Author: kannadanewsnow09

ಚಿತ್ರದುರ್ಗ: ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾ ಕಾರ್ಮಿಕರು ಹಾಗೂ ಮನೆಗೆಲಸದಲ್ಲಿ ತೊಡಗಿರುವ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಅಧಿನಿಯಮಗಳನ್ನು ರೂಪಿಸಿದೆ. ಮುಂಬರುವ ದಿನಗಳಲ್ಲಿ ಸದನದಲ್ಲಿ ಈ ಅಧಿಸೂಚನೆಗಳನ್ನು ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆಗಳನ್ನಾಗಿ ಜಾರಿ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈಗಾಗಲೇ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ…

Read More

ತಿರುವನಂತಪುರಂ: ಆ ಯುವಕ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದನು. ಜೀವಾವಧಿ ಶಿಕ್ಷೆ ವಿಧಿಸಿದ್ದಂತ ಆತನನ್ನೇ ಮದುವೆಯಾಗಬೇಕು ಎಂಬುದಾಗಿ ಯುವತಿ ಹಠ ಹಿಡಿದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೇರಳ ಹೈಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಅಪರಾಧಿಗೆ ಮದುವೆಯಾಗಲು 15 ದಿನಗಳು ಪರೋಲ್ ನೀಡಿ ಆದೇಶಿಸಿದೆ. ಪ್ರಶಾಂತ್ ಎಂಬಾತ ಕೊಲೆ ಪ್ರಕರಣದಲ್ಲಿ ವಿಯ್ಯರು ಜೈಲು ಪಾಲಾಗಿದ್ದರು. ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇಂತಹ ಅಪರಾಧಿಯೊಂದಿಗೆ ಯುವತಿಯೊಬ್ಬರ ನಿಶ್ಚಯವು ಕೊಲೆ ಪ್ರಕರಣಕ್ಕೂ ಮುನ್ನ ನಿಶ್ಚಯವಾಗಿತ್ತು. ಹೀಗಾಗಿ ಪರೋಲ್ ಮೂಲಕ ಮದುವೆಗೆ ಅವಕಾಶ ನೀಡುವಂತೆ ಜೈಲು ಅಧೀಕ್ಷಕರಿಗೆ ಪ್ರಶಾಂತ್ ಅರ್ಜಿ ಸಲ್ಲಿಸಿದ್ದನು. ಆದರೇ ಈ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಜೈಲು ಅಧೀಕ್ಷಕರ ನಿರ್ಧಾರ ಪ್ರಶ್ನಿಸಿ ಕೇರಳ ಹೈಕೋರ್ಟ್ ಗೆ ಅರ್ಜಿಯನ್ನು ಪ್ರಶಾಂತ್ ತಾಯಿ ಸಲ್ಲಿಸಿದ್ದರು. ಅದರಲ್ಲಿ ಜುಲೈ.13ರಂದು ಪ್ರಶಾಂತ್ ಮದುವೆ ನಿಶ್ಚಯವಾಗಿದೆ. ಯುವತಿ ಕೂಡ ಆತನೊಂದಿಗೆ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ದಯವಿಟ್ಟು ಪರೋಲ್ ಮೇಲೆ ಮದುವೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಮನವಿ ಪರಿಗಣಿಸಿದಂತ ಕೇರಳ ಹೈಕೋರ್ಟ್…

