Subscribe to Updates
Get the latest creative news from FooBar about art, design and business.
Author: kannadanewsnow57
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ವಿವಿಧ ನಿಗಮ, ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು, ಕಾರ್ಮಿಕರಿಗೆ ವೇತನ ಪಾವತಿ ಮತ್ತು ಕಾನೂನಾತ್ಮಕವಾಗಿ ನೀಡಬೇಕಾದ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ದಾವಣಗೆರೆ ಜಿಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಹಕಾರ ಸಂಘ ನಿಗಮವನ್ನು ನೂತನವಾಗಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ. ಈಗಾಗಲೇ ವಿವಿಧ ಸಂಸ್ಥೆಗಳ ಮೂಲಕ ಹೊರಗುತ್ತಿಗೆಯಡಿ ಟೆಂಡರ್ ಮೂಲಕ ಸೇವೆಯನ್ನು ಸಲ್ಲಿಸಲಾಗುತ್ತಿದ್ದು, ಈ ಎಲ್ಲಾ ಹೊರಗುತ್ತಿಗೆ ನೌಕರರು ಇನ್ನು ಮುಂದೆ ದಾವಣಗೆರೆ ಜಿಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ದಿ ಸಹಕಾರ ಸಂಘದಡಿಯಲ್ಲಿ ಕೆಲಸ ನಿರ್ವಹಿಸುವರು. ಈ ನೌಕರರಿಗೆ ಜಿಲ್ಲಾ ಸಂಘದಿಂದಲೇ ನೇರವಾಗಿ ವೇತನ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಹೊರಗುತ್ತಿಗೆ ನೌಕರರೇ ಈ ಸಹಕಾರ ಸಂಘದ ಸದಸ್ಯರಾಗಿರುವರು. ಆದ್ದರಿಂದ ಹೊರಗುತ್ತಿಗೆ ನೌಕರ ಸಿಬ್ಬಂದಿಯವರು ಸಂಘದ ಸದಸ್ಯತ್ವ ಪಡೆಯಬಹುದಾಗಿದ್ದು, ತಮ್ಮ ಇಲಾಖೆ ಮುಖ್ಯಸ್ಥರುಗಳಿಂದ ಅರ್ಜಿ ಪಡೆದು ನೋಂದಣಿ ಮಾಡಿಕೊಳ್ಳಲು ತಿಳಿಸಿದ್ದಾರೆ.
ಬೆಂಗಳೂರು : 2024-25 ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಐತಿಹಾಸಿಕ ಸ್ಥಳ ಕೋಟೆ ನಾಡು. ಚಿತ್ರದುರ್ಗ ಜಿಲ್ಲೆಯಲ್ಲಿ ದಿನಾಂಕ:07.02.2025 ರಿಂದ 08.02.2025ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2024-25 ನೇ ಸಾಲಿನ ರಾಜ್ಯ ಮಟ್ಟದ “ಪ್ರತಿಭಾ ಕಾರಂಜಿ ಸ್ಪರ್ಧೆ” ಕಾರ್ಯಕ್ರಮವು ಐತಿಹಾಸಿಕ ಸ್ಥಳ ಕೋಟೆ ನಾಡು. ಚಿತ್ರದುರ್ಗ ಜಿಲ್ಲೆಯಲ್ಲಿ ದಿನಾಂಕ:07.02.2025 ರಿಂದ 08.02.2025ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ಸ್ಪರ್ಧಾಳುಗಳು ಹಾಗೂ ನೋಡಲ್ ಅಧಿಕಾರಿಗಳು/ತಂಡದ ಮೇಲ್ವಿಚಾರಕರ ನೋಂದಣಿ ಪ್ರಕ್ರಿಯೆಯು ದಿನಾಂಕ:06.02.2025 ರಂದು ಸಂಜೆ 4-00 ಗಂಟೆಯಿಂದ ರಾತ್ರಿ 09-00 ಗಂಟೆವರೆಗೆ ಹಾಗೂ 07.02.2025ರ ಬೆಳಗ್ಗೆ 07-00 ಗಂಟೆಯಿಂದ 09-00 ಗಂಟೆವರೆಗೆ ನಡೆಯಲಿದೆ. ಈ ಸಂಬಂಧ ಎಲ್ಲಾ ಜಿಲ್ಲೆಗಳ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿಗಳು ತಮ್ಮ ಜಿಲ್ಲೆಯ ಸ್ಪರ್ಧಾಳುಗಳು ಮತ್ತು ತಂಡದ ಮೇಲ್ವಿಚಾರಕರೊಂದಿಗೆ ಸಕಾಲದಲ್ಲಿ ಹಾಜರಿದ್ದು ನೋಂದಣಿ ಮಾಡಿಕೊಳ್ಳಲು ತಿಳಿಸಿದೆ. ಮುಂದುವರೆದು, ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ 2024-25ರ ವಿವಿಧ ಸ್ಪರ್ಧೆಗಳ ವಿವರ ಮತ್ತು ಸಾಮಾನ್ಯ. ನಿರ್ದಿಷ್ಟ…
ಬೆಂಗಳೂರು : 2024ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕವನ್ನು ವಿಸ್ತರಿಸಿ ಕರ್ನಾಟಕ ಲೋಕಸೇವಾ ಆಯೋಗವು ಆದೇಶ ಹೊರಡಿಸಿದೆ. ಆಯೋಗವು 2024ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗೆ ಉಲ್ಲೇಖಿತ ಅಧಿಸೂಚನೆಯನ್ವಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:29-01-2025 ರವರೆಗೆ ಹಾಗೂ ಶುಲ್ಕ ಪಾವತಿಸಲು ದಿನಾಂಕ:31-01-2025 ರವರೆಗೆ ನಿಗದಿಪಡಿಸಲಾಗಿತ್ತು. ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ದಿನಾಂಕವನ್ನು 12-02-2025 ರವರೆಗೆ ವಿಸ್ತರಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣದ ಅವಧಿಯನ್ನು ಡಿಸೆಂಬರ್ 31, 2025ರವರೆಗೆ ಸರ್ಕಾರ ವಿಸ್ತರಿಸಿ ಆದೇಶಿಸಿದೆ. ಹೀಗಾಗಿ ಸರ್ಕಾರಿ ನೌಕರರು ಈ ಅವಧಿಯೊಳಗೆ ಪರೀಕ್ಷೆ ಉತ್ತೀರ್ಣರಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿಗೆ ಅನರ್ಹವಾಗಲಿದ್ದಾರೆ. ಈ ಪರೀಕ್ಷೆಯು ಸರ್ಕಾರಿ ನೌಕರರ ಪರಿವೀಕ್ಷಣಾ ಅವಧಿ,ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿಗೆ ಒಂದು ಅರ್ಹತಾ ಮಾನದಂಡವಾಗಿರುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವಧಿ 31-12-24 ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಸದರಿ ಪರೀಕ್ಷೆ ಪಾಸ್ ಮಾಡಲು ಡಿಸೆಂಬರ್ 31 2025 ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯೊಳಗೆ ಕಂಪ್ಯೂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿ ಯಲ್ಲಿ ಅರ್ಹನಾಗತಕ್ಕದ್ದಲ್ಲ ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳು 2012 ನ್ನು ರೂಪಿಸಲಾಗಿದೆ. ಈ ನಿಯಮಾವಳಿಗಳ ನಿಯಮ 1(3) ರಲ್ಲಿ ನಿರ್ಧಿಷ್ಟಪಡಿಸಿರುವ ಕೆಲವೊಂದು ಹುದ್ದೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ…
