Author: kannadanewsnow57

ನವದೆಹಲಿ : ಯುಪಿಐ ಬಳಕೆದಾರರಿಗೆ ಆರ್ ಬಿಐ ಸಿಹಿಸುದ್ದಿಯೊಂದನ್ನು ನೀಡಿದ್ದು, ವ್ಯಾಪಾರಿ ವಹಿವಾಟುಗಳ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಆರ್‌ಬಿಐನ ಎಂಪಿಸಿ ಸಭೆ ಏಪ್ರಿಲ್ 7 ರಂದು ಪ್ರಾರಂಭವಾಯಿತು. ಇಂದು ಏಪ್ರಿಲ್ 9 ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆ ಎರಡು ದಿನಗಳ ಕಾಲ ನಡೆಯಿತು. ಹಣಕಾಸು ಸಮಿತಿ ಸಭೆಯಲ್ಲಿ ರೆಪೋ ದರ ಮತ್ತು ಇತರ ಹಣಕಾಸು ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರೆಪೊ ದರದ ಹೊರತಾಗಿ, ಆರ್‌ಬಿಐ ವ್ಯಕ್ತಿಯಿಂದ ವ್ಯಾಪಾರಿಗೆ ಮಿತಿಯನ್ನು ಹೆಚ್ಚಿಸುವ ಬಗ್ಗೆಯೂ ಯೋಚಿಸುತ್ತಿದೆ. ಒಬ್ಬ ವ್ಯಕ್ತಿಯು UPI, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ವ್ಯವಹಾರದೊಂದಿಗೆ ವಹಿವಾಟು ನಡೆಸಿದಾಗ. ಹಾಗಾಗಿ ಅದನ್ನು ವ್ಯಕ್ತಿಯಿಂದ ವ್ಯಾಪಾರಿ ಎಂದು ಕರೆಯಲಾಗುತ್ತದೆ. ಪ್ರಸ್ತುತ, ವ್ಯಕ್ತಿಯಿಂದ ವ್ಯಾಪಾರಿಗೆ ಮಿತಿಯನ್ನು 1 ಲಕ್ಷ ರೂ.ಗಳಲ್ಲಿ ಇರಿಸಲಾಗಿದೆ. ಯಾವ ಆರ್‌ಬಿಐ 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲು ಪರಿಗಣಿಸುತ್ತಿದೆ? ಆದರೆ, ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ. ಇಂದು, ಯುಪಿಐ (ಏಕೀಕೃತ…

