Author: kannadanewsnow57

ಮೈಸೂರು : ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತ ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು, ಇಂದು ಪಂಚಭೂತಗಳಲ್ಲಿ ಲೀನವಾದರು. ಮೈಸೂರು ಬೆಟ್ಟದ ತಪ್ಪಲಿನಲ್ಲಿರುವ ಚಿರಶಾಂತಿಧಾಮದಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಲಂಡನ್ನಿಂದ ಆಗಮಿಸಿದ್ದ ಅವರ ಪುತ್ರ ರವಿಶಂಕರ್ ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು. ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ರುದ್ರ ಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗಿದೆ. ಡಾ.ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರ ಗುರುವಾರ ಮೈಸೂರಿಗೆ ತರಲಾಗಿತ್ತು. ನಗರದ ಕಲಾ ಮಂದಿರ ಬಳಿಯ ಕಿಂದರಿ ಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದುಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಎಸ್.ಎಲ್ ಭೈರಪ್ಪ ಅವರ ಕುರಿತು… ಎಸ್.ಎಲ್ ಭೈರಪ್ಪ ಅವರು 1931 ಆಗಸ್ಟ್ 20 ರಂದು ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದಲ್ಲಿ ಜನಿಸಿದರು. ಸಂತೇಶಿವರ ಲಿಂಗಣ್ಣಯ್ಯ…

Read More

ಗಂಡನ ಕಿರುಕುಳ ಸಹಿಸಲಾರೆ ಎಂದು ತನ್ನ ಸಹೋದರನಿಗೆ ಸಂದೇಶ ಕಳುಹಿಸಿದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಗೋದಾವರಿ ಜಿಲ್ಲೆಯ ಪಾಲಕೊಲ್ಲು ಮಂಡಲದ ಪೂಲಪಲ್ಲಿಯಲ್ಲಿ ನಡೆದಿದೆ. ಭೀಮವರಂ ಮಂಡಲದ ವೆಂಪಾದ ಝಾನ್ಸಿ ಮತ್ತು ಯಲಮಂಚಿಲಿ ಮಂಡಲದ ಟಿ. ದುರ್ಗಪೆದ್ದಿರಾಜು 13 ವರ್ಷಗಳ ಹಿಂದೆ ವಿವಾಹವಾದರು. ಆದರೆ, ಕೌಟುಂಬಿಕ ಕಲಹಗಳಿಂದಾಗಿ, ಅವರು ಕೆಲವು ವರ್ಷಗಳ ಹಿಂದೆ ಪಾಲಕೊಲ್ಲು ಮಂಡಲದ ಪೂಲಪಲ್ಲಿಯಲ್ಲಿ ನೆಲೆಸಿದರು. ಈ ಪ್ರಕ್ರಿಯೆಯಲ್ಲಿ, ಸ್ವಲ್ಪ ಸಮಯದಿಂದ ಕುಡಿತದ ಚಟ ಹೊಂದಿದ್ದ ಪತಿ ದುರ್ಗಾ ತನ್ನ ಹೆಂಡತಿಯನ್ನು ಆಗಾಗ್ಗೆ ಕಿರುಕುಳ ಮತ್ತು ಹಿಂಸೆ ನೀಡಲು ಪ್ರಾರಂಭಿಸಿದನು. ನಿನ್ನೆ, ಬುಧವಾರ ರಾತ್ರಿ ಕಿರುಕುಳವನ್ನು ಸಹಿಸಲಾಗದೆ ಝಾನ್ಸಿ.. “ನನ್ನ ಸಹೋದರ, ನನ್ನ ಗಂಡನ ಕಿರುಕುಳವನ್ನು ನಾನು ಸಹಿಸಲಾರೆ.. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ತನ್ನ ಸಹೋದರನಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮರುದಿನ ಬೆಳಿಗ್ಗೆ ತಂದೆ ಹೊರಗೆ ಹೋಗಿ ಮಗಳ ಬಳಿ ಬಂದಾಗ ಝಾನ್ಸಿಯ ಶವ ಪತ್ತೆಯಾಗಿದೆ. ಫ್ಯಾನ್‌ಗೆ ನೇಣು…