ಬೆಂಗಳೂರು : ಬೆಂಗಳೂರಿನ ಆಸ್ತಿ ಮಾಲೀಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಜನವರಿ 30 ರಿಂದ ಫೆಬ್ರವರಿ 2 ರವರೆಗೆ ಇ-ಖಾತಾ ಮೇಳ ಆಯೋಜಿಸಲಾಗಿದೆ. ಹೌದು,ಬಿಬಿಎಂಪಿ ಕಛೇರಿ,ಕುವೆಂಪುನಗರ ವಾರ್ಡ್ , ಸಿಂಗಾಪುರ (ವಾಲ್ಮೀಕಿ ವೃತ್ತ)ದಲ್ಲಿ ದಿನಾಂಕ 30-01-25 ರಿಂದ 02-02-25 ವರೆಗೆ ಸಮಯ : 10:00 AM – 5:00 PM ಆಸ್ತಿ ಖಾತಾ ನೋಂದಣಿಯನ್ನು ಸರಳಗೊಳಿಸುವುದು. ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಗೆ ಇ-ಖಾತಾ ಇಲ್ಲವೇ? ನಮ್ಮ ಶಿಬಿರಕ್ಕೆ ಬನ್ನಿ ಮತ್ತು ಇ-ಖಾತಾ ಪಡೆಯಿರಿ! ನೀವು ತರಬೇಕಾದ ದಾಖಲೆಗಳು: * ನೋಂದಾಯಿತ ಆಸ್ತಿ ಪತ್ರ * ಎಸ್ಎಎಸ್ ಆಸ್ತಿ ತೆರಿಗೆ ರಶೀದಿ * ಬೆಸ್ಕಾಂ ಮೀಟರ್ ಸಂಖ್ಯೆ * ಆಧಾರ್ ಕಾರ್ಡ್ * ಆಸ್ತಿಯ GPS ಫೋಟೋ * ಆಸ್ತಿ ಫೋಟೋ * E.C (ಆಪ್ಷನಲ್) ಸಹಾಯಕ್ಕಾಗಿ: ಆನ್‌ಲೈನ್ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ಟೀಮ್ ಕೆಬಿಜಿ ಸಿದ್ಧವಾಗಿದೆ. (https://youtu.be/FRLimLizeHM?si=BxG9mgRWBU7RkP3B). ನಿಮ್ಮ ಆಸ್ತಿಯನ್ನು ಸುಲಭವಾಗಿ ಅಧಿಕೃತಗೊಳಿಸಿ! https://youtu.be/FRLimLizeHM?si=pjiAjo50RAHItBHu
ಕೊಪ್ಪಳ : ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಗ್ರಾಹಕರ ಅನುಮತಿ ಇಲ್ಲದೆ ಖಾತೆಯಲ್ಲಿನ ಹಣ ಕಡಿತವಾದ್ರೆ ಬ್ಯಾಂಕುಗಳೇ ಹೊಣೆ ಎಂದು ಗ್ರಾಹಕರ ಆಯೋಗ ಮಹತ್ವದ ಆದೇಶ ಹೊರಡಿಸಿದೆ. ಹೌದು, ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ಕಡಿತಗೊಂಡಿರುವ ಪ್ರಕರಣದಡಿ ದೂರುದಾರರಿಗೆ ಪರಿಹಾರ ನೀಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ. ಗ್ರಾಹಕ ಫಿರ್ಯಾದು ಸಂಖ್ಯೆ: 56/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದನ್ವಯ ಫಿರ್ಯಾದುದಾರರಾದ ವೀರಣ್ಣ ತಂದೆ ನಾಗಪ್ಪ ಮಟ್ಟಿ, ಉದ್ಯೋಗ: ಶಿಕ್ಷಕರು, ಅಳವಂಡಿ ಗ್ರಾಮ ತಾಲ್ಲೂಕ ಮತ್ತು ಜಿಲ್ಲೆ ಕೊಪ್ಪಳ, ಇವರು ಎದುರುದಾರರಾದ ಕೆನರಾ ಬ್ಯಾಂಕ್ ಬೆಟಗೇರಿ ಬ್ರಾಂಚ್ ಕೊಪ್ಪಳ ಜಿಲ್ಲೆ, ಇವರಲ್ಲಿ ಎಸ್.ಬಿ ಖಾತೆ ಹೊಂದಿದ್ದು ಎದುರುದಾರರ ಬ್ಯಾಂಕಿನ ಗ್ರಾಹಕರಾಗಿರುತ್ತಾರೆ. ತಮ್ಮ ಖಾತೆಯಿಂದ ರೂ. 50,000 ರಂತೆ ಎರಡು ಬಾರಿ ಒಟ್ಟು ರೂ. 1,00,000 ಗಳನ್ನು ಯಾವುದೇ ತರಹದ ಮಾಹಿತಿ ಇಲ್ಲದೆ ತನ್ನ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡಿದ್ದು, ದೂರುದಾರರ ಮೊಬೈಲಗೆ ಹಣ ಕಡಿತಗೊಂಡ ಬಗ್ಗೆ…
