Subscribe to Updates
Get the latest creative news from FooBar about art, design and business.
Author: kannadanewsnow57
ಮಂಡ್ಯ : ರಾಜ್ಯದಲ್ಲಿ ಮತ್ತೊಂದು ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪಂಡಿತಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಅಪಘಾತ ಸಂಭವಿಸಿದ್ದು, ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಂಜನಹಳ್ಳಿ ನಾಗಸ್ವಾಮಿ ಹಾಗೂ ದೊಡ್ಡಮಾದಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಕೆಎಸ್ ಆರ್ ಟಿಸಿ ಬಸ್ ತೆರಳುತ್ತಿತ್ತು. ಈ ವೇಳೆ ಬೈಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಾಹ ನೋದಂಣಿಗಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್ ಹಾಕಲಾಗಿದೆ. ಇದರ ಬದಲಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡೋದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸೋ ನಿಮಗೆ ವಿವಾಹ ನೋಂದಣಿ ಮಾಜಿಸಬೇಕು ಅಂದ್ರೇ ಜಸ್ಟ್ ಕುಳಿತಲ್ಲೇ ಆನ್ ಲೈನ್ ಮೂಲಕ ನೋಂದಣಿ ಮಾಡಬಹುದಾಗಿದೆ. ಅದು ಹೇಗೆ ಅಂತ ಮುಂದೆ ಓದಿ. ಮದುವೆಗಳು ನಿಶ್ಚಯವಾಗಲಿ ಸ್ವರ್ಗದಲ್ಲಿ, ನೋಂದಣಿಯಾಗಲಿ ಕಾವೇರಿ 2.0ರಲ್ಲಿ, ನಿಮ್ಮ ಮನೆಯಲ್ಲೇ ನೆಮ್ಮದಿ ಗ್ಯಾರಂಟಿ ಎಂಬುದಾಗಿ ರಾಜ್ಯ ಸರ್ಕಾರ ಹೇಳಿದೆ. ಜೊತೆಗೆ ಕಾವೇರಿ 2.0 ತಂತ್ರಾಂಶದಲ್ಲಿ ಸುಲಭ, ಸರಳ, ಸುಲಲಿತವಾಗಿ ವಿವಾಹ ನೋಂದಣಿ ಮಾಡಿಕೊಳ್ಳಿ ಎಂದು ಹೇಳಿದೆ. ಆನ್ ಲೈನ್ ನಲ್ಲೇ ವಿವಾಹ ನೋಂದಣಿಗಾಗಿ ಈ ಹಂತ ಅನುಸರಿಸಿ https://kaveri.karnataka.gov.in ಗೆ ಭೇಟಿ ನೀಡಿ. ಬಳಕೆದಾರರ ಖಾತೆಯನ್ನು ತೆರೆಯಿರಿ. ಕಾವೇರಿ ಪೋರ್ಟಲ್ ಗೆ ಲಾಗಿನ್ ಮಾಡಿ, ವಿವಾಹ ನೋಂದಣಿ ಸೇವೆ ಆಯ್ಕೆ ಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಿ. ಗಂಡ, ಹೆಂಡತಿ ಮತ್ತು ಮೂರು ಸಾಕ್ಷಿದಾರರ ಆಧಾರ್ ದೃಢೀಕರಣ ಪ್ರಕ್ರಿಯೆ…
