Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ: ಜಾಗತಿಕ ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಪರ್ವ ಮುಂದುವರಿದಿದ್ದು, 2026ರ ಮೊದಲ ತ್ರೈಮಾಸಿಕವು ಉದ್ಯೋಗಿಗಳ ಪಾಲಿಗೆ ಅತ್ಯಂತ ಕಠಿಣವಾಗಿ ಪರಿಣಮಿಸಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಆಟೊಮೇಷನ್ ಅಬ್ಬರಕ್ಕೆ ಸಿಲುಕಿ, ಕಳೆದ ಕೇವಲ ಮೂರು ತಿಂಗಳಲ್ಲಿ ಸುಮಾರು 80,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಕೋವಿಡ್ ನಂತರದ ಅತಿದೊಡ್ಡ ಲೇ-ಆಫ್ ಟ್ರೇಡಿಂಗ್ ಪ್ಲಾಟ್ಫಾರ್ಮ್ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕೋವಿಡ್ ಸಾಂಕ್ರಾಮಿಕದ ನಂತರ ತಾಂತ್ರಿಕ ವಲಯ ಕಂಡ ಅತಿದೊಡ್ಡ ಉದ್ಯೋಗ ಕಡಿತ ಇದಾಗಿದೆ. ಕೇವಲ ವೆಚ್ಚ ಕಡಿತವಷ್ಟೇ ಅಲ್ಲದೆ, ತಂತ್ರಜ್ಞಾನದಲ್ಲಿ ಉಂಟಾಗುತ್ತಿರುವ ಕ್ಷಿಪ್ರ ಬದಲಾವಣೆಗಳು ಈ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿವೆ. ವರದಿಯ ಮುಖ್ಯಾಂಶಗಳು: ಅವಧಿಗೂ ಮುನ್ನ ಉದ್ಯೋಗ ಕಡಿತ: 2026ರ ಜನವರಿಯಿಂದ ಮಾರ್ಚ್ ಅವಧಿಯಲ್ಲೇ 80,000 ಮಂದಿಗೆ ಗೇಟ್ಪಾಸ್ ನೀಡಲಾಗಿದೆ. ಒಟ್ಟು ಅಂಕಿಅಂಶ: 2021 ರಿಂದ ಈವರೆಗೆ ಜಾಗತಿಕವಾಗಿ 10 ಲಕ್ಷಕ್ಕೂ ಹೆಚ್ಚು ಐಟಿ ನುರಿತ ಉದ್ಯೋಗಿಗಳು ಉದ್ಯೋಗದಿಂದ ವಂಚಿತರಾಗಿದ್ದಾರೆ. ಕಾರಣ: ಕಂಪನಿಗಳು…
ಇಂದಿನ ಕಾಲದಲ್ಲಿ ಅಡುಗೆ ಮನೆಯಲ್ಲಿ ಎಲ್ಪಿಜಿ ಸಿಲಿಂಡರ್ ಇಲ್ಲದೆ ಕೆಲಸ ನಡೆಯುವುದೇ ಇಲ್ಲ. ಬೆಳಗಿನ ಚಹಾದಿಂದ ಹಿಡಿದು ರಾತ್ರಿಯ ಊಟದವರೆಗೆ ಪ್ರತಿಯೊಂದಕ್ಕೂ ಗ್ಯಾಸ್ ಅತ್ಯಗತ್ಯ. ಆದರೆ, ಅಡುಗೆ ಮಾಡುವ ಸಮಯದಲ್ಲಿ ದಿಢೀರನೆ ಗ್ಯಾಸ್ ಖಾಲಿಯಾದರೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಅದರಲ್ಲೂ ವಿಶೇಷವಾಗಿ ಮನೆಯಲ್ಲಿ ಎರಡನೇ ಸಿಲಿಂಡರ್ ಸ್ಟಾಕ್ ಇಲ್ಲದಿದ್ದಾಗ ಪರಿಸ್ಥಿತಿ ಮತ್ತಷ್ಟು ಗೊಂದಲಮಯವಾಗಿರುತ್ತದೆ. ಅಂತಹ ಪರಿಸ್ಥಿತಿ ಬರದಂತೆ ತಡೆಯಲು, ಸಿಲಿಂಡರ್ನಲ್ಲಿ ಗ್ಯಾಸ್ ಎಷ್ಟಿದೆ ಎಂಬುದನ್ನು ಮೊದಲೇ ತಿಳಿದುಕೊಳ್ಳುವುದು ಮುಖ್ಯ. ಯಾವುದೇ ಯಂತ್ರಗಳ ಸಹಾಯವಿಲ್ಲದೆ, ಮನೆಯಲ್ಲಿಯೇ ಈ ಕೆಲವು ಸುಲಭ ವಿಧಾನಗಳ ಮೂಲಕ ಗ್ಯಾಸ್ ಮಟ್ಟವನ್ನು ಅಂದಾಜು ಮಾಡಬಹುದು. 1. ಒದ್ದೆ ಬಟ್ಟೆಯ ಮ್ಯಾಜಿಕ್ ಟ್ರಿಕ್ ಸಿಲಿಂಡರ್ನಲ್ಲಿ ಗ್ಯಾಸ್ ಎಷ್ಟಿದೆ ಎಂದು ತಿಳಿಯಲು ಇದು ಅತ್ಯಂತ ಸರಳ ಮತ್ತು ಜನಪ್ರಿಯ ಮಾರ್ಗವಾಗಿದೆ. ಮೊದಲು ಒಂದು ಬಟ್ಟೆಯನ್ನು ನೀರಿನಲ್ಲಿ ನೆನೆಸಿ, ಸಿಲಿಂಡರ್ ಸುತ್ತಲೂ ಒರೆಸಿ ಅಥವಾ ಕೆಲವು ನಿಮಿಷಗಳ ಕಾಲ ಸಿಲಿಂಡರ್ ಸುತ್ತಲೂ ಸುತ್ತಿಡಿ. ಸ್ವಲ್ಪ ಸಮಯದ ನಂತರ ಬಟ್ಟೆಯನ್ನು ತೆಗೆದು ಗಮನಿಸಿ. ಸಿಲಿಂಡರ್ನ…
ರಾಯಚೂರು: ಜಿಲ್ಲೆಯ ರಾಯಚೂರು ತಾಲೂಕಿನ ಬೈಲ್ ಮರ್ಚಡ್ ಗ್ರಾಮದಲ್ಲಿ ಇಂದು ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಗ್ರಾಮದ ಸಮುದಾಯ ಭವನದ ನಾಮಫಲಕದ ಸಿಮೆಂಟ್ ಬೋರ್ಡ್ ಕುಸಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸಮ್ಮ ಎನ್ನುವ ಮಹಿಳೆಯ ಒಂದು ಕಾಲು ಕಟ್ ಆಗಿದ್ದು, ಪುತ್ರಿ ಲಕ್ಷ್ಮಿ ಎರಡು ಕಾಲುಗಳು ಸಹ ಕಟ್ ಆಗಿವೆ. ವಿಶಾಲಮ್ಮ (20) ಹಾಗೂ ಎಲ್ಲಮ್ಮ (4) ಎಂಬ ಬಾಲಕಿಗೆ ಗಂಭೀರವಾದ ಗಾಯಗಳಾಗಿದ್ದು ರಾಯಚೂರಿನ ಒಪೆಕ್ ಆಸ್ಪತ್ರೆಗೆ ದಾಖಲಿಸಿ ನಾಲ್ವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ ನಿನ್ನೆ ರಾತ್ರಿ ಬಯಲಾಟ ನೋಡುತ್ತಿದ್ದ ಗ್ರಾಮಸ್ಥರು, ಸಮುದಾಯ ಭವನದ ಕಟ್ಟೆಯ ಕೆಳಗೆ ಕೂತು ಬೈರಾಟ ವೀಕ್ಷಣೆ ಮಾಡುತ್ತಿದ್ದರು ಇವಳೆ ನಾಮಫಲಕದ ಸಿಮೆಂಟ್ ಬೋರ್ಡ್ ಕುಸಿದು ದುರಂತ ಸಂಭವಿಸಿದೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ. ದುರಂತದ ಹಿನ್ನೆಲೆ: ಮಕ್ಕಳು ನಾಮಫಲಕದ ಬಳಿ ಇದ್ದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಬೃಹತ್ ಗಾತ್ರದ ಸಿಮೆಂಟ್…
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿರುವ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿ ಆರೋಪಿಗಳಿಗೆ ಬೆಂಗಳೂರಿನ ಸಿಸಿಹೆಚ್-82 ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪರಪ್ಪನ ಅಗ್ರಹಾರದಲ್ಲಿ ಕಣ್ಣೀರಿನ ಜಾಗರಣೆ ನ್ಯಾಯಾಲಯದ ತೀರ್ಪು ಪ್ರಕಟವಾದ ನಂತರ, ವಿನಯ್ ಕುಲಕರ್ಣಿ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಜೈಲಿನಲ್ಲಿ ಅವರಿಗೆ ಕೈದಿ ಸಂಖ್ಯೆ 16110 ಅನ್ನು ನೀಡಲಾಗಿದೆ. ಮೂಲಗಳ ಪ್ರಕಾರ, ಜೈಲು ಸೇರಿದ ಮೊದಲ ರಾತ್ರಿ ವಿನಯ್ ಕುಲಕರ್ಣಿ ಅವರು ತೀವ್ರ ಭಾವುಕರಾಗಿದ್ದರು. ರಾತ್ರಿ ಊಟ ಮಾಡದೆ ಕೇವಲ ಹಣ್ಣುಗಳನ್ನು ಸೇವಿಸಿ, ಹೈ ಸೆಕ್ಯೂರಿಟಿ ಬ್ಯಾರಕ್ನಲ್ಲಿ ಕಣ್ಣೀರು ಹಾಕುತ್ತಾ ರಾತ್ರಿ ಕಳೆದಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದ ಹಿನ್ನೆಲೆ ಮತ್ತು ಶಿಕ್ಷೆಯ ವಿವರ ಶಿಕ್ಷೆಗೊಳಗಾದವರು: ವಿನಯ್ ಕುಲಕರ್ಣಿ, ಅವರ ಮಾವ ಚಂದ್ರಶೇಖರ್ ಇಂಡಿ ಹಾಗೂ ಬಸವರಾಜ ಮುತ್ತಗಿ ಸೇರಿದಂತೆ ಒಟ್ಟು 16 ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ. ಪ್ರಮುಖ ಸಾಕ್ಷ್ಯ: ಜಿಪಂ ಚುನಾವಣೆಯಲ್ಲಿ ಯೋಗೀಶ್…