Read More

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಮಹಾನಗರ ಪಾಲಿಕೆ ನೌಕರರು ಪ್ರತಿಭಟನೆ ನಡೆಸುತ್ತಿದ್ದರು. ಈ ಬೇಡಿಕೆ ಈಡೇರಿಕೆ ಸಂಬಂಧ ಮಂಗಳವಾರ ಸಚಿವ ಬಿಎಸ್ ಸುರೇಶ್ ನೇತೃತ್ವದಲ್ಲಿ ಸಭೆ ನಿಗದಿಯಾಗಿದೆ. ಈ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎ ಅಮೃತ್ ರಾಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು,  ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹಮ್ಮಿಕೊಂಡಿರುವ ಪ್ರತಿಭಟನೆ/ಮುಷ್ಕರಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ನಿರ್ದೇಶನದ ಮೇರೆಗೆ ತಮ್ಮ ಪತ್ರದ ಟಿಪ್ಪಣಿ ದಿನಾಂಕ:11-07-2025 ರಲ್ಲಿ ತಿಳಿಸಿರುವಂತೆ, ದಿನಾಂಕ: 15-07-2025 ಮಂಗಳವಾರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಕರೆದು ಚರ್ಚಿಸಿ/ತೀರ್ಮಾನಿಸಿ ನಿಯಮಾನುಸಾರ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವುದಾಗಿ ತಿಳಿಸಿ ಇಂದೇ ಪ್ರತಿಭಟನೆ ಮುಷ್ಕರವನ್ನು ಅಂತ್ಯಗೊಳಿಸಿ ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಪಧಾದಿಕಾರಿಗಳೊಂದಿಗೆ ಗೂಗಲ್‌ ಮೀಟ್ ಮೂಲಕ ಸಭೆಮಾಡಿ ಸಭೆಯ…

Read More

ಬೆಂಗಳೂರು: ದೇವಸ್ಥಾನ, ದೇವರ ಕೆಲಸ ಮತ್ತು ದೇವರ ದುಡ್ಡುಲ್ಲಿ ಮೋಸ, ವಂಚನೆ ಇರಬಾರದು. ದೇವರ ದುಡ್ಡು ದೇವರಿಗೆ ಸಲ್ಲಬೇಕು. ಆದರೆ ದೇವರ ದುಡ್ಡನ್ನು ಕಳ್ಳತನ ಮಾಡಿ , ಭಕ್ತರ ಭಕ್ತಿಗೆ, ಭಾವನೆಗೆ ಅಪಚಾರ ಮಾಡುತ್ತಿರುವುದು‌ ಸಾಕ್ಷಿ ಸಮೇತ ದೊರಕಿದ್ದಾಗ್ಯೂ ಸಹ ಕುರುಡರಂತೆ ವರ್ತಿಸುವುದು ಅಕ್ಷಮ್ಯ ಎಂಬುದಾಗಿ ಬೆಂಗಳೂರಿನ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಭಕ್ತರು ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರು ನಗರ ಬ್ಯಾಟರಾಯನಪುರ, ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಥಿ೯ಕ ದುರುಪಯೋಗ ಮತ್ತು ಆಡಳಿತ ನಿವ೯ಹಣೆ ಅಸರ್ಮಪಕವಾಗಿ ನಡೆಯುತ್ತಿರುವುದಾಗಿ ಹಲವು ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ನಿಯಮಾನುಸಾರ ವಿಚಾರಣೆ ನಡೆಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯವರು ಸರಿಯಾದ ಮಾಹಿತಿಯನ್ನು ಒದಗಿಸುವಲ್ಲಿ ವಿಫಲರಾಗಿರುತ್ತಾರೆ‌. ಕಳೆದ 25 ವರ್ಷಗಳಿಂದ ಯಾವುದೇ ದಾಖಲೆ‌ ನಿರ್ವಹಿಸಿರುವುದಿಲ್ಲ. ಆದಾಯವನ್ನೇ ತೋರಿಸದೇ ವೆಚ್ಚವನ್ನು ಮಾತ್ರ ತೋರಿಸುತ್ತಿದ್ದಾರೆ. ಟ್ರಸ್ಟಿಗಳ ಮಧ್ಯೆ ಹೊಂದಾಣಿಕೆ‌ ಇಲ್ಲದೆ ಹಲವು ಗುಂಪುಗಳಾಗಿ‌ ಮಾರ್ಪಟ್ಟಿದೆ. ದೇವಸ್ಥಾನದ ಹುಂಡಿಯ ಹಣವನ್ನು ಲಪಾಟಯಿಸುತ್ತಿರುವ ವಿಡಿಯೋಗಳು ಕೂಡ ಸಾಮಾಜಿಕ‌ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರದಾಡಿದ್ದು, ಸರ್ಕಾರವು ಭಕ್ತರ ಹಿತ…

