ಆಗಿದ್ದು, ಇದನ್ನು ಇಲ್ಲಿ ಬಹಳ ಶುಭವೆಂದು ಪರಿಗಣಿಸಲಾಗಿದೆ. ಹೌದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಜಪಾನ್ ಭೇಟಿಯ ಸಂದರ್ಭದಲ್ಲಿ ದಾರುಮ ಗೊಂಬೆಯನ್ನು ಸ್ವೀಕರಿಸಿದ್ದಾರೆ. ಈ ಗೊಂಬೆ ಜಪಾನಿನ ಇತಿಹಾಸ ಮತ್ತು ಸಂಪ್ರದಾಯದೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ಶೋರಿಂಜಾನ್-ದಾರುಮ-ಜಿ ದೇವಾಲಯದ ಮುಖ್ಯ ಅರ್ಚಕರು ಎರಡು ರಾಷ್ಟ್ರಗಳ ನಡುವಿನ ಸೌಹಾರ್ದತೆಯ ಸಂಕೇತವಾಗಿ ಪ್ರಸ್ತುತಪಡಿಸಿದರು. ದ್ರುಮ ಗೊಂಬೆ ಎನ್ನುವುದು ಜಪಾನೀಸ್ ಸಂಪ್ರದಾಯದ ಒಂದು ಗೊಂಬೆಯಾಗಿದ್ದು, ಈ ಗೊಂಬೆಗಳು ಝೆನ್ ಬೌದ್ಧಧರ್ಮದ ಸ್ಥಾಪಕ ಬೋಧಿಧರ್ಮರನ್ನು ಹೋಲುತ್ತವೆ ಮತ್ತು ಇವು ಅದೃಷ್ಟ ಹಾಗೂ ಪರಿಶ್ರಮದ ಸಂಕೇತಗಳಾಗಿವೆ. ಈ ಗೊಂಬೆಗಳಿಗೆ ಕೆಂಪು ಬಣ್ಣದ ವಸ್ತ್ರಗಳಿದ್ದು, ಇವುಗಳನ್ನು ಅದೃಷ್ಟದ ಸಂಕೇತವಾಗಿ, ಗುರಿಗಳನ್ನು ಸಾಧಿಸುವ ಪ್ರೋತ್ಸಾಹಕ್ಕಾಗಿ ಬಳಸಲಾಗುತ್ತದೆ. ಈ ಗೊಂಬೆಗಳು ಸಾಮಾನ್ಯವಾಗಿ…

Read More

ಚೆನ್ನೈ : ಇಂದು ತಮಿಳು ಸ್ಟಾರ್ ಹೀರೋ ವಿಶಾಲ್ ಅವರು ನಟಿ ಸಾಯಿ ಧನ್ಸಿಕಾ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂದು (ಶುಕ್ರವಾರ, ಆಗಸ್ಟ್ 29) ವಿಶಾಲ್ ಮತ್ತು ಸಾಯಿ ಧನ್ಸಿಕಾ ನಿಶ್ಚಿತಾರ್ಥ ಮಾಡಿಕೊಂಡರು. ಚೆನ್ನೈನಲ್ಲಿರುವ ವಿಶಾಲ್ ಅವರ ನಿವಾಸದಲ್ಲಿ ಅವರ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಮಾರಂಭ ನಡೆಯಿತು. https://twitter.com/VishalKOfficial/status/1961323850593116543?ref_src=twsrc%5Etfw%7Ctwcamp%5Etweetembed%7Ctwterm%5E1961323850593116543%7Ctwgr%5E8f9452593d88ef5dcabb7b7b6cc88fa0b1d4de33%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fenglish%3Fmode%3Dpwalangchange%3Dtrue

