Author: kannadanewsnow57

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮುಂದೆ ಮೋಸ್ಟ್ ವಾಂಟೆಂಡ್ 6 ನಕ್ಸಲರು ಶರಣಾಗತರಾಗಿದ್ದರು. ಹೀಗೆ ಶರಣಾದಂತ ಆರು ನಕ್ಸಲರಿಗೆ ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯಡಿಯಲ್ಲಿ ತಲಾ 3 ಲಕ್ಷ ಸಹಾಯಧನವನ್ನು ಬಿಡುಗಡೆ ಮಾಡಿ ಆದೇಶಿಸಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮಂಜೂರಾತಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯಡಿಯಲ್ಲಿ ನಕ್ಸಲ್ ಚಟುವಟಿಕೆಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಶರಣಾಗತರಾದವರನ್ನು ಸರ್ಕಾರದಿಂದ ಘೋಷಣೆಯಾಗಿರುವ ಸೌಲಭ್ಯಗಳನ್ನು ಒದಗಿಸಲು ಉಲ್ಲೇಖ(1) ರ ಸರ್ಕಾರದ ಆದೇಶದಲ್ಲಿ ನಿರ್ದೇಶಿಸಲಾಗಿರುತ್ತದೆ ಎಂದಿದ್ದಾರೆ. ದಿನಾಂಕ:6-01-2025 ರಂದು ರಾಜ್ಯದ ಭೂಗತ ನಕ್ಸಲರಾದ 1)ಮುಂಡಗಾರು ಲತಾ 2) ಸುಂದರಿ ಕುತ್ತಲೂರು 3)ವನಜಾಕ್ಷಿ ಬಾಳೆಹೊಳೆ 4) ಮಾರೆಪ್ಪ ಆರೋಟಿ 5) ಕೆ.ವಸಂತ 6) ಟಿ.ಎನ್.ಜಿಷಾ ಇವರುಗಳು ಎಡಪಂಥೀಯ ತೀವುಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯ ರಾಜ್ಯ ಮಟ್ಟದ ನಕ್ಸಲ್ ಶರಣಾಗತ ಸಮಿತಿಯ ಮುಂದೆ ಮುಖ್ಯವಾಹಿನಿಗೆ ಶರಣಾಗತರಾಗಿರುತ್ತಾರೆ. ಅದರಂತೆ ಇವರುಗಳ ಶರಣಾಗತ ಅರ್ಜಿಯನ್ನು ಅನುಮೋದಿಸಿ ಅಂಗೀಕರಿಸಲು ಹಾಗೂ…

Read More

ಬೆಂಗಳೂರು: ರಾಜ್ಯದ ಅರ್ಹ ಮತದಾರರಿಗೆ ಗುಡ್ ನ್ಯೂಸ್ ಎನ್ನುವಂತೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೆ ಅವಕಾಶ ನೀಡಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೇ ಅಥವಾ ಹೊಸದಾಗಿ ಸೇರ್ಪಡೆ ಮಾಡುವುದಿದ್ದರೇ ಈ ದಿನಾಂಕಗಳಂದು ಸೇರ್ಪಡೆಗೆ ಅವಕಾಶವನ್ನು ನೀಡಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಮಾಹಿತಿ ಹಂಚಿಕೊಂಡಿದ್ದು, ಜನವರಿ 1 ಅನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮೃತಪಟ್ಟವರ ಹೆಸರು ತೆಗೆಯುವುದು, ವರ್ಗಾವಣೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಏಪ್ರಿಲ್‌ 1, ಜುಲೈ 1, ಅಕ್ಟೋಬರ್‌ 1 ರಂದು ನಿರ್ದಿಷ್ಟ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು. https://twitter.com/KarnatakaVarthe/status/1876920868028445081?ref_src=twsrc%5Etfw%7Ctwcamp%5Etweetembed%7Ctwterm%5E1876920868028445081%7Ctwgr%5E6f7252ca1365f31ed4677bae74981e1f47c55872%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fgood-news-for-voters-names-included-in-voters-list-corrections-allowed-again%2F ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಅಂತಿಮ…

