Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

₹30,000 ಸಂಬಳದಲ್ಲೂ ಶ್ರೀಮಂತರಾಗಬಹುದು : 50-30-20 ಸೂತ್ರದಿಂದ ಹಣ ಉಳಿಸುವ ಸುಲಭ ಮಾರ್ಗ

​ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ: ಜೂನ್ 23-24 ರಂದು ಉನ್ನತ ಮಟ್ಟದ ಮಹತ್ವದ ಮಾತುಕತೆ!

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಗ್ರಾಹಕರ ಅನುಮತಿ ಇಲ್ಲದೆ ಖಾತೆಯಲ್ಲಿನ ಹಣ ಕಡಿತವಾದ್ರೆ ಬ್ಯಾಂಕುಗಳೇ ಹೊಣೆ : ಗ್ರಾಹಕರ ಆಯೋಗ ಮಹತ್ವದ ಆದೇಶ.!
KARNATAKA

BIG NEWS : ಗ್ರಾಹಕರ ಅನುಮತಿ ಇಲ್ಲದೆ ಖಾತೆಯಲ್ಲಿನ ಹಣ ಕಡಿತವಾದ್ರೆ ಬ್ಯಾಂಕುಗಳೇ ಹೊಣೆ : ಗ್ರಾಹಕರ ಆಯೋಗ ಮಹತ್ವದ ಆದೇಶ.!

By kannadanewsnow57

ಕೊಪ್ಪಳ : ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಗ್ರಾಹಕರ ಅನುಮತಿ ಇಲ್ಲದೆ ಖಾತೆಯಲ್ಲಿನ ಹಣ ಕಡಿತವಾದ್ರೆ ಬ್ಯಾಂಕುಗಳೇ ಹೊಣೆ ಎಂದು ಗ್ರಾಹಕರ ಆಯೋಗ ಮಹತ್ವದ ಆದೇಶ ಹೊರಡಿಸಿದೆ.

ಹೌದು, ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ಕಡಿತಗೊಂಡಿರುವ ಪ್ರಕರಣದಡಿ ದೂರುದಾರರಿಗೆ ಪರಿಹಾರ ನೀಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.

ಗ್ರಾಹಕ ಫಿರ್ಯಾದು ಸಂಖ್ಯೆ: 56/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದನ್ವಯ ಫಿರ್ಯಾದುದಾರರಾದ ವೀರಣ್ಣ ತಂದೆ ನಾಗಪ್ಪ ಮಟ್ಟಿ, ಉದ್ಯೋಗ: ಶಿಕ್ಷಕರು, ಅಳವಂಡಿ ಗ್ರಾಮ ತಾಲ್ಲೂಕ ಮತ್ತು ಜಿಲ್ಲೆ ಕೊಪ್ಪಳ, ಇವರು ಎದುರುದಾರರಾದ ಕೆನರಾ ಬ್ಯಾಂಕ್ ಬೆಟಗೇರಿ ಬ್ರಾಂಚ್ ಕೊಪ್ಪಳ ಜಿಲ್ಲೆ, ಇವರಲ್ಲಿ ಎಸ್.ಬಿ ಖಾತೆ ಹೊಂದಿದ್ದು ಎದುರುದಾರರ ಬ್ಯಾಂಕಿನ ಗ್ರಾಹಕರಾಗಿರುತ್ತಾರೆ. ತಮ್ಮ ಖಾತೆಯಿಂದ ರೂ. 50,000 ರಂತೆ ಎರಡು ಬಾರಿ ಒಟ್ಟು ರೂ. 1,00,000 ಗಳನ್ನು ಯಾವುದೇ ತರಹದ ಮಾಹಿತಿ ಇಲ್ಲದೆ ತನ್ನ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡಿದ್ದು, ದೂರುದಾರರ ಮೊಬೈಲಗೆ ಹಣ ಕಡಿತಗೊಂಡ ಬಗ್ಗೆ ಸಂದೇಶ ಬಂದಿರುತ್ತದೆ.

ಮೋಬೈಲನಲ್ಲಿ ಸಂದೇಶ ನೋಡಿದ ತಕ್ಷಣವೇ ದೂರುದಾರರರು ಎದುರುದಾರರ ಬ್ಯಾಂಕಿಗೆ ಹೋಗಿ ತನ್ನ ಎಸ್.ಬಿ. ಖಾತೆಯಿಂದ ಅನಧಿಕೃತವಾಗಿ ಹಣ ಕಡಿತಗೊಂಡಿರುವ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ ಹಾಗೂ ತಕ್ಷಣವೇ ತನ್ನ ಖಾತೆಯಲ್ಲಿ ಬಾಕಿ ಹಣ ಅನಧಿಕೃತವಾಗಿ ಕಡಿತವಾಗುವುದನ್ನು ತಡೆಹಿಡಿಯುವಂತೆ ಮತ್ತು ತನ್ನ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ ಮೊತ್ತ ರೂ. 1,00,000 ಗಳನ್ನು ತನಗೆ ಹಿಂತಿರುಗಿಸುವಂತೆ ಲಿಖಿತ ರೂಪದಲ್ಲಿ ಕೋರಿರುತ್ತಾರೆ. ಇದರ ಜೊತೆಗೆ ಅಳವಂಡಿ ಪೋಲಿಸ್ ಠಾಣೆಗೆ ದೂರನ್ನು ಸಹ ಸಲ್ಲಿಸಿರುತ್ತಾರೆ. ಎದುರುದಾರರ ಬ್ಯಾಂಕಿನವರ ಸೂಚನೆಯಂತೆ ಸೈಬರ್ ಪೋಲಿಸ್ ರವರಿಗೂ ಸಹ ದೂರನ್ನು ನೀಡಿರುತ್ತಾರೆ. ಎದುರುದಾರರ ಬ್ಯಾಂಕಿನವರು ದೂರುದಾರರ ಮನವಿಗೆ ಸ್ಪಂದಿಸದೇ ಅವರ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡಿರುವ ಹಣ ರೂ. 1,00,000 ಗಳನ್ನು ಮರಳಿಸದೇ ಇದ್ದುದರಿಂದ ಮಾನಸಿಕವಾಗಿ ನೊಂದು ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.

ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು ಎನ್ ಮೇತ್ರಿ ಅವರು ಉಭಯ ಪಕ್ಷಗಾರರ ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ಎದುರುದಾರ ಕೆನರಾ ಬ್ಯಾಂಕ್, ಅಳವಂಡಿ ಶಾಖೆ ಇವರಿಗೆ ಆರ್.ಬಿ.ಐ ಮಾರ್ಗಸೂಚಿಗಳನ್ವಯ ದೂರುದಾರರ ಹೊಣೆಗಾರಿಕೆ ಶೂನ್ಯ ಇದ್ದು, ಎದುರುದಾರರ ಹೊಣೆಗಾರಿಕೆ ಹೆಚ್ಚಾಗಿದ್ದು ಎದುರುದಾರರು ತನ್ನ ಗ್ರಾಹಕರ ಖಾತೆಯಲ್ಲಿರುವ ಹಣವನ್ನು ಭದ್ರತೆಯಿಂದ ಕಾಪಾಡುವ ಹೊಣೆಗಾರಿಕೆ ಎದುರುದಾರರ ಬ್ಯಾಂಕಿನವರದ್ದಾಗಿದ್ದು, ಅದನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದು ಸೇವಾ ನ್ಯೂನತೆ ಎಸಗಿದ್ದರಿಂದ ದೂರುದಾರರ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ ಮೊತ್ತ ರೂ. 1,00,000 ಗಳನ್ನು ಪರಿಹಾರವಾಗಿ ನೀಡುವಂತೆ ಆದೇಶಿಸಿರುತ್ತಾರೆ ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ. 10,000 ಗಳನ್ನು ಹಾಗೂ ದೂರಿನ ಖರ್ಚು ರೂ. 5,000 ಗಳನ್ನು ಈ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

BIG NEWS : ಗ್ರಾಹಕರ ಅನುಮತಿ ಇಲ್ಲದೆ ಖಾತೆಯಲ್ಲಿನ ಹಣ ಕಡಿತವಾದ್ರೆ ಬ್ಯಾಂಕುಗಳೇ ಹೊಣೆ : ಗ್ರಾಹಕರ ಆಯೋಗ ಮಹತ್ವದ ಆದೇಶ.! BIG NEWS: Banks will be held responsible for deduction of money in accounts without customer's consent: Consumer Commission
Share. Facebook Twitter LinkedIn WhatsApp Email

Related Posts

₹30,000 ಸಂಬಳದಲ್ಲೂ ಶ್ರೀಮಂತರಾಗಬಹುದು : 50-30-20 ಸೂತ್ರದಿಂದ ಹಣ ಉಳಿಸುವ ಸುಲಭ ಮಾರ್ಗ

2 Mins Read

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

1 Min Read

LPG Gas Subsidy: `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಬಂದ್.!

2 Mins Read
Recent News

₹30,000 ಸಂಬಳದಲ್ಲೂ ಶ್ರೀಮಂತರಾಗಬಹುದು : 50-30-20 ಸೂತ್ರದಿಂದ ಹಣ ಉಳಿಸುವ ಸುಲಭ ಮಾರ್ಗ

​ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ: ಜೂನ್ 23-24 ರಂದು ಉನ್ನತ ಮಟ್ಟದ ಮಹತ್ವದ ಮಾತುಕತೆ!

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

ಇರಾನ್ ಶಾಂತಿ ಒಪ್ಪಂದ: ಅಮೆರಿಕ ಪರವಾಗಿ ಸ್ವಿಟ್ಜರ್ಲೆಂಡ್‌ನಲ್ಲಿ ಸಹಿ ಹಾಕಲಿದ್ದಾರಾ ಟ್ರಂಪ್? ಕೊನೆಗೂ ಮೌನ ಮುರಿದ ಯುಎಸ್ ಅಧ್ಯಕ್ಷ

State News
KARNATAKA

₹30,000 ಸಂಬಳದಲ್ಲೂ ಶ್ರೀಮಂತರಾಗಬಹುದು : 50-30-20 ಸೂತ್ರದಿಂದ ಹಣ ಉಳಿಸುವ ಸುಲಭ ಮಾರ್ಗ

By kannadanewsnow57 KARNATAKA 2 Mins Read

ಆರ್ಥಿಕವಾಗಿ ಸ್ಥಿರತೆ ಸಾಧಿಸಲು ನಾವು ಎಷ್ಟು ಸಂಪಾದಿಸುತ್ತಿದ್ದೇವೆ ಎನ್ನುವುದಕ್ಕಿಂತ, ಸಂಪಾದಿಸಿದ್ದರಲ್ಲಿ ಎಷ್ಟು ಉಳಿಸುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಅನೇಕರು…

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

LPG Gas Subsidy: `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಬಂದ್.!

ALERT : `ATM’ ಗ್ರಾಹಕರೇ ಎಚ್ಚರ: ಬ್ಯಾಂಕ್ ಖಾತೆ ಖಾಲಿ ಮಾಡಬಲ್ಲ 5 ವಂಚನೆಗಳ ಬಗ್ಗೆ ನೀವು ತಿಳಿಯಲೇಬೇಕು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.