Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಸಿಬಿಎಸ್‌ಇಯಲ್ಲಿ ಆಡಳಿತಾತ್ಮಕ ಬದಲಾವಣೆ: ನೂತನ ಅಧ್ಯಕ್ಷರಾಗಿ ಲೋಕಂಡೆ ಪ್ರಶಾಂತ್ ಸೀತಾರಾಮ್ ನೇಮಕ

BIG NEWS : ಇಂದು ಸಂಜೆ 4.05ಕ್ಕೆ ಕರ್ನಾಟಕದ ನೂತನ `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ

DK Shivakumar Tattoo: ರಾಜ್ಯದಲ್ಲೊಬ್ಬ ‘ಡಿ.ಕೆ.ಶಿವಕುಮಾರ್’ ಅಪ್ಪಟ ಅಭಿಮಾನಿ: ತನ್ನ ಕೈ ಭುಜದ ಮೇಲೆ ‘ಡಿಕೆಶಿ ಭಾವಚಿತ್ರ ಟ್ಯಾಟೋ’

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದು ಸಂಜೆ 4.05ಕ್ಕೆ ಕರ್ನಾಟಕದ ನೂತನ `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ
KARNATAKA

BIG NEWS : ಇಂದು ಸಂಜೆ 4.05ಕ್ಕೆ ಕರ್ನಾಟಕದ ನೂತನ `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ

By kannadanewsnow57

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು (ಬುಧವಾರ) ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಸಂಜೆ 4.05ಕ್ಕೆ ಲೋಕಸೌಧದ ಭವ್ಯ ಗಾಜಿನಮನೆಯಲ್ಲಿ ಈ ಅದ್ಧೂರಿ ಪ್ರಮಾಣ ವಚನ ಸಮಾರಂಭ ನೆರವೇರಲಿದ್ದು, ಇಡೀ ಸಿಲಿಕಾನ್ ಸಿಟಿ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಕನಕಪುರ ಬಂಡೆಯ ಪಟ್ಟಾಭಿಷೇಕವನ್ನು ಕಣ್ತುಂಬಿಕೊಳ್ಳಲು ಇಡೀ ರಾಜ್ಯವೇ ಚಾತಕ ಪಕ್ಷಿಯಂತೆ ಕಾಯುತ್ತಿದೆ.

ನೋ ಫ್ಲೈ ಜೋನ್, ಹೈ ಸೆಕ್ಯೂರಿಟಿ: ರಾಜಧಾನಿಯಲ್ಲಿ ಖಾಕಿ ಕೋಟೆ!

ದೇಶದ ಮೂಲೆ ಮೂಲೆಗಳಿಂದ ಸುಮಾರು 500ಕ್ಕೂ ಅಧಿಕ ಗಣ್ಯಾತಿಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ವಿವಿಐಪಿಗಳ ಆಗಮನದ ಹಿನ್ನೆಲೆಯಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಲೋಕಸೌಧದ ಸುತ್ತಮುತ್ತ ಯಾರಿಗೂ ಪ್ರವೇಶವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಕೆಪಿಸಿಸಿ ಕಚೇರಿ ಹಾಗೂ ಶಾಂಗ್ರಿಲಾ ಹೋಟೆಲ್ ವ್ಯಾಪ್ತಿಯನ್ನು ‘ನೋ ಫ್ಲೈ ಜೋನ್’ (ಡ್ರೋನ್ ಹಾಗೂ ಹಾರಾಟ ನಿಷೇಧಿತ ವಲಯ) ಎಂದು ಘೋಷಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಲೋಕಭವನದ ಆಸುಪಾಸಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಪಾದಚಾರಿ ಮಾರ್ಗಗಳ ಯುದ್ಧಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ವಿಧಾನಸೌಧದ ಮುಂದೆ ಎಲ್‌ಇಡಿ ಪರದೆಗಳ ಲೈವ್‌ ಶೋ

ಕಾರ್ಯಕ್ರಮ ನಡೆಯುವ ಮುಖ್ಯ ಸಭಾಂಗಣಕ್ಕೆ ಎಲ್ಲರಿಗೂ ಪ್ರವೇಶ ಸಿಗದೇ ಇರಬಹುದು, ಆದರೆ ಅಭಿಮಾನ ನಿರಾಸೆಯಾಗಬಾರದು ಎಂಬ ಕಾರಣಕ್ಕೆ ಹೈಟೆಕ್ ವ್ಯವಸ್ಥೆ ಮಾಡಲಾಗಿದೆ. ವಿಧಾನಸೌಧದ ಮುಂಭಾಗ, ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನ ಹಾಗೂ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ದೈತ್ಯ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಸಮಾರಂಭದ ಪ್ರತಿಯೊಂದು ಕ್ಷಣವೂ ಈ ಸ್ಕ್ರೀನ್‌ಗಳಲ್ಲಿ ನೇರ ಪ್ರಸಾರವಾಗಲಿದ್ದು, ಸಾರ್ವಜನಿಕರು ಲೈವ್ ಆಗಿ ವೀಕ್ಷಿಸಬಹುದಾಗಿದೆ.