ನವದೆಹಲಿ : ಮಹಿಳೆಯ ದೇಹ ರಚನೆ ಬಗ್ಗೆ ಪ್ರತಿಕ್ರಿಯೆಸುವುದು ಲೈಂಗಿಕ ಬಣ್ಣದ ಟೀಕೆಯಾಗಿದೆ, ಇದು ಲೈಂಗಿಕ ಕಿರುಕುಳದ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸಂಸ್ಥೆಯೊಂದರ ಮಹಿಳಾ ಸಿಬ್ಬಂದಿಯೊಬ್ಬರು ಸಲ್ಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ (ಕೆಎಸ್‌ಇಬಿ) ಮಾಜಿ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎ. ಬದರುದ್ದೀನ್ ಅವರು ಈ ತೀರ್ಪು ನೀಡಿದ್ದಾರೆ. ಆರೋಪಿಗಳು 2013 ರಿಂದ ತನ್ನ ವಿರುದ್ಧ ಅಸಭ್ಯ ಪದಗಳನ್ನು ಬಳಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಮತ್ತು ನಂತರ, 2016-17 ರ ನಡುವೆ ಆಕ್ಷೇಪಾರ್ಹ ಸಂದೇಶಗಳು ಮತ್ತು ಧ್ವನಿ ಕರೆಗಳನ್ನು ಕಳುಹಿಸಲು ಪ್ರಾರಂಭಿಸಿದರು. ಆತನ ವಿರುದ್ಧ ಕೆಎಸ್‌ಇಬಿ ಮತ್ತು ಪೊಲೀಸರಿಗೆ ದೂರು ನೀಡಿದರೂ ಆತ ಆಕೆಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದ. ಆಕೆಯ ದೂರುಗಳ ನಂತರ, ಆರೋಪಿಯ ವಿರುದ್ಧ ಐಪಿಸಿಯ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಮತ್ತು 509 (ಮಹಿಳೆಗೆ ನಮ್ರತೆಯನ್ನು ಅವಮಾನಿಸುವುದು) ಮತ್ತು ಸೆಕ್ಷನ್ 120…
ಬೆಂಗಳೂರು : ನೋಂದಾಯಿತ ಕಾರ್ಮಿಕರ ಮೊದಲ ಮದುವೆ ಅಥವಾ ಕಾರ್ಮಿಕರ ಮಕ್ಕಳ ಮದುವೆಗೆ ಮಂಡಳಿಯಿಂದ ಸಹಾಯಧನ ಪಡೆಯಬಹುದು. ಫಲಾನುಭವಿಯು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಸಹಾಯಧನ ಪಡೆಯಲು ಹೊಂದಿರ ಬೇಕಾದ ಅರ್ಹತೆಗಳು * ನೋಂದಣಿ ದಿನಾಂಕದಿಂದ ಮದುವೆ ದಿನಾಂಕದವರೆಗೆ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವ ಪೂರೈಸಿರಬೇಕು * ಕಾರ್ಮಿಕರ ಕುಟುಂಬ ಎರಡು ಬಾರಿ ಮಾತ್ರ ಸಹಾಯಧನ ಪಡೆಯಬಹುದು * ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ತಲುಪಿರಬೇಕು ಗಮನಿಸಿ ಮದುವೆ ದಿನಾಂಕದಿಂದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ಈ ಸೌಲಭ್ಯವನ್ನು ಪಡೆಯಲು ಸಾಧ್ಯ
ನವದೆಹಲಿ : ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಗಡ್ಕರಿ ಅವರು ನಗದು ರಹಿತ ಚಿಕಿತ್ಸೆಗಾಗಿ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಇದರ ಪ್ರಕಾರ ಅಪಘಾತ ಸಂಭವಿಸಿದ ತಕ್ಷಣ 24 ಗಂಟೆಯೊಳಗೆ ಪೊಲೀಸರಿಗೆ ಮಾಹಿತಿ ಬಂದರೆ 7 ದಿನ ಅಥವಾ ಗರಿಷ್ಠ 1.5 ಲಕ್ಷ ರೂ.