Subscribe to Updates
Get the latest creative news from FooBar about art, design and business.
Author: kannadanewsnow09
ಮೈಸೂರು: ಜಿಲ್ಲೆಯ ಟಿ.ನರಸೀಪುರದ ವಲಯ ಅರಣ್ಯಾಧಿಕಾರಿಯಾಗಿದ್ದಂತ ಕಾಂತರಾಜ್ ಚೌಹಾಣ್ ಅವರು ಶವವಾಗಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಟಿ.ನರಸೀಪುರ ವಲಯ ಅರಣ್ಯಾಧಿಕಾರಿ(RFO) ಕಾಂತರಾಜ್ ಚೌಹಾಣ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ಮೈಸೂರು ಕೇಂದ್ರ ಬಸ್ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್ ನಲ್ಲಿ ಅವರ ಶವಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿಕೊಂಡು ಆರ್ ಎಫ್ ಓ ಕಾಂತರಾಜ್ ಶವ ಪತ್ತೆಯಾಗಿದೆ. ಸ್ನೇಹಿತ ಮಲ್ಲನಗೌಡ ಜೊತೆಗೆ ರೂಮ್ ಬುಕ್ ಮಾಡಿಕೊಂಡಿದ್ದರು. 15 ದಿನಗಳ ಹಿಂದಷ್ಟೇ ನರಸೀಪುರಕ್ಕೆ ಆರ್ ಎಫ್ ಓ ಆಗಿ ಕಾಂತರಾಜ್ ವರ್ಗಾವಣೆಗೊಂಡಿದ್ದರು. ಈ ಬೆನ್ನಲ್ಲೇ ಅವರು ಖಾಸಗಿ ಹೋಟೆಲ್ ನಲ್ಲಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಶ್ರೀನಗರ: ಸೋಮವಾರ ಲಡಾಖ್ ಪ್ರದೇಶದ ಲೇಹ್ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದು ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ತೀವ್ರತೆಯ ಕಂಪನಗಳು ಕಂಡುಬಂದಿವೆ. ಸ್ಥಳೀಯ ಹವಾಮಾನ ಇಲಾಖೆಯ ನಿರ್ದೇಶಕ ಮುಖ್ತಾರ್ ಅಹ್ಮದ್ ಐಎಎನ್ಎಸ್ಗೆ ತಿಳಿಸಿದ್ದು, “ಇಂದು ಬೆಳಿಗ್ಗೆ 11.51 ಕ್ಕೆ ಲಡಾಖ್ ಪ್ರದೇಶದ ಲೇಹ್ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದು ಸಂಭವಿಸಿದೆ. “ಭೂಕಂಪದ ನಿರ್ದೇಶಾಂಕಗಳು ಉತ್ತರಕ್ಕೆ 36.71 ಅಕ್ಷಾಂಶ ಮತ್ತು ಪೂರ್ವಕ್ಕೆ 74.32 ರೇಖಾಂಶದಲ್ಲಿವೆ. ಇದು ಭೂಮಿಯ ಹೊರಪದರದೊಳಗೆ 171 ಕಿ.ಮೀ ದೂರದಲ್ಲಿ ಸಂಭವಿಸಿದೆ.” ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪದ ತೀವ್ರತೆಯು ವಿವಿಧ ಹಂತಗಳಲ್ಲಿ ಅನುಭವಿಸಿದೆ. ಇಲ್ಲಿಯವರೆಗೆ, ಯಾವುದೇ ಸಾವುನೋವುಗಳು ಅಥವಾ ಆಸ್ತಿಪಾಸ್ತಿ ಹಾನಿಯ ವರದಿಗಳು ಎಲ್ಲಿಂದಲೂ ಬಂದಿಲ್ಲ.
