Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ನಾವು ಸಾಮಾನ್ಯವಾಗಿ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಲು ಪೆಟ್ರೋಲ್ ಬಂಕ್‌ಗಳಿಗೆ ಹೋಗುತ್ತೇವೆ. ಆದರೆ ಇಂಧನದ ಹೊರತಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಉಚಿತ ಸೇವೆಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಪೆಟ್ರೋಲಿಯಂ ಕಂಪನಿಗಳ ನಿಯಮದಂತೆ ಪ್ರತಿಯೊಂದು ಪೆಟ್ರೋಲ್ ಬಂಕ್ ಈ ಕೆಳಗಿನ ಸೌಲಭ್ಯಗಳನ್ನು ಉಚಿತವಾಗಿ ನೀಡಲೇಬೇಕು. ಗ್ರಾಹಕರಿಗೆ ಲಭ್ಯವಿರುವ ಉಚಿತ ಸೇವೆಗಳು: ಉಚಿತ ಗಾಳಿ (Air Facility): ವಾಹನಗಳಿಗೆ ಗಾಳಿ ತುಂಬಿಸಲು ಯಾವುದೇ ಹಣ ನೀಡಬೇಕಿಲ್ಲ. ಇದಕ್ಕಾಗಿ ಪ್ರತ್ಯೇಕ ಎಲೆಕ್ಟ್ರಾನಿಕ್ ಯಂತ್ರ ಹಾಗೂ ಸಿಬ್ಬಂದಿಯನ್ನು ಬಂಕ್‌ಗಳು ಹೊಂದಿರಬೇಕು. ಕುಡಿಯುವ ನೀರು: ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲಿ ಶುದ್ಧವಾದ ಕುಡಿಯುವ ನೀರಿನ (RO ಅಥವಾ ವಾಟರ್ ಕೂಲರ್) ವ್ಯವಸ್ಥೆ ಇರುವುದು ಕಡ್ಡಾಯ. ಶೌಚಾಲಯ ಸೌಲಭ್ಯ: ಸಾರ್ವಜನಿಕರು ಇಲ್ಲಿನ ವಾಶ್‌ರೂಮ್‌ಗಳನ್ನು ಉಚಿತವಾಗಿ ಬಳಸಬಹುದು. ಇದಕ್ಕಾಗಿ ಯಾವುದೇ ಶುಲ್ಕ ವಿಧಿಸುವಂತಿಲ್ಲ. ತುರ್ತು ಕರೆ ಸೌಲಭ್ಯ: ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಪೆಟ್ರೋಲ್ ಬಂಕ್‌ನಿಂದ ನೀವು ಉಚಿತವಾಗಿ ಫೋನ್ ಕರೆ ಮಾಡಬಹುದು. ಪ್ರಥಮ ಚಿಕಿತ್ಸೆ (First Aid Box):…
ಬೆಂಗಳೂರು: ಗ್ರಾಮೀಣ ಭಾಗದ ರೈತರಲ್ಲಿ ‘ಪೋಡಿ’ ಎಂಬ ಪದ ಸದಾ ಚರ್ಚೆಯಲ್ಲಿರುತ್ತದೆ. ಆದರೆ ಅನೇಕರಿಗೆ ಪೋಡಿ ಎಂದರೆ ಏನು? ಅದನ್ನು ಏಕೆ ಮಾಡಿಸಬೇಕು ಎಂಬ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಜಮೀನಿನ ಹಕ್ಕು ಮತ್ತು ಗಡಿ ನಿರ್ಧಾರದಲ್ಲಿ ಪೋಡಿ ಪ್ರಕ್ರಿಯೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಸಂಪೂರ್ಣ ವಿವರ ಇಲ್ಲಿದೆ. ಪೋಡಿ ಅಂದರೇನು? ಸರಳವಾಗಿ ಹೇಳುವುದಾದರೆ, ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ವಿಭಜನೆ. ಒಂದು ಸರ್ವೆ ನಂಬರ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಮಾಲೀಕರಿದ್ದಾಗ (ಬಹು ಮಾಲೀಕತ್ವ), ಅದನ್ನು ಅವರವರ ಹಿಸ್ಸಾ (ಪಾಲು) ಪ್ರಕಾರ ಪ್ರತ್ಯೇಕಿಸಿ, ಹೊಸ ಸರ್ವೆ ನಂಬರ್ ಮತ್ತು ಪ್ರತ್ಯೇಕ ಪಹಣಿ (RTC) ನೀಡುವುದಕ್ಕೆ ‘ಪೋಡಿ’ ಎನ್ನಲಾಗುತ್ತದೆ. ಇಲ್ಲಿ ಕೇವಲ ಜಮೀನಿನ ಗಡಿಯನ್ನು (Boundary) ಮಾತ್ರ ಗುರುತಿಸಲಾಗುತ್ತದೆ. ಪೋಡಿಯ 4 ಪ್ರಮುಖ ವಿಧಗಳು: ತತ್ಕಾಲ್ ಪೋಡಿ: ತುರ್ತಾಗಿ ಅಥವಾ ಶೀಘ್ರವಾಗಿ ಮಾಡಿಸಿಕೊಳ್ಳುವ ಪ್ರಕ್ರಿಯೆ. ದರ್ಖಾಸ್ ಪೋಡಿ: ಸರ್ಕಾರದಿಂದ ಮಂಜೂರಾದ ಜಮೀನುಗಳಿಗೆ ಮಾಡುವ ಪೋಡಿ. ಅಲಿನೇಷನ್ ಪೋಡಿ: ಕೃಷಿ ಭೂಮಿಯನ್ನು ವಾಣಿಜ್ಯ…
ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಯಲ್ಲಿ ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಒಟ್ಟು 66 ಆರ್‌ಟಿಒ (RTO) ಕಚೇರಿಗಳಲ್ಲಿ ಇನ್ಮುಂದೆ ಜಿಯೋ-ಫೆನ್ಸಿಂಗ್ (Geo-fencing) ಆಧಾರಿತ ‘ಎಂ-ವಾಹನ್ ಫಿಟ್‌ನೆಸ್’ (mVahan Fitness) ಮೊಬೈಲ್ ಅಪ್ಲಿಕೇಶನ್ ಮೂಲಕವೇ ವಾಹನಗಳ ಕ್ಷಮತಾ ಪರೀಕ್ಷೆ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲಿ ಈ ನೂತನ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ಭರವಸೆ ಮೂಡಿಸಿದೆ. ನೂತನ ವ್ಯವಸ್ಥೆಯ ಮುಖ್ಯಾಂಶಗಳು: ಜಿಯೋ-ಫೆನ್ಸಿಂಗ್ ಕಡ್ಡಾಯ: ವಾಹನಗಳ ಫಿಟ್‌ನೆಸ್ ಪರೀಕ್ಷೆ ನಡೆಸಲು ಪ್ರತಿಯೊಂದು ಆರ್‌ಟಿಒ ಕಚೇರಿಯ ವ್ಯಾಪ್ತಿಯಲ್ಲಿ ನಿರ್ದಿಷ್ಟ ಪ್ರದೇಶವನ್ನು (Geo-fencing) ಗುರುತಿಸಲಾಗಿದೆ. ವಾಹನಗಳು ಭೌತಿಕವಾಗಿ ಆ ಜಾಗಕ್ಕೆ ಹಾಜರಾದಾಗ ಮಾತ್ರ ಆಪ್ ಕಾರ್ಯನಿರ್ವಹಿಸುತ್ತದೆ. 6 ಫೋಟೋಗಳ ಅಪ್‌ಲೋಡ್: ವಾಹನಗಳ ಪರೀಕ್ಷೆಯ ಸಂದರ್ಭದಲ್ಲಿ ವಾಹನದ ವಿವಿಧ ಆರು (6) ದಿಕ್ಕುಗಳ ಭಾವಚಿತ್ರಗಳನ್ನು ತೆಗೆದು ಆಪ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯ. ಇದರಿಂದ ವಾಹನ ಬರದೆ ಪ್ರಮಾಣಪತ್ರ ಪಡೆಯುವ ಅಕ್ರಮಗಳಿಗೆ…
ಭೋಪಾಲ್: ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದರಲ್ಲಿ, 90 ವರ್ಷದ ವೃದ್ಧೆಯೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಭೀಕರ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿವರ ಖಾಂಡ್ವಾ ಜಿಲ್ಲಾ ಕೇಂದ್ರದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಗ್ರಾಮವೊಂದರ ನಿವಾಸಿಯಾದ ವೃದ್ಧೆ, ಕಳೆದ ಗುರುವಾರ ಸಂಜೆ ತಮ್ಮ ಹೊಲದಲ್ಲಿ ಒಬ್ಬರೇ ಕೆಲಸ ಮಾಡುತ್ತಿದ್ದರು. ಈ ವೇಳೆ ಮುಖಕ್ಕೆ ಮುಸುಕು ಧರಿಸಿ ಬಂದ ನಾಲ್ವರು ದುರುಳರು ವೃದ್ಧೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ. ಘಟನೆಯ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆ, ಮರುದಿನ ಬೆಳಗ್ಗೆ ಬೇರೆ ಗ್ರಾಮದಲ್ಲಿದ್ದ ತಮ್ಮ ಮಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಮಗಳು ತಾಯಿಯನ್ನು ಖಾಂಡ್ವಾ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಪೊಲೀಸ್ ಕ್ರಮ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 70 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.…