ಬೆಂಗಳೂರು : ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಾಲ್ತುಳಿತ ದುರಂತ ಸಂಭವಿಸಿರುವ ಕುರಿತಂತೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಇಂದು ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಸಾವಿಗೀಡಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಕಾಲ್ತುಳಿತದಲ್ಲಿ ರಾಜ್ಯದ ಕೆಲವರು ಗಾಯಗೊಂಡಿರುವ ಮಾಹಿತಿಯಿದೆ. ಅವರೆಲ್ಲರನ್ನು ಕ್ಷೇಮವಾಗಿ ರಾಜ್ಯಕ್ಕೆ ಕರೆತರಲು ಅಧಿಕಾರಿಗಳನ್ನು ನಿಯೋಜಿಸಿದ್ದು, ನಮ್ಮವರ ರಕ್ಷಣೆಗೆ ಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನು ನಡೆಸುತ್ತಿದೆ. ಕುಂಭಮೇಳದಲ್ಲಿ ಪಾಲ್ಗೊಂಡಿರುವ ಕನ್ನಡಿಗರು ಸ್ವಲ್ಪ ಜಾಗರೂಕತೆಯಿಂದಿರಿ ಎಂದು ಹೇಳಿದ್ದಾರೆ.
ಮಾಘ ಅಮಾವಾಸ್ಯೆಯ ಮಹತ್ವ ಹಿಂದೂ ಧರ್ಮದಲ್ಲಿ ಮಾಘ ಅಮಾವಾಸ್ಯೆಗೆ ತನ್ನದೇ ಆದ ಧಾರ್ಮಿಕ ಮಹತ್ವವಿದೆ. ಈ ದಿನ, ಭಕ್ತರು ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಲು, ಹವನ ಮತ್ತು ಯಜ್ಞಗಳನ್ನು ಮಾಡಲು ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ಈ ದಿನ ಪಿತೃ ಪೂಜೆ ಮತ್ತು ಪಿತೃ ತರ್ಪಣವನ್ನು ಮಾಡಲು ಮಂಗಳಕರವೆಂದು ಪರಿಗಣಿಸಲಾಗಿದೆ ಏಕೆಂದರೆ ಅಮವಾಸ್ಯೆಯ ದಿನವು ಪೂರ್ವಜರನ್ನು ಪೂಜಿಸಲು ಮೀಸಲಾಗಿದೆ ಮತ್ತು ಜನರು ಪೂರ್ವಜರ ಆಶೀರ್ವಾದವನ್ನು ಪಡೆಯುತ್ತಾರೆ. ಅಮವಾಸ್ಯೆಯ ದಿನದಂದು ಜನರು ಶ್ರದ್ಧಾ ಆಚರಣೆಗಳನ್ನು ಮಾಡುತ್ತಾರೆ ಮತ್ತು ಆಹಾರ, ನೀರು ಮತ್ತು ಪ್ರಾರ್ಥನೆಗಳನ್ನು ನೀಡುವ ಮೂಲಕ ತಮ್ಮ ಮೃತ ಪೂರ್ವಜರಿಗೆ ಗೌರವ ಸಲ್ಲಿಸುತ್ತಾರೆ. ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಇದು ಒಂದು ತಿಂಗಳ ಸಮಯ. ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಅತ್ಯಂತ ಪುಣ್ಯವೆಂದು ಪರಿಗಣಿಸಲಾಗಿದೆ. ಜನರು ಧ್ಯಾನ, ಪ್ರಾರ್ಥನೆ ಮತ್ತು ಆಂತರಿಕ ಸ್ಪಷ್ಟತೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ…
ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ ಕೆಳಕಂಡ ದಿನಾಂಕಗಳಂದು ಮಾಂಸ ರಹಿತ ದಿನವೆಂದು ಘೋಷಿಸಿದೆ. ಜನವರಿ 30 ರಂದು ಸರ್ವೋದಯ ದಿನ, ಫೆ. 26 ಮಹಾಶಿವರಾತ್ರಿ, ಏ.06 ರಂದು ಶ್ರೀರಾಮ ನವಮಿ ದಿನ, ಏ.10 ಮಹಾವೀರ ಜಯಂತಿ ದಿನ, ಮೇ.12 ಬುದ್ಧಪೂರ್ಣಿಮೆ ಜಯಂತಿ ದಿನ, ಆ.16 ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ, ಆ.27 ರಂದು ಗಣೇಶ ಚತುರ್ಥಿ ದಿನ, ಅ.02 ರಂದು ಗಾಂಧಿ ಜಯಂತಿ ದಿನ ಹಾಗೂ ನ.25 ರಂದು ಸೈಂಟ್ ಟಿ.ಎಲ್. ವಾಸ್ವಾನಿ ಜನ್ಮದಿನ. ಪ್ರಯುಕ್ತ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈ ಎಲ್ಲಾ ದಿನಾಂಕಗಳಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ಮೇಲ್ಕಂಡ ದಿನಾಂಕಗಳಂದು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.