ಭುವನೇಶ್ವರ: ದೇಶದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಫೆಮಿನಾ ಮಿಸ್ ಇಂಡಿಯಾ 2026’ರ ಅದ್ಧೂರಿ ಸಮಾರೋಪ ಸಮಾರಂಭದಲ್ಲಿ ಗೋವಾದ ಸುಂದರಿ ಸಾಧ್ವಿ ಶೈಲ್ (Sadhvi Sail) ಅವರು ಈ ವರ್ಷದ ಮಿಸ್ ಇಂಡಿಯಾ ವರ್ಲ್ಡ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ನಡೆದ 61ನೇ ಆವೃತ್ತಿಯ ಈ ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಸಾಧ್ವಿ ಅವರು ಈ ಸಾಧನೆ ಮಾಡಿದ್ದಾರೆ. ಮಹಾರಾಷ್ಟ್ರದ ರಾಜನಂದಿನಿ ಪವಾರ್ ಪ್ರಥಮ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಜಮ್ಮು ಮತ್ತು ಕಾಶ್ಮೀರದ ಶ್ರೀ ಅದ್ವೈತ ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಯಾರು ಈ ಸಾಧ್ವಿ ಶೈಲ್? ಗೋವಾದ ಸುಂದರ ಪರಿಸರದಲ್ಲಿ ಬೆಳೆದ ಸಾಧ್ವಿ ಶೈಲ್ ಅವರಿಗೆ ಆರಂಭದಿಂದಲೂ ಸಮಾಜದ ಬಗ್ಗೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಅಪಾರ ಆಸಕ್ತಿ. ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಆಸಕ್ತಿ ಹೊಂದಿರುವ ಇವರು, ಕೇವಲ ಸೌಂದರ್ಯವಷ್ಟೇ ಅಲ್ಲದೆ ಬೌದ್ಧಿಕವಾಗಿಯೂ ಮುಂಚೂಣಿಯಲ್ಲಿದ್ದಾರೆ. ಸವಾಲುಗಳನ್ನು ಮೆಟ್ಟಿ ನಿಂತ ಹಾದಿ: ಮಿಸ್…
ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಚಾರಣ (Trekking) ಕೈಗೊಳ್ಳುವವರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆಯು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಚಾರಣಿಗರ ಹಿತದೃಷ್ಟಿಯಿಂದ ಕೆಲವು ಕಡ್ಡಾಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಅಪ್ರಾಪ್ತ ವಯಸ್ಕರಿಗೆ ಅನುಮತಿ ಕಡ್ಡಾಯ: ಹದಿನೆಂಟು ವರ್ಷದೊಳಗಿನ ಅಪ್ರಾಪ್ತ ವಯಸ್ಕರು ಚಾರಣಕ್ಕೆ ತೆರಳಬೇಕಾದರೆ ಅವರ ಪಾಲಕರು ಅಥವಾ ಪೋಷಕರ ಲಿಖಿತ ಅನುಮತಿ ಪತ್ರವನ್ನು ಹೊಂದಿರುವುದು ಇನ್ನು ಮುಂದೆ ಕಡ್ಡಾಯವಾಗಲಿದೆ. ಹಿರಿಯ ನಾಗರಿಕರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ: ಚಾರಣವು ದೈಹಿಕ ಶ್ರಮದಿಂದ ಕೂಡಿರುವುದರಿಂದ, ಹಿರಿಯ ನಾಗರಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ದೈಹಿಕ ಸಾಮರ್ಥ್ಯ ಮತ್ತು ಸದೃಢತೆಯ ಪ್ರಮಾಣ ಪತ್ರವನ್ನು (Fitness Certificate) ಒದಗಿಸುವುದು ಕಡ್ಡಾಯವಾಗಿದೆ. ಮಾರ್ಗದರ್ಶಿಗಳಿಗೆ (Guide) ಸೂಚನೆ: ಚಾರಣದ ಅವಧಿಯಲ್ಲಿ ಯಾವುದೇ ಚಾರಣಿಗರಿಗೆ ಹಠಾತ್ ಆರೋಗ್ಯ ಸಮಸ್ಯೆ ಎದುರಾದರೆ ತಕ್ಷಣದ ಆರೈಕೆಗಾಗಿ ಪ್ರತಿಯೊಬ್ಬ ಗೈಡ್ ತಮ್ಮ ಜೊತೆಯಲ್ಲಿ ಪ್ರಥಮ ಚಿಕಿತ್ಸಾ ಕಿಟ್ (First Aid Kit)…