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ಹಾಲು ಸಾಮಾನ್ಯವಾಗಿ ಬಿಳಿಯಾಗಿರುತ್ತದೆ. ಆದ್ರೆ, ಹಸುವಿನ ಹಾಲು ಕೊಂಚ ಹಳದಿ ಬಣ್ಣದಲ್ಲಿರುತ್ತದೆ. ಅದ್ರಂತೆ, ಕೆಲವು ಪ್ರಾಣಿಗಳ ಹಾಲು ಬಿಳಿಯಾಗಿದ್ದರೆ, ಕೆಲವು ಪ್ರಾಣಿಗಳ ಹಾಲು ಬೇರೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಾಣಿಗಳ ಹಾಲು ಬೆಳ್ಳಗಿರುವುದಿಲ್ಲ ಎನ್ನುವುದಕ್ಕೆ ವಿಶೇಷ ಕಾರಣವಿದೆ. ಹಸುವಿನ ಹಾಲಿನಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ಬೀಟಾ-ಕ್ಯಾರೋಟಿನ್ ಇರುತ್ತದೆ. ಅದಕ್ಕಾಗಿಯೇ ಹಾಲು ತಿಳಿ ಹಳದಿ ಬಣ್ಣವನ್ನ ಹೊಂದಿರುತ್ತದೆ. ಅದೇ ಎಮ್ಮೆ ಹಾಲಿನಲ್ಲಿ ಆ ವಸ್ತು ಇಲ್ಲದಿರುವುದರಿಂದ ಹಾಲು ಬೆಳ್ಳಗಾಗುತ್ತದೆ. ಚಿಕ್ಕ ಮಕ್ಕಳಿಗೆ ಯಾವ ಹಾಲು ಒಳ್ಳೆಯದು.? ಚಿಕ್ಕ ಮಕ್ಕಳಿಗೆ ಎಮ್ಮೆಯ ಹಾಲಿಗಿಂತ ಹಸುವಿನ ಹಾಲು ಉತ್ತಮ. ಅವು ಕಡಿಮೆ ಕೊಬ್ಬಿನಂಶವನ್ನ ಹೊಂದಿರುತ್ತವೆ. ಇದರಲ್ಲಿ ಬೀಟಾ ಕ್ಯಾರೋಟಿನ್ ಅಧಿಕವಾಗಿರುವುದು ಮುಖ್ಯ ಕಾರಣ. ಹಸುವಿನ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಅವುಗಳಲ್ಲಿ, ಬಿ-ಕ್ಯಾರೋಟಿನ್’ನ್ನ ವಿಟಮಿನ್ ಎ ಆಗಿ ಪರಿವರ್ತಿಸಲಾಗುತ್ತದೆ ಮತ್ತು ಮಕ್ಕಳಿಗೆ ಉಪಯುಕ್ತವಾಗಿದೆ. ಹಾಲಿನಲ್ಲಿರುವ ವಿವಿಧ ಪದಾರ್ಥಗಳ ಅನುಪಾತದಲ್ಲಿನ ವ್ಯತ್ಯಾಸಗಳನ್ನ ಅವಲಂಬಿಸಿ, ಪ್ರಾಣಿಗಳ ಹಾಲಿನ ಬಣ್ಣಗಳಲ್ಲಿ ಬದಲಾವಣೆಗಳಿವೆ. ಕೊಬ್ಬಿನಂಶದ ಶೇಕಡಾವಾರು ; ಹಸುವಿನ…

Read More

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆಯನ್ನು ನಿರ್ವಹಿಸಲು ವಿದ್ಯಾರ್ಥಿಗಳನ್ನು ಬಳಸುವಂತಿಲ್ಲ. ಒಂದು ವೇಳೆ ಇಂತಹ ಘಟನೆಗಳು ನಡೆದರೇ ಅಂತಹ ಶಿಕ್ಷಕರ ವಿರುದ್ಧ ಎಫ್ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳೋದಾಗಿ ರಾಜ್ಯ ಸರ್ಕಾರ ಖಡಕ್ ಆದೇಶ ಮಾಡಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಮಾಡಿಸಬಾರದೆಂದು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು ಮತ್ತು ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಈಗಾಗಲೇ ಉಲ್ಲೇಖಿತ ಸುತ್ತೋಲೆಯ ಮೂಲಕ ತಿಳಿಸಲಾಗಿದ್ದರೂ ಸಹ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ಇಲಾಖೆಯು ಗಮನಿಸಿದೆ ಎಂದಿದೆ. ಸರ್ಕಾರದಿಂದ ಮತ್ತು ಇಲಾಖೆಯಿಂದ ಕಾಲ-ಕಾಲಕ್ಕೆ ಹೊರಡಿಸಲಾಗುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಸೂಚನೆಗಳನ್ನು ನೀಡಲಾಗುತ್ತಿದ್ದರೂ ಸಹ ಇಂತಹ ಸೂಚನೆಗಳನ್ನು ಉಲ್ಲಂಘಿಸುತ್ತಿರುವುದು ಗಂಭೀರವಾಗಿ ಪರಿಗಣಿಸಿ, ಆಕ್ಷೇಪಿಸಿದೆ ಎಂಬುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ…