ವರೆಗೆ ರೋಗಿಯ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅದೇ ವೇಳೆ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತರಿಗೆ ಚಿಕಿತ್ಸೆಗಾಗಿ 2 ಲಕ್ಷ ರೂ. ಈ ಸಮಯದಲ್ಲಿ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 2024 ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡವರ ಡೇಟಾವನ್ನು ಹಂಚಿಕೊಂಡಿದ್ದಾರೆ. ಕಳೆದ 2024 ರಲ್ಲಿ ಭಾರತದಲ್ಲಿ 1.80 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. https://twitter.com/i/status/1876824478304657864 ಹೆಲ್ಮೆಟ್ ಧರಿಸದ ಕಾರಣ ಎಷ್ಟು ಸಾವು? ಸಭೆಯಲ್ಲಿ ರಸ್ತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು…
ಚಿಕ್ಕಮಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಕ್ಸಲರಿಗೆ ಶರಣಾಗತಿ ಆಗುವಂತೆ ಸೂಚಿಸಿದ ಬೆನ್ನಲ್ಲೆ ಕರ್ನಾಟಕದ ನಾಲ್ವರು ಹಾಗೂ ಕೇರಳ, ತಮಿಳುನಾಡಿನ ತಲಾ ಒಬ್ಬೊಬ್ಬರಂತೆ ಒಟ್ಟು ಆರು ಜನ ನಕ್ಸಲರು ಕೆಲವೇ ಕ್ಷಣಗಳಲ್ಲಿ ಚಿಕ್ಕಮಗಳೂರು ಜಿಲ್ಲಾ ಆಡಳಿತದ ಮುಂದೆ ಶರಣಾಗಲಿದ್ದಾರೆ. ಹೌದು ಕರ್ನಾಟಕದ ನಾಲ್ವರು ನಕ್ಸಲರು ಸೇರಿದಂತೆ ಕೆಲವೇ ಕ್ಷಣಗಳಲ್ಲಿ 6 ನಕ್ಸಲರು ಶರಣಾಗತಿ ಆಗಲಿದ್ದಾರೆ. ಕೇರಳದ ದೀಪ, ತಮಿಳುನಾಡಿನ ವಸಂತ ಅಲಿಯಾಸ್ ರಮೇಶ, ರಾಯಚೂರು ಮೂಲದ ಜಯಣ್ಣ ಅಲಿಯಾಸ್ ಮಾರಪ್ಪ ಅರೋಲಿ, ಮೂಲತಃ ಚಿಕ್ಕಮಂಗಳೂರು ಜಿಲ್ಲೆಯ ಮುಂಡಗರು ಲತಾ, ವನಜಾಕ್ಷಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಇಂದು ಶರಣಾಗತಿ ಅಗಲಿದ್ದಾರೆ. ಆರು ನಕ್ಸಲರ ಜೊತೆ ಶಾಂತಿಗಾಗಿ ನಾಗರೀಕ ವೇದಿಕೆಯಿಂದ ಮಾತುಕತೆ ನಡೆಸಲಾಗಿದೆ. ಕಳೆದ ವರ್ಷ ಚಿಕ್ಕಮಂಗಳೂರು ಭಾಗದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿತ್ತು.ಈ ಹಿನ್ನೆಲೆಯಲ್ಲಿ, ANF ಚಿಕ್ಕಮಂಗಳೂರು ಸೇರಿದಂತೆ ಇತರೆ ಭಾಗಗಳಲ್ಲಿ ಕಾರ್ಯಚರಣೆ ನಡೆಸಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಿತ್ತು. ಬಳಿಕ ನಕ್ಸಲರಿಗೆ ಶರಣಾಗಲು ಸೂಚನೆ ನೀಡಲಾಗಿತ್ತು.…
