Author: kannadanewsnow57

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದಿನಿಂದ (ಮೇ 5) ಮೇ 10ರವರೆಗೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಳೆಯ ಸಂದರ್ಭದಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಮೇ 6 ಮತ್ತು 7ರಂದು ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮೇ 10ರವರೆಗೆ ಸಾಧಾರಣ ಮಳೆಯಾಗಬಹುದು. ಕರಾವಳಿಯ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ.

Read More

ಚಿಕ್ಕಮಗಳೂರು: ಆಟವಾಡುತ್ತಾ ಬಾತುಕೋಳಿಯನ್ನು ಹಿಡಿಯಲು ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ಸಂಭವಿಸಿದೆ. ಸೋಮವಾರದಂದು ಚಿಕ್ಕಮಗಳೂರು ತಾಲೂಕಿನ ಅರಳಿಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ. ಮಕ್ಕಳು ಕೆರೆಯ ದಡದಲ್ಲಿ ಆಟವಾಡುತ್ತಿದ್ದಾಗ, ಅವರ ಜೊತೆಗಿದ್ದ ಬಾತುಕೋಳಿ ನೀರಿಗೆ ಇಳಿದಿದೆ. ಆ ಬಾತುಕೋಳಿಯನ್ನು ಹಿಡಿಯಲು ಹೋದ ಬಾಲಕಿ ಮೊದಲು ನೀರಿಗೆ ಇಳಿದಿದ್ದಾಳೆ. ಆಕೆ ನೀರಿನಲ್ಲಿ ಮುಳುಗುವುದನ್ನು ಕಂಡು, ಆಕೆಯನ್ನು ರಕ್ಷಿಸಲು ಹೋದ ಇತರ ಮೂವರು ಮಕ್ಕಳು ಸಹ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ಮಕ್ಕಳ ವಿವರ: ಅಬ್ದುಲ್ ರೆಹಮಾನ್ (13 ವರ್ಷ) ನಯಾಜ್ (12 ವರ್ಷ) ಮೈದಿಹಾ (9 ವರ್ಷ) ಅಮಾನ್ (8 ವರ್ಷ)

Read More

ಬೆಂಗಳೂರು: ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಿ ಹೊರಡಿಸಲಾಗಿದ್ದ ಸುತ್ತೋಲೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಈ ಸಾಲಿನ ಪ್ರವೇಶಾತಿ ಬಯಸುವ ಅಭ್ಯರ್ಥಿಗಳಿಗೆ ದೊಡ್ಡ ಸಮಾಧಾನ ಸಿಕ್ಕಂತಾಗಿದೆ. 2026-27ನೇ ಸಾಲಿಗೆ ಈ ಹಿಂದಿನ ನಿಯಮದಂತೆ ಎಸ್‌ಎಸ್‌ಎಲ್‌ಸಿ (SSLC) ಅಂಕಗಳ ಆಧಾರದ ಮೇಲೆಯೇ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಾತಿ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.ಬಾಹುಬಲಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಸೇರಿದಂತೆ ಒಟ್ಟು 51ಕ್ಕೂ ಹೆಚ್ಚು ಕಾಲೇಜುಗಳು ಸರ್ಕಾರದ ಈ ಹೊಸ ನಿಯಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು. ನ್ಯಾಯಾಲಯದ ಆದೇಶ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಹೊಸ ನಿಯಮಗಳನ್ನು ರೂಪಿಸುವವರೆಗೆ ಹಳೆಯ ಪದ್ಧತಿಯನ್ನೇ ಮುಂದುವರಿಸಲು ಅವಕಾಶ ನೀಡಲಾಗಿತ್ತು, ಅದನ್ನು ಉಲ್ಲಂಘಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಪ್ರಸ್ತುತ ಹಳೆಯ ನಿಯಮದಂತೆ ಪ್ರವೇಶಾತಿ ನಡೆಸಲು ಅನುಮತಿ ನೀಡಲಾಗಿದ್ದರೂ, ಈ ಆದೇಶವು ಸುಪ್ರೀಂಕೋರ್ಟ್ ನೀಡಲಿರುವ…