Read More

ಕಂದಾಯ ಇಲಾಖೆಯು ಕೈಬರಹದಲ್ಲಿ ಭೂದಾಖಲೆ ನೀಡುವ ವ್ಯವಸ್ಥೆಗೆ ತಿಲಾಂಜಲಿ ಹಾಡಿದ್ದು, ಡಿಜಿಟಲ್ ರೂಪದಲ್ಲಿ ವಿತರಿಸುವುದನ್ನು ಕಡ್ಡಾಯಗೊಳಿಸಿದೆ. ಈಗಾಗಲೇ ಡಿಜಿಟಲ್ ಭೂದಾಖಲೆಗಳ ವಿತರಣೆ ಶುರುವಾಗಿದೆ. ಇನ್ನೂ ಮುಂದೆ “ಎ” ಹಾಗೂ “ಬಿ” ವರ್ಗದ ಭೂ ದಾಖಲೆಗಳನ್ನು ಸಂಪ್ರದಾಯಕ ದೃಢೀಕೃತ ನಕಲು ಪ್ರತಿ ಅಥವಾ ಕೈಬರಹದ ಮೂಲಕ ನೀಡುವ ಬದಲಾಗಿ ಡಿಜಿಟಲ್ ರೂಪದಲ್ಲಿಯೇ ನೀಡಲಿದೆ. ಸದ್ಯ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಡಿಜಿಟಲ್ ದಾಖಲೆ ನೀಡಲಾಗುತ್ತಿದೆ. ಅರ್ಜಿದಾರರು ಕೋರುವ ಭೂ ದಾಖಲೆ ಈಗಾಗಲೇ ಸ್ಕ್ಯಾನ್ ಆಗಿ ದೃಢೀಕರಣಗೊಂಡಿದ್ದರೆ ಒಂದೇ ದಿನದಲ್ಲಿ ಡಿಜಿಟಲ್ ದಾಖಲೆ ವಿತರಣೆ ಆಗಲಿದೆ. ಒಂದೊಮ್ಮೆ ಸ್ಕ್ಯಾನಿಂಗ್ ಪ್ರಕ್ರಿಯೆ ಆಗಿರದಿದ್ದರೇ 07 ದಿನಗಳೊಳಗೆ ಡಿಜಿಟಲ್ ದಾಖಲೆ ವಿತರಣೆ ಆಗಲಿದೆ. ಇದರಿಂದ ಭೂದಾಖಲೆಗಳನ್ನು ಯಾವುದೇ ಅಡಚಣೆ ವಿಳಂಬವಿಲ್ಲದಂತೆ ಪಡೆಯಲು ಅನುಕೂಲವಾಗಲಿದೆ. ಭೂದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸುವ ಉದ್ದೇಶದಿಂದ ಕಂದಾಯ ಇಲಾಖೆ ಈಗಾಗಲೇ ಭೂ ಸುರಕ್ಷಾ ಯೋಜನೆ ಜಾರಿಗೊಳಿಸಿದೆ. ಈ ಬಗ್ಗೆ ರೈತರು ಹಾಗೂ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.

Read More

ಬೆಂಗಳೂರು: ನಟಿ ರಮ್ಯಾ ರೀತಿಯಲ್ಲೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ಸಲ್ಲಿಕೆಯಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷಿ ಚೌಧರಿ ಹೇಳಿದ್ದಾರೆ. ನಟ ದರ್ಶನ್ ರವರ ಧರ್ಮ ಪತ್ನಿಯಾದ ವಿಜಯಲಕ್ಷ್ಮೀ ದರ್ಶನ್ ಹಾಗೂ ಇವರ ಮಗನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣಿನ ಸ್ವಾಭಿಮಾನ ಹಾಗೂ ಗೌರವಕ್ಕೆ ಧಕ್ಕೆ ತರುವಂತಹ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಹಾಗೂ ರಕ್ಷಣೆ ಒದಗಿಸುವಂತೆ ಮನವಿ ಮಾಡಲಾಗಿತ್ತು. ಸುದ್ದಿಗಾರರ ಜೊತೆ ಮಾತನಾಡಿದ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ವಿಜಯಲಕ್ಷ್ಮೀ ದರ್ಶನ್ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಮೆಂಟ್ ಮಾಡಲಾಗಿದೆ. ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಕಿಡಿಗೇಡಿಗಳು ಹೇಗೆ ಅಸಭ್ಯ ಸಂದೇಶಗಳನ್ನು ರವಾನಿಸಿದ್ದರೋ ಅದೇ ರೀತಿ ವಿಜಯಲಕ್ಷ್ಮೀ ಅವರಿಗೂ…

Read More