Subscribe to Updates
Get the latest creative news from FooBar about art, design and business.
Author: kannadanewsnow57
ಗುರುವಾರದ ದಿನದಂದು ರಾಘವೇಂದ್ರ ಸ್ವಾಮಿಗಳನ್ನು ನಾವು ಪೂಜಿಸುವುದರ ಜೊತೆಗೆ ಅವರ ಆಶೀರ್ವಾದವನ್ನು ಪಡೆದುಕೊಳ್ಳುವ ಸಲುವಾಗಿ ಮಂತ್ರಗಳನ್ನು, ಸ್ತೋತ್ರಗಳನ್ನು ಕೂಡ ಪಠಿಸುತ್ತೇವೆ. ಗುರುವಾರದ ದಿನದಂದು ನಾವು ಪಠಿಸಬೇಕಾದ ಉತ್ತಮ ಮಂತ್ರ ಅಥವಾ ಸ್ತೋತ್ರಗಳಲ್ಲಿ ಶ್ರೀರಾಘವೇಂದ್ರ ಕವಚ ಕೂಡ ಒಂದಾಗಿದೆ. ಗುರುವಾರದ ದಿನದಂದು ಶ್ರೀರಾಘವೇಂದ್ರ ಕವಚವನ್ನು ಪಠಿಸುವುದರಿಂದ ವ್ಯಕ್ತಿಯು ತನ್ನೆಲ್ಲಾ ಕಷ್ಟಗಳಿಂದ ಪರಿಹಾರವನ್ನು ಕಂಡುಕೊಳ್ಳುತ್ತಾನೆ. ಗುರುವಾರ ದಿನದಂದು ತಪ್ಪದೇ ಪಠಿಸಿ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ಕವಚಂ ಶ್ರೀ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನ ವಕ್ಷ್ಯಾಮಿ ಗುರುವರಸ್ಯ ವಾಂಚಿತಾರ್ಥ ಪ್ರದಾಯಕಂ|| ಋಷಿರಸ್ಯ ಅಪ್ಪಣ್ಣಾಚಾರ್ಯ ಚಾಂದೂನುಷ್ಟುಪ್ ಪ್ರಕೀರ್ತಿತಮ್ ದೇವತಾ ಶ್ರೀ…
ಧರ್ಮಸ್ಥಳ : ಮಾರ್ಚ್ 3ರಂದು ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಂದು ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಧರ್ಮಸ್ಥಳದ ಆಡಳಿತ ಮಂಡಳಿಯು ಪ್ರಕಟಣೆ ಹೊರಡಿಸಿದ್ದು, ಭಕ್ತಾದಿಗಳು ಸಹಕರಿಸುವಂತೆ ಕೋರಿದೆ. ದರ್ಶನದ ಸಮಯದ ವಿವರ: ದಿನಾಂಕ: 03-03-2026, ಮಂಗಳವಾರ. ಬೆಳಗಿನ ಅವಧಿ: ಅಂದು ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನದ ನಂತರ: ಗ್ರಹಣದ ಕಾರಣದಿಂದ ಮಧ್ಯಾಹ್ನ 1.30 ರಿಂದ ಸಂಜೆಯವರೆಗೆ ದರ್ಶನ ಸ್ಥಗಿತಗೊಳ್ಳಲಿದೆ. ರಾತ್ರಿಯ ಅವಧಿ: ರಾತ್ರಿ 7.30 ಗಂಟೆಯ ನಂತರ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ದೂರದ ಊರುಗಳಿಂದ ಬರುವ ಭಕ್ತಾದಿಗಳು ಈ ಬದಲಾದ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರವಾಸವನ್ನು ಯೋಜಿಸಬೇಕೆಂದು ಕ್ಷೇತ್ರವು ವಿನಂತಿಸಿದೆ.
ಇಂದಿನ ದಿನಗಳಲ್ಲಿ ಪ್ರೀತಿ ಎಷ್ಟು ವೇಗವಾಗಿ ಚಿಗುರುತ್ತದೆಯೋ, ಅಷ್ಟೇ ವೇಗವಾಗಿ ಬ್ರೇಕಪ್ ಗಳು ಕೂಡ ನಡೆಯುತ್ತಿವೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ವ್ಯಕ್ತಿಯಿಂದ ದೂರವಾಗುವುದು ಅಥವಾ ಆ ನೆನಪುಗಳನ್ನು ಮರೆತು ಬದುಕುವುದು ಯಾರಿಗಾದರೂ ಅತೀವ ನೋವಿನ ಸಂಗತಿ. ಆದರೆ, ಈ ಕಷ್ಟಕಾಲದಿಂದ ಹೊರಬಂದು ಜೀವನವನ್ನು ಹೊಸದಾಗಿ ಹೇಗೆ ಆರಂಭಿಸಬೇಕು ಎಂಬುದರ ಕುರಿತು ಖ್ಯಾತ ರಿಲೇಷನ್ಶಿಪ್ ಕೋಚ್ ಮತ್ತು ಕೌನ್ಸೆಲರ್ ಕಂಫರ್ಟ್ ಒಮೊವ್ರೆ, ತಮ್ಮ ‘ಹಾರ್ಟ್ಸ್ ಬ್ಲೂಮ್ ಹಿಯರ್’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಅದ್ಭುತ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳ ವಿವರ ಇಲ್ಲಿದೆ: 1. ನಿಮ್ಮ ಮೇಲೆ ನಿಮಗಿರಲಿ ನಂಬಿಕೆ ಬ್ರೇಕಪ್ ನಂತರ, “ನಾನು ತೆಗೆದುಕೊಂಡ ನಿರ್ಧಾರ ಸರಿಯೇ?” ಎಂಬ ಸಂಶಯ ನಿಮ್ಮನ್ನು ಕಾಡಬಹುದು. ಆದರೆ, ನಿಮ್ಮ ಸಂತೋಷ ಮತ್ತು ಮಾನಸಿಕ ಶಾಂತಿಗಾಗಿ ನೀವು ಈ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಬಲವಾಗಿ ನಂಬಿ. ನಿಮ್ಮ ಮನಸ್ಸಿನಲ್ಲಿರುವ ಕೋಪ ಅಥವಾ ಅಪರಾಧಿ ಭಾವನೆಯನ್ನು ಹತ್ತಿಕ್ಕಬೇಡಿ; ಬದಲಾಗಿ ಅದನ್ನು ಡೈರಿಯಲ್ಲಿ ಬರೆಯಿರಿ. ತಪ್ಪು ಸಂಬಂಧದಲ್ಲಿ ಇಷ್ಟು ದಿನ ಏಕೆ…
ಗದಗ : ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ ನಡೆದಿದ್ದು, ಆಸ್ತಿ ವಿಚಾರವಾಗಿ ಮಗನೇ ತನ್ನ ತಂದೆಯನ್ನು ಹತ್ಯೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ. ಗದಗ ಜಿಲ್ಲೆಯ ಗೋವನಾಳ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಮಗನೇ ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಶಂಕರ ಗೌಡ ದ್ಯಾವನಗೌಡ್ರ (60) ಎಂಬುವರನ್ನು ಅವರ ಮಗ ಪ್ರಭು ಹತ್ಯೆ ಮಾಡಿದ್ದಾನೆ. 2 ಎಕರೆ ಜಮೀನಿಗೊಸ್ಕರ ತಂದೆ-ಮಗನ ನಡುವೆ ಜಗಳವಾಗಿದ್ದು, ಈ ವೇಳೆ ತಂದೆ ಮೇಲೆ ಮಗ ಪ್ರಭು ಜೋರಾಗಿ ಹೊಡೆದಿದ್ದು, ಹೊಡೆದ ರಭಸಕ್ಕೆ ಶಂಕರಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಆರೋಪಿ ಮಗ ಪ್ರಭುವನ್ನು ಬಂಧಿಸಿದ್ದಾರೆ.
ಸೈನಿಕ ಶಾಲೆಯಲ್ಲಿ ಓದಬೇಕೆಂಬ ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಯ (AISSEE 2026) ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಈಗ ಅಧಿಕೃತ ವೆಬ್ಸೈಟ್ exams.nta.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಪರೀಕ್ಷೆಯು ಜನವರಿ 18, 2026 ರಂದು ನಡೆದಿತ್ತು. ಫಲಿತಾಂಶ ಪಡೆಯಲು ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ NTA ಬಿಡುಗಡೆ ಮಾಡಿರುವ ಸ್ಕೋರ್ಕಾರ್ಡ್ ಅನ್ನು ಡೌನ್ಲೋಡ್ ಮಾಡಲು ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು: ಹಂತ 1: ಮೊದಲು ಅಧಿಕೃತ ವೆಬ್ಸೈಟ್ exams.nta.nic.in ಗೆ ಭೇಟಿ ನೀಡಿ. ಹಂತ 2: ವೆಬ್ಸೈಟ್ನ ಮುಖಪುಟದಲ್ಲಿರುವ ‘Candidate Activity’ ವಿಭಾಗದ ಮೇಲೆ ಕ್ಲಿಕ್ ಮಾಡಿ. ಹಂತ 3: ನಂತರ…
ಕಾರ್ಮಿಕರೇ ನಿಮ್ಮ ಬಳಿ ಈ ಕಾರ್ಡ್ ಇದ್ರೆ ಸಿಗಲಿದೆ ₹3000 ಮಾಸಿಕ ಪಿಂಚಣಿ, ₹2 ಲಕ್ಷ ವಿಮೆ : ಸರ್ಕಾರದ ಬಂಪರ್ ಗಿಫ್ಟ್ !