Read More

ಬೆಂಗಳೂರು: ಸಾರಿಗೆ ಬಸ್ ದರವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಶಾಕ್ ನೀಡಲಾಗಿತ್ತು. ಈ ಬೆನ್ನಲ್ಲೇ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಬಿಎಂಟಿಸಿ ದೈನಿಕ ಹಾಗೂ ಮಾಸಿಕ ಬಸ್ ಪಾಸ್ ದರ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ನೂತನ ಹೆಚ್ಚಳ ದರ ಇಂದಿನಿಂದಲೇ ಜಾರಿಗೆ ಬರಲಿವೆ. ಬಿಎಂಟಿಸಿಯಿಂದ ಆದೇಶ ಹೊರಡಿಸಲಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿವಿಧ ವರ್ಗದ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿತರಣೆ ಮಾಡುತ್ತಿದೆ. ಪ್ರಯಾಣಿಕರ ಬಸ್ ಟಿಕೆಟ್ ದರ ಪರಿಷ್ಕರಣೆಯಾದ ಹಿನ್ನಲೆಯಲ್ಲಿ ಸಂಸ್ಥೆಯ ಆರ್ಥಿ ದೃಷ್ಠಿಯಿಂದ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರಗಳನ್ನು ಹೆಚ್ಚಳ ಮಾಡುತ್ತಿದೆ. ದಿನಾಂಕ 09-01-2025ರಿಂದ ನೂತನ ಹೆಚ್ಚಳ ದರವು ಜಾರಿಯಾಗಲಿದೆ ಎಂದಿದೆ. ಹೀಗಿದೆ ಪಾಸ್ ದರ ಹೆಚ್ಚಳದ ವಿವರ ಸಾಮಾನ್ಯ ದೈನಿಕ ಪಾಸು ರೂ.70 ಇದ್ದದ್ದನ್ನು ರೂ.80ಕ್ಕೆ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಸಾಪ್ತಾಹಿಕ ವಾರದ ಪಾಸು ದರ ರೂ.300ರಿಂದ ರೂ.350ಕ್ಕೆ ಹೆಚ್ಚಳ ಮಾಡಲಾಗಿದೆ.…

Read More

ಅನಿಲ ಸಂಪರ್ಕ ಸೇವೆ ಪಡೆಯುವ ಎಲ್ಲಾ ಬಳಕೆದಾರರು (ಗ್ರಾಹಕರು) ತಮ್ಮ ದಿನನಿತ್ಯ ಬಳಸುವ ಗ್ಯಾಸ್ ಸಂಪರ್ಕದ ಬಗ್ಗೆ ಎಲ್ಲಾ ನಿಯಮ ತಿಳಿದುಕೊಂಡು ನಿಯಮಾನುಸಾರ ಬುಕ್ ಮಾಡಿಕೊಂಡು ಖರೀದಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳ ಉಪನಿರ್ದೇಶಕರಾದ ಸಕೀನಾ ಅವರು ತಿಳಿಸಿದ್ದಾರೆ. ಗ್ರಾಹಕರು ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಯವರಿಂದ ಮುದ್ರಿತ ರಶೀದಿ ಪಡೆಯಬೇಕು. ಮುದ್ರಿತವಾದ ರಶೀದಿಯಲ್ಲಿರುವ ಮೊತ್ತವನ್ನು ಮಾತ್ರ ಸಿಲಿಂಡರ್ ಡೆಲೆವರಿಯವರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ಮೊತ್ತ (ಟಿಪ್ಸ್) ನೀಡುವಂತಿಲ್ಲ. ಹೆಚ್ಚಿನ ಮಾಹಿತಿಗಾಗಿ ರಶೀದಿಯಲ್ಲಿರುವ ನಂಬರ್‌ಗೆ ಕರೆ ಮಾಡಿ ತಮ್ಮ ಎಲ್ಲಾ ಸಂಶಯಗಳನ್ನು ಬಗೆಹರಿಸಿಕೊಳ್ಳಬಹುದು. ಸಿಲಿಂಡರ್‌ನ ಪೈಪ್ ಖರೀದಿಸುವಾಗ ಅದರ ಮೇಲೆ ನಮೂದಿಸಿರುವ ಮೊತ್ತ ಮಾತ್ರ ಕೊಟ್ಟು ಖರೀದಿಸಬೇಕು. ಗ್ಯಾಸ್ ಏಜೇನ್ಸಿಯವರ ಪ್ರಮುಖ ಕರ್ತವ್ಯಗಳು: ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡುವುದು ಮತ್ತು ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು. ಗ್ರಾಮೀಣ ಪ್ರದೇಶಗಳಲ್ಲಿ ಸಿಲಿಂಡರ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಡೆಲಿವರಿ ವಾಹನದ ಮೇಲೆ ಸಿಲಿಂಡರ್‌ನ…

