Subscribe to Updates
Get the latest creative news from FooBar about art, design and business.
Author: kannadanewsnow57
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ, ಅಂದರೆ ಮಾರ್ಚ್ 6, 2026 ರಂದು ರಾಜ್ಯದ ಆಯವ್ಯಯವನ್ನು (Budget) ಮಂಡಿಸಲಿದ್ದಾರೆ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿದ್ದು, ಇಡೀ ರಾಜ್ಯದ ಕಣ್ಣು ಈ ಬಜೆಟ್ ಮೇಲಿದೆ. ಬಜೆಟ್ ನ ಪ್ರಮುಖ ಅಂಶಗಳು ದಾಖಲೆಯ 17ನೇ ಬಜೆಟ್: ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ಮತ್ತಷ್ಟು ವಿಸ್ತರಿಸಲಿದ್ದಾರೆ. ಬಜೆಟ್ ಗಾತ್ರ: ಈ ಬಾರಿಯ ಬಜೆಟ್ ಸುಮಾರು 4.30 ಲಕ್ಷ ಕೋಟಿಯಿಂದ 4.5 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ತಲುಪುವ ನಿರೀಕ್ಷೆಯಿದೆ. ಕಳೆದ ವರ್ಷ ಇದು 4.09 ಲಕ್ಷ ಕೋಟಿ ರೂಪಾಯಿ ಆಗಿತ್ತು. ಪಂಚ ಗ್ಯಾರಂಟಿಗಳಿಗೆ ಆದ್ಯತೆ: ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳ ಮುಂದುವರಿಕೆಗೆ ಹೆಚ್ಚಿನ ಅನುದಾನ ಮೀಸಲಿಡುವ ಸಾಧ್ಯತೆಯಿದೆ. ಅಭಿವೃದ್ಧಿ ಸವಾಲು: ಒಂದು ಕಡೆ ಗ್ಯಾರಂಟಿ ಯೋಜನೆಗಳು ಮತ್ತು ಇನ್ನೊಂದು ಕಡೆ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಹೊಂದಿಸುವುದು ಸಿಎಂ ಅವರಿಗೆ…
ರಾಣೇಬೆನ್ನೂರು: ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ಪ್ರತಿ ವರ್ಷದಂತೆ ಆಯೋಜಿಸಲಾಗಿದ್ದ ‘ಜೀವಂತ ರತಿ-ಮನ್ಮಥರನ್ನು ನಗಿಸುವ ಸ್ಪರ್ಧೆ’ ಈ ಬಾರಿಯೂ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ, ರತಿ-ಮನ್ಮಥ ವೇಷಧಾರಿಗಳು ನಗದೆ ತಮ್ಮ 66 ವರ್ಷಗಳ ಸುದೀರ್ಘ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ. ಇದರಿಂದಾಗಿ ನಗಿಸಿದವರಿಗೆ ನೀಡಲು ಘೋಷಿಸಲಾಗಿದ್ದ ₹13 ಲಕ್ಷ ನಗದು ಬಹುಮಾನ ಸಮಿತಿಯ ಬಳಿಯೇ ಉಳಿದುಕೊಂಡಿದೆ. ಒಕುಳಿ ಹಬ್ಬದ ಮುನ್ನಾದಿನವಾದ ಮಂಗಳವಾರ ನಗರದ ದೊಡ್ಡಪೇಟೆಯ ರಾಮಲಿಂಗೇಶ್ವರ ದೇಗುಲದ ಬಳಿ ವಿವಿಧ ಸಮಿತಿಗಳಿಂದ ಜೀವಂತ ರತಿ-ಮನ್ಮಥರನ್ನು ಕೂರಿಸಲಾಗಿತ್ತು. ಸಾರ್ವಜನಿಕರು ಇವರನ್ನು ನಗಿಸಲು ನಾನಾ ತರಹದ ಕಸರತ್ತುಗಳನ್ನು ನಡೆಸಿದರು. ಆದರೆ ವೇಷಧಾರಿಗಳು ಕಿಂಚಿತ್ತೂ ನಗದೆ ಗಂಭೀರವಾಗಿಯೇ ಉಳಿದರು. ಬದಲಿಗೆ ನಗಿಸಲು ಹೋದವರೇ ಹಾಸ್ಯಕ್ಕೀಡಾದ ಪ್ರಸಂಗಗಳು ಕಂಡುಬಂದವು. ನನ್ನ ಮದುವೆಗೆ ಬಂಗಾರ ಖರೀದಿಸಬೇಕಿದೆ, ನೀವು ನಕ್ಕರೆ ನಮಗೆ ಆರ್ಥಿಕ ಸಹಾಯವಾಗುತ್ತದೆ, ದಯವಿಟ್ಟು ನಕ್ಕುಬಿಡಿ” ಎಂದು ಯುವತಿಯೊಬ್ಬಳು ಪರಿಪರಿಯಾಗಿ ಬೇಡಿಕೊಂಡರೂ ರತಿ-ಮನ್ಮಥರು ಮಾತ್ರ ಮೌನ ಮುರಿಯಲಿಲ್ಲ.ಹೀಗಾಗಿ ಈ ಬಾರಿಯ ‘ಹೋಳಿ ಬಂಪರ್’ ಮೊತ್ತವಾದ ₹13 ಲಕ್ಷ ಯಾರ ಪಾಲೂ…
ಕೊಲಂಬೊ: ಹಿಂದೂ ಮಹಾಸಾಗರದಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಸುವ ಘಟನೆಯೊಂದರಲ್ಲಿ, ಅಮೆರಿಕಾದ ಜಲಾಂತರ್ಗಾಮಿ ದಾಳಿಗೆ ಇರಾನ್ ನ ಯುದ್ಧನೌಕೆಯೊಂದು ಸಮುದ್ರದಲ್ಲಿ ಮುಳುಗಿದೆ. ಈ ಭೀಕರ ಘಟನೆಯಲ್ಲಿ 87 ಮಂದಿ ಸಾವನ್ನಪ್ಪಿದ್ದು, ಶ್ರೀಲಂಕಾ ನೌಕಾಪಡೆಯು 32 ನಾವಿಕರನ್ನು ಯಶಸ್ವಿಯಾಗಿ ರಕ್ಷಿಸಿದೆ. ಅಮೆರಿಕಾದ ಜಲಾಂತರ್ಗಾಮಿ ನೌಕೆಯು ಇರಾನ್ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ವರದಿಯಾಗಿದೆ. ದಾಳಿಯ ತೀವ್ರತೆಗೆ ನೌಕೆಯಲ್ಲಿದ್ದ 87 ನಾವಿಕರು ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ರಕ್ಷಣಾ ಕಾರ್ಯ: ಘಟನಾ ಸ್ಥಳಕ್ಕೆ ಧಾವಿಸಿದ ಶ್ರೀಲಂಕಾ ನೌಕಾಪಡೆಯು ಸಮುದ್ರದಲ್ಲಿ ಮುಳುಗುತ್ತಿದ್ದ 32 ನಾವಿಕರನ್ನು ಜೀವಂತವಾಗಿ ರಕ್ಷಿಸಿದೆ. ರಕ್ಷಿಸಲ್ಪಟ್ಟವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಈ ದಾಳಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಈ ಪ್ರದೇಶದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಸೇನಾ ಪೈಪೋಟಿ ಇದಕ್ಕೆ ಕಾರಣ ಎನ್ನಲಾಗುತ್ತಿದೆ. https://twitter.com/WhiteHouse/status/2029204495297626207?ref_src=twsrc%5Etfw%7Ctwcamp%5Etweetembed%7Ctwterm%5E2029204495297626207%7Ctwgr%5Ed63a4772a2ce87a7874f09fbd323c97a49c6cdfe%7Ctwcon%5Es1_c10&ref_url=https%3A%2F%2Fkannadadunia.com%2Fus-releases-video-of-iranian-warship-sinking-off-sri-lanka-coast-after-submarine-attack%2F
ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡಗಳು ಕೇವಲ ಮಧ್ಯಪ್ರಾಚ್ಯವನ್ನಷ್ಟೇ ಅಲ್ಲ, ಕರ್ನಾಟಕದ ವಾಹನ ಸವಾರರನ್ನೂ ಬೆಚ್ಚಿಬೀಳಿಸಿವೆ. ಹೌದು, ಯುದ್ಧದ ಕಾರಣದಿಂದಾಗಿ ಭಾರತದಲ್ಲಿ ತೈಲ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಲಿದೆ ಎಂಬ ಬಲವಾದ ವದಂತಿಯೊಂದು ರಾಜ್ಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದೆ. ಇದರ ಪರಿಣಾಮವಾಗಿ, ಬೆಲೆ ಏರಿಕೆ ಅಥವಾ ಪೂರೈಕೆ ಸ್ಥಗಿತದ ಭೀತಿಯಿಂದ ರಾಜ್ಯದ ನಾನಾ ಭಾಗಗಳಲ್ಲಿ ಜನತೆ ಪೆಟ್ರೋಲ್ ಬಂಕ್‌ಗಳತ್ತ ದೌಡಾಯಿಸಿದ್ದು, ಭಾರೀ ನೂಕುನುಗ್ಗಲು ಉಂಟಾಗಿದೆ. ಬಂಕ್‌ಗಳ ಮುಂದೆ ವಾಹನಗಳ ಉದ್ದನೆಯ ಸಾಲು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದೇ ಒಂದು ಸುಳ್ಳು ಸಂದೇಶ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಮತ್ತು ಗ್ರಾಮೀಣ ಭಾಗಗಳ ಪೆಟ್ರೋಲ್ ಪಂಪ್‌ಗಳಲ್ಲಿ ವಾಹನ ಸವಾರರು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಮ್ಮ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ಟ್ಯಾಂಕ್ ಫುಲ್ ಮಾಡಿಸುತ್ತಿರುವುದು ಮಾತ್ರವಲ್ಲದೆ, ಮನೆಗಳಿಂದ ದೊಡ್ಡ ದೊಡ್ಡ ಪ್ಲಾಸ್ಟಿಕ್ ಕ್ಯಾನ್‌ಗಳು, ಬಾಟಲಿಗಳನ್ನು…
ಬೆಂಗಳೂರು: ರಾಜ್ಯದ ವಿದ್ಯುತ್ ಗ್ರಾಹಕರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ದರ ಏರಿಕೆಯ ಬಿಸಿ ಮುಟ್ಟಿಸಿದೆ. 2025-26ನೇ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರ ವಿದ್ಯುತ್ ದರವನ್ನು ಹೆಚ್ಚಿಸಿ KERC ಆದೇಶ ಹೊರಡಿಸಿದೆ. ಎಸ್ಕಾಂಗಳು (ESCOMs) ಅನುಭವಿಸುತ್ತಿರುವ ಭಾರಿ ಆರ್ಥಿಕ ಕೊರತೆಯನ್ನು ನೀಗಿಸುವ ಸಲುವಾಗಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಆಯೋಗ ಸಮರ್ಥಿಸಿಕೊಂಡಿದೆ. ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ದರ ಏರಿಕೆ: ರಾಜ್ಯದ ಆಯ್ದ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ದರವನ್ನು ಹೆಚ್ಚಿಸಲಾಗಿದೆ. ಸುಮಾರು 1,254.88 ಕೋಟಿ ರೂ.ಗಳ ಬೃಹತ್ ಆದಾಯ ಕೊರತೆಯನ್ನು ಭರ್ತಿ ಮಾಡಲು ಆಯೋಗವು ಈ ನಿರ್ಧಾರ ಕೈಗೊಂಡಿದೆ. ಪರಿಷ್ಕೃತ ದರಗಳ ವಿವರ ಈ ಕೆಳಗಿನಂತಿದೆ: ವಾಣಿಜ್ಯ ಬಳಕೆ (LT-3A): ಸ್ಥಿರ ಶುಲ್ಕವನ್ನು ಪ್ರತಿ ಕಿಲೋವ್ಯಾಟ್‌ಗೆ 235 ರೂ.ಗೆ ಮತ್ತು ಇಂಧನ ಶುಲ್ಕವನ್ನು ಪ್ರತಿ ಯೂನಿಟ್‌ಗೆ 7.10 ರೂ.ಗೆ ನಿಗದಿಪಡಿಸಲಾಗಿದೆ. ಕೈಗಾರಿಕೆಗಳು (LT-5): ಪ್ರತಿ ಯೂನಿಟ್ ಇಂಧನ ಶುಲ್ಕ 5.20 ರೂ.ಗೆ ನಿಗದಿಪಡಿಸಲಾಗಿದೆ. ಹೈ…