ಬೆಂಗಳೂರು: ಫೋಕ್ಸೋ ಕಾಯ್ದೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಳ್ಳಾರಿಯ ಎಪಿಎಂಸಿ ಠಾಣೆ ಸಿಪಿಐ ಮೊಹಮ್ಮದ್ ರಫಿಕ್ ಎಂಬುವರು,ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದ ದೂರಿನ ಮೇರೆಗೆ ಶ್ರೀರಾಮುಲು ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬ್ಯಾನರ್ ಗಲಾಟೆ ಖಂಡಿಸಿ ಬಿಜೆಪಿ, ಜ.17ರಂದು ಬಳ್ಳಾರಿಯ ಎಪಿಎಂಸಿ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಿತ್ತು. ಈ ಸಮಾವೇಶದಲ್ಲಿ ಬಳ್ಳಾರಿ ಗಾಂಜಾ, ಡ್ರಗ್ಸ್ ಹಬ್ ಆಗಿದೆ ಎಂದು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀರಾಮುಲು, ಫೋಕ್ಸೋ ಪ್ರಕರಣದಲ್ಲಿ ಬಾಲಕಿಯ ಹೆಸರು, ಶಾಲೆ ಮತ್ತು ವಿವರ ಬಹಿರಂಗಪಡಿಸಿದ್ದರು. ಫೋಕ್ಸೋ ಆ್ಯಕ್ಟ್ ಪ್ರಕಾರ ಯಾವುದೇ ಕಾರಣಕ್ಕೂ ನೊಂದ ಬಾಲಕಿ ಹೆಸರು, ವಿವರ ಬಹಿರಂಗಪಡಿಸುವಂತಿಲ್ಲ. ಹಾಗಾಗಿ, ಒಂದು ವೇಳೆ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದರೆ ಇಂತಹ ಪ್ರಕರಣದಲ್ಲಿ 6 ತಿಂಗಳು ಜೈಲುವಾಸ ಮತ್ತು 2 ಲಕ್ಷ ರೂ.ವರೆಗೆ ದಂಡ ಹಾಕುವ ಸಾಧ್ಯತೆ ಇರುತ್ತದೆ.
ಶಿವಮೊಗ್ಗ: ರಾಜ್ಯದ ಹಲವೆಡೆ ಶನೀಶ್ವರ ದೇವಾಲಯಗಳಿರಬಹುದು. ನೀವುಗಳು ಭೇಟಿ ಕೂಡ ನೀಡಿರಬೇಹುದು. ಆದರೇ ಅದಕ್ಕಿಂತಲೂ ಭಾರೀ ಪವರ್ ಪುಲ್ ದೇವಾಲ ಅನ್ನೋದು ಭಕ್ತರ ನಂಬಿಕೆ. ಇಲ್ಲಿಗೆ ಭೇಟಿ ನೀಡಿ ತಮ್ಮ ಕಷ್ಟ ನಿವಾರಣೆಯ ಕೋರಿಕೆ ಮಾಡಿದ್ರೆ ನಿವಾರಣೆ ಗ್ಯಾರಂಟಿ ಅನ್ನೋದು ಹಲವರ ಮಾತು. ಹಾಗಾದ್ರೆ ಅದೆಲ್ಲಿದೆ? ಏನು ಅದರ ಮಹತಾತ್ಮೆ ಅಂತ ಮುಂದೆ ಓದಿ. ಹೌದು.. ಹೀಗೊಂದು ಪವರ್ ಪುಲ್ ಶನೇಶ್ವರ ದೇವಾಲಯ ಇರೋದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣಪಗಾರು ಗ್ರಾಮದ ಕಂಚಿಗದ್ದೆಯಲ್ಲಿ. ಶ್ರೀ ಕ್ಷೇತ್ರ ಕಂಚಿಗದ್ದೆಯ ಶನೀಶ್ವರ ದೇವಾಲಯ ಮಾತ್ರ ಸಕಲ ಕಷ್ಟಗಳನ್ನು ನಿವಾರಿಸುವ ಶಕ್ತಿ ದೇವರೆಂದೇ ಪ್ರಸಿದ್ಧಿಯಾಗಿದೆ. ಭಕ್ತರ ದಂಡೇ ಆಗಮನ ಇಲ್ಲಿಗೆ ಶಿವಮೊಗ್ಗ, ಸಾಗರ, ಕಾರ್ಗಲ್, ಮಂಗಳೂರು, ಭಟ್ಕಳ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಕ್ತರ ದಂಡೇ ಆಗಮಿಸುತ್ತದೆ. ಶನಿವಾರದಂದು ಇದು ಹೆಚ್ಚೇ ಆಗಿರುತ್ತದೆ. ಭಕ್ತರ ಕಷ್ಟಗಳನ್ನು ಕೇಳುವಂತ ಪೂಜಾರಿ ಬಂಗಾರಪ್ಪನವರು, ಹೇಳಿಕೆಯ ಮೂಲಕ ಪರಿಹಾರವನ್ನು ಸೂಚಿಸೋದು ಮಾತ್ರ ವಿಶಿಷ್ಟದಲ್ಲಿ ವಿಶಿಷ್ಟವಾಗಿದೆ. ಏನೆಲ್ಲ ಸಮಸ್ಯೆಗಳ ನಿವಾರಣೆಗೆ ಹರಕೆ…
ಬೆಂಗಳೂರು: ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟ ಶೋ ಬಿಗ್ ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಕೋಟ್ಯಂತ ಅಭಿಮಾನಿಗಳ ನಿರೀಕ್ಷೆಯಂತೆ ಕೊನೆಗೊ ಗಿಲ್ಲಿ ನಟ ಟ್ರೋಫಿಯನ್ನ ತನ್ನದಾಗಿಸಿಕೊಂಡಿದ್ದಾನೆ. ತನ್ನ ಜಯವನ್ನು ಅಭಿಮಾನಿಗಳಿಗೆ ಅರ್ಪಿಸಿದ ಗಿಲ್ಲಿ ನಟ ನನ್ನ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಎಲ್ಲರಿಗೂ ಈ ಟ್ರೋಫಿ ಅರ್ಪಣೆ ಎಂದಿದ್ದಾರೆ. ಈ ಮೂಲಕ ಬಿಗ್ ಬಾಸ್ ಇತಿಹಾಸದಲ್ಲಿ ತನ್ನ ಹೆಸರನ್ನು ಚಿನ್ನದ ಅಕ್ಷರದಲ್ಲಿ ಬರೆಯಿಸಿಕೊಂಡಿದ್ದಾರೆ.
ಬೆಂಗಳೂರು: ಕೆ ಎಸ್ ಆರ್ ಟಿ ಸಿ ಗೆ ಪ್ರತಿಷ್ಠಿತ Grow Care India Environment Excellence Award -2025 ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿದೆ. ಕೆ ಎಸ್ ಆರ್ ಟಿ ಸಿ ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಪರಿಸರ ಸ್ನೇಹಿ ಉಪಕ್ರಮಗಳ ಯಶಸ್ವಿ ನಿರ್ವಹಣೆಗೆ ಸಾರಿಗೆ ಕ್ಷೇತ್ರದಲ್ಲಿ Grow Care India Environment Management ಪ್ರಶಸ್ತಿಯು Gold Category ಯಲ್ಲಿ ಲಭಿಸಿದೆ. ಪ್ರಶಸ್ತಿಯನ್ನು ದಿನಾಂಕ: 17-01-2026 ರಂದು ನವದೆಹಲಿಯ ಏರೋಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA)ನಿರ್ದೇಶಕಿ ಹಾಗೂ ಜಂಟಿ ಕಾರ್ಯದರ್ಶಿಯವರಾದ ಮೃಣಾಲಿನಿ ಶ್ರೀವಾಸ್ತವ, ಭಾಪೊಸೇ, ಮತ್ತು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ದೆಹಲಿ ಕ್ಯಾಂಟೋನ್ಮೆಂಟ್ ಬೋರ್ಡ್ನ ಸದಸ್ಯರಾದ ರಾಜೇಶ್ ಗೋಯಲ್ ಅವರು ಕೆ. ವೆಂಕಟೇಶ್ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಚಿತ್ರದುರ್ಗ ವಿಭಾಗರವರಿಗೆ ಪ್ರದಾನ ಮಾಡಿದರು.