Read More

ಬೆಂಗಳೂರು: ಕೆ ಐ ಎ ಡಿ ಬಿ ಗೆ ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಯ ಜಮೀನು ನೀಡುವುದಿಲ್ಲ ಎಂಬುದಾಗಿ ರೈತ ಹೋರಾಟಗಾರರು ಹೋರಾಟ ನಡೆಸುತ್ತಿದ್ದರು. ಆದರೇ ಇಂದು ದಿಢೀರ್ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಪತ್ರ ಬರೆದಿದ್ದು, ನಾವು 1771 ಎಕರೆ ಜಮೀನು ನೀಡುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದೇವನಹಳ್ಳಿ ತಾಲ್ಲೂಕು, ಚನ್ನರಾಯಪ್ಪಟಣ ಹೋಬಳಿ ರೈತ ಹೋರಾಟ ಸಮಿತಿಯು ಪತ್ರ ಬರೆದಿದೆ. ಅದರಲ್ಲಿ ಚನ್ನರಾಯಪಟ್ಟಣ ಹೋಬಳಿ 1777 ಎಕರೆ ಜಮೀನನನ್ನು ಕೊಡುವುದಕ್ಕೆ 13 ಗ್ರಾಮಗಳ ರೈತರ ಒಪ್ಪಿಗೆಯಿದೆ ಎಂಬುದಾಗಿ ತಿಳಿಸಿದ್ದಾರೆ. ಇನ್ನೂ ರಾಜ್ಯ ಸರ್ಕಾರವು ರೈತರ ಭೂಮಿಗೆ ಒಳ್ಳೆಯ ಬೆಲೆ ನಿಗದಿ ಪಡಿಸಬೇಕು. ಆ ಮೂಲಕ ಜಮೀನು ಖರೀದಿ ಮಾಡಬೇಕು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ವಿನಂತಿಸಿದ್ದಾರೆ. ಇನ್ನೂ ನಾಲ್ಕು ಷರತ್ತುಗಳನ್ನು ರೈತ ಹೋರಾಟ ಸಮಿತಿ ವಿಧಿಸಿದೆ. ಅದರಲ್ಲಿ ಮೊದಲನೆಯ ಷರತ್ತು ಪ್ರತಿ ಎಕರೆಗೆ 3.50 ಕೋಟಿಗಳ ದರ ನಿಗದಿ ಪಡಿಸಬೇಕು. ಎರಡನೇಯದು ಜಮೀನು ಕಳೆದುಕೊಂಡ ರೈತ ಮಕ್ಕಳಿಗೆ ವಿದ್ಯಾಭ್ಯಾಸದ…

Read More

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಹೊಸದಾಗಿ ಘೋಷಿಸಲಾದ ತಾಲೂಕಿನಲ್ಲಿ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು Non FRU CHC ( Block PHC) ಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯದ ಹೊಸ 8 ತಾಲ್ಲೂಕಿನ ಜನತೆಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಿದ್ದು,  2025-26ನೇ ಸಾಲಿನ ಆಯವ್ಯಯ ಘೋಷಣೆಯ ಕಂಡಿಕೆ 138 (ii) ರಲ್ಲಿ “ಹೊಸದಾಗಿ ಘೋಷಿಸಲಾಗಿರುವ ತಾಲ್ಲೂಕುಗಳಾದ ಹನೂರು, ಅಳ್ಳಾವರ, ಅಣ್ಣಿಗೇರಿ, ಮಸ್ಕಿ ಸಿರಿವಾರ, ಕಾಪು ಬಬಲೇಶ್ವರ, ಕೊಲಾರ ಬೇಳೂರು ಮತ್ತು ತೇರದಾಳದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸಲಾಗುವುದು. ಪೊನ್ನಂಪೇಟೆಯಲ್ಲಿ ಹೊಸದಾಗಿ ಸಮುದಾಯ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ. ಆರ್ಥಿಕ ಇಲಾಖೆಯು ಆಯವ್ಯಯ ಘೋಷಣೆಗಳ ಅನುಷ್ಠಾನದ ಮಾರ್ಗಸೂಚಿಯಲ್ಲಿ ಈ ಯೋಜನೆಗೆ KKRDB, KMERC ಹಾಗೂ NHHI 15ನೇ ಹಣಕಾಸು ಆಯೋಗದಿಂದ ವೆಚ್ಚ ಭರಿಸಲು ತಿಳಿಸಲಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ…