ನವದೆಹಲಿ: ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಪತ್ನಿಯು ತನ್ನ ದೂರಿನಲ್ಲಿ ವರದಕ್ಷಿಣೆ ನೀಡಿರುವುದಾಗಿ ಒಪ್ಪಿಕೊಂಡ ಮಾತ್ರಕ್ಕೆ, ಆಕೆಯ ಅಥವಾ ಆಕೆಯ ಕುಟುಂಬದ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪೀಡಿತ ಮಹಿಳೆಯರು ಯಾವುದೇ ಭಯವಿಲ್ಲದೆ ದೂರು ದಾಖಲಿಸಲು ಅನುಕೂಲವಾಗುವಂತೆ ಅವರಿಗೆ ಕಾನೂನು ರಕ್ಷಣೆ ನೀಡುವುದು ಅತ್ಯಗತ್ಯ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ. ಪತಿಯ ಅರ್ಜಿಯನ್ನು ವಜಾಗೊಳಿಸಿದ ಪೀಠ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಕುರಿತು ಪತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಈ ಆದೇಶ ನೀಡಿದೆ. “ನನ್ನ ಪತ್ನಿ ಮತ್ತು ಆಕೆಯ ಕುಟುಂಬದವರು ತಮಗೆ ವರದಕ್ಷಿಣೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಅವರ ವಿರುದ್ಧವೂ ಎಫ್ಐಆರ್ ದಾಖಲಿಸಬೇಕು” ಎಂದು ಪತಿ ಕೋರಿದ್ದರು. ಆದರೆ ನ್ಯಾಯಾಲಯ ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಸಂತ್ರಸ್ತರಿಗೆ…
ಬೆಂಗಳೂರು: ರಾಜ್ಯದ ಸಣ್ಣ ಗುತ್ತಿಗೆದಾರರ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ನಡೆಸಿದ ಸತತ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಇದೀಗ ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗಾಗಿ ₹300 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಸರ್ಕಾರ ₹2,000 ಕೋಟಿ ಬಿಡುಗಡೆ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಈಗ ₹300 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ರಸ್ತೆ ಗುಂಡಿ ದುರಸ್ತಿ, ಕಟ್ಟಡ ಹಾಗೂ ಸೇತುವೆ ದುರಸ್ತಿಯಂತಹ ಸಣ್ಣ ಮತ್ತು ಮಧ್ಯಮ ಗಾತ್ರದ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರಿಗೆ ನೀಡಲಾಗುವುದು. ಫಲಾನುಭವಿಗಳು: ಅಂದಾಜು 4,000 ಗುತ್ತಿಗೆದಾರರಿಗೆ ಈ ನಿರ್ಧಾರದಿಂದ ಅನುಕೂಲವಾಗಲಿದ್ದು, ಪ್ರಮುಖವಾಗಿ ₹10 ಲಕ್ಷಕ್ಕಿಂತ ಕಡಿಮೆ ಮೊತ್ತದ ಬಿಲ್ಗಳನ್ನು ಹೊಂದಿರುವವರಿಗೆ ಆದ್ಯತೆ ನೀಡಿ ಪಾವತಿಸಲಾಗುತ್ತದೆ. ಸಿಎಂ ಭೇಟಿಗೆ ಗುತ್ತಿಗೆದಾರರ ಆಗ್ರಹ ಲೋಕೋಪಯೋಗಿ ಇಲಾಖೆಯ ಈ ಕ್ರಮವನ್ನು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಆರ್. ಮಂಜುನಾಥ್ ಸ್ವಾಗತಿಸಿದ್ದಾರೆ. ಆದರೆ, ಹಣ ಬಿಡುಗಡೆಯ ಪ್ರಕ್ರಿಯೆ…
ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯು ಅಂಗೀಕಾರಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಈ ಮಸೂದೆಯನ್ನು ಸೋಲಿಸುವ ಮೂಲಕ ‘ಭ್ರೂಣಹತ್ಯೆ’ಯಂತಹ ಮಹಾಪಾಪ ಎಸಗಿದೆ ಎಂದು ಅವರು ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು ಹೀಗಿವೆ. ಕಾಂಗ್ರೆಸ್ ಮಹಿಳಾ ಮೀಸಲಾತಿ ವಿಷಯವನ್ನು ದ್ವೇಷಿಸುತ್ತದೆ ಮತ್ತು ಇದನ್ನು ತಡೆಯಲು ಯಾವಾಗಲೂ ಪಿತೂರಿ ನಡೆಸಿದೆ… ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆದಾಗಲೆಲ್ಲಾ ಕಾಂಗ್ರೆಸ್ ಯಾವಾಗಲೂ ಅಡೆತಡೆಗಳನ್ನು ಹಾಕುತ್ತಿತ್ತು. ಈ ಬಾರಿಯೂ ಸಹ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇದನ್ನು ತಡೆಯಲು ಒಂದಲ್ಲ ಒಂದು ಸುಳ್ಳುಗಳನ್ನು ಬಳಸಿದವು… ಅವರು ರಾಷ್ಟ್ರವನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. https://twitter.com/ANI/status/2045526375298392221 ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಕ್ಷೇತ್ರ ಪುನರ್ವಿಂಗಡಣೆಯ ಬಗ್ಗೆ ನಿರಂತರವಾಗಿ ಸುಳ್ಳು ಹೇಳುತ್ತಿವೆ. ಈ ನೆಪದಲ್ಲಿ ಅವರು ವಿಭಜನೆಯ ಜ್ವಾಲೆಯನ್ನು ಹೊತ್ತಿಸಲು ಬಯಸುತ್ತಾರೆ. ಕಾಂಗ್ರೆಸ್ ತನ್ನ ಪರಂಪರೆಯಂತೆ ಬ್ರಿಟಿಷರಿಂದ ಒಡೆದು ಆಳುವ ರಾಜಕೀಯವನ್ನು ಕಲಿತಿದೆ.…
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಖಾಲಿ ಇರುವ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ‘ಪದೋನ್ನತಿ’ (Promotion) ಪ್ರಕ್ರಿಯೆಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಚಾಲನೆ ನೀಡಿದ್ದು, ಈ ಸಂಬಂಧ ಸಮಗ್ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಶಿಕ್ಷಕರ ಮರುಹೊಂದಾಣಿಕೆ ಮತ್ತು ವರ್ಗಾವಣೆ ಪ್ರಕ್ರಿಯೆಯ ನಂತರ ಲಭ್ಯವಿರುವ ಖಾಲಿ ಹುದ್ದೆಗಳನ್ನು ಈ ಬಡ್ತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲಾಗುವುದು. ಅರ್ಹತೆ: ಜನವರಿ 1, 2026 ರಂದು ಅಂತಿಮಗೊಂಡ ಜ್ಯೇಷ್ಠತಾ ಪಟ್ಟಿಯ ಆಧಾರದ ಮೇಲೆ ಅರ್ಹ ಶಿಕ್ಷಕರನ್ನು ಬಡ್ತಿಗೆ ಪರಿಗಣಿಸಲಾಗುತ್ತದೆ. ಅಂಗವಿಕಲ ಮೀಸಲಾತಿ: ಶೇ. 4 ರಷ್ಟು ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದ್ದು, ಅಂಗವಿಕಲ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್‌ನಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಪಾರದರ್ಶಕತೆ: ಶಿಕ್ಷಕರ ಸೇವಾ ಪುಸ್ತಕ (Service Register) ಮತ್ತು ಇ-ಸಿಎಸ್ (HRMS) ತಂತ್ರಾಂಶದಲ್ಲಿನ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಬಡ್ತಿ…