Read More

ಬೆಂಗಳೂರು: ದೇಶಾದ್ಯಂತ ಸಂಭವಿಸಬಹುದಾದ ನೈಸರ್ಗಿಕ ವಿಕೋಪಗಳು ಹಾಗೂ ತುರ್ತು ಸಂದರ್ಭಗಳನ್ನು ಎದುರಿಸಲು ಕೇಂದ್ರ ಸರ್ಕಾರವು ಹೊಸದೊಂದು ಅತ್ಯಾಧುನಿಕ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಇನ್ನು ಮುಂದೆ ಯಾವುದೇ ವಿಪತ್ತಿನ ಮುನ್ಸೂಚನೆ ನೇರವಾಗಿ ನಿಮ್ಮ ಮೊಬೈಲ್ ಫೋನ್‌ಗೆ ‘ಅಲರ್ಟ್’ ಸಂದೇಶದ ಮೂಲಕ ಬರಲಿದೆ. ಏನಿದು ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್? ಇದು ವಿಪತ್ತಿನ ಸಮಯದಲ್ಲಿ ಸಾರ್ವಜನಿಕರಿಗೆ ತ್ವರಿತವಾಗಿ ಎಚ್ಚರಿಕೆ ನೀಡುವ ಒಂದು ಆಧುನಿಕ ವ್ಯವಸ್ಥೆಯಾಗಿದೆ. ಸಾಮಾನ್ಯ ಎಸ್‌ಎಂಎಸ್‌ಗಳಿಗಿಂತ ಇದು ಭಿನ್ನವಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿರುವ ಲಕ್ಷಾಂತರ ಮೊಬೈಲ್ ಫೋನ್‌ಗಳಿಗೆ ಏಕಕಾಲದಲ್ಲಿ ಎಚ್ಚರಿಕೆ ಸಂದೇಶವನ್ನು ಕಳುಹಿಸಬಹುದು. ಸದ್ಯ ಈ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದ್ದು, ಮೊಬೈಲ್‌ನಲ್ಲಿ ಬರುವ ಸೈರನ್ ಸದ್ದಿಗೆ ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ವ್ಯವಸ್ಥೆಯ ಮುಖ್ಯ ಉದ್ದೇಶಗಳು: ತ್ವರಿತ ಮಾಹಿತಿ: ಭೂಕಂಪ, ಪ್ರವಾಹ, ಸುನಾಮಿ ಹಾಗೂ ಗುಡುಗು-ಸಿಡಿಲಿನಂತಹ ಸಂದರ್ಭಗಳಲ್ಲಿ ಜನರಿಗೆ ಮುನ್ಸೂಚನೆ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸುವುದು. ಸಮಯದ ಉಳಿತಾಯ: ಸಾಮಾನ್ಯ ಎಸ್‌ಎಂಎಸ್ ಕಳುಹಿಸಲು ಸಮಯ…

