Author: kannadanewsnow57

ಬೆಂಗಳೂರು: ಸಚಿವರ ಆಯ್ಕೆ ವಿಚಾರವಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಹೆಸರುಗಳು ಅಧಿಕೃತವಲ್ಲ. ಇಂದು ಬೆಳಗ್ಗೆ 10 ಗಂಟೆ ಅಥವಾ ಮಧ್ಯಾಹ್ನದ ವೇಳೆಗೆ ಹೈಕಮಾಂಡ್ ನಾಯಕರು ಸಚಿವರ ಪಟ್ಟಿ ಬಿಡುಗಡೆ ಮಾಡಲಿದ್ದಾರೆ” ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. ಸಚಿವರ ಆಯ್ಕೆ ವಿಚಾರವಾಗಿ ಹೈಕಮಾಂಡ್ ನಾಯಕರು ಚರ್ಚೆ ಮಾಡಿದ್ದು, ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ಹೈಕಮಾಂಡ್ ನಾಯಕರು ಅಂತಿಮ ತೀರ್ಮಾನ ಮಾಡಲಿದ್ದಾರೆ. ದೆಹಲಿ ನಾಯಕರು ನಮಗೆ ಪಟ್ಟಿ ರವಾನೆ ಮಾಡಿದ ಬಳಿಕ, ನಾವು ಅದನ್ನು ರಾಜಭವನಕ್ಕೆ ಕಳುಹಿಸಿಕೊಡುತ್ತೇವೆ” ಎಂದು ತಿಳಿಸಿದರು. ಇಂದು ಸಂಜೆ ನಡೆಯಬೇಕಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಬೇರೊಂದು ದಿನ ನಡೆಸಲು ತೀರ್ಮಾನಿಸಿದ್ದೇವೆ. ಆಹ್ವಾನ ಪತ್ರಿಕೆ ಪಡೆದಿರುವ ಬ್ಲಾಕ್, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿಯವರು ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನಕ್ಕೆ ಆಗಮಿಸಬೇಕು. ನಾನು ಸಚಿವ ಸಂಪುಟ ಸಭೆ ಮಾಡಿ, ರಾಹುಲ್…

Read More

ನವದೆಹಲಿ: ದೇಶದ ಜನತೆ ಕಾತರದಿಂದ ಕಾಯುತ್ತಿರುವ ಮುಂಗಾರು ಮಳೆಯ ಆಗಮನಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ನೈಋತ್ಯ ಮುಂಗಾರು ಮಾರುತಗಳು ಜೂನ್ 4 ರ ಸುಮಾರಿಗೆ ಕೇರಳ ಕರಾವಳಿಯನ್ನು ಮುಟ್ಟಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ ಅಧಿಕೃತ ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1 ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸುವುದು ವಾಡಿಕೆ. ಆದರೆ ಈ ಬಾರಿ ವಾಡಿಕೆಗಿಂತ 3 ದಿನ ತಡವಾಗಿ ಮಳೆಗಾಲ ಆರಂಭವಾಗುತ್ತಿದೆ. ಇದರೊಂದಿಗೆ ಈ ವರ್ಷ ಮಳೆಯ ಪ್ರಮಾಣವೂ ಎಂದಿಗಿಂತ ಕೊಂಚ ಕಡಿಮೆ ಇರಲಿದೆ ಎಂದು ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಮೇ 26 ರಂದೇ ಮುಂಗಾರು ಅಬ್ಬರ ಶುರುವಾಗಬಹುದು ಎಂದು ಅಂದಾಜಿಸಲಾಗಿತ್ತಾದರೂ, ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಅದು ಮತ್ತಷ್ಟು ಮುಂದೂಡಲ್ಪಟ್ಟಿತ್ತು. ಪ್ರಸ್ತುತ ಅರಬ್ಬಿ ಸಮುದ್ರ, ಲಕ್ಷದ್ವೀಪಗಳು ಸೇರಿದಂತೆ ಕೇರಳ ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ಮುಂಗಾರು ಮಾರುತಗಳ ಚಲನೆಗೆ ಯೋಗ್ಯವಾದ ವಾತಾವರಣ ಸೃಷ್ಟಿಯಾಗಿದೆ. ಇದರಿಂದಾಗಿ ಜೂನ್ ಮೊದಲ ವಾರದಲ್ಲೇ…

