Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಇತ್ತೀಚಿಗೆ ಕಡ್ಡಾಯಗೊಳಿಸಲಾಗಿರುವ ಈ ಖಾತೆ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಗಳು ಹಾಗೂ ಸಂದೇಹಗಳನ್ನು ಪರಿಹರಿಸಲು ನಾಳೆ ಅಂದರೆ ದಿನಾಂಕ: 09-01-2025 ರಂದು ಬೆ. 11:00 ಗಂಟೆಯಿಂದ ಮ. 1:00 ಗಂಟೆಯವರೆಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣ, ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು ಇಲ್ಲಿ ಸಾರ್ವಜನಿಕರು , ಬಿಲ್ಡರ್ ಗಳು ಹಾಗೂ ಡೆವಲಪರ್ ಗಳ ಸಭೆಯನ್ನು ಕರೆಯಲಾಗಿದೆ ಎಂದು ಬೆಂಗಳೂರಿನ ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜಗದೀಶ ಅವರು ತಿಳಿಸಿದ್ದಾರೆ. ಆಸ್ತಿ ನೋಂದಣಿಯಲ್ಲಿ ಲೋಪಗಳನ್ನು ತಡೆಯಲು ಹಾಗೂ ಅಕ್ರಮವಾಗಿ ಆಸ್ತಿಯನ್ನು ಒಬ್ಬರಿಗಿಂತ ಹೆಚ್ಚು ಜನರಿಗೆ ಮಾರಾಟ ಮಾಡುವುದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರದ ನೋಂದಣಿ ಸಂದರ್ಭದಲ್ಲಿ ಈ ಖಾತೆಯನ್ನು ಕಡ್ಡಾಯ ಮಾಡಿ ಆದೇಶಿಸಲಾಗಿದೆ. ಇದೀಗ ಈ-ಖಾತೆ ಇಲ್ಲದ ನೋಂದಣಿ ಪ್ರಕ್ರಿಯೆ ಸಾಧ್ಯವಿಲ್ಲದ ಕಾರಣ ಸಾರ್ವಜನಿಕರು ನೋಂದಣಿಗೆ ಇ-ಖಾತೆ ಇಲ್ಲದೇ ಅಡ್ಡಿ ಆಗುತ್ತಿದೆ ಎಂಬ ದೂರುಗಳು ಬರುತ್ತಿದ್ದು, ಇ-ಖಾತೆಗೆ ಸಂಬಂಧಿಸಿದಂತೆ ಇರುವ ಅನುಮಾನಗಳು/ತೊಡಕುಗಳನ್ನು ನಿವಾರಣೆ ಮಾಡಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ…
ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗಾಗಿ ನಗದು ರಹಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದ್ದು, ಈ ಸಂಬಂಧ ಈಗಾಗಲೇ 275 ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ನೌಕರರು ತಾವು ಇರುವ ಊರಿನಲ್ಲೇ ಈ ಸೌಲಭ್ಯ ಪಡೆಯಬಹುದಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಆಸ್ಪತ್ರೆಗಳಿಗೆ ಸೌಲಭ್ಯವನ್ನು ವಿಸ್ತರಿಸಲಾಗುವುದು. ಸಾರಿಗೆ ನೌಕರರಿಗೆ ಸಿಲಿವೆ ಈ ಎಲ್ಲಾ ಸೌಲಭ್ಯಗಳು 1. ಕೆಎಸ್‌ಆರ್‌ಟಿಸಿ ನೌಕರರಿಗೆ ಸರ್ಕಾರಿ, ಖಾಸಗಿ ಸೇರಿದಂತೆ 275 ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್ ಬಳಸಿ ನಗದುರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ 2. 34 ಸಾವಿರ ಸಿಬ್ಬಂದಿ, 1.50 ಲಕ್ಷ ಫಲಾನುಭವಿಗಳು 3. ಕಣ್ಣು, ದಂತ ಚಿಕಿತ್ಸಾ ವೆಚ್ಚವೂ ಲಭ್ಯ 4. ನೌಕರರ ಕುಟುಂಬಕ್ಕೂ ಆರೋಗ್ಯ ಕಾರ್ಡ್ ಬಳಸಿ ಚಿಕಿತ್ಸೆ ಸೌಲಭ್ಯ 5. ಪ್ರತಿ ವರ್ಷ ರಾಜ್ಯ ಸರ್ಕಾರದಿಂದ 20 ಕೋಟಿ ರೂ. ಹಣ ಈ ಯೋಜನೆಗೆ ಮೀಸಲು https://twitter.com/DKShivakumar/status/1876615546059595927