Read More

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಇದು ಇಡೀ ಪಟ್ಟಣವನ್ನೇ ಆಘಾತದಲ್ಲಿ ಮುಳುಗಿಸಿದೆ. ಮದುವೆಯ ಸಂಭ್ರಮದ ನಡುವೆ, ಮೊದಲ ರಾತ್ರಿಯ ನಂತರ ವರ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ದುರಂತ ಕಥೆ ಪ್ರದೀಪ್ ಮತ್ತು ಶಿವಾನಿಯ ಬಗ್ಗೆ (ಹೆಸರುಗಳು ಬದಲಾಗಿವೆ). ತರಬೇತಿ ಕೇಂದ್ರದಲ್ಲಿ ಅವರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಅವರು ಕುಟುಂಬ ಸದಸ್ಯರ ಒಪ್ಪಿಗೆಯೊಂದಿಗೆ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಅವರ ಹೊಸ ಜೀವನ ಪ್ರಾರಂಭವಾಗುತ್ತಿದ್ದಂತೆ ಎಲ್ಲರೂ ಸಂತೋಷಪಟ್ಟರು. ವಿವಾಹ ಸಮಾರಂಭದ ನಂತರ, ಪ್ರದೀಪ್ ಮತ್ತು ಶಿವಾನಿ ತಮ್ಮ ಹೊಸ ಜೀವನವನ್ನು ಪ್ರಾರಂಭಿಸಲು ಕೋಣೆಗೆ ಹೋದರು. ಕುಟುಂಬ ಮತ್ತು ಸ್ನೇಹಿತರು ಅವರಿಗೆ ಶುಭ ಹಾರೈಸಿದರು. ಆದರೆ ಬೆಳಿಗ್ಗೆ ಕೋಣೆಯ ಬಾಗಿಲು ತೆರೆದಾಗ, ಅಲ್ಲಿನ ದೃಶ್ಯವು ಎಲ್ಲರನ್ನೂ ಬೆಚ್ಚಿಬೀಳಿಸಿತು. ಕೋಣೆಯಲ್ಲಿ ಪ್ರದೀಪ್ ಶವ ಪತ್ತೆಯಾಗಿತ್ತು. ಶಿವಾನಿ ಆಘಾತಕ್ಕೊಳಗಾಗಿದ್ದು, ಅಳುತ್ತಾ ಪ್ರಜ್ಞೆ ಕಳೆದುಕೊಂಡಿದ್ದರು ಎನ್ನಲಾಗಿದೆ. ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಕೆಲವು ಆಘಾತಕಾರಿ ವಿಷಯಗಳು ಬಹಿರಂಗಗೊಂಡಿವೆ. ಆ ರಾತ್ರಿ ವರ ಪ್ರದೀಪ್ ಮೊಬೈಲ್ನಲ್ಲಿ…

Read More

ಮೈಸೂರು : ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಸೆ.24 ರಂದು ನಿಧನರಾಗಿದ್ದು, ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ರುದ್ರ ಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ಆರಂಭವಾಗಿದೆ. ಇದೀಗ ಎಸ್.ಎಲ್.ಭೈರಪ್ಪಗೆ ಸರ್ಕಾರಿ ಗೌರವ ಸಲ್ಲಿಸಲಾಗಿದೆ. ಅಂತ್ಯಕ್ರಿಯೆಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಹೆಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಿದ್ದಾರೆ. ಡಾ.ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರ ಗುರುವಾರ ಮೈಸೂರಿಗೆ ತರಲಾಗಿತ್ತು. ನಗರದ ಕಲಾ ಮಂದಿರ ಬಳಿಯ ಕಿಂದರಿ ಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದುಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ಸಲಾಗುತ್ತದೆ.