Read More

ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ಗಳಿವೆಯೇ? ಅದರಲ್ಲಿ ಒಂದು ಸಿಮ್ ಅನ್ನು ಕೇವಲ ಇನ್ಕಮಿಂಗ್ ಕರೆಗಳಿಗಾಗಿ ಅಥವಾ ಬ್ಯಾಂಕ್ ಅಕೌಂಟ್ಗಳಿಗಾಗಿ ಮಾತ್ರ ಬಳಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ನಿಯಮಗಳ ಪ್ರಕಾರ, ದೀರ್ಘಕಾಲದವರೆಗೆ ರೀಚಾರ್ಜ್ ಮಾಡದಿದ್ದರೆ ನಿಮ್ಮ ಸಿಮ್ ಕಾರ್ಡ್ ಶಾಶ್ವತವಾಗಿ ಬಂದ್ ಆಗುವ ಅಪಾಯವಿದೆ. TRAI ನಿಯಮಗಳು ಏನು ಹೇಳುತ್ತವೆ? ಟ್ರಾಯ್ ನಿಯಮಗಳ ಅನ್ವಯ, ಯಾವುದೇ ಮೊಬೈಲ್ ಸಂಖ್ಯೆಯು ಸತತವಾಗಿ 90 ದಿನಗಳ ಕಾಲ ಯಾವುದೇ ಬಳಕೆಯಿಲ್ಲದೆ (ಔಟ್ಗೋಯಿಂಗ್ ಕರೆಗಳು, ಡೇಟಾ ಬಳಕೆ ಅಥವಾ ರೀಚಾರ್ಜ್) ಇದ್ದರೆ, ಸಂಬಂಧಿತ ಟೆಲಿಕಾಂ ಕಂಪನಿಯು ಆ ಸಂಖ್ಯೆಯನ್ನು ಡಿಸ್ಕನೆಕ್ಟ್ ಮಾಡುವ ಅಧಿಕಾರ ಹೊಂದಿರುತ್ತದೆ. ಒಮ್ಮೆ ಡೀಆಕ್ಟಿವೇಟ್ ಆದ ಸಂಖ್ಯೆಯನ್ನು ಮತ್ತೆ ಪಡೆಯುವುದು ಬಹಳ ಕಷ್ಟದ ಕೆಲಸ. ಜಿಯೋ, ಏರ್ಟೆಲ್, ವಿ (Vi) ಗ್ರಾಹಕರು ಏನು ಮಾಡಬೇಕು? ನಿಮ್ಮ ಸಿಮ್ ಕಾರ್ಡ್ ಸಕ್ರಿಯವಾಗಿರಲು ದೊಡ್ಡ ಮೊತ್ತದ ಪ್ಲಾನ್ಗಳ ಅವಶ್ಯಕತೆಯಿಲ್ಲ. ಈ ಕೆಳಗಿನ ಸರಳ ಕ್ರಮಗಳ ಮೂಲಕ…

Read More

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಮತ ಎಣಿಕೆ ಕೇಂದ್ರಗಳಲ್ಲಿ ರಾಜಕೀಯ ಪಕ್ಷಗಳ ಎದಬಡಿತ ಹೆಚ್ಚಾಗಿದ್ದರೆ, ಇತ್ತ ಸೋಶಿಯಲ್ ಮೀಡಿಯಾದಲ್ಲಿ ಜನಸಾಮಾನ್ಯರ ಕ್ರಿಯೇಟಿವಿಟಿ ಜೋರಾಗಿದೆ. ಫಲಿತಾಂಶದ ಆತಂಕವನ್ನು ಮೀಮ್ಸ್ಗಳ ಮೂಲಕ ಹೊರಹಾಕುತ್ತಿರುವ ನೆಟ್ಟಿಗರು, ಇಂಟರ್ನೆಟ್ ಲೋಕವನ್ನು ಅಕ್ಷರಶಃ ರಂಗೇರಿಸಿದ್ದಾರೆ. ಜಿದ್ದಾಜಿದ್ದಿನ ಹೋರಾಟ: ಕುತೂಹಲದ ಶಿಖರದಲ್ಲಿ ಮತದಾರರು ಬೆಳಿಗ್ಗೆಯಿಂದಲೇ ಆರಂಭವಾಗಿರುವ ಮತ ಎಣಿಕೆಯಲ್ಲಿ ಹಲವು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಕಂಡುಬರುತ್ತಿದೆ. ಮುನ್ನಡೆ ಮತ್ತು ಹಿನ್ನಡೆಗಳ ಆಟ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಅಭ್ಯರ್ಥಿಗಳ ಎದೆಯಲ್ಲಿ ‘ಧಕ್ ಧಕ್’ ಶುರುವಾಗಿದೆ. ಈ ಬಾರಿಯ ಚುನಾವಣೆಗಳು ಪ್ರಾದೇಶಿಕ ರಾಜಕೀಯ ಸಮೀಕರಣ ಮತ್ತು ಭವಿಷ್ಯದ ಮೈತ್ರಿಗಳ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿವೆ. ಟ್ವಿಟ್ಟರ್, ಇನ್ಸ್ಟಾಗ್ರಾಮ್ನಲ್ಲಿ ‘ಮೀಮ್ಸ್’ ವಾರ್! ಟಿವಿ ಪರದೆಗಳ ಮುಂದೆ ಕುಳಿತು ಉಗುರು ಕಚ್ಚುತ್ತಿರುವ ಜನರು, ಒಂದು ಕಡೆ ಗಂಭೀರವಾಗಿ ಫಲಿತಾಂಶ ನೋಡುತ್ತಿದ್ದರೆ, ಇನ್ನೊಂದೆಡೆ ಹಾಸ್ಯದ ಮೊರೆ ಹೋಗಿದ್ದಾರೆ. ಟೀ ಬ್ರೇಕ್ ಮೀಮ್ಸ್: “ಈ ಕೌಂಟಿಂಗ್…