Read More

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು (ಬುಧವಾರ) ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಸಂಜೆ 4.05ಕ್ಕೆ ಲೋಕಸೌಧದ ಭವ್ಯ ಗಾಜಿನಮನೆಯಲ್ಲಿ ಈ ಅದ್ಧೂರಿ ಪ್ರಮಾಣ ವಚನ ಸಮಾರಂಭ ನೆರವೇರಲಿದ್ದು, ಇಡೀ ಸಿಲಿಕಾನ್ ಸಿಟಿ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಕನಕಪುರ ಬಂಡೆಯ ಪಟ್ಟಾಭಿಷೇಕವನ್ನು ಕಣ್ತುಂಬಿಕೊಳ್ಳಲು ಇಡೀ ರಾಜ್ಯವೇ ಚಾತಕ ಪಕ್ಷಿಯಂತೆ ಕಾಯುತ್ತಿದೆ. ನೋ ಫ್ಲೈ ಜೋನ್, ಹೈ ಸೆಕ್ಯೂರಿಟಿ: ರಾಜಧಾನಿಯಲ್ಲಿ ಖಾಕಿ ಕೋಟೆ! ದೇಶದ ಮೂಲೆ ಮೂಲೆಗಳಿಂದ ಸುಮಾರು 500ಕ್ಕೂ ಅಧಿಕ ಗಣ್ಯಾತಿಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ವಿವಿಐಪಿಗಳ ಆಗಮನದ ಹಿನ್ನೆಲೆಯಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಲೋಕಸೌಧದ ಸುತ್ತಮುತ್ತ ಯಾರಿಗೂ ಪ್ರವೇಶವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಕೆಪಿಸಿಸಿ ಕಚೇರಿ ಹಾಗೂ ಶಾಂಗ್ರಿಲಾ ಹೋಟೆಲ್ ವ್ಯಾಪ್ತಿಯನ್ನು ‘ನೋ ಫ್ಲೈ ಜೋನ್’ (ಡ್ರೋನ್ ಹಾಗೂ ಹಾರಾಟ ನಿಷೇಧಿತ ವಲಯ) ಎಂದು ಘೋಷಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಲೋಕಭವನದ ಆಸುಪಾಸಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಪಾದಚಾರಿ…

Read More

ನವದೆಹಲಿ: ಭಾರತದಲ್ಲಿ ನೆಲೆಸುವ ವಿದೇಶಿ ಪ್ರಜೆಗಳ ನಿಗಾ ಮತ್ತು ವಲಸೆ ಪ್ರಕ್ರಿಯೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯವು (MHA) ಮಹತ್ವದ ಕ್ರಮ ಕೈಗೊಂಡಿದೆ. ‘ವಲಸೆ ಮತ್ತು ವಿದೇಶಿಗರ (ತಿದ್ದುಪಡಿ) ನಿಯಮಗಳು, 2026’ ಅನ್ನು ಜಾರಿಗೊಳಿಸಲಾಗಿದ್ದು, ವಿದೇಶಿಗರ ನೋಂದಣಿ ಪ್ರಕ್ರಿಯೆ, ತುರ್ತು ನಿಬಂಧನೆಗಳು ಮತ್ತು ಮೇಲ್ಮನವಿ ಕಾರ್ಯವಿಧಾನಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ದೇಶದ ವಲಸೆ ಆಡಳಿತವನ್ನು ಆಧುನೀಕರಿಸುವ ಮತ್ತು ನಿಯಂತ್ರಣವನ್ನು ಬಿಗಿಗೊಳಿಸುವ ಉದ್ದೇಶದಿಂದ ಈ ಹೊಸ ತಿದ್ದುಪಡಿಗಳನ್ನು ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೋಂದಣಿ ಗಡುವಿನಲ್ಲಿ ಮಹತ್ವದ ಬದಲಾವಣೆ ಹೊಸ ನಿಯಮಗಳ ಪ್ರಕಾರ, ಭಾರತದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುವ ವಿದೇಶಿ ಪ್ರಜೆಗಳು, ತಾವು ಭಾರತಕ್ಕೆ ಬಂದಿಳಿದ 180 ದಿನಗಳ ಅವಧಿ ಮುಗಿಯುವ ಮುನ್ನವೇ ತಮ್ಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಹಿಂದೆ, 180 ದಿನಗಳ ಅವಧಿ ಮುಗಿದ ನಂತರವೂ ನೋಂದಣಿ ಮಾಡಿಕೊಳ್ಳಲು 14 ದಿನಗಳ ಕಾಲಾವಕಾಶ ನೀಡಲಾಗುತ್ತಿತ್ತು. ಆದರೆ ಈಗ ಆ ಹಳೆಯ ನಿಯಮವನ್ನು ರದ್ದುಗೊಳಿಸಲಾಗಿದ್ದು, 180 ದಿನಗಳ ಒಳಗಾಗಿಯೇ…