Read More

ಕೆಲವರಿಗೆ ಬಾಲ್ಯದಿಂದಲೂ ಸೀಮೆಸುಣ್ಣದ ತುಂಡುಗಳನ್ನು ತಿನ್ನುವ ಅಭ್ಯಾಸವಿರುತ್ತದೆ.. ಇನ್ನು ಕೆಲವರು ಸಿಕ್ಕ ಯಾವುದೇ ವಸ್ತುವನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಆದರೆ, ಅವರು ಚಿಕ್ಕವರಾಗಿರುವುದರಿಂದ ಇದು ಸಂಭವಿಸಿದೆ ಎಂದು ನೀವು ಭಾವಿಸಿದರೆ, ನೀವು ತಪ್ಪಾಗಿ ಭಾವಿಸುತ್ತೀರಿ.. ಇದು ಒಂದು ಕಾಯಿಲೆ. ಅಂತಹ ಜನರಿದ್ದರೆ, ನೀವು ಖಂಡಿತವಾಗಿಯೂ ಅವರನ್ನು ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಬೇಕು.  ಇದೇ ರೀತಿಯ ಮತ್ತೊಂದು ಘಟನೆ ನಡೆದಿದ್ದು, 17 ವರ್ಷದ ಹುಡುಗಿಯ ಹೊಟ್ಟೆಯಲ್ಲಿ ದೊಡ್ಡ ಕೂದಲಿನ ಉಂಡೆಯನ್ನು ನೋಡಿ ವೈದ್ಯರು ಆಘಾತಕ್ಕೊಳಗಾದರು. ಅವಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು.. ಮಾತ್ರವಲ್ಲದೆ ಅವಳು ಪದೇ ಪದೇ ವಾಂತಿ ಮಾಡುತ್ತಿದ್ದಳು, ಆದ್ದರಿಂದ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವಳಿಗೆ ಚಿಕಿತ್ಸೆ ನೀಡಿದ ವೈದ್ಯರು.. ಅವಳಿಗೆ ‘ಪಿಕಾ’ ಎಂಬ ಕಾಯಿಲೆ ಇದೆ ಎಂದು ಪತ್ತೆ ಹಚ್ಚಿದರು. ಆಹಾರೇತರ ವಸ್ತುಗಳನ್ನು ತಿನ್ನುವ ಬಯಕೆ.. ಈ ರೋಗಿಗಳಲ್ಲಿ ಇದೆ ಎಂದು ಹೇಳಲಾಗುತ್ತದೆ. ಪರಿಣಾಮವಾಗಿ, ಚಿಕ್ಕ ಹುಡುಗಿ ಹಲವು ವರ್ಷಗಳಿಂದ ಕೂದಲು ತಿನ್ನುತ್ತಿದ್ದಳು. ವೈದ್ಯರು ಅವಳನ್ನು ಪರೀಕ್ಷಿಸಿದಾಗ, ಅವಳ ಹೊಟ್ಟೆಯಲ್ಲಿ ಒಂದು ಉಂಡೆ…

Read More

ಬಳ್ಳಾರಿ: ಮನೆ ಎದುರಿನ ಚರಂಡಿಗೆ ಬಿದ್ದು ನಾಲ್ಕು ವರ್ಷದ ಮಗುವೊಂದು ದುರಂತ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರೇಕುಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಕುರೇಕುಪ್ಪ ಗ್ರಾಮದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವೊಂದು ಚರಂಡಿಯಲ್ಲಿ ಒದ್ದಾಡಿ ಪ್ರಾಣಬಿಟ್ಟಿರುವ ಘಟನೆ ನಡೆದಿದ್ದು, ಇದರ ದೃಶ್ಯ ಸೆರೆಯಾಗಿದೆ. ಮಗು ಕಾಣಿಸದಿದ್ದಾಗ ಪೋಷಕರು ರಾತ್ರಿಯಿಡಿ ಊರಿನಲ್ಲಿ ಹುಡುಕಾಡಿದ್ದಾರೆ. ಕೊನೆಗೆ ಸಿಸಿಟಿವಿ ದೃಶ್ಯ ನೋಡಿದ ನಂತರ ಚರಂಡಿಗೆ ಬಿದ್ದುರುವುದು ತಿಳಿದುಬಂದಿದೆ. ಮನೆಯ ಮುಂದೆ ಅರವಿಂದ್ ಎನ್ನುವ ಬಾಲಕ ಆಟವಾಡುತ್ತಿದ್ದ. ಈ ವೇಳೆ ಕಾಲು ಜಾರಿ ಚರಂಡಿಗೆ ಬಿದ್ದು ಒದ್ದಾಡಿ ನರಳಾಡಿ ಮಗು ಪ್ರಾಣ ಬಿಟ್ಟಿದೆ. ರಾತ್ರಿ ಇಡಿ ಮಗುವಿಗಾಗಿ ಕುಟುಂಬ ಹುಡುಕಾಡಿದೆ. ಚರಂಡಿಯಲ್ಲಿ ಬಿದ್ದಿದ್ದು ಕುಟುಂಬಸ್ಥರಿಗೆ ಗೊತ್ತಾಗಿಲ್ಲ. ಆದರೆ ಬೆಳಿಗ್ಗೆ ಚರಂಡಿಯಲ್ಲಿ ನೋಡಿದಾಗ ಮಗುವಿನ ಮೃತ ದೇಹ ಪತ್ತೆಯಾಗಿದೆ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Read More