Read More

ಬೆಂಗಳೂರು : ಸಾರ್ವಜನಿಕರು ಕುಡಿಯುವ ನೀರಿನ ಬಾಟಲ್‌ಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಹೊರಗಡೆ ದೊರೆಯುವ ನೀರಿನ ಬಾಟಲಿಗಳಲ್ಲಿ ಹಲವು ಅಸುರಕ್ಷಿತವಾಗಿರುವುದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಡೆಸಿದ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇಲಾಖೆಯು ಒಟ್ಟು 296 ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದು, ಅವುಗಳಲ್ಲಿ 255 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಳಿಸಿದೆ. ಇದರಲ್ಲಿ 72 ಮಾದರಿಗಳು ಸುರಕ್ಷಿತ, 95 ಮಾದರಿಗಳು ಅಸುರಕ್ಷಿತ ಹಾಗೂ 88 ಮಾದರಿಗಳು ಕಳಪೆ ಗುಣಮಟ್ಟದ್ದು ಎಂದು ವರದಿಯಾಗಿದೆ. ಶೀಘ್ರದಲ್ಲಿಯೇ ಲೀಗಲ್ ಸ್ಯಾಂಪಲ್‌ಗಳ ಪರೀಕ್ಷೆ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Read More

ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಕೆ.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೃಥ್ವಿ ಹೋಳಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 570 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು, ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ತಂದೆ ಇಲ್ಲದ ಪೃಥ್ವಿಯ ತಾಯಿ ಶ್ಯಾಮಲಾ ಹೋಳಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ಬರುವ ಗೃಹಲಕ್ಷ್ಮಿ ಹಣವು ಪೃಥ್ವಿಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಪ್ರತಿದಿನವೂ ಪರಿಪೂರ್ಣ ಶಿಕ್ಷಣಕ್ಕೆ ಹಂಬಲಿಸಿದ ಹೆಣ್ಣು ಮಗಳ ಕನಸು ಈ ಯೋಜನೆಯ ಮೂಲಕ ಸಾಕಾರಗೊಂಡಿದೆ ಎಂದು ತಿಳಿಸಿದೆ. ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು, ಅಂತಹ ವ್ಯವಸ್ಥೆಯೊಂದನ್ನು ನಿರ್ಮಾಣ ಮಾಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಾಗಿತ್ತು. ಗೃಹಲಕ್ಷ್ಮಿ ಯೋಜನೆಯು ಆ ಕನಸನ್ನು ಸಾಕಾರಗೊಳಿಸುತ್ತಿದೆ ಎಂದು ಹೇಳಿದೆ.

Read More

ಬೆಂಗಳೂರು : ಗಣಿ ಗುತ್ತಿಗೆ ನವೀಕರಣಕ್ಕೆ 500 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿಗೌಡ ಎಂಬುವರು ಪತ್ರ ಬರೆದಿದ್ದಾರೆ. ಗಣಿ ಗುತ್ತಿಗೆಗೆ ಹರಾಜು ಬದಲಿಗೆ ನವೀಕರಣಕ್ಕೆ 500 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಎಂಬುವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 2015ರಲ್ಲಿ ಸಿಎಂ ಆಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು 8 ಗಣಿ ಗುತ್ತಿಗೆ ನವೀಕರಣ ಮಾಡಿದ್ದರು. ಗಣಿ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಗಣಿ ಕಂಪನಿಗಳ ಲೈಸೆನ್ಸ್ ಕೂಡ ನವೀಕರಣ ಮಾಡಿದ್ದರು. ಹಾಗೆ ನವೀಕರಣ ಮಾಡಿಕೊಟ್ಟಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಸುಮಾರು 500 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿ ರಾಮಮೂರ್ತಿ ಗೌಡ ರಾಜ್ಯಪಾಲರಿಗೆ ದೂರು ನೀಡಿದ್ದು, ಇದರಿಂದ…

Read More

ಕಲಬುರಗಿ : ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ಕಲಬುರಗಿಯಲ್ಲಿ ಎಟಿಎಂ ಒಡೆದು ಬರೋಬ್ಬರಿ 18 ಲಕ್ಷ ರೂ. ಕದ್ದು ಖದೀಮರ ಗ್ಯಾಂಗ್ ಪರಾರಿಯಾಗಿದೆ. ಕಲಬುರಗಿಯ ರಿಂಗ್ ರೋಡ್ ಬಳಿಯ ಪೂಜಾರಿ ಚೌಕ್ ನಲ್ಲಿರುವ ಎಸ್ ಬಿಐ ಬ್ಯಾಂಕ್ ನಲ್ಲಿ ತಡರಾತ್ರಿ 3 ಗಂಟೆ ಸುಮಾರಿಗೆ ಖದೀಮರು ಎಟಿಎಂ ಒಡೆದು 18 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಸಿಬ್ಬಂದಿಗಳು ಎಟಿಎಂಗೆ ಹಣ ಹಾಕಿದ್ದರು. ಇದನ್ನು ಗಮನಿಸಿರುವ ಕಳ್ಳರು, ತಡರಾತ್ರಿ 3 ಗಂಟೆ ಸುಮಾರಿಗೆ ಐ20 ಕಾರಿನಲ್ಲಿ ಬಂದು ಗ್ಯಾಸ್ ಬಟರ್ ಬಳಸಿ ಎಟಿಎಂ ಒಡೆದು 18 ಲಕ್ಷ ರೂ. ದೂಚಿ ಪರಾರಿಯಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Read More

ಅನೇಕ ಜನರು ಸ್ವಾರ್ಥ ತೃಪ್ತಿಗಾಗಿ ಮತ್ತು ತಮ್ಮ ಒಂಟಿ ಕಲ್ಪನೆಗಳನ್ನು ಪೂರೈಸಿಕೊಳ್ಳಲು ವಿಚಿತ್ರವಾದ ಕೆಲಸಗಳನ್ನು ಮಾಡುತ್ತಾರೆ. ಜನರು ಲೈಂಗಿಕವಾಗಿ ತಮ್ಮನ್ನು ತೃಪ್ತಿಪಡಿಸಿಕೊಳ್ಳಲು ವಿವಿಧ ರೀತಿಯ ವಸ್ತುಗಳನ್ನು ತಮ್ಮ ದೇಹಕ್ಕೆ ಸೇರಿಸಿಕೊಳ್ಳುವ ಘಟನೆಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಇದೇ ರೀತಿಯ ಘಟನೆ ಇತ್ತೀಚೆಗೆ ಫೆಬ್ರವರಿಯಲ್ಲಿ ತೈವಾನ್‌ನಲ್ಲಿ ಸಂಭವಿಸಿದೆ. ಇಲ್ಲಿ, ಖಾಸಗಿ ಭಾಗಗಳಲ್ಲಿ ವೈಬ್ರೇಟರ್ ಇದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತೈವಾನ್‌ನ ಕಾವೋಸಿಯುಂಗ್‌ನ 24 ವರ್ಷದ ಯುವಕನೊಬ್ಬ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ. ವೈದ್ಯರು ಅವರ ಗುದನಾಳದಲ್ಲಿ 20 ಸೆಂ.ಮೀ ಆಳದಲ್ಲಿ ವೈಬ್ರೇಟರ್ ಸಿಲುಕಿಕೊಂಡಿರುವುದನ್ನು ಕಂಡುಕೊಂಡರು. ಫೆಬ್ರವರಿ 13 ರಂದು, ಸ್ಥಳೀಯ ಇ-ಡಾ ಆಸ್ಪತ್ರೆಯಲ್ಲಿ ಡಾ. ಚೆನ್ ಚಿಹ್-ಯಿ ಚಿಕಿತ್ಸೆ ನೀಡಿದರು. ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ವೈದ್ಯರು ಹಿಂದಿನ ರಾತ್ರಿ ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಹೇಳಿದರು. ಆದಾಗ್ಯೂ, ಆ ಕ್ರಿಯೆಯ ನಂತರ ಅವನಿಗೆ ಅಸಾಮಾನ್ಯ ಭಾವನೆ ಉಂಟಾಯಿತು. ಅವನಿಗೆ ತನ್ನ ಖಾಸಗಿ ಭಾಗಗಳಲ್ಲಿ ಏನೋ ಸಿಲುಕಿಕೊಂಡಂತೆ ಭಾಸವಾಯಿತು.…

