Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಸರ್ಕಾರದಿಂದ ನೇರವಾಗಿ / ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿಗಳು/ ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸುವ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದನ್ವಯ, ದಿನಾಂಕ:30.01.2025ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ: ಸಿ.80/2025ರಲ್ಲಿ ತಿರ್ಮಾನಿಸಿದಂತೆ, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ “ಸಂಬಳ ಪ್ಯಾಕೇಜ್‌ಗಳ” ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ/ನೌಕರರಿಗೆ (ಸರ್ಕಾರಿ / ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಕಡ್ಡಾಯಗೊಳಿಸುವ ಬಗ್ಗೆ ಆದೇಶಿಸಲಾಗಿದೆ. ಉಲ್ಲೇಖಿತ ಪತ್ರದಲ್ಲಿನ ಅಂಶಗಳ ಹಿನ್ನೆಲೆ ಹಾಗೂ ಸಚಿವ ಸಂಪುಟದ ಸಭೆಯಲ್ಲಿ ತಿರ್ಮಾನಿಸಿದಂತೆ, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಈ ಕೆಳಗಿನಂತೆ ಆದೇಶಿಸಲಾಗಿದೆ:- a) ವಿವಿಧ ಬ್ಯಾಂಕುಗಳು ಒದಗಿಸುವ “ಸಂಬಳ ಪ್ಯಾಕೇಜ್‌ಗಳ” ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ/ನೌಕರರಿಗೆ (ಸರ್ಕಾರಿ / ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಕಡ್ಡಾಯಗೊಳಿಸಿದೆ.…
ಬಳ್ಳಾರಿ : ನಗರದ ಕಂಟೋನ್‌ಮೆAಟ್‌ನ ಶಾಂತಿಧಾಮ ಆವರಣದ ಸರ್ಕಾರಿ ಕಿವುಡು ಮತ್ತು ಮೂಕ ಮಕ್ಕಳ ಪಾಠಶಾಲೆಯಲ್ಲಿ 1ನೇ ತರಗತಿಯಿಂದ 08 ನೇ ತರಗತಿಯವರೆಗೆ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರ್ಕಾರಿ ಕಿವುಡು ಮಕ್ಕಳ ಶಾಲೆಯ ಅಧೀಕ್ಷಕ ಹೆಚ್.ಗೋವಿಂದಪ್ಪ ಅವರು ತಿಳಿಸಿದ್ದಾರೆ. ಈ ಶಾಲೆಯಲ್ಲಿ ಕಿವುಡು ಮತ್ತು ಮೂಕ ಬಾಲಕರಿಗೆ ಉಚಿತವಾಗಿ ವಿಶೇಷ ಶಿಕ್ಷಣವನ್ನು ನೀಡಲಾಗುತ್ತಿದ್ದು, 6 ವರ್ಷದಿಂದ 14 ವರ್ಷದ ಶ್ರವಣದೋಷ ಮಕ್ಕಳು ದಾಖಲಾತಿ ಪಡೆಯಬಹುದು. ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಊಟ ಮತ್ತು ವಸತಿ, ಪಠ್ಯ ಪುಸ್ತಕ, ಸಮವಸ್ತç ಸೌಲಭ್ಯಗಳೊಂದಿಗೆ ಮಾತಿನ ತರಬೇತಿ, ಶ್ರವಣ ತರಬೇತಿ, ಭಾಷೆ ಕಲಿಕೆ, ಕಂಪ್ಯೂಟರ್ ತರಗತಿ, ಸ್ಮಾರ್ಟ್ ಕ್ಲಾಸ್, ಸೈನ್ಸ್ ಲ್ಯಾಬ್, ವಿಶೇಷ ಶಿಕ್ಷಕರಿಂದ ವಿಷಯ ಭೋದನೆ, ಮಾರ್ಚ್ಫಸ್ಟ್, ಸಾಮೂಹಿಕ ನೃತ್ಯ, ಕ್ರೀಡೆ ಹಾಗೂ ಸಹಪಠ್ಯ ಚಟುವಟಿಕೆಗಳನ್ನು ಕಲಿಸಿಕೊಡಲಾಗುತ್ತದೆ. ಶಾಲೆಗೆ ಶ್ರವಣದೋಷ ಮಕ್ಕಳನ್ನು ದಾಖಲಿಸಲು ಇಚ್ಛಿಸುವ ತಂದೆ, ತಾಯಿ ಮತ್ತು ಪೋಷಕರು ಅಗತ್ಯ ದಾಖಲೆ ಸಲ್ಲಿಸಿ ಪ್ರವೇಶಾತಿ ಪಡೆಯಬಹುದು. ಬೇಕಾದ ದಾಖಲೆಗಳು: ಶಾಲೆ ಪ್ರವೇಶ ಅರ್ಜಿ…
ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಉಡುಪಿ ಜಿಲ್ಲೆಗೆ ಪ್ರಥಮವನ್ನು ಪಡೆದುಕೊಂಡಿದ್ದರೇ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಶಾಲಾ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಅವರು, ವಾಣಿಜ್ಯ ವಿಭಾಗಶೇ.76.07ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಸಂಜನಾ ಬಾಯಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆ ಪಿಯು ಕಾಲೇಜಿನ ವಿದ್ಯಾರ್ಥಿನಿ ಆಗಿದ್ದಾರೆ ಎಂದರು. ಕಲಾ ವಿಭಾಗದಲ್ಲಿ ಲಾರಿ ಚಾಲಕನ ಮಗಳು ಸಂಜನಾಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜಯನಗರದ ಕೊಟ್ಟೂರು ತಾಲೂಕಿನ ಸಂಜನಾಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು 600 ಕ್ಕೆ 597 ಅಂಕ ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಮೂಲ್ಯ, ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ ಮೊದಲ ರ್ಯಾಂಕ್ ಗಳಿಸಿದ್ದಾರೆ. ರಾಮನಗ 69.71, ಕೊಪ್ಪಳ 67.20, ಬಳ್ಳಾರಿ 64.41, ಚಿತ್ರದುರ್ಗ 59.87, ಕೋಲಾರ 72.45, ಬೀದರ್ 67.31,…
ತಮಿಳುನಾಡು: ಆ ಪ್ರದೇಶಕ್ಕೆ ರೈಲು ಸಂಪರ್ಕ ಕಲ್ಪಿಸದೇ ಇದ್ದರೇ ಭಾರತದೊಂದಿಗೆ ಸಂಪರ್ಕವೇ ಇರುತ್ತಿರಲಿಲ್ಲ. ರೈಲು ಮಾರ್ಗದೊಂದಿಗೆ ಸಂಪರ್ಕ ಪಡೆದಂತ ಭಾರತದ ಭೂ ಭಾಗವೇ ರಾಮೇಶ್ವರಂ. ಈ ನಗರಕ್ಕೆ ಸಂಪರ್ಕ ಕಲ್ಪಿಸಿದ್ದೇ ಪಂಬನ್ ಸೇತುವೆ. ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರಕ್ಕೆ ನೂತನ ಸಮುದ್ರ ರೈಲು ಸೇತುವೆ ಸಿದ್ಧಗೊಂಡಿದೆ. ಇಂತಹ ದೇಶದ ಮೊದಲ ಲಿಫ್ಟ್ ಸೇತುವೆ ರಾಮೇಶ್ವರಂನ ಪಂಬನ್ ಪ್ರಿಡ್ಜ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ. ರಾಮೇಶ್ವರಂ, ತಮಿಳುನಾಡು: ಭಾರತದ ಮೊದಲ ಲಂಬ ಲಿಫ್ಟ್ ಸಮುದ್ರ ಸೇತುವೆಯಾದ ಹೊಸ ಪಂಬನ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು ಮತ್ತು ರಾಮೇಶ್ವರಂ-ತಾಂಬರಂ (ಚೆನ್ನೈ) ಹೊಸ ರೈಲು ಸೇವೆಗೆ ಹಸಿರು ನಿಶಾನೆ ತೋರಿದರು. https://twitter.com/ANI/status/1908787021176336404?ref_src=twsrc%5Egoogle%7Ctwcamp%5Eserp%7Ctwgr%5Etweet ರಾಮೇಶ್ವರಂ ದ್ವೀಪಕ್ಕೆ ಭಾರತೀಯ ರೈಲ್ವೆಯಿಂದ ಸಂಪರ್ಕ ಒಂದು ಕಾಲದಲ್ಲಿ ಆ ಭೂ ಭಾಗ ಸುತ್ತಲೂ ಸಮುದ್ರದಿಂದ ಆವೃತ್ತವಾಗಿ ದ್ವೀಪವಾಗಿತ್ತು. ಆ ದ್ವೀಪಕ್ಕೆ ಸಂಪರ್ಕ ಕಲ್ಪಿಸಿದ್ದು ರೈಲ್ವೆ ಸಾರಿಗೆ ಸಂಚಾರದ ಮೂಲಕ. ಈಗ ರಸ್ತೆ, ರೈಲು ಮಾರ್ಗದ ಮೂಲಕ…
ದೇಶಾದ್ಯಂತ ತಾಪಮಾನದಿಂದ ಜನರು ತತ್ತರಿಸಿದ್ದಾರೆ. ಈ ಸಮಯದಲ್ಲೇ ಮತ್ತೊಂದು ಸಮಸ್ಯೆ ಉದ್ಭವಿಸಿದ್ದು, ಇದು ನಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಿಗೆ ಸಂಬಂಧಿಸಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ, ನಿಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಅತಿಯಾಗಿ ಬಿಸಿಯಾಗುವ ಮತ್ತು ಸ್ಫೋಟಗೊಳ್ಳುವ ಅಪಾಯವಿದೆ. ಅಂತಹ ಪರಿಸ್ಥಿತಿಯಲ್ಲಿ, ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ನೋಡಿಕೊಳ್ಳುವುದು ನಿಮಗೆ ದೊಡ್ಡ ಕೆಲಸವಾಗಿದೆ. ನಿಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ತಂಪಾಗಿಡಲು ಸಹಾಯ ಮಾಡುವ ಕೆಲವು ಸಲಹೆಗಳ ಬಗ್ಗೆ ಇಲ್ಲಿ ನಾವು ನಿಮಗೆ ಹೇಳಲಿದ್ದೇವೆ. ಮೊಬೈಲ್ ಫೋನ್ ಗಳು ಮತ್ತು ಲ್ಯಾಪ್ ಟಾಪ್ ಗಳು: ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಮತ್ತು ಎಸಿಗಳಂತಹ ಎಲೆಕ್ಟ್ರಾನಿಕ್ ಸಾಧನಗಳು ಕೆಲಸ ಮಾಡುವಾಗ ಶಾಖವನ್ನು ಉತ್ಪಾದಿಸುತ್ತವೆ. ಅತಿಯಾಗಿ ಚಾರ್ಜ್ ಮಾಡುವುದು ಅಥವಾ ದೀರ್ಘಕಾಲದ ಬಳಕೆಯು ಬ್ಯಾಟರಿಗಳು ಹೆಚ್ಚು ಬಿಸಿಯಾಗಲು ಕಾರಣವಾಗಬಹುದು, ಸ್ಫೋಟ ಅಥವಾ ಬೆಂಕಿಯ ಅಪಾಯವನ್ನು ಹೆಚ್ಚಿಸುತ್ತದೆ. ಇನ್ವರ್ಟರ್ ಮತ್ತು ಯುಪಿಎಸ್ ವ್ಯವಸ್ಥೆ: ಬೆಳೆಯುತ್ತಿರುವ ಬೇಸಿಗೆಯಲ್ಲಿ, ನಿಮ್ಮ ಇನ್ವರ್ಟರ್ ಮತ್ತು ಯುಪಿಎಸ್ ವ್ಯವಸ್ಥೆಯು ನಿಮಗೆ ಬೆದರಿಕೆ ಎಂದು ಸಾಬೀತುಪಡಿಸಬಹುದು. ಅತಿಯಾಗಿ ಬಿಸಿಯಾಗುವುದರಿಂದ, ಈ…
ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣದ ನಂತರ ಎರಡನೇ ಶ್ರೀ ರಾಮ ನವಮಿ ಆಚರಣೆಗಳು ಅದ್ಧೂರಿಯಾಗಿ ನಡೆಯುತ್ತಿವೆ. ಇಂದು ಮಧ್ಯಾಹ್ನ 12 ಗಂಟೆಗೆ ರಾಮನಿಗೆ ಅಭಿಷೇಕ ನಡೆದಿದೆ. ಈ ಸಂದರ್ಭದಲ್ಲಿ, ಸೂರ್ಯನ ಕಿರಣಗಳೊಂದಿಗೆ ತಿಲಕವನ್ನು ಹಚ್ಚಲಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸೂರ್ಯನ ಕಿರಣಗಳು ರಾಮನ ಹಣೆಯ ಮೇಲೆ ನಾಲ್ಕು ನಿಮಿಷಗಳ ಕಾಲ ಹೊಳೆದಿದೆ. ದೇವಾಲಯದ ಮೂರನೇ ಮಹಡಿಯಿಂದ ಗರ್ಭಗುಡಿಯಲ್ಲಿರುವ ಬಾಲ ರಾಮನ ಹಣೆಯ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಸನಾತನ ಧರ್ಮದಲ್ಲಿ, ಸೂರ್ಯನನ್ನು ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ಸೂರ್ಯನು ತನ್ನ ಕಿರಣಗಳಿಂದ ರಾಮನಿಗೆ ತಿಲಕವನ್ನು ಹಚ್ಚಿದಾಗ ಅವನೊಳಗಿನ ದೈವತ್ವ ಜಾಗೃತಗೊಳ್ಳುತ್ತದೆ ಎಂದು ನಂಬಲಾಗಿದೆ. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ. ಆದ್ದರಿಂದ ಪ್ರಪಂಚದಾದ್ಯಂತದ ಭಕ್ತರು ತಮ್ಮ ಮನೆಗಳಿಂದಲೇ ಈ ಪವಾಡವನ್ನು ವೀಕ್ಷಿಸುವ ಅವಕಾಶವನ್ನು ಹೊಂದಿದ್ದಾರೆ.…
ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣದ ನಂತರ ಎರಡನೇ ಶ್ರೀ ರಾಮ ನವಮಿ ಆಚರಣೆಗಳು ಅದ್ಧೂರಿಯಾಗಿ ನಡೆಯುತ್ತಿವೆ. ಇಂದು ಮಧ್ಯಾಹ್ನ 12 ಗಂಟೆಗೆ ರಾಮನಿಗೆ ಅಭಿಷೇಕ ನಡೆದಿದೆ. ಈ ಸಂದರ್ಭದಲ್ಲಿ, ಸೂರ್ಯನ ಕಿರಣಗಳೊಂದಿಗೆ ತಿಲಕವನ್ನು ಹಚ್ಚಲಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸೂರ್ಯನ ಕಿರಣಗಳು ರಾಮನ ಹಣೆಯ ಮೇಲೆ ನಾಲ್ಕು ನಿಮಿಷಗಳ ಕಾಲ ಹೊಳೆದಿದೆ. ದೇವಾಲಯದ ಮೂರನೇ ಮಹಡಿಯಿಂದ ಗರ್ಭಗುಡಿಯಲ್ಲಿರುವ ಬಾಲ ರಾಮನ ಹಣೆಯ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಸನಾತನ ಧರ್ಮದಲ್ಲಿ, ಸೂರ್ಯನನ್ನು ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ಸೂರ್ಯನು ತನ್ನ ಕಿರಣಗಳಿಂದ ರಾಮನಿಗೆ ತಿಲಕವನ್ನು ಹಚ್ಚಿದಾಗ ಅವನೊಳಗಿನ ದೈವತ್ವ ಜಾಗೃತಗೊಳ್ಳುತ್ತದೆ ಎಂದು ನಂಬಲಾಗಿದೆ. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ. ಆದ್ದರಿಂದ ಪ್ರಪಂಚದಾದ್ಯಂತದ ಭಕ್ತರು ತಮ್ಮ ಮನೆಗಳಿಂದಲೇ ಈ ಪವಾಡವನ್ನು ವೀಕ್ಷಿಸುವ ಅವಕಾಶವನ್ನು ಹೊಂದಿದ್ದಾರೆ.…
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಮರ್ಡರ್ ಆಗಿದ್ದು, ಯುವಕನ ಕೊಲೆ ಮಾಡಿ ಶವ ಎಸೆದು ಹೋಗಿರುವ ಘಟನೆ ನಡೆದಿದೆ. ಬೆಂಗಳೂರಿನ ಪೀಣ್ಯದ ಪಂಚಮುಖ ಲೇಔಟ್ ಬಳಿ ಯುವಕನ ಶವ ಪತ್ತೆಯಾಗಿದ್ದು, ಮೃತ ಯುವಕನ ಮುಖ, ದೇಹ, ಕೈಗಳ ಮೇಲೆ ಹಲ್ಲೆ ಮಾಡಿರುವ ಗುರುತುಗಳ ಪತ್ತೆಯಾಗಿದೆ. ಯುವಕನನ್ನು ಬೇರೆಡೆ ಕೊಲೆ ಮಾಡಿ ಲೇಔಟ್ ಬಳಿ ತಂದು ಬೀಸಾಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು : ಇಂದು ದೇಶಾದ್ಯಂತ ರಾಮನವಮಿ ಆಚರಿಸಲಾಗುತ್ತಿದ್ದು, ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಅವರು ರಾಮನವಮಿಯ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಭು ಶ್ರೀರಾಮಚಂದ್ರನ ವಚನ ಪಾಲನೆ, ಪ್ರಜಾಸೇವೆಯ ಬದ್ಧತೆ, ನ್ಯಾಯ ನಿಷ್ಠುರತೆ, ಪ್ರೀತಿ – ಮಮತೆ ಮುಂತಾದ ಮಾನವೀಯ ಮೌಲ್ಯಗಳು ನಮ್ಮೆಲ್ಲರ ಆದರ್ಶವಾಗಲಿ. ಪಾನಕ – ಕೋಸಂಬರಿಯ ಜೊತೆ ಸ್ನೇಹ – ಸೌಹಾರ್ದತೆಯು ಮಿಳಿತಗೊಳ್ಳಲಿ, ದ್ವೇಷ ಅಳಿದು ಪ್ರೀತಿಯ ಬೆಳಕು ಎಲ್ಲೆಡೆ ಬೆಳಗಲಿ ಎಂದು ಹಾರೈಸುತ್ತೇನೆ. ಸರ್ವರಿಗೂ ರಾಮನವಮಿಯ ಶುಭಾಶಯಗಳು ಎಂದು ಹೇಳಿದ್ದಾರೆ. https://twitter.com/siddaramaiah/status/1908744762414555582?ref_src=twsrc%5Egoogle%7Ctwcamp%5Eserp%7Ctwgr%5Etweet
ಕಾಲ ಬದಲಾದಂತೆ ರೋಗಗಳೂ ಬದಲಾಗುತ್ತಿವೆ. ದೈಹಿಕ ಕಾಯಿಲೆಗಳ ಬದಲು ಮಾನಸಿಕ ಕಾಯಿಲೆಗಳು ಹೆಚ್ಚುತ್ತಿವೆ. ಅವರು ವಿಶೇಷವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಇದಕ್ಕಾಗಿಯೇ ಖಿನ್ನತೆ ನಿವಾರಕ ಔಷಧಿಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಆದಾಗ್ಯೂ, ಈ ಔಷಧಿಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಇತ್ತೀಚಿನ ಅಧ್ಯಯನವು ದೀರ್ಘಕಾಲದವರೆಗೆ ಖಿನ್ನತೆ-ಶಮನಕಾರಿಗಳನ್ನು ತೆಗೆದುಕೊಳ್ಳುವ ಜನರು ಹೃದಯ ವೈಫಲ್ಯ ಅಥವಾ ಇತರ ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತಾರೆ ಎಂದು ಕಂಡುಹಿಡಿದಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಹತಾಶೆ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು, ಲಕ್ಷಾಂತರ ಜನರು ಖಿನ್ನತೆ-ಶಮನಕಾರಿಗಳ ಸಹಾಯವನ್ನು ಪಡೆಯುತ್ತಾರೆ. ಖಿನ್ನತೆಗೆ ಔಷಧಿಗಳನ್ನು ದೀರ್ಘಕಾಲದವರೆಗೆ ತೆಗೆದುಕೊಳ್ಳುವುದರಿಂದ ನಿಮ್ಮ ಹೃದಯದ ಮೇಲೆ ಅಪಾಯಕಾರಿ ಪರಿಣಾಮ ಬೀರಬಹುದು. ಇತ್ತೀಚಿನ ಅಧ್ಯಯನವೊಂದು ಖಿನ್ನತೆ-ಶಮನಕಾರಿಗಳ ದೀರ್ಘಕಾಲೀನ ಬಳಕೆಯು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತೋರಿಸಿದೆ. ಇದು ಅಕಾಲಿಕ ಮರಣಕ್ಕೆ ಕಾರಣವಾಗುತ್ತದೆ. ಡೆನ್ಮಾರ್ಕ್‌ನಲ್ಲಿ 4.3 ಮಿಲಿಯನ್ ಜನರ ಮೇಲೆ ನಡೆಸಲಾದ ಈ ಅಧ್ಯಯನವು, ಕನಿಷ್ಠ 1 ರಿಂದ 5 ವರ್ಷಗಳ ಕಾಲ…