Read More

ನವದೆಹಲಿ: ವಿವಾಹವಾದ ನಂತರವೂ ತಮ್ಮ ಪೋಷಕರನ್ನೇ ಆಶ್ರಯಿಸಿರುವ ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಭಾರಿ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಮೃತಪಟ್ಟರೆ, ಅವರ ಸ್ಥಾನದಲ್ಲಿ ನೀಡಲಾಗುವ ಅನುಕಂಪದ ಆಧಾರದ ನೇಮಕಾತಿಗೆ (Compassionate Appointment) ವಿವಾಹಿತ ಪುತ್ರಿಯರೂ ಅರ್ಹರು ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ. ಲಿಂಗ ಸಮಾನತೆಯ ನಿಟ್ಟಿನಲ್ಲಿ ಈ ತೀರ್ಪು ಅತ್ಯಂತ ಮಹತ್ವದ್ದಾಗಿದ್ದು, ಹೆಣ್ಣುಮಕ್ಕಳ ಹಕ್ಕುಗಳನ್ನು ಎತ್ತಿಹಿಡಿದಿದೆ. ‘ವೈವಾಹಿಕ ಸ್ಥಿತಿ’ ತಾರತಮ್ಯಕ್ಕೆ ಕಾರಣವಾಗಬಾರದು ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವಾಗ ವಿವಾಹಿತ ಪುತ್ರಿಯರನ್ನು ಪ್ರಕ್ರಿಯೆಯಿಂದ ಹೊರಗಿಡುವುದು ಸಂಪೂರ್ಣ ತಾರತಮ್ಯ ಮತ್ತು ಅಸಂವಿಧಾನಿಕ ಎಂದು ನ್ಯಾಯಾಲಯ ಹೇಳಿದೆ. “ಒಬ್ಬ ವ್ಯಕ್ತಿಯ ವೈವಾಹಿಕ ಸ್ಥಿತಿಯು ಆಕೆಯ ಉದ್ಯೋಗದ ಅರ್ಹತೆಯನ್ನು ನಿರ್ಧರಿಸುವ ಮಾನದಂಡವಾಗಬಾರದು. ಇನ್ನು ಮುಂದೆ ವಿವಾಹಿತ ಪುತ್ರಿಯರೂ ಸಹ ಅನುಕಂಪದ ನೇಮಕಾತಿಗೆ ಸಮಾನವಾಗಿ ಅರ್ಹರಾಗಿದ್ದಾರೆ,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮಹಿಳೆಯರ ಹಕ್ಕುಗಳ ಮೊಟಕುಗೊಳಿಸುವಂತಿಲ್ಲ ಮದುವೆಯಾಗಿದೆ ಎಂಬ ಒಂದೇ ಒಂದು ಕಾರಣಕ್ಕಾಗಿ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿವಾಹವೆಂಬುದು…

