ಶಿವಮೊಗ್ಗ: ಇಲ್ಲಿನ ಲಯನ್ಸ್ ಕ್ಲಬ್ ಸಾಗರ ಮತ್ತು ಪಿನಾಕಿ ಸ್ಟುಡಿಯೋಸ್ ಸಹಯೋಗದಲ್ಲಿ ಸಾಗರದ ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ‘ಮೂವಿಂಗ್ ಫೋಟೋ’ (Moving Photo) ಎಂಬ ವಿಶೇಷ ಕಿರುಚಿತ್ರವನ್ನು ಜೂನ್.6ರಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವುದಾಗಿ ಲಯನ್ಸ್ ಕ್ಲಬ್ ಅಧ್ಯಕ್ಷರಾದಂತ ಡಾ.ಪ್ರಸನ್ನ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಜೂನ್ 5, 6 ಮತ್ತು 7ರಂದು ಸಾಗರದ ಶ್ರೀ ರಾಘವೇಂದ್ರ ಸಭಾಭವನದಲ್ಲಿ ಹಲಸು ಮತ್ತು ಮಾವು ಮೇಳ ನಡೆಯಲಿದೆ. ಈ ಹಲಸು ಮತ್ತು ಮಾವಿನ ಮೇಳದ ಸಂದರ್ಭದ ಜೂನ್ 5, 2026 ರಂದು ಕಿರುಚಿತ್ರದ ಆಡಿಯೋ ಹಾಗೂ ಜೂನ್ 6, 2026 ರಂದು ಶಾರ್ಟ್ ಮೂವಿಯನ್ನು ಅಧಿಕೃತವಾಗಿ Pinaki Studio ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ, ಕ್ಲಬ್‌ನ ಕಾರ್ಯಕ್ರಮವೊಂದಕ್ಕಾಗಿ ಅತ್ಯುತ್ತಮ ಪ್ರೋಮೋ ಎಡಿಟ್ ಮಾಡಿಕೊಟ್ಟಿದ್ದ ಶ್ರವಣ್ ಅವರ ಕಾರ್ಯವನ್ನು ಶ್ಲಾಘಿಸಲಾಯಿತು ಹಾಗೂ ಯಕ್ಷಗಾನ ಕಲಾವಿದೆ ಲಕ್ಷ್ಮಿ ಅವರು ಇದಕ್ಕೆ ಧ್ವನಿ (Voice Over) ನೀಡಿರುವುದಾಗಿ ತಿಳಿಸಿದರು.
ಕಲೆ ಮತ್ತು ಸಮಾಜ ಸೇವೆಗೆ ಲಯನ್ಸ್ ಕ್ಲಬ್ ಬೆಂಬಲ
ಲಯನ್ಸ್ ಕ್ಲಬ್ ಸಾಗರವು ಕೇವಲ ಸಮಾಜ ಸೇವೆಯಷ್ಟೇ ಅಲ್ಲದೆ, ಕಲೆ ಮತ್ತು ಮನರಂಜನಾ ಕ್ಷೇತ್ರದಲ್ಲೂ ಯುವಕರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸ್ಥಳೀಯ ಯುವಕರ ಪ್ರತಿಭೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಸ್ಥೆಯು ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಸಾಗರ ತಾಲ್ಲೂಕು ಅಧ್ಯಕ್ಷ ಡಾ.ಪ್ರಸನ್ನ ಆಶಯ ವ್ಯಕ್ತಪಡಿಸಿದರು.
ಸಿನಿಮಾ ತಯಾರಕರ ಸಂಕಷ್ಟದ ಕಥೆ
ಕಿರುಚಿತ್ರದ ನಿರ್ದೇಶಕ, ನಟ ಹಾಗೂ ಫಿಲ್ಮ್ ಮೇಕರ್ ಆಗಿರುವ ಯುವ ಪ್ರತಿಭೆ ರವಿಕಿಶನ್ ವಿಜಯಕುಮಾರ್ ಮಾತನಾಡಿ, “ಈ ಸಿನಿಮಾವು ಸಿನಿಮಾ ತಯಾರಕರು (Film Makers) ಎದುರಿಸುವ ಸವಾಲುಗಳು ಮತ್ತು ಅವರ ಹೋರಾಟದ (Struggle) ಕಥೆಯನ್ನು ಒಳಗೊಂಡಿದೆ. ಸಾಗರದ ಸ್ಥಳೀಯ ಯುವಕರೇ ಸೇರಿ, ಸ್ಥಳೀಯ ಪ್ರದೇಶಗಳಲ್ಲೇ ಶ್ರಮಪಟ್ಟು ಈ ಚಿತ್ರವನ್ನು ಸಿದ್ಧಪಡಿಸಿದ್ದೇವೆ. ಯುವ ಪ್ರತಿಭೆಗಳ ಈ ಪ್ರಯತ್ನಕ್ಕೆ ಮಾಧ್ಯಮಗಳು ಮತ್ತು ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು” ಎಂದು ವಿನಂತಿಸಿದರು.