Read More

ಬೆಂಗಳೂರು: ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್‌ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಿಎಂ ಕುರ್ಚಿಯ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಊಟ ನೀಡುವ ಯೋಜನೆ ತರಲಾಗಿದೆ. ಬೀದಿನಾಯಿಗಳ ಉಪಟಳದಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಅದಕ್ಕಾಗಿ ನಾಯಿಗಳ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಉದ್ದೇಶದ ಯೋಜನೆ ಬಿಬಿಎಂಪಿಯಲ್ಲಿದೆ. ಜನರು ಹಾಗೂ ಸಂಘಟನೆಗಳು ಈಗಾಗಲೇ ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಈಗ ಬೌ ಬೌ ಬಿರಿಯಾನಿ ಹಾಕುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು. ಪ್ರತಿ ಬೀದಿಗಳಲ್ಲಿ ಜನರು ಬೀದಿನಾಯಿಗಳಿಗೆ ಊಟ ಹಾಕುವುದು ಸಾಮಾನ್ಯವಾಗಿದೆ. ಈಗ ಹಣ ಲೂಟಿ ಮಾಡಲು ಇಂತಹ ಯೋಜನೆ ತರಲಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದೆ. ಉದ್ಯಾನಗಳ ನಿರ್ವಹಣೆ ಆಗುತ್ತಿಲ್ಲ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಂಬಳ ಕೊಡಲು ಹಣವಿಲ್ಲ. ಶಾಲೆಗಳ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಯಾವುದಕ್ಕೂ ಹಣ ಇಲ್ಲ ಎಂದಾಗಿರುವಾಗ, ಬೀದಿನಾಯಿಗಳಿಗೆ…

Read More

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೆಎಸ್ ಆರ್ ಟಿಸಿಗೆ ಮತ್ತೊಂದು ಕಿರೀಟ ಮುಡಿಗೇರಿದೆ. ಕೆಎಸ್‌ಆರ್‌ಟಿಸಿಗೆ ರಾಷ್ಟ್ರೀಯ ET HRWorld Employee Experience ಪ್ರಶಸ್ತಿ-2025 ಲಭಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಕೈಗೊಂಡಿರುವ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ ETHR World Employee Experience ಪ್ರಶಸ್ತಿ-2025 ರವರ ಅತ್ಯುತ್ತಮ ನೌಕರ ಅನುಭವ – ಸಾರ್ವಜನಿಕ ವಲಯ ಸಂಸ್ಥೆಗಳು (PSUs) ವರ್ಗದಲ್ಲಿ ಪುರಸ್ಕಾರ ದೊರಕಿದೆ. ಜುಲೈ.11ರಂದು ಈ ಪ್ರಶಸ್ತಿಯನ್ನು ಬೆಂಗಳೂರಿನ ಶೇರಟನ್ ಗ್ರಾಂಡ್ ಹೋಟೆಲ್ ನಲ್ಲಿ ನಡೆದಂತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ನಿಗಮದ ಪರವಾಗಿ ಅಶ್ರಫ್ ಕೆ ಎಂ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಸ್ವೀಕರಿಸಿದರು. https://kannadanewsnow.com/kannada/an-fda-employee-who-attempted-suicide-by-pouring-petrol-has-died-despite-treatment/ https://kannadanewsnow.com/kannada/did-you-score-more-than-95-in-sslc-exam-apply-for-scholarship-now/

