Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ | Pahlaj Nihalani passes away

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಮ ಸಮಾಜದ ನಿರ್ಮಾಣಕ್ಕೆ ಅಂಬೇಡ್ಕರ್, ಬಾಬೂಜಿ ಕೊಡುಗೆ ಅನನ್ಯ: ಸಾಗರದಲ್ಲಿ ಜಯಂತ್ ಗುಣಗಾನ
KARNATAKA

ಸಮ ಸಮಾಜದ ನಿರ್ಮಾಣಕ್ಕೆ ಅಂಬೇಡ್ಕರ್, ಬಾಬೂಜಿ ಕೊಡುಗೆ ಅನನ್ಯ: ಸಾಗರದಲ್ಲಿ ಜಯಂತ್ ಗುಣಗಾನ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಭಾರತದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಆಹಾರ ಭದ್ರತೆಯ ಬಲವಾದ ಅಡಿಪಾಯ ಹಾಕಿದ ಕೀರ್ತಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ ರಾಮ್ ಅವರಿಗೆ ಸಲ್ಲುತ್ತದೆ. ಸಮ ಸಮಾಜದ ನಿರ್ಮಾಣದಲ್ಲಿ ಈ ಇಬ್ಬರು ಮಹನೀಯರ ಪಾತ್ರ ಅನನ್ಯ ಎಂದು ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್ ತಿಳಿಸಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ರಂಗಮಂದಿರದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಇಬ್ಬರು ಮಹನೀಯರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಂವಿಧಾನವೇ ಆತ್ಮಗೌರವದ ಹಾದಿ

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದ ಬಿ.ಆರ್. ಜಯಂತ್ ಅವರು, “ಸ್ತ್ರೀ ಸ್ವಾತಂತ್ರ್ಯ, ಸಾಮಾಜಿಕ ಅಸಮಾನತೆ ಮತ್ತು ಅಸ್ಪೃಶ್ಯತೆಯಂತಹ ರೋಗಗಳಿಂದ ಬಳಲುತ್ತಿದ್ದ ಭಾರತೀಯ ಸಮಾಜಕ್ಕೆ ಸಂವಿಧಾನದ ಮೂಲಕ ಹೊಸ ಚೇತನ ನೀಡಿದವರು ಅಂಬೇಡ್ಕರ್. ಮನುಧರ್ಮದ ಕಟ್ಟುಪಾಡುಗಳ ಕಾಲಘಟ್ಟದಲ್ಲಿ ಅವರು ನೀಡಿದ ಸಂವಿಧಾನ ನಮಗೆ ಆತ್ಮಗೌರವವನ್ನು ತಂದುಕೊಟ್ಟಿದೆ. ಸಂವಿಧಾನದ ಆಶಯಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ,” ಎಂದರು.

ಹಸಿವು ನೀಗಿಸಿದ ಬಾಬೂಜಿ

ದೇಶದ ಆಹಾರ ಭದ್ರತೆಯ ಬಗ್ಗೆ ಮಾತನಾಡುತ್ತಾ, “ಬಾಬು ಜಗಜೀವನ ರಾಮ್ ಅವರು ಕೃಷಿ ಸಚಿವರಾಗಿದ್ದಾಗ ದೇಶ ಎದುರಿಸುತ್ತಿದ್ದ ಆಹಾರ ಕ್ಷಾಮವನ್ನು ನೀಗಿಸಲು ಕ್ರಾಂತಿಕಾರಿ ಹೆಜ್ಜೆ ಇಟ್ಟರು. ಅವರ ಅವಧಿಯಲ್ಲಿ ಆಹಾರ ಉತ್ಪಾದನೆಯು 65 ದಶಲಕ್ಷ ಮೆಟ್ರಿಕ್ ಟನ್‌ನಿಂದ 240 ದಶಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಯಿತು. ಈ ಮೂಲಕ ದೇಶದ ಜನರ ಹಸಿವು ನೀಗಿಸುವಲ್ಲಿ ಅವರು ಯಶಸ್ವಿಯಾದರು,” ಎಂದು ಸ್ಮರಿಸಿದರು.