ಶಿಕ್ಷಣದ ಜೊತೆ ಕಲಾ ಅನ್ವೇಷಣೆ
ಲಯನ್ಸ್ ಕ್ಲಬ್‌ನ ಪ್ರಮುಖರಾದ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ, “ರವಿಕಿಶನ್ ಅವರು ಬಿ.ಇ. ಇಂಜಿನಿಯರಿಂಗ್ ಪದವೀಧರರಾಗಿದ್ದು, ಸಿನಿಮಾ ಕ್ಷೇತ್ರದ ಮೇಲಿನ ಆಸಕ್ತಿಯಿಂದ ಈ ಕಿರುಚಿತ್ರ ನಿರ್ಮಿಸಿದ್ದಾರೆ. ಚಿತ್ರದ ಸಿನಿಮಾಟೋಗ್ರಾಫರ್ ಆಗಿ ಯತಿನ್ ಶೆಟ್ಟಿ ಕಾರ್ಯನಿರ್ವಹಿಸಿದ್ದು, ಸದ್ಯ ಅವರು ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಎಲ್.ಬಿ. ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಬಿಕಾಂ, ಬಿ.ಇ ಪದವಿ ಪಡೆದ ವಿದ್ಯಾರ್ಥಿಗಳು ಜಾತಿ-ಧರ್ಮದ ಭೇದ ಮರೆತು, ಸ್ನೇಹ ಹಾಗೂ ಸೃಜನಶೀಲತೆಯಿಂದ ಈ ಚಿತ್ರಕ್ಕಾಗಿ ದುಡಿದಿದ್ದಾರೆ. ನಾನೂ ಕೂಡ ಈ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದೇನೆ” ಎಂದರು.
ಇದೇ ವೇಳೆ, ಕ್ಲಬ್‌ನ ಕಾರ್ಯಕ್ರಮವೊಂದಕ್ಕಾಗಿ ಅತ್ಯುತ್ತಮ ಪ್ರೋಮೋ ಎಡಿಟ್ ಮಾಡಿಕೊಟ್ಟಿದ್ದ ಶ್ರವಣ್ ಅವರ ಕಾರ್ಯವನ್ನು ಶ್ಲಾಘಿಸಲಾಯಿತು ಹಾಗೂ ಯಕ್ಷಗಾನ ಕಲಾವಿದೆ ಲಕ್ಷ್ಮಿ ಅವರು ಇದಕ್ಕೆ ಧ್ವನಿ (Voice Over) ನೀಡಿರುವುದಾಗಿ ತಿಳಿಸಲಾಯಿತು.
ಕಲೆ ಮತ್ತು ಸಮಾಜ ಸೇವೆಗೆ ಲಯನ್ಸ್ ಕ್ಲಬ್ ಬೆಂಬಲ
ಲಯನ್ಸ್ ಕ್ಲಬ್ ಸಾಗರವು ಕೇವಲ ಸಮಾಜ ಸೇವೆಯಷ್ಟೇ ಅಲ್ಲದೆ, ಕಲೆ ಮತ್ತು ಮನರಂಜನಾ ಕ್ಷೇತ್ರದಲ್ಲೂ ಯುವಕರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸ್ಥಳೀಯ ಯುವಕರ ಪ್ರತಿಭೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಸ್ಥೆಯು ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಪದಾಧಿಕಾರಿಗಳು ಆಶಯ ವ್ಯಕ್ತಪಡಿಸಿದರು
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಸಹ-ನಿರ್ದೇಶಕ ಹಾಗೂ ನಟರಾದ ಗಗನ್ ಕುಗ್ವೆ, ತುಷಾರ್ ಶೆಟ್ಟಿ, ಲಯನ್ಸ್ ಕ್ಲಬ್ ಸದಸ್ಯರಾದ ಅಶೋಕ್ ಬೆಳೂರು, ನಾಗರಾಜ್ ಗುಡ್ಡೇಮನೆ, ಉದ್ಯಮಿ ಲಿಂಗರಾಜ್, ಸಂತೋಷ್ ಸೇರಿದಂತೆ ಚಿತ್ರತಂಡದ ಯುವ ಪ್ರತಿಭೆಗಳು ಉಪಸ್ಥಿತರಿದ್ದರು.