ಗಂಡು ಮಕ್ಕಳ ಪೋಷಕರಿದ್ದರೆ ನೆನಪಿಟ್ಟುಕೊಳ್ಳಿ ಯಾವ ಕಾರಣಕ್ಕೂ ಮೂಲಾ ನಕ್ಷತ್ರದ ಹೆಣ್ಣು ಮಕ್ಕಳನ್ನು ಕಡೆಗಣಿಸಬೇಡಿ, ದೂಷಣೆ ಮಾಡಬೇಡಿ. ಕೇವಲ ಜನನ ಕಾಲದ ನಕ್ಷತ್ರದ ಆಧಾರದಲ್ಲಿ ಇಡೀ ಜೀವನವನ್ನು ಹಾಗೂ ಅದೃಷ್ಟವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆ ನಕ್ಷತ್ರದ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ದೋಷ ಬರಬಹುದೇ ಹೊರತು ಇಡೀ ಜೀವನ ನಿರ್ಧರಿಸುವಂಥ ಪ್ರಭಾವ ಬೀರುವುದಿಲ್ಲ. ವಿದ್ಯೆಗೆ ಅಭಿಮಾನಿ ದೇವತೆಯಾದ ಸರಸ್ವತಿಯ ನಕ್ಷತ್ರವೇ ಮೂಲನಕ್ಷತ್ರ ವಾಗಿದೆ. ಈ ನಕ್ಷತ್ರದವರಿಗೆ ಅತ್ಯಂತ ಪ್ರಬಲವಾಗಿ ಗುರುವಿನ ಅನುಗ್ರಹ ಇರುತ್ತದೆ. ವಿಶೇಷವಾದ ಜ್ಞಾನ ಸಂಪತ್ತು ಇವರಲ್ಲಿ ಇರುತ್ತದೆ. ಗ್ರಹ ಮೈತ್ರಿ,ಮತ್ತು ಮೂಲಾ ನಕ್ಷತ್ರ ದೋಷಕ್ಕೆ ಇರುವ ಅಪವಾದ; ಶಾಸ್ತ್ರೋಕ್ತವಾದ ಪರಿಹಾರಗಳು ಇವುಗಳಿಂದಲೇ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ನಿವಾರಣೆ ಸುಲಭಸಾಧ್ಯ ಮೂಲಾ ನಕ್ಷತ್ರದ ಫಲ ಹೇಗಿರುತ್ತದೆ ಅಂದರೆ, ಆಷಾಢ, ಭಾದ್ರಪದ ಹಾಗೂ ಆಶ್ವೀಜ ಮಾಸದಲ್ಲಿ, ವೃಷಭ, ಸಿಂಹ, ವೃಶ್ಚಿಕ ಅಥವಾ ಕುಂಭ ಲಗ್ನದಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ಯಾವ ದೋಷವೂ ಇರುವುದಿಲ್ಲ. ಇಂಥ ಹೆಣ್ಣುಮಕ್ಕಳನ್ನು ಮದುವೆ ಆದರೆ ಯಾವುದೇ ತೊಂದರೆಗಳಿಲ್ಲ.…
ಬೆಂಗಳೂರು : ರಾಜ್ಯದಲ್ಲಿ HMPV ವೈರಸ್ ಟೆಸ್ಟ್ ಕಡ್ಡಾಯವಲ್ಲ ಎಂದು ಆರೋಗ್ಯ ಇಲಾಖೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಮಹತ್ವದ ಸೂಚನೆ ನೀಡಿದೆ. ಹೌದು, ಆರೋಗ್ಯ ಇಲಾಖೆಯು ಮಹತ್ವದ ಸೂಚನೆಯೊಂದನ್ನು ನೀಡಿದ್ದು, ಆಸ್ಪತ್ರೆಗೆ ಹೋಗುವವರಿಗೆ HMPV ಟೆಸ್ಟ್ ಕಡ್ಡಾಯವಲ್ಲ. ಖಾಸಗಿ ಅಸ್ಪತ್ರೆ ಹಾಗೂ ಲ್ಯಾಬ್ ಗಳ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಜ್ವರ, ಕೆಮ್ಮು ಅಂತಾ ಹೋದವರಿಗೆ HMPV ವೈರಸ್ ಟೆಸ್ಟ್ ಕಡ್ಡಾಯವಲ್ಲ. ಈ ಬಗ್ಗೆ ಇಂದು ಸಂಜೆಯೊಳಗೆ ಪ್ರಕರಣಣೆ ಹೊರಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. HMPV ವೈರಸ್ ಟೆಸ್ಟ್ ಗೆ ರಾಜ್ಯದ ಆಸ್ಪತ್ರೆಗಳಲ್ಲಿ 10 ರಿಂದ 12 ಸಾವಿರ ರೂ. ಇದೆ. ಹೀಗಾಗಿ ಟೆಸ್ಟ್ ಮಾಡಿಸುವುದು ಕಡ್ಡಾಯವಲ್ಲ. ಸಾಮಾನ್ಯವಾಗಿ ವೈರಸ್ ಕಾಣಿಸಿಕೊಂಡರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಮಾಡಲಾಗುವುದಿಲ್ಲ. ಈ ವೈರಸ್ ಅಪಾಯಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ಎಂದರೇನು? ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ವೈರಸ್ ಆಗಿದ್ದು, ಇದು ಮುಖ್ಯವಾಗಿ ಚಳಿಗಾಲದಲ್ಲಿ ಹರಡುತ್ತದೆ. ಈ ವೈರಸ್…