Read More

ಅಸನ್ಸೋಲ್: ಪಶ್ಚಿಮ ಬಂಗಾಳದ ಅಸನ್ಸೋಲ್ ಇಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರದ ಬಳಿ ಇಂದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎಣಿಕೆ ಕೇಂದ್ರದ ಹೊರಗಡೆ ನೆರೆದಿದ್ದ ಗುಂಪುಗಳ ನಡುವೆ ದಿಢೀರ್ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ಹತೋಟಿಗೆ ತರಲು ಭದ್ರತಾ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಕೇಂದ್ರದ ಹೊರಭಾಗದಲ್ಲಿ ಜಮಾಯಿಸಿದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಜನಸಮೂಹವನ್ನು ಚದುರಿಸಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಅಲ್ಲಿದ್ದ ಭದ್ರತಾ ಪಡೆಗಳು ಲಾಠಿ ಬೀಸಬೇಕಾಯಿತು. ಸದ್ಯ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿ ಭದ್ರತೆಯನ್ನು ಮುಂದುವರಿಸಲಾಗಿದ್ದು, ಅನಗತ್ಯವಾಗಿ ಗುಂಪು ಸೇರದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. https://twitter.com/ANI/status/2051202166795456991?s=20 https://twitter.com/ANI/status/2051202615338491945?s=20

Read More

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಇಂದು ಕೋಲ್ಕತ್ತಾದ ಕಾಲಿಘಾಟ್‌ನಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧಿಕೃತ ನಿವಾಸದ ಹೊರಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದ್ದಾರೆ. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ (TMC) ನಡುವಿನ ವಾಕ್ಸಮರ ಮತ್ತು ಭದ್ರತಾ ವಿಚಾರಗಳಿಗೆ ಸಂಬಂಧಿಸಿದಂತೆ ಈ ಪ್ರತಿಭಟನೆ ನಡೆದಿದೆ ಎನ್ನಲಾಗಿದೆ. ಸಿಎಂ ನಿವಾಸದ ಸಮೀಪ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಮತಾ ಬ್ಯಾನರ್ಜಿ ಅವರ ನಿವಾಸದ ಪ್ರವೇಶ ದ್ವಾರದ ಬಳಿಯೇ ಬಿಜೆಪಿ ಬೆಂಬಲಿಗರು ಕೇಸರಿ ಧ್ವಜ ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ.ಈ ದಿಢೀರ್ ಬೆಳವಣಿಗೆಯಿಂದಾಗಿ ಕಾಲಿಘಾಟ್ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. https://twitter.com/ANI/status/2051198322640371933?s=20