ಬಳ್ಳಾರಿ : ಏಳುಬೆಂಚಿಯ ಆರ್ಒ ಪ್ಲಾಂಟ್ ನ ಪೂರ್ಣಿಮ ಎಂಟರ್ ಪ್ರೈಸಸ್ ನ ಮಾಲೀಕರಾದ ಅಮರೇಶ್ವರ ಶಾಸ್ತ್ರಿ ಇವರಿಗೆ ಮಂಜೂರಾದ ಹಾಲಿ ವಿದ್ಯುತ್ ಮಾಪಕವನ್ನು ಬೈಪಾಸ್ ಮಾಡಿಕೊಂಡು ಅನಧಿಕೃತವಾಗಿ ತಮ್ಮ ಇಂಡಸ್ಟ್ರಿಯ ವಿದ್ಯುತ್ ಉಪಕರಣಗಳಿಗೆ ಕಳ್ಳತನದಿಂದ ವಿದ್ಯುತ್ ಉಪಯೋಗಿಸಿ ಅನಧೀಕೃತ ಲಾಭ ಪಡೆದು ಜೆಸ್ಕಾಂ ಕಂಪನಿಗೆ ಹಾನಿ ಮಾಡಿರುವುದರಿಂದ ರೂ.18,02,951/- ದಂಡ ಮತ್ತು ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ವಿಧಿಸಿ ಇಲ್ಲಿನ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ ಅವರು ಆದೇಶಿಸಿದ್ದಾರೆ. 2022ರ ಆ.18 ರಂದು ಬೆಳಿಗ್ಗೆ 10.39 ಗಂಟೆಗೆ ಜೆಸ್ಕಾಂ ಜಾಗೃತ ದಳದ ಎಇ ಕೆ.ಗಾದಿಲಿಂಗಪ್ಪ ತಮ್ಮ ಸಿಬ್ಬಂದಿಯವರೊಂದಿಗೆ ವಿವಿಧೆಡೆ ವಿದ್ಯುತ್ ಕಳ್ಳತನ ಪ್ರಕರಣ ಪತ್ತೆಗಾಗಿ ಹೋದಾಗ ಕಂಡುಬಂದಿದ್ದು, ಇವರ ಮೇಲೆ ಕ್ರಮ ಕೈಗೊಳ್ಳಲು ಮುದ್ದೆ ಮಾಲುನೊಂದಿಗೆ ಜೆಸ್ಕಾಂ ಇಲಾಖೆಯವರು ಲಿಖಿತ ದೂರು ನೀಡಿದ್ದರು. ಪ್ರಕರಣದ ಸಾಕ್ಷಿದಾರರ ವಿಚಾರಣೆಯಿಂದ ಹಾಗೂ ತನಿಖೆಯಿಂದ ಆರೋಪಿತರ ವಿರುದ್ಧ ಆರೋಪ ಸಾಬಿತಾಗಿದ್ದರಿಂದ ಕಲಂ:…