ಗದಗ : ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಕೊಡುವ ಪೋಷಕರೇ ಎಚ್ಚರ, ಅಪ್ರಾಪ್ತ ಮಗನಿಗೆ ಚಾಲನೆ ಮಾಡಲು ವಾಹನ ನೀಡಿದ ಮಾಲೀಕರಿಗೆ ಕೋರ್ಟ್ 25,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಹೌದು, ಸಂಚಾರ ಠಾಣೆ ಪೋಲೀಸರು ವಾಹನಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ವಾಹನ ನಿಲ್ಲಿಸಿ ತಪಾಸಣೆಗೆ ಒಳಪಡಿಸಿದಾಗ ಚಾಲಕ ಅಪ್ರಾಪ್ತನಾಗಿರುವುದು ಪತ್ತೆಯಾಗಿದ್ದು, ಕೂಡಲೇ. ಬಾಲಕ ಮತ್ತು ವಾಹನ ಮಾಲೀಕರ ವಿರುದ್ಧ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಬಾಲಕನಿಗೆ ಕಾರು ಚಾಲನೆಗೆ ನೀಡಿದ ವ್ಯಕ್ತಿಗೆ ಗೆ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಲಯವು ಕಲಂ 199A ಅಡಿಯಲ್ಲಿ ವಾಹನ ಮಾಲೀಕರಿಗೆ 25,000 ದಂಡ ವಿಧಿಸುತ್ತದೆ ಅದಕ್ಕೆ ಇಂದಿನ ಪ್ರಕರಣ ಉದಾರಣೆಯಾಗಿದೆ ಆದ್ದರಿಂದ ಪಾಲಕರು ಅಥವಾ ವಾಹನ ಮಾಲೀಕರು 18 ವರ್ಷದ ಮಕ್ಕಳಿಗೆ ವಾಹನವನ್ನು ನೀಡಬೇಡಿ.
ಬೆಂಗಳೂರು : ಜನವರಿ 10ರಂದು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾತ್ರಿ ಆಕಾಶ ವೀಕ್ಷಣೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಟೆಲಿಸ್ಕೋಪಿಕ್ ಅವಲೋಕನಗಳು, ಬೈನಾಕ್ಯುಲರ್ ಆಧಾರಿತ ಅಧ್ಯಯನಗಳು ಹೀಗೆ ಹಲವು ಅಚ್ಚರಿ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ನಿಮ್ಮಲ್ಲಿದ್ದರೆ ಈ ಕೂಡಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಜನವರಿ 10, 2025 ರಾತ್ರಿ 10 ರಿಂದ ಬೆಳಗ್ಗೆ 4.30 ರವರೆಗೆ ಆಕಾಶ ವೀಕ್ಷಣೆ ಇರಲಿದ್ದು, ಪ್ರವೇಶ ಶುಲ್ಕ ತಲಾ ₹750 ಇದ್ದು, 13 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಅವಕಾಶ ನೀಡಲಾಗಿದೆ. ನೋಂದಣಿಗಾಗಿ ನಿಮ್ಮ ವಿವರಗಳನ್ನು info@taralaya.org ಕಳುಹಿಸಿ (ಭಾಗವಹಿಸುವ ಪ್ರತಿಯೊಬ್ಬರ ವಿವರವೂ ಇರಲಿ).