ಬೆಂಗಳೂರು : ನಕಲಿ ದಾಖಲೆಗಳನ್ನು ಸಲ್ಲಿಸಿ ಮಂಡಳಿಯ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಶಿಕ್ಷಾರ್ಹ ಅಪರಾಧ. ಅಂತಹ ಕಾರ್ಮಿಕರು ಕೂಡಲೇ ಮಂಡಳಿಗೆ ನಕಲಿ ಕಾರ್ಮಿಕ ಕಾರ್ಡನ್ನು ಹಿಂದಿರುಗಿಸುವಂತೆ ಸೂಚನೆ ನೀಡಲಾಗಿದೆ. ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲೆಗಳನ್ನು ಸಲ್ಲಿಸಿ, ಕಾರ್ಮಿಕ ಕಾರ್ಡ್ ಗಳನ್ನು ಪಡೆದುಕೊಂಡು ಮಂಡಳಿಯು ನೀಡುವ ಸೌಲಭ್ಯಗಳ ಲಾಭ ಪಡೆಯುತ್ತಿದ್ದರೆ ಸರ್ಕಾರವು ಕಠಿಣ ಕಾನುನು ಕ್ರಮ ಜರುಗಿಸಲಿದೆ. ನಿಮ್ಮ ಬಳಿ ಈ ಕಾರ್ಮಿಕ ಕಾರ್ಡ್ ಇದ್ದರೆ ಕೂಡಲೇ ಕಾರ್ಮಿಕ ಇಲಾಖೆಗೆ ತೆರಳಿ ನಕಲಿ ಕಾರ್ಮಿಕ ಕಾರ್ಡನ್ನು ಹಿಂದಿರುಗಿಸಿ. ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲೆಗಳನ್ನು ಸಲ್ಲಿಸಿ, ಕಾರ್ಮಿಕ ಕಾರ್ಡ್ ಗಳನ್ನು ಪಡೆದು ಸೌಲಭ್ಯ ಪಡೆಯುತ್ತಿರುವವರು ನಕಲಿ ಕಾರ್ಡ್ ಹಿಂದಿರುಗಿಸದಿದ್ದಲ್ಲಿ ಅಂತವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಬೆಂಗಳೂರು : ಬಿಜೆಪಿ ಎಂಎಲ್ ಸಿ ಸಿ.ಟಿ ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ರಾಜ್ಯಪಾಲರನ್ನು ಭೇಟಿಯಾಗಿದ್ದರು. ಈ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ರಾಜ್ಯಪಾಲರು ಪತ್ರದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂಗೆ ಸಲಹೆ ನೀಡಿದ್ದಾರೆ. ಹಾಗೂ ಪ್ರಕರಣಕ್ಕೆ ನೀವು ಮಧ್ಯಪ್ರವೇಶಿಸಿ ತನಿಖೆ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಡಿ.19ರಂದು ವಿಧಾನಪರಿಷತ್ ಕಲಾಪದ ಸಂದರ್ಭದಲ್ಲಿ ಎಂಎಲ್ ಸಿ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಬಂಧ ಸಿ.ಟಿ.ರವಿ ಬಂಧನವಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಈ ನಡುವೆ ರಾಜ್ಯ ಬಿಜೆಪಿ…
ಕಳೆದ ಐದು ದಿನಗಳಲ್ಲಿ ಉಗಾಂಡಾದಲ್ಲಿ ಇನ್ನೂ ನಾಲ್ವರು ಪಾಕ್ಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 1,571 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಪರಿಸ್ಥಿತಿ ಗಂಭೀರವಾಗಿದೆ. ವಾಕಿಸೊ, ಕಂಪಾಲಾ ಮತ್ತು ಲಿರಾ ಜಿಲ್ಲೆಗಳು ಸೇರಿದಂತೆ ಕಳೆದ 24 ಗಂಟೆಗಳಲ್ಲಿ 19 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಉಗಾಂಡಾದ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಎಂಪಾಕ್ಸ್, ಮಂಕಿಪಾಕ್ಸ್ ಎಂದೂ ಕರೆಯುತ್ತಾರೆ. ಇದು ಮುಖ್ಯವಾಗಿ ನಿಕಟ ಸಂಪರ್ಕದ ಮೂಲಕ ಹರಡುವ ವೈರಲ್ ಸೋಂಕು. ಇದರ ಲಕ್ಷಣಗಳಲ್ಲಿ ದದ್ದು, ಜ್ವರ, ತಲೆನೋವು, ಸ್ನಾಯು ನೋವು ಮತ್ತು ಊದಿಕೊಂಡ ಗ್ರಂಥಿಗಳು ಸೇರಿವೆ. ಈ ರೋಗವು ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುತ್ತದೆ ಮತ್ತು ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ಉಗಾಂಡಾದಲ್ಲಿ mpox ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ ತಿಂಗಳು 156 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,571 ಕ್ಕೆ ತಲುಪಿದೆ. ಇದರೊಂದಿಗೆ…
ಬಳ್ಳಾರಿ :ಗ್ರಾಮೀಣ ಭಾಗದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ಅಮೃತವಾಹಿನಿ ಸಂಚಾರಿ ಆರೋಗ್ಯ ಘಟಕಗಳು ಸಕಾಲದಲ್ಲಿ ಸೇವೆ ಒದಗಿಸಬೇಕು ಎಂದು ಸಂಡೂರು ಶಾಸಕರಾದ ಈ.ಅನ್ನಪೂರ್ಣ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನ್ಯಾಷನಲ್ ಮೈನಿಂಗ್ ಡೆವಲಪ್‌ಮೆಂಟ್ ಕಾರ್ಪೋರೇಷನ್ (ಎನ್‌ಎಮ್‌ಡಿಸಿ) ಡೋಣಿಮಲೈನ ಸಿಎಸ್‌ಆರ್ ಅನುದಾನದಡಿ ವಾರ್ಷಿಕ ರೂ. 3ಕೋಟಿ ವೆಚ್ಚದಲ್ಲಿ ತಾಲೂಕಿನ 26 ಗ್ರಾಮಪಂಚಾಯತಗಳ ವ್ಯಾಪ್ತಿಯ ಹಳ್ಳಿಗಳಿಗೆ ಜನತೆಯ ಮನೆ ಬಾಗಿಲಿಗೆ ಎಮ್‌ಬಿಬಿಎಸ್ ವೈದ್ಯರನ್ನು ಹೊಂದಿರುವ ತಂಡದ ಉಪಸ್ಥಿತಿಯಲ್ಲಿ ಉತ್ತಮ ದರ್ಜೆಯ ಆರೋಗ್ಯ ಸೇವೆ ಒದಗಿಸುವ ಅಮೃತವಾಹಿನಿ ಸಂಚಾರಿ ಆರೋಗ್ಯ ಘಟಕ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಂಡೂರು ತಾಲ್ಲೂಕಿನ ಜನತೆಯು ಆರೋಗ್ಯ ಸೇವೆಗಳನ್ನು ಪಡೆಯಬೇಕಾದಲ್ಲಿ ಆರೋಗ್ಯ ಕೇಂದ್ರಗಳಿಗೆ ತೆರಳಲು ಹೆಚ್ಚು ಸಮಯ ಮಿಸಲಿಡಬೇಕು. ಈ ಹಿನ್ನಲೆಯಲ್ಲಿ ತಾಲ್ಲೂಕಿನ 110 ಕ್ಕೂ ಹೆಚ್ಚು ಹಳ್ಳಿಗಳಿಗೆ ಅಮೃತವಾಹಿನಿ ಉಚಿತ ಸಂಚಾರಿ ಆರೋಗ್ಯ ಘಟಕದ ಮೂಲಕ ನೀಡುವ ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರೂ ಪಡೆಯಬೇಕು…