ಬೆಂಗಳೂರು: ರಾಜ್ಯದಲ್ಲಿ ಭೂ ಪರಿವರ್ತನೆಯಾದ (Conversion) ಕೃಷಿಯೇತರ ಜಮೀನುಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಕಂದಾಯ ಇಲಾಖೆ ಮುಂದಾಗಿದೆ. ಇನ್ನು ಮುಂದೆ ಇ-ಖಾತಾ ಇಲ್ಲದಿದ್ದರೂ ಸಹ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾದ ಜಮೀನುಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ರಾಜಸ್ವ ಪಾವತಿ ಕಡ್ಡಾಯ: ಇ-ಖಾತಾ ಇಲ್ಲದಿದ್ದರೂ ನೋಂದಣಿಗೆ ಅವಕಾಶ ನೀಡಲಾಗುವುದು, ಆದರೆ ಅಂತಹ ಜಮೀನುಗಳಿಗೆ ಕೃಷಿಯೇತರ ಆಸ್ತಿ ಎಂದು ಪರಿಗಣಿಸಿ ನಿಯಮಾನುಸಾರ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಕಾವೇರಿ 2.0 ತಂತ್ರಾಂಶದಲ್ಲಿ ಬದಲಾವಣೆ: ಈ ಸೌಲಭ್ಯವನ್ನು ಒದಗಿಸಲು ‘ಕಾವೇರಿ 2.0’ ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಅಕ್ರಮ ನೋಂದಣಿಗೆ ಬ್ರೇಕ್: ಈ ಹಿಂದೆ ಕೃಷಿ ಜಮೀನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾದ ನಂತರವೂ ಪಹಣಿ (RTC) ಚಾಲ್ತಿಯಲ್ಲಿರುತ್ತಿತ್ತು. ಇದನ್ನು ದುರುಪಯೋಗಪಡಿಸಿಕೊಂಡು ನಡೆಯುತ್ತಿದ್ದ ಅಕ್ರಮ ವ್ಯವಹಾರಗಳನ್ನು ತಡೆಯಲು ‘ಭೂಮಿ’ ತಂತ್ರಾಂಶದಲ್ಲಿ ಅಂತಹ ಜಮೀನುಗಳನ್ನು ‘ಕೃಷಿಯೇತರ’ ಎಂದು ಫ್ಲಾಗ್ ಮಾಡಲಾಗುವುದು. ಈ ನಿರ್ಧಾರಕ್ಕೆ ಕಾರಣವೇನು? ಸಾಮಾನ್ಯವಾಗಿ ಕೃಷಿ ಜಮೀನು ಕೃಷಿಯೇತರ ಬಳಕೆಗೆ ಪರಿವರ್ತನೆಯಾದ ಬಳಿಕ ಇ-ಖಾತಾ…
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹೋಟೆಲ್ ಪ್ರಿಯರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದು ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ಹೋಟೆಲ್ ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸಲು ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸಿದೆ. ಸಿಲಿಂಡರ್ ದರ ಏರಿಕೆಯ ಬರೆ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 115 ರೂ. ಹೆಚ್ಚಳವಾಗಿದೆ. ಇದರ ಜೊತೆಗೆ ಈ ಹಿಂದೆ ನೀಡಲಾಗುತ್ತಿದ್ದ 150 ರೂ.ಗಳ ರಿಯಾಯಿತಿಯನ್ನು ಮಾರ್ಚ್ 1ರಿಂದ ರದ್ದುಗೊಳಿಸಲಾಗಿದೆ. ಇದರಿಂದಾಗಿ ಹೋಟೆಲ್ ಉದ್ಯಮಿಗಳಿಗೆ ಪ್ರತಿ ಸಿಲಿಂಡರ್ ಮೇಲೆ ಒಟ್ಟು 265 ರೂ.ಗಳ ಹೆಚ್ಚುವರಿ ಹೊರೆ ಬೀಳುತ್ತಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯೂ ಕೂಡ 60 ರೂ. ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಕೇವಲ ಗ್ಯಾಸ್ ಮಾತ್ರವಲ್ಲದೆ, ಅಡುಗೆಗೆ ಬಳಸುವ ಇತರೆ ಮೂಲ ಪದಾರ್ಥಗಳ ಬೆಲೆಯೂ ಏರಿಕೆಯಾಗಿದೆ: ಅಡುಗೆ ಎಣ್ಣೆ: ಪ್ರತಿ ಕೆಜಿಗೆ 15 ರಿಂದ 20…
ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಲಾದ ಕನಿಷ್ಠ ವಯೋಮಿತಿಯನ್ನು ಸಡಿಲಿಸುವಂತೆ ಕೋರಿ ಪೋಷಕರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮದಂತೆ, 2026-27ನೇ ಸಾಲಿನಲ್ಲಿ ಒಂದನೇ ತರಗತಿಗೆ ಸೇರುವ ಮಗುವು ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ಪೂರೈಸಿರಬೇಕು. 2020ರ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನ್ವಯ ಈ ಕೆಳಗಿನಂತೆ ವಯೋಮಿತಿ ನಿಗದಿಯಾಗಿದೆ: ಎಲ್‌ಕೆಜಿ: 4 ವರ್ಷ ಯುಕೆಜಿ: 5 ವರ್ಷ 1ನೇ ತರಗತಿ: 6 ವರ್ಷ ಲಕ್ಷಾಂತರ ಮಕ್ಕಳ ಭವಿಷ್ಯ ಅತಂತ್ರ: ಸುಮಾರು 2.30 ಲಕ್ಷಕ್ಕೂ ಹೆಚ್ಚು ಮಕ್ಕಳು ಕೇವಲ ಕೆಲವೇ ದಿನಗಳ ಅಂತರದಲ್ಲಿ 6 ವರ್ಷ ಪೂರೈಸಲು ಸಾಧ್ಯವಾಗದೆ ಪ್ರವೇಶದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ವರ್ಷ ವ್ಯರ್ಥವಾಗುವ ಆತಂಕದಲ್ಲಿ ಪೋಷಕರಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಪೋಷಕರು ಮನವಿ ಮಾಡಿದ್ದಾರೆ. ಹಿಂದಿನ ವರ್ಷದ…
ಜೆರುಸಲೆಮ್: ಇರಾನ್ ನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರಾನ್‌ನ ನೂತನ ‘ಸುಪ್ರೀಂ ಲೀಡರ್’ (ಸರ್ವೋಚ್ಚ ನಾಯಕ) ಎಂದು ಸೋಮವಾರ ಅಧಿಕೃತವಾಗಿ ಘೋಷಿಸಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆಯೇ ಇರಾನ್ ಈ ನಿರ್ಧಾರ ಕೈಗೊಂಡಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 88 ಧರ್ಮಗುರುಗಳನ್ನೊಳಗೊಂಡ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಸಭೆ ಸೇರಿ ಮೊಜ್ತಾಬಾ ಅವರನ್ನು ಇರಾನ್‌ನ ಮೂರನೇ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿದೆ. ಕಳೆದ ವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲಿ ಖಮೇನಿ ಅವರು ಮೃತಪಟ್ಟಿದ್ದರು. ಅವರ ಉತ್ತರಾಧಿಕಾರಿಯಾಗಿ ಈಗ ಮೊಜ್ತಾಬಾ ಅಧಿಕಾರ ವಹಿಸಿಕೊಂಡಿದ್ದಾರೆ. ಮೊಜ್ತಾಬಾ ಅವರು ಇರಾನ್‌ನ ಭದ್ರತಾ ಪಡೆಗಳು ಮತ್ತು ಪ್ರಬಲ ವ್ಯಾಪಾರ ಜಾಲಗಳ ಮೇಲೆ ಮೊದಲಿನಿಂದಲೂ ಹೆಚ್ಚಿನ ಹಿಡಿತ ಹೊಂದಿದ್ದಾರೆ. ಮೊಜ್ತಾಬಾ ಅವರ ಈ ನೇಮಕವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. “ಇರಾನ್‌ನ ನಾಯಕನ ಆಯ್ಕೆಯಲ್ಲಿ ವಾಷಿಂಗ್ಟನ್‌ನ ಸಹಮತವೂ ಇರಬೇಕು. ನಮ್ಮ…