ದೇಹದ ತೂಕ ಮತ್ತು ಎತ್ತರದ ನಡುವೆ ಸಾಮಾನ್ಯ ಸಂಬಂಧವಿದೆ, ಇದನ್ನು ಬಾಡಿ ಮಾಸ್ ಇಂಡೆಕ್ಸ್ (BMI) ಬಳಸಿ ಅಳೆಯಬಹುದು. ಸಮತೋಲಿತ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಅತಿಯಾದ ಅಥವಾ ಸಾಕಷ್ಟು ತೂಕ ಎರಡೂ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಧಿಕ ತೂಕದ ಸಮಸ್ಯೆಗಳು: ತೂಕವು ಅಧಿಕವಾಗಿದ್ದಾಗ (ಅಧಿಕ ತೂಕ), ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಕೊಬ್ಬಿನ ಯಕೃತ್ತು, ಮಧುಮೇಹ, ಹಾರ್ಮೋನ್ ಅಸಮತೋಲನ, ಹೃದ್ರೋಗ ಮತ್ತು ಹೆಚ್ಚಿನವು ಸೇರಿವೆ. ಕಡಿಮೆ ತೂಕದ ಸಮಸ್ಯೆಗಳು: ಕಡಿಮೆ ತೂಕ (ಕಡಿಮೆ ತೂಕ) ಸಹ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ತೂಕವು ಸಾಮಾನ್ಯಕ್ಕಿಂತ ಕಡಿಮೆಯಾದಾಗ, ಅದು ದೇಹದ ಶಕ್ತಿ, ಮೂಳೆಗಳು, ಸ್ನಾಯುಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಎತ್ತರಕ್ಕೆ ಅನುಗುಣವಾಗಿ ಮಹಿಳೆಯರಿಗೆ ಸೂಕ್ತವಾದ ತೂಕ: 150 ಸೆಂ: 43 – 57 ಕೆಜಿ 155 ಸೆಂ: 45 – 60 ಕೆಜಿ 160 ಸೆಂ:…

Read More

ಬೆಂಗಳೂರು : ಬೆಂಗಳೂರಿನಲ್ಲಿ ಸೀರೆ ಕದ್ದಿದ್ದ ಆರೋಪದ ಮೇಲೆ ಮಹಿಳೆಯನ್ನು ಕ್ರೂರವಾಗಿ ಥಳಿಸಿದ್ದ ಅಂಗಡಿ ಮಾಡಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಮಾರುಕಟ್ಟೆ ಪೊಲೀಸರು ಸೀರೆ ಅಂಗಡಿ ಮಾಲೀಕ ಉಮೇದ್ ರಾಮ್ ನನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಹಂಪಮ್ಮ 50 ಕ್ಕೂ ಹೆಚ್ಚು ಸೀರೆ ಕದ್ದಿದ್ದು, ಹೀಗಾಗಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದ್ದು, ಸೀರೆ ಕಳವು ಮಾಡಿದ್ದಾರೆ ಎಂದು ಆರೋಪಿಸಿ ನಡುರಸ್ತೆಯಲ್ಲೇ ಮಹಿಳೆಗೆ ಬಟ್ಟೆ ಅಂಗಡಿ ಮಾಲೀಕರೊಬ್ಬರು ಬೂಟುಕಾಲಿನಿಂದ ಒದ್ದಿದ್ದಾರೆ.‌ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವೆನ್ಯೂ ರಸ್ತೆಯ ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿ ಮಾಲೀಕ ಬಾಬುಲಾಲ್ ಎಂಬುವರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ‌. ಮಾಲೀಕ ಮಾತ್ರವಲ್ಲದೇ ಅಂಗಡಿ ಸಿಬ್ಬಂದಿ ಸಹ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೋವಿನಿಂದ ಮಹಿಳೆ ಕಿರುಚಾಡಿ ಅಂಗಲಾಚಿದರೂ ಸಹ ಬಿಟ್ಟಿಲ್ಲ. ಮಹಿಳೆ ಮೇಲೆ ಹಲ್ಲೆ ಮಾಡಿದ ದೃಶ್ಯ ಸ್ಥಳೀಯರ ಮೊಬೈಲ್…