Read More

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಆರಂಭಿಕ ಟ್ರೆಂಡ್ಗಳಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಭಾರಿ ಮುನ್ನಡೆ ಕಾಯ್ದುಕೊಂಡಿದೆ. ರಾಜ್ಯದ ಒಟ್ಟು 234 ಕ್ಷೇತ್ರಗಳ ಪೈಕಿ ವಿಜಯ್ ಅವರ ಪಕ್ಷವು ಸದ್ಯ 107 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ವಿಜಯ್ ನಿವಾಸದಲ್ಲಿ ಸೀಟಿ ಹೊಡೆದು ಸಂಭ್ರಮಾಚರಣೆ ಚುನಾವಣಾ ಫಲಿತಾಂಶದ ಟ್ರೆಂಡ್ ತಮ್ಮ ಪರವಾಗಿ ಬರುತ್ತಿದ್ದಂತೆಯೇ ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸದ ಮುಂದೆ ಅಭಿಮಾನಿಗಳ ಸಾಗರವೇ ನೆರೆದಿದೆ. ಇತ್ತ ಮನೆಯ ಒಳಗಡೆ ವಿಜಯ್ ಅವರ ಕುಟುಂಬ ಸದಸ್ಯರು ಸೀಟಿ ಹೊಡೆಯುವ ಮೂಲಕ ಮತ್ತು ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸುತ್ತಿದ್ದಾರೆ. ‘ದಳಪತಿ’ ವಿಜಯ್ ಅವರ ತಾಯಿ ಶೋಭಾ ಮತ್ತು ತಂದೆ ಎಸ್.ಎ. ಚಂದ್ರಶೇಖರ್ ಅವರ ಮುಖದಲ್ಲಿ ಮಗನ ರಾಜಕೀಯ ಯಶಸ್ಸಿನ ಖುಷಿ ಎದ್ದು ಕಾಣುತ್ತಿದೆ. 234 ಕ್ಷೇತ್ರಗಳ ಪೈಕಿ 107 ಕ್ಷೇತ್ರಗಳಲ್ಲಿ ವಿಜಯ್ ಪಕ್ಷ ಮುನ್ನಡೆ. ದಶಕಗಳಿಂದ ತಮಿಳುನಾಡನ್ನಾಳಿದ…

Read More

ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿ ಭಾನುವಾರ ತಡರಾತ್ರಿ ಭೀಕರ ಕೊಲೆಯೊಂದು ನಡೆದಿದ್ದು, ಸಕ್ಕರೆ ನಾಡಿನ ಜನತೆಯನ್ನು ಬೆಚ್ಚಿಬೀಳಿಸಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ಕಡಿದು ಹತ್ಯೆ ಮಾಡಿದೆ. ಘಟನೆಯ ವಿವರ: ಮೈಸೂರು ಮೂಲದ ಮಹಮ್ಮದ್ ಸೋಹೇದ್ (27) ಕೊಲೆಯಾದ ದುರ್ದೈವಿ. ಬೈಕಿನಲ್ಲಿ ತೆರಳುತ್ತಿದ್ದ ಸೋಹೇದ್ನನ್ನು ನಾಲ್ಕೈದು ಮಂದಿ ಕಿರಾತಕರ ತಂಡ ಬೈಕ್ಗಳಲ್ಲಿ ಹಿಂಬಾಲಿಸಿಕೊಂಡು ಬಂದಿದೆ. ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಂ ತಲುಪುತ್ತಿದ್ದಂತೆ ಅಡ್ಡಗಟ್ಟಿದ ಹಂತಕರು, ಲಾಂಗು ಮತ್ತು ಮಚ್ಚುಗಳಿಂದ ಮನಬಂದಂತೆ ದಾಳಿ ನಡೆಸಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಸೋಹೇದ್ ಓಡಲು ಯತ್ನಿಸಿದರೂ ಬಿಡದ ಹಂತಕರು, ಸಾರ್ವಜನಿಕವಾಗಿಯೇ ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ಹಂತಕರು ತಾವು ತಂದಿದ್ದ ಮಾರಾಕಾಸ್ತ್ರಗಳನ್ನು ಘಟನಾ ಸ್ಥಳದಲ್ಲೇ ಬಿಸಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.…

Read More