ಬೆಂಗಳೂರು: ಮಾರ್ಚ್ ತಿಂಗಳ ಆರಂಭದಲ್ಲೇ ರಾಜ್ಯದ ಜನತೆಗೆ ಸೂರ್ಯನ ಬಿಸಿ ಮುಟ್ಟುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಹಲವೆಡೆ ಸಾಮಾನ್ಯಕ್ಕಿಂತ 4-5 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಶನಿವಾರದಂದು 39.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಶೀಘ್ರದಲ್ಲೇ ಇದು 45 ಡಿಗ್ರಿ ತಲುಪುವ ಆತಂಕವಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ದಾವಣಗೆರೆ, ಬೀದರ್ ಮತ್ತು ಕಾರವಾರ ಭಾಗಗಳಲ್ಲಿ ಸಾಮಾನ್ಯಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗಿದೆ. ಮುಂದಿನ 5 ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬಿಸಿಲಿನ ತೀವ್ರತೆಗೆ ಕಾರಣಗಳೇನು? ಜಾಗತಿಕ ತಾಪಮಾನ ಏರಿಕೆ, ತೇವಾಂಶದ ಕೊರತೆ, ಮೋಡಗಳಿಲ್ಲದ ಶುಭ್ರ ಆಕಾಶ ಮತ್ತು ‘ಲಾ ನಿನಾ’ ಪ್ರಭಾವ ಕಡಿಮೆಯಾಗಿ ಒಣಗಾಳಿ ಬೀಸುತ್ತಿರುವುದು ಈ ದಿಢೀರ್ ತಾಪಮಾನ ಏರಿಕೆಗೆ ಮುಖ್ಯ ಕಾರಣಗಳಾಗಿವೆ. ಉಂಟಾಗಬಹುದಾದ ಪರಿಣಾಮಗಳು: ಕೃಷಿ: ಕೃಷಿ ಉತ್ಪಾದನೆಯಲ್ಲಿ ಕುಸಿತ ಉಂಟಾಗುವ ಭೀತಿ. ಸಂಪನ್ಮೂಲ: ವಿದ್ಯುತ್…
ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಅಧೀನ ಸಂಸ್ಥೆಗಳ ಸೇವೆ ಮತ್ತು ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು / ಮನವಿಗಳನ್ನು ತ್ವರಿತ/ಗುಣಾತ್ಮಕ ವಿಲೇವಾರಿಗೆ ಕಾಲಮಿತಿಯನ್ನು ನಿಗಧಿಪಡಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ? ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ ಸರ್ಕಾರದ ಆದೇಶದಲ್ಲಿ, ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ, ಏಕೀಕೃತ ಸಾರ್ವಜನಿಕ ದೂರು ನಿವಾರಣಾ ತಂತ್ರಾಂಶ (Integrated Public Grievances Redressal System) ಅನುಷ್ಠಾನಗೊಳಿಸಲಾಗಿದ್ದು, ಸದರಿ ಆದೇಶದಲ್ಲಿ ಸಾರ್ವಜನಿಕ ಕುಂದುಕೊರತೆಗಳಿಗೆ ಸಂಬಂಧಿಸಿದಂತ ಸ್ವೀಕೃತವಾಗುವ ಮನವಿಗಳನ್ನು ವಿಲೇವಾರಿಗೊಳಿಸಲು ಮೂರು ಹಂತದಲ್ಲಿ ಅನುಷ್ಠಾನಾಧಿಕಾರಿಗಳನ್ನು ಈ. ಕೆಳಕಂಡಂತೆ ನೇಮಿಸಲಾಗಿದೆ. ಸದರಿ ಅನುಷ್ಠಾನಾಧಿಕಾರಿಗಳು ಸರ್ಕಾರವು ನಿಗಧಿಪಡಿಸಿರುವ ಅವಧಿಯೊಳಗೆ ದೂರು/ಮನವಿಗಳನ್ನು ವಿಲೇವಾರಿಗೊಳಿಸಲು ಆದೇಶಿಸಲಾಗಿದೆ. Last Mile Functionaries- LMF (Caseworker) 07 ದಿನಗಳು Level-2 Officer – L2 (Gazetted Officer) 07 ದಿನಗಳು Level-1 Officer- L3 (Group-A Officer) 07 ದಿನಗಳು ಮೇಲೆ ಓದಲಾದ…