Read More

ಚೀನಾದ ಇನ್ನರ್ ಮಂಗೋಲಿಯಾ ಭಾಗದ ರೈತರೊಬ್ಬರು ತಮ್ಮ ತೋಟದಲ್ಲಿ ಕುರಿಗಳನ್ನು ನೋಡಿಕೊಳ್ಳಲು ಇಬ್ಬರು ಆಳುಗಳು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದರು. ಆದರೆ, ಈ ಸಾಮಾನ್ಯ ಕೆಲಸಕ್ಕೆ ಕೇವಲ ಕೆಲವೇ ದಿನಗಳಲ್ಲಿ 700ಕ್ಕೂ ಹೆಚ್ಚು ಪದವೀಧರರು ಮತ್ತು ಐಟಿ ವಲಯದ ಉದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ! ಒಂದು ಕಾಲದಲ್ಲಿ ಕೀಳಾಗಿ ಕಾಣುತ್ತಿದ್ದ ಕೆಲಸಕ್ಕೆ ಇಷ್ಟೊಂದು ಡಿಮ್ಯಾಂಡ್ ಬಂದಿರುವುದು ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದೆ. ಯುವಕರನ್ನು ಕಾಡುತ್ತಿರುವ ‘996’ ಕರಾಳ ಸಂಸ್ಕೃತಿ ಯುವಕರು ಐಷಾರಾಮಿ ಎಸಿ ಆಫೀಸ್ ಬಿಟ್ಟು ಹುಲ್ಲುಗಾವಲಿಗೆ ಬರಲು ಮುಖ್ಯ ಕಾರಣ ಕಾರ್ಪೊರೇಟ್ ವಲಯದ ಮಿತಿಮೀರಿದ ಒತ್ತಡ. ಚೀನಾದ ಐಟಿ ಕಂಪನಿಗಳಲ್ಲಿ ‘996’ ಎಂಬ ಕಠಿಣ ನಿಯಮವಿದೆ. ಅಂದರೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ, ವಾರದಲ್ಲಿ ಭಾನುವಾರ ಬಿಟ್ಟು ಉಳಿದ 6 ದಿನಗಳೂ ದುಡಿಯಬೇಕು. ಈ ಯಾಂತ್ರಿಕ ಜೀವನದಿಂದಾಗಿ ಯುವಜನತೆ ತೀವ್ರ ಮಾನಸಿಕ ಖಿನ್ನತೆ ಒಳಗಾಗುತ್ತಿದ್ದಾರೆ. ಆಫೀಸಿನ ಪೈಪೋಟಿಗಿಂತ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಉಸಿರಾಡುವುದು ಮೇಲು ಎಂಬ ತೀರ್ಮಾನಕ್ಕೆ…

Read More

ಬೆಂಗಳೂರು: ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ನಾಳೆ (ಜೂನ್ 3, 2026) ಮಧ್ಯಾಹ್ನದ ನಂತರ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅರ್ಧ ದಿನ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜೂನ್ 3ರ ಬುಧವಾರದಂದು ಅಪರಾಹ್ನ 4:05 ಗಂಟೆಗೆ ಬೆಂಗಳೂರಿನ ‘ಕರ್ನಾಟಕ ಲೋಕಭವನ’ದಲ್ಲಿ ನೂತನ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಲೋಕಭವನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಸಾರ್ವಜನಿಕ ಜನಸಂದಣಿ ಸೇರುವ ಸಾಧ್ಯತೆಯಿದೆ ಹಾಗೂ ವಾಹನ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಉಂಟಾಗುವ ಸಂಭವವಿದೆ. ಭದ್ರತೆ, ಸುರಕ್ಷತೆ ಮತ್ತು ಸುಗಮ ಸಂಚಾರ ನಿರ್ವಹಣೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿಗಳ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜೂನ್ 3ರ ಅಪರಾಹ್ನ (ಮಧ್ಯಾಹ್ನದ ನಂತರ) ರಜೆ ಘೋಷಿಸಲಾಗಿದೆ. ರಾಜ್ಯಪಾಲರ ಆದೇಶದ…

Read More

ಚೆನ್ನೈ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಮಂಗಳವಾರ ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾದ ಅವರು ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಇದಾದ ಬೆನ್ನಲ್ಲೇ, ಇಂದು ಸಂಜೆ 4 ಗಂಟೆಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಅವರನ್ನು ಮುಕ್ತಗೊಳಿಸಿ, ಅವರ ಜಾಗಕ್ಕೆ ನೈನಾರ್ ನಾಗೇಂದ್ರನ್ ಅವರನ್ನು ನೇಮಕ ಮಾಡಿದ ದಿನದಿಂದಲೂ ಅಣ್ಣಾಮಲೈ ಪಕ್ಷದಲ್ಲಿ ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದು ಲೋ ಪ್ರೊಫೈಲ್ ಕಾಯ್ದುಕೊಂಡಿದ್ದ ಅವರು, ಬಿಜೆಪಿಯಲ್ಲಿ ತಮಗೆ ಉಜ್ವಲ ಭವಿಷ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು ಎನ್ನಲಾಗಿತ್ತು. ಇದೀಗ ಆ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಅವರು ಅಧಿಕೃತವಾಗಿ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ.