Read More

ಬೆಂಗಳೂರು : ರಾಜ್ಯದಲ್ಲಿ ಜಾತಿಗಣತಿಗೆ ಹಾಜರಾಗದ ಶಿಕ್ಷಕನಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಅಮಾನತು ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ. ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು ಬಿ.ಆರ್.ಸಿ ಕೇಂದ್ರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಪ್ರಸ್ತಾವನೆ- ಉಲ್ಲೇಖ(1)ರ ಸರ್ಕಾರದ ಆದೇಶದಂತೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯವು ಪ್ರಗತಿಯಲ್ಲಿರುತ್ತದೆ. ಹೊಸನಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಸದರಿ ಹುದ್ದೆಯಲ್ಲಿ ಶ್ರೀಮತಿ ಚೇತನ, ಮುಖ್ಯ ಶಿಕ್ಷಕರು ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಶ್ರೀ ರಂಗನಾಥ್ ಎಂ. ಕ್ಷೇತ್ರ ಸಮನ್ವಯಾಧಿಕಾರಿಗಳು, ಬಿ.ಆರ್.ಸಿ ಕೇಂದ್ರ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನೋಡಲ್ ಅಧಿಕಾರಿಯನ್ನಾಗಿ ಉಲ್ಲೇಖ (2)ರಂತೆ ನೇಮಿಸಲಾಗಿರುತ್ತದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ…

Read More

ಕಡೂರು :  ಸೆ.24ರಂದು ಕಡೂರು ಬಸ್ ನಿಲ್ದಾಣದ ಆವರಣದಲ್ಲಿ  ಕಡೂರು ನೂತನ ಬಸ್ ನಿಲ್ದಾಣ ನಿರ್ಮಾಣದ  ಶಂಕುಸ್ಥಾಪನೆ ಹಾಗೂ ಕಡೂರು ಬಸ್ ಘಟಕದಲ್ಲಿ ನಿರ್ಮಿಸಿರುವ ಸಿಬ್ಬಂದಿ ವಸತಿಗೃಹಗಳ ಉದ್ಘಾಟನೆಯನ್ನು ಹಾಗೂ ತರೀಕೆರೆ ಬಸ್ ನಿಲ್ದಾಣದ ಆವರಣದಲ್ಲಿ ತರೀಕೆರೆ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ನೆರವೇರಿಸಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಅತ್ಯಾಧುನಿಕವಾದ, ಸುಸಜ್ಜಿತವಾದ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಿದ್ದು, ಇದರ ಸದುಪಯೋಗವಾಗಲಿ ಎಂದರು. ಕಡೂರು ಮತ್ತು ತರೀಕೆರೆ ತಾಲ್ಲೂಕು ಕೇಂದ್ರಗಳಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿರುವುದರಿಂದ ಸಮರ್ಪಕ ವ್ಯವಸ್ಥೆ ಇರುವ ಸುಸಜ್ಜಿತ ನಿಲ್ದಾಣಗಳ ಅಗತ್ಯತೆ ಇರುವ ಹಿನ್ನೆಲೆಯಲ್ಲಿ ಹೊಸ ಬಸ್ ನಿಲ್ದಾಣಗಳ ನಿರ್ಮಾಣ ಕಾಮಗಾರಿಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಡೂರು ಶಾಸಕರಾದಆನಂದ್ ಕೆ.ಎಸ್ ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಹೆಚ್.ಶ್ರೀನಿವಾಸ್ ಅವರು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸಹಕರಿಸಿ, ಹೆಚ್ಚಿನ ಬಸ್ಸುಗಳನ್ನು ನೀಡುವ ಮೂಲಕ ಗ್ರಾಮೀಣ ಭಾಗಗಳಿಗೆ ಹೆಚ್ಚಿನ ಮಟ್ಟದಲ್ಲಿ ಬಸ್ಸುಗಳನ್ನು ಸಂಚರಿಸಲು ಸಹಕಾರವನ್ನು ನೀಡುವಂತೆ ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು.…

Read More