100ಕ್ಕೂ ಹೆಚ್ಚು ಬಸ್‌ಗಳಲ್ಲಿ ಬರಲಿದ್ದಾರೆ ಅಭಿಮಾನಿಗಳು

ನೂತನ ಸಿಎಂ ತವರು ಜಿಲ್ಲೆಯಾದ ರಾಮನಗರ, ಕನಕಪುರ ಸೇರಿದಂತೆ ಮಂಡ್ಯ, ಮೈಸೂರು ಹಾಗೂ ಮಾಗಡಿಯಿಂದ ಅಭಿಮಾನಿಗಳು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಕಾರ್ಯಕರ್ತರು ಮತ್ತು ಜನಸಾಮಾನ್ಯರನ್ನು ರಾಜಧಾನಿಗೆ ಕರೆತರಲು ಸ್ಥಳೀಯ ಶಾಸಕರು 100ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಜನಸಾಗರ ಹರಿದುಬರುತ್ತಿದೆ.

ಎಲ್ಲೆಲ್ಲೂ ಡಿಕೆಶಿ ಬ್ಯಾನರ್, ಕಟೌಟ್ ವೈಭವ
ಹೈಕೋರ್ಟ್ ಆವರಣ ಹೊರತುಪಡಿಸಿ, ನಗರದ ಉಳಿದೆಲ್ಲ ಪ್ರಮುಖ ರಸ್ತೆಗಳಲ್ಲಿ ಡಿ.ಕೆ.ಶಿವಕುಮಾರ್ ಅವರ ಬೃಹತ್ ಫ್ಲೆಕ್ಸ್ ಮತ್ತು ಬಂಟಿಂಗ್ಸ್ ರಾರಾಜಿಸುತ್ತಿವೆ. ರೇಸ್‌ಕೋರ್ಸ್ ರಸ್ತೆ, ಲೋಕಭವನ ಹಾಗೂ ವಿಧಾನಸೌಧದ ಸುತ್ತಮುತ್ತಲಿನ ಮಾರ್ಗಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಶುಭ ಕೋರಿ ತರಹೇವಾರಿ ಬ್ಯಾನರ್‌ಗಳನ್ನು ಹಾಕಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

#WATCH | Bengaluru decked up with posters and banners of Karnataka CM-designate DK Shivakumar ahead of the swearing-in ceremony on June 3 pic.twitter.com/yNcZpt68vo

— ANI (@ANI) June 2, 2026

BIG NEWS : DK Shivakumar takes oath as 25th CM of Karnataka at 4.05 pm today
Share. Facebook Twitter LinkedIn WhatsApp Email

Related Posts

DK Shivakumar Tattoo: ರಾಜ್ಯದಲ್ಲೊಬ್ಬ ‘ಡಿ.ಕೆ.ಶಿವಕುಮಾರ್’ ಅಪ್ಪಟ ಅಭಿಮಾನಿ: ತನ್ನ ಕೈ ಭುಜದ ಮೇಲೆ ‘ಡಿಕೆಶಿ ಭಾವಚಿತ್ರ ಟ್ಯಾಟೋ’

2 Mins Read

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ಸಂಪೂರ್ಣ ನಿಷೇಧ : ಸರ್ಕಾರ ಮಹತ್ವದ ಆದೇಶ

2 Mins Read

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

1 Min Read
Recent News

​ಸಿಬಿಎಸ್‌ಇಯಲ್ಲಿ ಆಡಳಿತಾತ್ಮಕ ಬದಲಾವಣೆ: ನೂತನ ಅಧ್ಯಕ್ಷರಾಗಿ ಲೋಕಂಡೆ ಪ್ರಶಾಂತ್ ಸೀತಾರಾಮ್ ನೇಮಕ

BIG NEWS : ಇಂದು ಸಂಜೆ 4.05ಕ್ಕೆ ಕರ್ನಾಟಕದ ನೂತನ `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ

DK Shivakumar Tattoo: ರಾಜ್ಯದಲ್ಲೊಬ್ಬ ‘ಡಿ.ಕೆ.ಶಿವಕುಮಾರ್’ ಅಪ್ಪಟ ಅಭಿಮಾನಿ: ತನ್ನ ಕೈ ಭುಜದ ಮೇಲೆ ‘ಡಿಕೆಶಿ ಭಾವಚಿತ್ರ ಟ್ಯಾಟೋ’

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ಸಂಪೂರ್ಣ ನಿಷೇಧ : ಸರ್ಕಾರ ಮಹತ್ವದ ಆದೇಶ

State News
KARNATAKA

BIG NEWS : ಇಂದು ಸಂಜೆ 4.05ಕ್ಕೆ ಕರ್ನಾಟಕದ ನೂತನ `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು (ಬುಧವಾರ) ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಸಂಜೆ 4.05ಕ್ಕೆ ಲೋಕಸೌಧದ…

DK Shivakumar Tattoo: ರಾಜ್ಯದಲ್ಲೊಬ್ಬ ‘ಡಿ.ಕೆ.ಶಿವಕುಮಾರ್’ ಅಪ್ಪಟ ಅಭಿಮಾನಿ: ತನ್ನ ಕೈ ಭುಜದ ಮೇಲೆ ‘ಡಿಕೆಶಿ ಭಾವಚಿತ್ರ ಟ್ಯಾಟೋ’

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ಸಂಪೂರ್ಣ ನಿಷೇಧ : ಸರ್ಕಾರ ಮಹತ್ವದ ಆದೇಶ

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.