ಬೆಂಗಳೂರು : ರಾಜ್ಯ ಸರ್ಕಾರವು ಬ್ರಾಹ್ಮಣ ಸಮುದಾಯವರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕಲ್ಯಾಣ ಯೋಜನೆ ಹಾಗೂ ಸನ್ನಿಧಿ ಯೋಜನೆ ಮೂಲಕ ಹಲವು ಸಹಾಯಧನಗಳನ್ನು ನೀಡಲಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ ಬ್ರಾಹ್ಮಣರ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳು ಕಲ್ಯಾಣ ಯೋಜನೆ * ಬ್ರಾಹ್ಮಣರಿಗಾಗಿ ಸಾಮೂಹಿಕ ವಿವಾಹ / ಉಪನಯನಗಳ ಆಯೋಜನೆ * ಬಿಪಿಎಲ್ ಬ್ರಾಹ್ಮಣ ಕುಟುಂಬದ ಕೃಷಿಕರನ್ನು / ಅಡಿಗೆಯವರನ್ನು / ಪುರೋಹಿತರನ್ನು ಮದುವೆಯಾಗುವ ವಧುವಿನ ಹೆಸರಲ್ಲಿ ₹3 ಲಕ್ಷ ಬಾ೦ಡ್ ಸನ್ನಿಧಿ ಯೋಜನೆ * ಅರ್ಹ ಪ್ರಿ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಬ್ರಾಹ್ಮಣ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಪ್ರತ್ಯೇಕ & ಉಚಿತ ಹಾಸ್ಟೆಲ್ ನಿರ್ಮಾಣ / ಹಾಸ್ಟೆಲ್ ಸೌಲಭ್ಯ ಕಲ್ಪಿಸುವುದು / ಹಾಸ್ಟೆಲ್ ಶುಲ್ಕ ಮರು ಪಾವತಿ ಸೌಲಭ್ಯ * ಬ್ರಾಹ್ಮಣ ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣ
ಮುಕ್ತಾಯ ದಿನಾಂಕದ ನಂತರ, ಔಷಧವು ವಾಸ್ತವವಾಗಿ ವಿಷದಂತೆ. ಔಷಧಿಗಳು ಮುಕ್ತಾಯ ದಿನಾಂಕದ ನಂತರ ಯಾವುದೇ ಪರಿಣಾಮ ಬೀರುವುದಿಲ್ಲ. ಔಷಧಿಗಳು ಮುಕ್ತಾಯ ದಿನಾಂಕದ ನಂತರ ದೇಹಕ್ಕೆ ಹಾನಿ ಮಾಡುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಮುಕ್ತಾಯ ದಿನಾಂಕದ ನಂತರ ಔಷಧಿಗಳಿಗೆ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿಜವಾಗಿಯೂ ಮುಖ್ಯವಾಗಿದೆ. ಮೊದಲನೆಯದಾಗಿ, ಔಷಧಿಗಳ ಮುಕ್ತಾಯ ದಿನಾಂಕದ ಅರ್ಥವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ನೀವು ಯಾವುದೇ ಔಷಧಿಯನ್ನು ಖರೀದಿಸಿದಾಗ, ಅದರ ಮೇಲೆ ಎರಡು ದಿನಾಂಕಗಳನ್ನು ಸ್ಪಷ್ಟವಾಗಿ ಬರೆಯಲಾಗುತ್ತದೆ. ಒಂದು ಉತ್ಪಾದನೆಯ ದಿನಾಂಕ, ಅಂದರೆ ಔಷಧವನ್ನು ತಯಾರಿಸಿದ ದಿನಾಂಕ, ಮತ್ತು ಇನ್ನೊಂದು ಮುಕ್ತಾಯ ದಿನಾಂಕ, ಅಂದರೆ ತಯಾರಕರು ಔಷಧದ ಪರಿಣಾಮಕಾರಿತ್ವವನ್ನು ಖಾತರಿಪಡಿಸದ ದಿನಾಂಕ. ಹೆಚ್ಚಿನ ಔಷಧಿಗಳಲ್ಲಿ ರಾಸಾಯನಿಕ ಪದಾರ್ಥಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕ ವಸ್ತುಗಳ ವಿಶೇಷ ಗುಣವೆಂದರೆ ಅವುಗಳ ಪರಿಣಾಮವು ಕಾಲಾನಂತರದಲ್ಲಿ ಬದಲಾಗುತ್ತಲೇ ಇರುತ್ತದೆ. ಔಷಧಿಗಳ ವಿಷಯದಲ್ಲಿಯೂ ಅದೇ ಸಂಭವಿಸುತ್ತದೆ. ಗಾಳಿ, ತೇವಾಂಶ, ತಾಪಮಾನ ಇತ್ಯಾದಿಗಳಿಂದ ಔಷಧಿಗಳ ಪರಿಣಾಮಕಾರಿತ್ವವು ಸಮಯದೊಂದಿಗೆ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಔಷಧಿಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.…