Read More

ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ. ನಾಳೆ ಸಂಜೆ 4:05ಕ್ಕೆ ರಾಜಧಾನಿಯ ಲೋಕಭವನದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಅವರು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಳೆ ಕರ್ನಾಟಕದ ನೂತನ ಮುಖ್ಯಮಂತ್ರಿ ಆಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಪಾಸ್ ಇದ್ದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ. ನಾಳೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದು, ಪದಗ್ರಹಣಕ್ಕೆ ಗಣ್ಯರು, ಅತಿಗಣ್ಯರಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗಿದೆ. ಲೋಕಭವನದಲ್ಲಿ ಭರ್ಜರಿ ಸಿದ್ಧತೆ ಡಿಕೆಶಿ ಅವರ ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಲೋಕಭವನದಲ್ಲಿ ಯುದ್ಧೋಪಾದಿಯಲ್ಲಿ ಸಿದ್ಧತೆಗಳು ಆರಂಭವಾಗಿವೆ. ಲೋಕಭವನ ಹಾಗೂ ವಿಧಾನಸೌಧದ ಸುತ್ತಮುತ್ತಲ ಪ್ರದೇಶಗಳಲ್ಲಿ ಡಿ.ಕೆ. ಶಿವಕುಮಾರ್ ಅವರ ಬೃಹತ್ ಕಟೌಟ್‌ಗಳು ಮತ್ತು ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಇಡೀ ಪರಿಸರ ಹಬ್ಬದ ವಾತಾವರಣವನ್ನು ನೆನಪಿಸುತ್ತಿದೆ. ಅಭಿಮಾನಿಗಳಿಗೆ ಎಲ್‌ಇಡಿ ಪರದೆ ವ್ಯವಸ್ಥೆ ರಾಜ್ಯದ ಮೂಲೆ ಮೂಲೆಗಳಿಂದ ಹರಿದುಬರಲಿರುವ ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು…

Read More

ಜಗತ್ಯಾಲ (ತೆಲಂಗಾಣ): ಚಲಿಸುತ್ತಿದ್ದ ಕಾರಿನಲ್ಲೇ ಐಪಿಎಲ್ ಪಂದ್ಯ ವೀಕ್ಷಿಸುತ್ತಿದ್ದರೇ ಎಂಬ ಶಂಕೆಯ ನಡುವೆ, ನಿಯಂತ್ರಣ ತಪ್ಪಿದ ಮಹೀಂದ್ರಾ ಥಾರ್ ಕಾರೊಂದು ಬಾವಿಗೆ ಬಿದ್ದ ಪರಿಣಾಮ 28 ವರ್ಷದ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಜಗತ್ಯಾಲ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಾರಿನಲ್ಲಿದ್ದ ಮತ್ತಿಬ್ಬರು ಸ್ನೇಹಿತರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಗತ್ಯಾಲ ಪಟ್ಟಣದ ನಿವಾಸಿ ದಾಸರಿ ಅರುಣ್ (28) ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ಗಾಯಗೊಂಡಿರುವ ಅರುಣ್ ಸ್ನೇಹಿತರಾದ ಅಶ್ವಿನ್ ಮತ್ತು ನಿವೇಶ್ ಅವರನ್ನು ಸ್ಥಳೀಯರು ರಕ್ಷಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿವರ: ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮೂವರೂ ಸ್ನೇಹಿತರು ಮೊರಪಲ್ಲಿ ಗ್ರಾಮದಲ್ಲಿ ನಡೆದ ಗೆಳೆಯರ ಕೂಟವೊಂದರಲ್ಲಿ ಭಾಗವಹಿಸಲು ಹೋಗಿದ್ದರು. ಕಾರ್ಯಕ್ರಮ ಮುಗಿಸಿ ರಾತ್ರಿ ವಾಪಸ್ ಜಗತ್ಯಾಲಕ್ಕೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮೊರಪಲ್ಲಿ-ತಾಟಿಪಲ್ಲಿ ನಡುವಿನ ಕಿರಿದಾದ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ವಾಹನವು ದಿಢೀರನೆ ರಸ್ತೆಯಿಂದ ಪಕ್ಕಕ್ಕೆ ಸರಿದು ಹತ್ತಿರದಲ್ಲಿದ್ದ ಬಾವಿಗೆ ಬಿದ್ದಿದೆ. ಪೊಲೀಸರ ಶಂಕೆ: ಅಪಘಾತದ ಸಮಯದಲ್ಲಿ…

Read More