Read More

ಹೆಚ್.ಎ.ಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನಲ್ಲಿ ಫಿಟ್ಟರ್, ಮೆಷಿನಿಸ್ಟ್, ಟರ್ನರ್, ಕಂಪ್ಯೂಟರ್ ಅಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟಟ್, ಕಾರ್ಪೆಂಟರ್, ಫೌಂಡ್ರಿ ಮ್ಯಾನ್, ಶೀಟ್ ಮೆಟಲ್ ವರ್ಕರ್, ಟೂಲ್ ಅಂಡ್ ಡೈ ಮಾರ್ಕರ್, ಸಿಎನ್‍ಸಿ ಪ್ರೋಗ್ರಾಮರ್ ಕಮ್ ಅಪರೇಟರ್ ಮೆಕಾನಿಕ್ ರಿಪ್ರೀರಿಗೇಷನ್ ಅಂಡ್ ಕಂಡಿಷಿನಿಂಗ್ ಟ್ರೇಡ್‍ಗಳಿಗೆ ಸಂಬಂಧಪಟ್ಟ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜ.24 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಅಪ್ರೆಂಟಿಸ್ ತರಬೇತಿಯು ಎಲ್ಲಾ ಟ್ರೇಡ್‍ಗಳಿಗೂ ಒಂದು ವರ್ಷದ ಅವಧಿಯಾಗಿರುತ್ತದೆ. ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಐ.ಟಿ.ಐ ಪ್ರಮಾಣ ಪತ್ರ (ಸ್ವ ದೃಢೀಕೃತ ರಿಸಲ್ಟ್ ಶೀಟ್), ಜಾತಿ ಪ್ರಮಾಣ ಪತ್ರ, ಅಂಗವಿಕಲರ ಪ್ರಮಾಣ ಪತ್ರ, ಆರ್ಮಡ್ ಪರ್ಸನಲ್ ಪ್ರಮಾಣ ಪತ್ರ, ಆಧಾರ್ ಕಾರ್ಡ್, 4 ಭಾವಚಿತ್ರ., ಎನ್‍ಸಿವಿಟಿ ನೋಂದಣಿ ಪ್ರತಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಆನ್‍ಲೈನ್‍ನಲ್ಲಿ ನೊಂದಾಯಿಸಲು https://apprenticeshindia.gov.in, www.hal-india.com/career ವೆಬ್‍ಸೈಟ್ ಮೂಲಕ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂರವಾಣಿ ಸಂಖ್ಯೆ 9945587060,…

Read More

ಚಿತ್ರದುರ್ಗ : ಮಕ್ಕಳಿಗೆ ಕಾಲಕಾಲಕ್ಕೆ ಎ ಅನ್ನಾಂಗದ ದ್ರಾವಣ ಕುಡಿಸಿ ಇರುಳುಗಣ್ಣು ಬಾರದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ತಿಳಿಸಿದರು. ಇಲ್ಲಿನ ಮಾರುತಿ ನಗರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಗೋಪಾಲಪುರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ “ಎ” ಅನ್ನಂಗ ದ್ರಾವಣ 01 ರಿಂದ 5 ವರ್ಷದ ಒಳಗಿನ ಮಕ್ಕಳಿಗೆ ಕೊಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಟಮಿನ್ “ಎ” ದೇಹದಲ್ಲಿ ನಾನಾ ಜೈವಿಕ ಪ್ರಕ್ರಿಯೆಯಲ್ಲಿ ಉಪಯೋಗಿಸಲ್ಪಡುವ ರೆಟಿನೋಲ್ ಅಥವಾ ರೆಟಿನೋಯಿಕ್ ಆಸಿಡ್ ಮತ್ತು ಇತರ ಪರಸ್ಪರ ಹೋಲಿಕೆಯೊಳ್ಳ ರಾಸಾಯನಿಕ ಪದಾರ್ಥಗಳ ಸಮೂಹವೇ ವಿಟಮಿನ್ ಎ ಅನ್ನಾಂಗವಾಗಿದೆ. ಇದು ದ್ರಾವಣ ರೂಪದಲ್ಲಿರುತ್ತದೆ. ವಿಟಮಿನ್ “ಎ” ಕೊರತೆಯು ವಿಟಮಿನ್ “ಎ”ಯ ಆಹಾರ ಸೇವನೆ ಮಾಡದಿರುವುದರಿಂದ ಉಂಟಾಗುತ್ತದೆ ಎಂದರು. ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ರಾತ್ರಿ ಕುರುಡುತನವು ವಿಟಮಿನ್ ಎ ಕೊರತೆಯ ಮೊದಲ ಚಿಹ್ನೆಗಳಲ್ಲಿ ಒಂದಾಗಿದೆ. ಅದರ ತೀವ್ರ ಸ್ವರೂಪಗಳಲ್ಲಿ, ವಿಟಮಿನ್ ಎ ಕೊರತೆಯು ಕಾರ್ನಿಯಾವನ್ನು…