Read More

ಬಳ್ಳಾರಿ: ಕೊಪ್ಪಳದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎದುರು ಪೆಟ್ರೋಲ್ ಸುರಿದುಕೊಂಡು ಎಫ್ ಡಿಎ ಸುಂಕಪ್ಪ ಕೊರವರ ಆತ್ಮಹತ್ಯೆಗೆ ಯತ್ನಿಸಿದ್ದರು. ಇಂತಹ ಅವರು ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ. ಕೊಪ್ಪಳದ ಬಿಇಒ ಕಚೇರಿಯಲ್ಲಿ ಎಫ್ ಡಿ ಎ ಆಗಿ ಸುಂಕಪ್ಪ ಕೊರವರ ಕಾರ್ಯನಿರ್ವಹಿಸುತ್ತಿದ್ದರು. ಅವರು ಕಳೆದ 7 ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದರಿಂದ ವೇತನ ನೀಡಿರಲಿಲ್ಲ. ಮದ್ಯವೆಸನಿಯಾಗಿದ್ದ ಸುಂಕಪ್ಪಗೆ ಜೀವನ ನಿರ್ವಹಣೆ ಕಷ್ಟವಾಗಿತ್ತು. ಜುಲೈ.8ರಂದು ವೇತನ ಕೇಳಲು ಬಿಇಒ ಕಚೇರಿಗೆ ಸುಂಕಪ್ಪ ತೆರಳಿದ್ದರು. ಈ ಸಂದರ್ಭದಲ್ಲಿ ಮನನೊಂದು ಕಚೇರಿಯ ಮುಂದೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿಕೊಂಡಿದ್ದರು. ಶೇ.80ರಷ್ಟು ಸುಟ್ಟಗಾಯದಿಂದ ಬಳಲುತ್ತಿದ್ದಂತ ಸುಂಕಪ್ಪ ಅವರನ್ನು ಎರಡು ದಿನ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಜುಲೈ.10ರಂದು ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. https://kannadanewsnow.com/kannada/another-victim-of-heart-attack-in-the-state-bus-drivers-death/ https://kannadanewsnow.com/kannada/did-you-score-more-than-95-in-sslc-exam-apply-for-scholarship-now/

Read More

ಚಾಮರಾಜನಗರ: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನೊಬ್ಬ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿರುವಂತ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮೃತ ಚಾಲಕನನ್ನು ಆರ್ ಪಿ ಕೆ ಖಾಸಗಿ ಬಸ್ಸಿನ ಚಾಲಕ ಗುರುಸಿದ್ದು (55) ಎಂಬುದಾಗಿ ತಿಳಿದು ಬಂದಿದೆ. ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಆರ್ ಪಿಕೆ ಖಾಸಗಿ ಬಸ್ ಚಲಾಯಿಸಿಕೊಂಡು ಗುರುಸಿದ್ದು ತೆರಳುತ್ತಿದ್ದರು. ಬಸ್ ಚಾಲನೆ ಮಾಡುವಾಗಲೇ ಎದೆನೋವು ಕಾಣಿಸಿಕೊಂಡಿದೆ. ಚಾಲಕ ಗುರುಸಿದ್ದಪ್ಪನನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆತರುತ್ತಿದ್ದಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾದಂತೆ ಆಗಿದೆ. https://kannadanewsnow.com/kannada/pilot-may-have-deliberatedy-crashed-air-india-flight-captain-mohan-ranganathan/ https://kannadanewsnow.com/kannada/did-you-score-more-than-95-in-sslc-exam-apply-for-scholarship-now/

Read More