ನವದೆಹಲಿ: ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರ ಬಾಳಿಗೆ ಬೆಳಕಾಗಲು ಭಾರತ ಸರ್ಕಾರ ಮುಂದಾಗಿದ್ದು, 2026ರಲ್ಲಿ ಇ-ಶ್ರಮ್ (e-Shram) ಕಾರ್ಡ್ ಯೋಜನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಈ ಡಿಜಿಟಲ್ ಗುರುತಿನ ಚೀಟಿಯು ಕಾರ್ಮಿಕರ ಸಾಮಾಜಿಕ ಭದ್ರತೆಗೆ ‘ಒನ್-ಸ್ಟಾಪ್ ಸೊಲ್ಯೂಷನ್’ ಆಗಿ ಮಾರ್ಪಟ್ಟಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಾದ್ಯಂತ ಈಗಾಗಲೇ 31.54 ಕೋಟಿಗೂ ಹೆಚ್ಚು ಕಾರ್ಮಿಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸದವರು ಮಾತ್ರವಲ್ಲದೆ ಈಗ ಸ್ವಿಗ್ಗಿ-ಜೊಮ್ಯಾಟೊದಂತಹ ‘ಗಿಗ್ ವರ್ಕರ್ಸ್’ ಕೂಡ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಇ-ಶ್ರಮ್ ಕಾರ್ಡ್ 2026: ಪ್ರಮುಖ ಲಾಭಗಳು ಇಲ್ಲಿವೆ 2026ರ ಹೊಸ ಅಪ್ಡೇಟ್ ಅನ್ವಯ, ಇ-ಶ್ರಮ್ ಪೋರ್ಟಲ್ ಅನ್ನು ಇತರ ಪ್ರಮುಖ ಕಲ್ಯಾಣ ಯೋಜನೆಗಳೊಂದಿಗೆ ಲಿಂಕ್ ಮಾಡಲಾಗಿದೆ: ₹3,000 ಮಾಸಿಕ ಪಿಂಚಣಿ: ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಯೋಜನೆಯ ಅಡಿಯಲ್ಲಿ, ಕಾರ್ಮಿಕರಿಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ₹3,000 ನಿಶ್ಚಿತ ಪಿಂಚಣಿ…
ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಉತ್ತಮ ಅಂಕಗಳ ಜೊತೆಗೆ ಉಜ್ವಲ ಭವಿಷ್ಯವೂ ನಿಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 6,46,801 ಹೊಸಬರಾದರೆ, 50,540 ಪುನರಾವರ್ತಿತ ಮತ್ತು 13,022 ಖಾಸಗಿ ಅಭ್ಯರ್ಥಿಗಳಿದ್ದಾರೆ. https://twitter.com/siddaramaiah/status/2027576078357913796?s=20
ಬೆಂಗಳೂರು: ನೀವು ವಾಟ್ಸಾಪ್ (WhatsApp) ಅಥವಾ ಟೆಲಿಗ್ರಾಮ್ (Telegram) ಬಳಸುತ್ತಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ. ನಾಳೆಯಿಂದ ಅಂದರೆ ಮಾರ್ಚ್ 1, 2026 ರಿಂದ ಜಾರಿಗೆ ಬರುವಂತೆ ಕೇಂದ್ರ ಟೆಲಿಕಾಂ ಇಲಾಖೆಯು ಸಂವಹನ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರುತ್ತಿದೆ.ಇನ್ನು ಮುಂದೆ ನಿಮ್ಮ ಮೊಬೈಲ್‌ನಲ್ಲಿ ಸಿಮ್ ಕಾರ್ಡ್ (SIM Card) ಇಲ್ಲದಿದ್ದರೆ ವಾಟ್ಸಾಪ್ ಕೆಲಸ ಮಾಡುವುದಿಲ್ಲ! ಏನಿದು ‘ಸಿಮ್ ಕಾರ್ಡ್ ಬೈಂಡಿಂಗ್’ ನಿಯಮ? ಇಲ್ಲಿಯವರೆಗೆ, ಒಂದು ಬಾರಿ ವಾಟ್ಸಾಪ್ ಅಥವಾ ಟೆಲಿಗ್ರಾಮ್ ಅನ್ನು ವೆರಿಫೈ (Verify) ಮಾಡಿದ ನಂತರ, ಫೋನ್‌ನಿಂದ ಸಿಮ್ ಕಾರ್ಡ್ ತೆಗೆದರೂ ವೈಫೈ (WiFi) ಮೂಲಕ ಆ್ಯಪ್ ಬಳಸಲು ಸಾಧ್ಯವಿತ್ತು. ಆದರೆ, ಹೊಸ ‘ಸಿಮ್ ಕಾರ್ಡ್ ಬೈಂಡಿಂಗ್’ ನಿಯಮದ ಪ್ರಕಾರ: ಸಿಮ್ ಇಲ್ಲದಿದ್ದರೆ ಆ್ಯಪ್ ಬಂದ್: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಿವ್ ಆಗಿರುವ ಸಿಮ್ ಕಾರ್ಡ್ ಇಲ್ಲದಿದ್ದರೆ ವಾಟ್ಸಾಪ್ ಸ್ವಯಂಚಾಲಿತವಾಗಿ ಲಾಗ್ ಔಟ್ (Log out) ಆಗಲಿದೆ. ನಿರಂತರ ಪರಿಶೀಲನೆ: ಆ್ಯಪ್ ಕೆಲಸ ಮಾಡಲು ಫೋನ್‌ನಲ್ಲಿ ಸಿಮ್…
ಬೆಂಗಳೂರು: ರಾಜ್ಯದ ನಿವೃತ್ತ ಸರ್ಕಾರಿ ನೌಕರರ ದೀರ್ಘಕಾಲದ ಬೇಡಿಕೆಯಾಗಿದ್ದ ಪಿಂಚಣಿ ಪರಿವರ್ತಿತ ಮೊತ್ತದ (Commuted Pension) ಮರುಸ್ಥಾಪನೆ ಅವಧಿಯನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರವು ಅಧಿಕೃತವಾಗಿ ತಿರಸ್ಕರಿಸಿದೆ. ಈ ಕುರಿತು ಆರ್ಥಿಕ ಇಲಾಖೆಯು ಸ್ಪಷ್ಟನೆಯನ್ನು ನೀಡಿದ್ದು, ಪ್ರಸ್ತುತ ಜಾರಿಯಲ್ಲಿರುವ 15 ವರ್ಷಗಳ ಅವಧಿಯಲ್ಲೇ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ. ಹಿನ್ನೆಲೆ ಮತ್ತು ಬೇಡಿಕೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSR) ನಿಯಮ 376(14) ರ ಅನ್ವಯ, ನೌಕರರು ನಿವೃತ್ತಿಯ ಸಮಯದಲ್ಲಿ ತಮ್ಮ ಪಿಂಚಣಿಯ ಒಂದು ಭಾಗವನ್ನು ಇಡಿಗಂಟಾಗಿ ಪಡೆಯಬಹುದು. ಹೀಗೆ ಪಡೆದ ಮೊತ್ತವನ್ನು ಸರಿದೂಗಿಸಲು ಮಾಸಿಕ ಪಿಂಚಣಿಯಲ್ಲಿ ಕಡಿತ ಮಾಡಲಾಗುತ್ತದೆ. ಈ ಕಡಿತದ ಅವಧಿಯನ್ನು ಪ್ರಸ್ತುತ ಇರುವ 15 ವರ್ಷಗಳಿಂದ 12 ವರ್ಷಗಳಿಗೆ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಇಳಿಸಬೇಕೆಂದು ನಿವೃತ್ತ ನೌಕರರ ಸಂಘಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಸರಳ ಬಡ್ಡಿಯ ಲೆಕ್ಕಾಚಾರದ ಪ್ರಕಾರ 11-12 ವರ್ಷಗಳಲ್ಲೇ ಅಸಲು ಮತ್ತು ಬಡ್ಡಿ ವಸೂಲಿಯಾಗುತ್ತದೆ, ಆದ್ದರಿಂದ 15 ವರ್ಷಗಳ ವರೆಗೆ ಕಡಿತ…
ರಾಯಚೂರು : ಮನೆಯಲ್ಲಿದ್ದ ಫ್ರೀಡ್ಜ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿರುವ ಘಟನೆ ರಾಯಚೂರು ಜಿಲ್ಲೆಯ ಸಾಲಗುಂದಾ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ರಾಜನಾಯ್ಕ್ ಎಂಬುವರ ಮನೆಯಲ್ಲಿ ಫ್ರಿಡ್ಜ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿರುವ ಘಟನೆ ನಡೆದಿದೆ. ರಾಜನಾಯ್ಕ್ ಕುಟುಂಬ ನಿನ್ನೆ ಸಿರಗುಪ್ಪಗೆ ತೆರಳಿತ್ತು. ಈ ವೇಳೆ ಮನೆಯಲ್ಲಿ ಏಕಾಏಕಿ ಫ್ರಿಡ್ಜ್ ಸ್ಪೋಟಗೊಂಡಿದೆ. 2.5 ಲಕ್ಷ ರೂ. ನಗದು ಸೆರಿದಂತೆ ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಾಂಧರ್ಬಿಕ ಚಿತ್ರ