Read More

ಗದಗ : ರಾಜ್ಯದಲ್ಲಿ ಮತ್ತೊಂದು ಹೇಯ ಕೃತ್ಯವೊಂದು ನಡೆದಿದ್ದು ಅಪ್ರಾಪ್ತ ಬಾಲಕಿ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ ನಡೆದ ಘಟನೆ ಗದಗದಲ್ಲಿ ನಡೆದಿದೆ. ಆರೋಪಿ ತಂದೆ ರಮೇಶ್ ಎಂಬಾತ ತನ್ನ 16 ವರ್ಷದ ಬಾಲಕಿ ಮೇಲೆ ಕಳೆದ 1 ವರ್ಷದಿಂದ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಸದ್ಯ ಈತನ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿ ಗರ್ಭಿಣಿ ಆಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ, ಆರೋಪಿ ತಂದೆ ರಮೇಶ್ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

Read More

ದೇಶಾದ್ಯಂತ ತಯಾರಾಗುವ 103 ಔಷಧಿಗಳ ಮಾದರಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿಲ್ಲ. ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಮತ್ತು ರಾಜ್ಯ ಔಷಧ ಪ್ರಾಧಿಕಾರ  ಔಷಧ ಎಚ್ಚರಿಕೆಯನ್ನು ನೀಡಿದೆ. ಶೀತ, ಕೆಮ್ಮು, ಜ್ವರ, ಅಲರ್ಜಿ ಮತ್ತು ನೋವು ನಿವಾರಕಗಳಿಗೆ ಬಳಸುವ ಜೀವಸತ್ವಗಳು ಮತ್ತು ಹೃದ್ರೋಗ ಸೇರಿದಂತೆ ಎಲ್ಲಾ ಔಷಧಿಗಳ ಮಾದರಿಗಳು ವಿಫಲವಾಗಿವೆ. ಹಿಮಾಚಲದ ಕೈಗಾರಿಕೆಗಳಲ್ಲಿ 38 ಔಷಧಗಳು ದೋಷಯುಕ್ತವಾಗಿರುವುದು ಕಂಡುಬಂದಿದೆ. ಹಿಮಾಚಲದಿಂದ ಗರಿಷ್ಠ 38 ಔಷಧಿಗಳು, ಉತ್ತರಾಖಂಡದಿಂದ 11, ಗುಜರಾತ್ ಮತ್ತು ಪಂಜಾಬ್‌ನಿಂದ ತಲಾ ಒಂಬತ್ತು ಔಷಧಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಲಿಲ್ಲ. ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಅಸ್ಸಾಂ ಮತ್ತು ತಮಿಳುನಾಡಿನ ಕೈಗಾರಿಕೆಗಳಲ್ಲಿ ತಯಾರಾದ ಔಷಧಿಗಳ ಮಾದರಿಗಳು ಸಹ ವಿಫಲವಾಗಿವೆ. CDSCO ಎಚ್ಚರಿಕೆಯಲ್ಲಿ, 47 ಔಷಧಿಗಳ ಮಾದರಿಗಳು ವಿಫಲವಾಗಿವೆ, ಅವುಗಳಲ್ಲಿ 21 ಔಷಧಿಗಳು ಹಿಮಾಚಲದಲ್ಲಿ ತಯಾರಿಸಲ್ಪಟ್ಟವು. ರಾಜ್ಯ ಔಷಧ ಪ್ರಾಧಿಕಾರ ಹೊರಡಿಸಿದ ಎಚ್ಚರಿಕೆಯಲ್ಲಿ, ದೇಶಾದ್ಯಂತ 56 ಔಷಧಿಗಳ ಗುಣಮಟ್ಟ ಕಳಪೆಯಾಗಿದೆ ಎಂದು ಕಂಡುಬಂದಿದೆ. ಇದರಲ್ಲಿ ಹಿಮಾಚಲದಲ್ಲಿ ತಯಾರಾದ 17 ಔಷಧಿಗಳು…

Read More