ವಿದ್ಯೆಯೇ ಅಸ್ತ್ರ

ವಿಶೇಷ ಉಪನ್ಯಾಸ ನೀಡಿದ ಸಹಾಯಕ ಪ್ರಾಧ್ಯಾಪಕ ಡಾ. ಉಮೇಶ್ ಕುಂಸಿ ಅವರು, “ಅಸಮಾನತೆ ಮತ್ತು ಅಂಧಶ್ರದ್ಧೆಯ ನಡುವೆಯೂ ಅಂಬೇಡ್ಕರ್ ಅವರು ಸಾಗರ ದಾಟಿ ವಿದ್ಯಾಭ್ಯಾಸ ಮಾಡಿ ಬಂದದ್ದು ಒಂದು ಐತಿಹಾಸಿಕ ಸಾಧನೆ. ಅವರ ಶ್ರೇಷ್ಠತೆಯನ್ನು ಗೌರವಿಸುವುದು ಎಂದರೆ ಅವರು ನೀಡಿದ ಸಂವಿಧಾನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು,” ಎಂದು ಕರೆ ನೀಡಿದರು.

ಗಣ್ಯರ ಉಪಸ್ಥಿತಿ ಮತ್ತು ಸನ್ಮಾನ

ಇದೇ ಸಂದರ್ಭದಲ್ಲಿ ಸಾಧಕಿ ಮತ್ತು ಯೋಗಪಟು ಕಾವ್ಯ ಕೆ. ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಈ ವೇಳೆ ವೇದಿಕೆಯಲ್ಲಿ ಸಾಗರ ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಸೀಲ್ದಾರ್ ಪ್ರದೀಪ್ ಆರ್., ಪೌರಾಯುಕ್ತ ಎಚ್.ಕೆ.ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಸಹನೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ ಕುಮಾರ್, ದಲಿತ ಸಂಘರ್ಷ ಸಮಿತಿಯ ಲಕ್ಷö್ಮಣ್ ಸಾಗರ್, ರೇವಪ್ಪ ಹೊಸಕೊಪ್ಪ, ನಾಗರಾಜ್, ಪ್ರೇಮಪ್ಪ, ಲಕ್ಷ್ಮಮ್ಮ, ಧರ್ಮರಾಜ್ ಇನ್ನಿತರರು ಹಾಜರಿದ್ದರು.

ಪ್ರಧಾನಿ ಮೋದಿ-ಅಧ್ಯಕ್ಷ ಟ್ರಂಪ್ ದೂರವಾಣಿ ಸಂಭಾಷಣೆ: ಪಶ್ಚಿಮ ಏಷ್ಯಾ ಶಾಂತಿ ಮತ್ತು ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒತ್ತು

ತಮಿಳುನಾಡಿನಲ್ಲೂ ಬಿಜೆಪಿ ‘ಗ್ಯಾರಂಟಿ’ ಮೊಳಗು: ಪ್ರತಿ ಮನೆಗೆ ₹10,000 ಸಹಾಯಧನ, 3 ಉಚಿತ ಸಿಲಿಂಡರ್ ಭರವಸೆ

Share. Facebook Twitter LinkedIn WhatsApp Email

Related Posts

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

2 Mins Read

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

2 Mins Read

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

1 Min Read
Recent News

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ | Pahlaj Nihalani passes away

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

State News
KARNATAKA

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಇಲ್ಲಿನ ಲಯನ್ಸ್ ಕ್ಲಬ್ ಸಾಗರ ಮತ್ತು ಪಿನಾಕಿ ಸ್ಟುಡಿಯೋಸ್ ಸಹಯೋಗದಲ್ಲಿ ಸಾಗರದ ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ‘ಮೂವಿಂಗ್…

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

BIG NEWS: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ : ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.