Read More

ಬೆಂಗಳೂರು: ಈವರೆಗೆ ಗ್ರಾಮ ಪಂಚಾಯ್ತಿ ಸೇವೆಗಳಿಗೆ ( Gramapanchayat Service ) ಸಂಬಂಧಿಸಿದಂತೆ ಕಚೇರಿಗೆ ತೆರಳಿ ಅರ್ಜಿಸಲ್ಲಿಸಬೇಕಾಗಿತ್ತು. ಆದ್ರೇ ಈಗ ಗ್ರಾಮ ಪಂಚಾಯ್ತಿ ಸೇವೆಗಳಿಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳಗೊಳಿಸಲಾಗಿದೆ. ಅದೇನು ಅಂದ್ರೇ ಜಸ್ಟ್ ಈ ನಂಬರ್ ಗೆ ವಾಟ್ಸಾಪ್ ( WhatsApp ) ಮಾಡಿ ಸಾಕು. ಅದು ಹೇಗೆ ಅಂತ ಮುಂದೆ ಓದಿ. ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ಗ್ರಾಮ ಪಂಚಾಯ್ತಿ ಸೇವೆಗಳು ಕುಳಿತಲ್ಲೇ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪಂಚಮಿತ್ರ ವಾಟ್ಸಾಪ್ ಚಾಟ್ ಆರಂಭಿಸಲಾಗಿದೆ. ಇನ್ಮುಂದೆ ವಾಟ್ಸ್ ಆಪ್ ನಲ್ಲಿ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಪಡೆಯಬಹುದಾಗಿದೆ. ಜನತೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅಹವಾಲು ದಾಖಲಿಸುವುದು ಅತಿ ಮುಖ್ಯವಾಗುತ್ತದೆ, ಜನರು ಅಹವಾಲು ಸಲ್ಲಿಸುವುದಕ್ಕಾಗಿ ಸರಳ, ಸುಲಭ ಹಾಗೂ ಸಮರ್ಥ ವ್ಯವಸ್ಥೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕೈಗೊಂಡಿದೆ. ಕುಂದು–ಕೊರತೆಗಳನ್ನು ಹಾಗೂ ಸಮಸ್ಯೆಗಳನ್ನು ದಾಖಲಿಸಲು ಇದ್ದ ಪ್ರತ್ಯೇಕ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಪಂಚಮಿತ್ರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಜನತೆ ತಮ್ಮೆಲ್ಲಾ…

Read More

ನವದೆಹಲಿ : ಸೈಬರ್ ವಂಚನೆ ಪ್ರಕರಣದಲ್ಲಿ ಗ್ರಾಹಕನ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದು ನಷ್ಟ ಸಂಭವಿಸಿದ್ರೆ ಅದಕ್ಕೆ ಬ್ಯಾಂಕುಗಳೇ ಹೊಣೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಭಾರತದ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ, ಅಸ್ಸಾಂನ ಸೈಬರ್ ವಂಚನೆಗೆ ಒಳಗಾದ ಪಲ್ಲಬ್ ಭೌಮಿಕ್ ಗೆ 94,000 ರೂ.ಗಳನ್ನು ಮರುಪಾವತಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೆ ನಿರ್ದೇಶಿಸಿದೆ. ಈ ಪ್ರಕರಣವು ತಮ್ಮ ಗ್ರಾಹಕರ ಹಣವನ್ನು ವಂಚನೆಯ ಚಟುವಟಿಕೆಗಳಿಂದ ರಕ್ಷಿಸುವಲ್ಲಿ ಹಣಕಾಸು ಸಂಸ್ಥೆಗಳ ಜವಾಬ್ದಾರಿಗಳನ್ನು ತೀವ್ರವಾಗಿ ಎತ್ತಿ ತೋರಿಸಿದೆ. ಏನಿದು ಪ್ರಕರಣ ಪಲ್ಲಭ್ ಭೌಮಿಕ್ ಎನ್ನುವವರು ಆನ್ ಲೈನಲ್ಲಿ ಮೂಲ ವಸ್ತುವೊಂದನ್ನು ಖರೀದಿಸಿದ್ದರು. 4,000 ರೂ. ಮೌಲ್ಯದ ಲೂಯಿಸ್ ಫಿಲಿಪ್ ಬ್ಲೇಜರ್ ಅನ್ನು ಹಿಂದಿರುಗಿಸಲು ಪ್ರಯತ್ನಿಸಿದಾಗ ಸೈಬರ್ ವಂಚನೆ ಸಂಭವಿಸಿದೆ. ಗ್ರಾಹಕ ಸೇವಾ ಪ್ರತಿನಿಧಿಯಾಗಿ ನಟಿಸಿ, ವಂಚಕರು ಬಲಿಪಶುವನ್ನು ದುರುದ್ದೇಶಪೂರಿತ ಅಪ್ಲಿಕೇಶನ್ ಅನ್ನು ಸ್ಥಾಪಿಸುವಂತೆ ಮೋಸಗೊಳಿಸಿದರು, ಇದು ಅವರ SBI ಉಳಿತಾಯ ಖಾತೆಯಿಂದ 94,204 ರೂ.ಗಳನ್ನು ಕಳವು ಮಾಡಲು ಕಾರಣವಾಯಿತು.…