ನಾಳೆ CM ಸಿದ್ದರಾಮಯ್ಯ ಬಜೆಟ್ ಮಂಡನೆ : ಗೃಹಲಕ್ಷ್ಮಿಯರಿಗೆ ವರ್ಷಕ್ಕೆ 2 ಸೀರೆ, ‘ಇಂದಿರಾ ಆಹಾರ ಕಿಟ್’ ಘೋಷಣೆ ಸಾಧ್ಯತೆ!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಮೇಲೆ ಭಾರಿ ನಿರೀಕ್ಷೆಗಳು ಮೂಡಿವೆ. ಈ ಬಾರಿ ಬಜೆಟ್ ಗಾತ್ರ ಸುಮಾರು 4.50 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪುವ ಸಾಧ್ಯತೆಯಿದ್ದು, ಮಹಿಳೆಯರು ಮತ್ತು ಬಡ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಪ್ರಮುಖ ನಿರೀಕ್ಷಿತ ಘೋಷಣೆಗಳು: ಗೃಹಲಕ್ಷ್ಮಿಯರಿಗೆ ಸೀರೆ ಭಾಗ್ಯ: ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2,000 ರೂ. ಪಡೆಯುತ್ತಿರುವ 1.24 ಕೋಟಿ ಮಹಿಳೆಯರಿಗೆ ಹೆಚ್ಚುವರಿಯಾಗಿ ವರ್ಷಕ್ಕೆ ಎರಡು ಸೀರೆ ನೀಡುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ. ಇದನ್ನು ಸಹಕಾರ ಸಂಘಗಳ ಮೂಲಕ ವಿತರಿಸಲು ಚಿಂತನೆ ನಡೆಸಲಾಗಿದೆ. ಇಂದಿರಾ ಆಹಾರ ಕಿಟ್: ಅನ್ನಭಾಗ್ಯ ಯೋಜನೆಯಡಿ ಸದ್ಯ ನೀಡಲಾಗುತ್ತಿರುವ 10 ಕೆ.ಜಿ ಅಕ್ಕಿಯಲ್ಲಿ 5 ಕೆ.ಜಿ ಅಕ್ಕಿಯನ್ನು ಕಡಿತಗೊಳಿಸಿ, ಅದರ ಬದಲಿಗೆ ತೊಗರಿಬೇಳೆ, ಹೆಸರುಕಾಳು, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆಯನ್ನು ಒಳಗೊಂಡ ‘ಇಂದಿರಾ ಆಹಾರ ಕಿಟ್’ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ವಸತಿ ಹಂಚಿಕೆ ಗೊಂದಲಕ್ಕೆ…
ರಾಜ್ಯ ಸರ್ಕಾರದಿಂದ ಅನರ್ಹ `BPL’ ಕಾರ್ಡ್ದಾರರಿಗೆ ಬಿಗ್ ಶಾಕ್ : 20 ಲಕ್ಷ ಕಾರ್ಡ್ ಗಳ ರದ್ದತಿಗೆ ಸರ್ಕಾರ ಸಿದ್ಧತೆ !
ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯು ಬಹುದೊಡ್ಡ ಶಾಕ್ ನೀಡಿದೆ. ಅನರ್ಹ ಬಿಪಿಎಲ್ (BPL) ಕಾರ್ಡ್‌ಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸರ್ಕಾರ, ಕಳೆದ ಎಂಟು ತಿಂಗಳ ಅವಧಿಯಲ್ಲಿ ಅಭೂತಪೂರ್ವ ಕ್ರಮ ಕೈಗೊಂಡಿದೆ. ಆಹಾರ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದಲ್ಲಿ ಈವರೆಗೆ ಒಟ್ಟು 20 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಡೆಸಿದ ಈ ಪರಿಶೀಲನೆಯಲ್ಲಿ ಲಕ್ಷಾಂತರ ಅನರ್ಹರು ಪತ್ತೆಯಾಗಿದ್ದಾರೆ. ಕೇಂದ್ರದ ಪಟ್ಟಿ: ಮೊದಲು ಕೇಂದ್ರ ಸರ್ಕಾರವು ಸುಮಾರು 13 ಲಕ್ಷ ಸಂಶಯಾಸ್ಪದ ಕಾರ್ಡ್‌ಗಳ ಪಟ್ಟಿಯನ್ನು ನೀಡಿತ್ತು. ರಾಜ್ಯದ ಕ್ರಮ: ರಾಜ್ಯ ಸರ್ಕಾರವು ತನ್ನದೇ ಆದ ಮಾನದಂಡಗಳ ಅಡಿಯಲ್ಲಿ 8 ಲಕ್ಷ ಕಾರ್ಡ್‌ಗಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಿತ್ತು. BPL ಟು APL: 14.5 ಲಕ್ಷ ಕಾರ್ಡ್‌ಗಳ ವರ್ಗಾವಣೆ ಕೇವಲ ರದ್ದು ಮಾಡುವುದು ಮಾತ್ರವಲ್ಲದೆ, ಆರ್ಥಿಕವಾಗಿ ಸಬಲರಾಗಿದ್ದರೂ ಬಿಪಿಎಲ್ ಸೌಲಭ್ಯ ಪಡೆಯುತ್ತಿದ್ದ 14.5 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್ (APL) ವರ್ಗಕ್ಕೆ ವರ್ಗಾಯಿಸಲಾಗಿದೆ.…
ಬೆಂಗಳೂರು: ಸ್ವಂತ ಜಮೀನು ಅಥವಾ ಹೊಲವನ್ನು ಖರೀದಿಸುವುದು ಪ್ರತಿಯೊಬ್ಬರ ಕನಸು. ಆದರೆ ಸರಿಯಾದ ದಾಖಲೆಗಳ ಪರಿಶೀಲನೆ ನಡೆಸದೆ ಆತುರದಲ್ಲಿ ಜಮೀನು ಖರೀದಿಸಿದರೆ, ಭವಿಷ್ಯದಲ್ಲಿ ಕಾನೂನು ಸಂಘರ್ಷ ಹಾಗೂ ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು. ಆಸ್ತಿ ವ್ಯವಹಾರದಲ್ಲಿ ವಂಚನೆಗೊಳಗಾಗದಂತೆ ತಡೆಯಲು ಖರೀದಿದಾರರು ಮುಖ್ಯವಾಗಿ ಈ ಕೆಳಗಿನ 12 ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಪರಿಶೀಲಿಸಬೇಕಾದ 12 ಪ್ರಮುಖ ದಾಖಲೆಗಳು: ಜಮೀನಿನ ಮಾಲೀಕತ್ವ ಮತ್ತು ಕಾನೂನುಬದ್ಧತೆಯನ್ನು ಖಚಿತಪಡಿಸಿಕೊಳ್ಳಲು ಈ ಪಟ್ಟಿಯನ್ನು ಅನುಸರಿಸಿ: 1 ಆರ್‌ಟಿಸಿ (RTC – ಪಹಣಿ): ಜಮೀನಿನ ಮಾಲೀಕರು ಯಾರು, ವಿಸ್ತೀರ್ಣ ಎಷ್ಟು ಮತ್ತು ಬೆಳೆಗಳ ವಿವರ ತಿಳಿಯಲು ಇದು ಮುಖ್ಯ. 2. ಮ್ಯುಟೇಶನ್ ರಿಜಿಸ್ಟರ್ (Mutation Register): ಜಮೀನಿನ ಮಾಲೀಕತ್ವವು ಒಬ್ಬರಿಂದ ಒಬ್ಬರಿಗೆ ಹೇಗೆ ವರ್ಗಾವಣೆಯಾಗಿದೆ ಎಂಬ ಹಸ್ತಾಂತರದ ಇತಿಹಾಸವನ್ನು ಇದು ತೋರಿಸುತ್ತದೆ. 3 ಅಟ್ಲಾಸ್ ಅಥವಾ ನಕ್ಷೆ (Akarband/Atlas): ಜಮೀನಿನ ಆಕಾರ ಮತ್ತು ಗಡಿಗಳನ್ನು ಗುರುತಿಸಲು ಕಂದಾಯ ಇಲಾಖೆಯ ಈ ನಕ್ಷೆ ಅಗತ್ಯ. 4 ಋಣಭಾರ…