ಬೆಂಗಳೂರು : ಸಮಾಜದ ಮುಖ್ಯ ವಾಹಿನಿಗೆ ಬರಲು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 6 ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿಯಲ್ಲಿ ದಿಢೀರ್ ಬದಲಾವಣೆ ಆಗಿದ್ದು, ಇಂದು ಬೆಂಗಳೂರಿನಲ್ಲಿ ಸಿಎಂ ಹಾಗೂ ಗೃಹ ಸಚಿವರ ಮುಂದೆ ಶರಣಾಗತಿಯಾಗಲಿದ್ದಾರೆ. ಕೊನೆಯ ಕ್ಷಣದಲ್ಲಿ ಶರಣಾಗತಿ ದಿಢೀರ್ ಬದಲಾವಣೆ ಆಗಿದ್ದು, ಬಾಳೆಹೊನ್ನೂರಿನಿಂದ 6 ನಕ್ಸಲರು ಬೆಂಗಳೂರಿಗೆ ಆಗಮಿಸುತ್ತಿದ್ದು, ಬಳಿಕ ಸಿಎಂ ಹಾಗೂ ಗೃಹ ಸಚಿವರ ಸಮ್ಮುಖದಲ್ಲೇ ಶರಣಾಗತಿಯಾಗಲಿದ್ದಾರೆ. ನಿನ್ನೆ ಶಾಂತಿಗಾಗಿ ನಾಗರಿಕ ವೇದಿಕೆಯು ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ಫಲಪ್ರದವಾಗಿದ್ದು ಇಂದು ಆರು ಜನ ನಕ್ಸಲ್ ಹೋರಾಟಗಾರರು ಮುಖ್ಯ ವಾಹಿನಿಗೆ ಬಂದಿದ್ದಾರೆ. ಪ್ರಮುಖವಾಗಿ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ ವಸಂತ, ಟಿ ಎನ್ ಜೀಶ್ ಅವರು ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರು : ಸಮಾಜದ ಮುಖ್ಯ ವಾಹಿನಿಗೆ ಬರಲು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 6 ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿಯಲ್ಲಿ ದಿಢೀರ್ ಬದಲಾವಣೆ ಆಗಿದ್ದು, ಇಂದು ಬೆಂಗಳೂರಿನಲ್ಲಿ ಸಿಎಂ ಹಾಗೂ ಗೃಹ ಸಚಿವರ ಮುಂದೆ ಶರಣಾಗತಿಯಾಗಲಿದ್ದಾರೆ. ಕೊನೆಯ ಕ್ಷಣದಲ್ಲಿ ಶರಣಾಗತಿ ದಿಢೀರ್ ಬದಲಾವಣೆ ಆಗಿದ್ದು, ಬಾಳೆಹೊನ್ನೂರಿನಿಂದ 6 ನಕ್ಸಲರು ಬೆಂಗಳೂರಿಗೆ ಆಗಮಿಸುತ್ತಿದ್ದು, ಬಳಿಕ ಸಿಎಂ ಹಾಗೂ ಗೃಹ ಸಚಿವರ ಸಮ್ಮುಖದಲ್ಲೇ ಶರಣಾಗತಿಯಾಗಲಿದ್ದಾರೆ. ನಿನ್ನೆ ಶಾಂತಿಗಾಗಿ ನಾಗರಿಕ ವೇದಿಕೆಯು ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ಫಲಪ್ರದವಾಗಿದ್ದು ಇಂದು ಆರು ಜನ ನಕ್ಸಲ್ ಹೋರಾಟಗಾರರು ಮುಖ್ಯ ವಾಹಿನಿಗೆ ಬಂದಿದ್ದಾರೆ. ಪ್ರಮುಖವಾಗಿ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ ವಸಂತ, ಟಿ ಎನ್ ಜೀಶ್ ಅವರು ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ.