Read More

ಚಿತ್ರದುರ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯು ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರೂಪಿಸಲಾಗಿದ್ದು, ಆರ್ಥಿಕ ಸಂಕಷ್ಟದ ನಡುವೆ ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವ ಜನರು, ಯುವನಿಧಿ ಯೋಜನೆಗೆ ನೋಂದಾಯಿಸಿಕೊಳ್ಳುವ ಮೂಲಕ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು. ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಜಿಲ್ಲಾ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಏರ್ಪಡಿಸಿದ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೃತ್ತಿಪರ ತರಬೇತಿ ಪಡೆದ ಡಿಪ್ಲೊಮಾ ವಿದ್ಯಾರ್ಥಿಗಳು ಹಾಗೂ ಪದವಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಜೀವನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಜ್ಯಸರ್ಕಾರದ ಯುವನಿಧಿ ನೆರವಾಗಲಿದ್ದು, ಯುವನಿಧಿಯಡಿ ದೊರಕುವ ನಿರುದ್ಯೋಗ ಭತ್ಯೆಯನ್ನು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗಲು ಪುಸ್ತಕ ಖರೀದಿಗೆ ಉಪಯೋಗವಾಗಲಿದೆ ಎಂದರು. ಯುವ ಜನತೆಯ ಉಜ್ವಲ…

Read More

ತಿರುಪತಿ : ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿ ತಿರುಮಲದಲ್ಲಿ ಹೆಚ್ಚು ಜನರು ಸೇರಿದ್ದರಿಂದ ಟಿಕೆಟ್ ಕೌಂಟರ್ ಬಳಿಯಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಹೀಗಾಗಿ ಕಾಲ್ತುಳಿತ ಉಂಟಾಗಿ 6 ಭಕ್ತರು ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಟಿಕೆಟ್ ವಿತರಣೆ ರದ್ದುಗೊಳಿಸಲಾಗಿದೆ. ವೈಕುಂಠ ದ್ವಾರದಲ್ಲಿ ಟಿಕೆಟ್ ಗಾಗಿ ಹೆಚ್ಚು ಜನರು ಸೇರಿದ್ದರ ಪರಿಣಾಮ ತಿರುಪತಿಯಲ್ಲಿ ಕಾಲ್ತುಳಿತ ಉಂಟಾಗಿದೆ. ಈ ಕಾಲ್ತುಳಿತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ಭಕ್ತರು ಮೃತಪಟ್ಟಿದ್ದಾರೆ. ವೈಕುಂಟ ಏಕಾದಶಿಯ ಟಿಕೆಟ್ ಗಾಗಿ ಕೌಂಟರ್ ಬಳಿಯಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತದಿಂದ ಭಕ್ತರು ಸಾವನ್ನಪ್ಪಿದ ಕಾರಣ, ಟಿಕೆಟ್ ವಿತರಣೆ ರದ್ದುಗೊಳಿಸಲಾಗಿದೆ. ನಾಳೆಯವರೆಗೂ ಟಿಕೆಟ್ ವಿತರಣೆಯನ್ನು ಸ್ಥಗಿತಗೊಳಿಸಿರುವುದಾಗಿ ಟಿಟಿಡಿ ತಿಳಿಸಿದೆ.

Read More