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ನೌಕರರ ವೇತನ ಹಾಗೂ ಇತರ ಪ್ರಮುಖ ಬಿಲ್‌ಗಳನ್ನು ಖಜಾನೆಗೆ ಸಲ್ಲಿಕೆ ಮಾಡುವ ಕಾಲಮಿತಿಯನ್ನು ಸರ್ಕಾರ ವಿಸ್ತರಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದ್ದ ಬಿಲ್‌ಗಳನ್ನು ಸಲ್ಲಿಸಲು ಈಗ ಹೆಚ್ಚಿನ ಕಾಲಾವಕಾಶ ದೊರೆತಂತಾಗಿದೆ. ಅವಧಿ ವಿಸ್ತರಣೆಗೆ ಕಾರಣವೇನು? HRMS-2 ತಂತ್ರಾಂಶದಲ್ಲಿ ಎದುರಾದ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ನೌಕರರ ತುಟ್ಟಿಭತ್ಯೆ ಬಾಕಿ (DA Arrears), ಗಳಿಕೆ ರಜೆ ನಗದೀಕರಣ (EL Encashment) ಮತ್ತು ಇತರ ವೇತನ ಸಂಬಂಧಿತ ಬಿಲ್‌ಗಳನ್ನು ಸಲ್ಲಿಸಲು ಅಡಚಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಲ್ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸುವಂತೆ ಬಂದ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಹೊಸ ಗಡುವು ಯಾವುದು? ಹಿಂದಿನ ಆದೇಶದಂತೆ ಫೆಬ್ರವರಿ 16ಕ್ಕೆ ಮುಕ್ತಾಯವಾಗಿದ್ದ ಕಾಲಮಿತಿಯನ್ನು ಈಗ ಮಾರ್ಚ್ 10, 2026ರ ಸಂಜೆ 6:00 ಗಂಟೆಯವರೆಗೆ ವಿಸ್ತರಿಸಲಾಗಿದೆ. ಯಾವೆಲ್ಲಾ ಬಿಲ್‌ಗಳಿಗೆ ಅನ್ವಯ? ಈ ವಿಸ್ತರಣೆಯು ಈ ಕೆಳಗಿನ ಬಿಲ್‌ಗಳಿಗೆ ಅನ್ವಯವಾಗಲಿದೆ: ರಾಜ್ಯ/ ಜಿಲ್ಲಾ ಪಂಚಾಯತ್/ ತಾಲೂಕು ಪಂಚಾಯತ್ ನೌಕರರ…
ಬೆಂಗಳೂರು: ಅಡುಗೆ ಮನೆಯಲ್ಲಿ ಗಡಿಬಿಡಿಯ ಕೆಲಸದಲ್ಲಿರುವಾಗ ಅಥವಾ ಅತಿಥಿಗಳು ಬಂದಾಗ ದಿಢೀರನೆ ಗ್ಯಾಸ್ ಖಾಲಿಯಾದರೆ ಆಗುವ ಸಂಕಷ್ಟ ಅಷ್ಟಿಷ್ಟಲ್ಲ. ಕಬ್ಬಿಣದ ಸಿಲಿಂಡರ್‌ಗಳು ಪಾರದರ್ಶಕವಾಗಿಲ್ಲದ ಕಾರಣ, ಒಳಗೆ ಎಷ್ಟು ಅನಿಲ ಬಾಕಿ ಇದೆ ಎಂದು ತಿಳಿಯುವುದು ಕಷ್ಟ ಎಂದು ನಾವು ಭಾವಿಸುತ್ತೇವೆ. ಆದರೆ, ಇನ್ನು ಮುಂದೆ ಅಡುಗೆ ಮಧ್ಯೆ ಗ್ಯಾಸ್ ನಿಂತುಹೋಗುವ ಕಿರಿಕಿರಿ ನಿಮಗಿರುವುದಿಲ್ಲ! ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಸರಳ ‘ಟ್ರಿಕ್’ಗಳ ಮೂಲಕ ನಿಮ್ಮ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಬಾಕಿ ಇದೆ ಎಂಬುದನ್ನು ಕೇವಲ ಎರಡು ನಿಮಿಷಗಳಲ್ಲಿ ಪತ್ತೆಹಚ್ಚಬಹುದು. 1. ಹಸಿ ಬಟ್ಟೆಯ ‘ಮ್ಯಾಜಿಕ್’ ಪ್ರಯೋಗ! ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಈ ವಿಧಾನ ಅತ್ಯಂತ ಸರಳ ಮತ್ತು ಪರಿಣಾಮಕಾರಿ: ಹಂತ 1: ಮೊದಲಿಗೆ ಒಂದು ಬಟ್ಟೆಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿಕೊಳ್ಳಿ. ಹಂತ 2: ಆ ಹಸಿ ಬಟ್ಟೆಯಿಂದ ಸಿಲಿಂಡರ್‌ನ ಸುತ್ತಲೂ ಒರೆಸಿ ಅದನ್ನು ಪೂರ್ತಿಯಾಗಿ ತೇವಗೊಳಿಸಿ. ಹಂತ 3: ಎರಡು ನಿಮಿಷಗಳ ಕಾಲ ಕಾಯಿರಿ ಮತ್ತು…