BBK Season 12: ಟೈಟಲ್ ಸನಿಹದಲ್ಲಿ ಕಾವ್ಯ ಶೈವಗೆ ತಪ್ಪಿದ ಲಕ್: ಬಿಗ್ ಬಾಸ್ ಮನೆಯಿಂದ 3ನೇ ರನ್ನರ್ಅಪ್ ಆಗಿ ಔಟ್!
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್-12ರಲ್ಲಿ ಟೈಟಲ್ ಸನಿಹದಲ್ಲೇ ಕಾವ್ಯ ಶೈವ್ ಅವರಿಗೆ ಲಕ್ ತಪ್ಪಿದೆ. 3ನೇ ರನ್ನರ್ ಅಪ್ ಆಗಿ ಕಾವ್ಯ ಶೈವ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ. ಹೌದು.. ರಗಡ್ ರಘು ಬೆನ್ನಲ್ಲೇ ಬಿಗ್ ಬಾಸ್ ಕನ್ನಡ-12 ರಿಯಾಲಿಟಿ ಶೋ ಕಾರ್ಯಕ್ರಮದಿಂದ ಕಾವ್ಯ ಶೈವ ಔಟ್ ಆಗಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಆರಂಭದಿಂದಲೂ ಗಿಲ್ಲಿ ನಟನ ಬೆಸ್ಟ್ ಫ್ರೆಂಡ್ ಆಗಿದ್ದಂತ ಕಾವ್ಯ ಶೈವ, ಇದೀಗ ಟೈಟಲ್ ವಿನ್ನಿಂಗ್ ಸನಿಹದಲ್ಲೇ ಮನೆಯಿಂದ ಹೊಬಂದಿದ್ದಾರೆ. https://kannadanewsnow.com/kannada/i-will-give-20-lakhs-if-the-ghilli-actor-wins-bigg-boss-season-12-jds-mlc-t-a-sharavana-announces/
ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್-12 ಗ್ರ್ಯಾಂಡ್ ಫಿನಾಲೆ ಆರಂಭಗೊಂಡಿದೆ. ಈ ಬಾರಿ ಗಿಲ್ಲಿ ನಟ ಗೆಲ್ಲಲಿದ್ದಾನೆ ಎನ್ನಲಾಗುತ್ತಿದೆ. ಇಂತಹ ಗಿಲ್ಲಿ ನಟ ಕನ್ನಡ ಬಿಗ್ ಬಾಸ್ ಸೀಸನ್-12 ಗೆದ್ದರೇ 20 ಲಕ್ಷ ನೀಡುವುದಾಗಿ ಎಂಎಲ್ಸಿ ಟಿ.ಎ ಶರವಣ ಘೋಷಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಗ್ ಬಾಸ್ ಸೀಸನ್-12ರಲ್ಲಿ ಭಾಗಿಯಾಗಿರುವಂತ ಗಿಲ್ಲಿ ನಟ ರೈತನ ಮಗನಾಗಿದ್ದಾನೆ. ರೈತನ ಮಗನೊಬ್ಬ ಗೆಲ್ಲ ಬೇಕು. ನನಗೆ ಗಿಲ್ಲಿ ನಟ ವಿನ್ನರ್ ಆಗುತ್ತಾನೆ ಎನ್ನುವಂತ ವಿಶ್ವಾಸವಿದೆ. ನಾನು ಕೂಡ ಪ್ರತಿ ದಿನ ಬಿಗ್ ಬಾಸ್ ಶೋ ನೋಡುವುದಾಗಿ ತಿಳಿಸಿದರು. ಬಿಗ್ ಬಾಸ್ ಸೀಸನ್-12 ಗ್ರ್ಯಾಂಡ್ ಫಿನಾಲೆ ಆರಂಭಗೊಂಡಿದೆ. ಈಗಾಗಲೇ ಟಾಪ್ 6 ಸ್ಪರ್ಧಿಗಳಲ್ಲಿ ಧನುಷ್ ಹೊರ ಬಂದಿದ್ದಾರೆ. ರಕ್ಷಿತಾ ಅಥವಾ ಅಶ್ವಿನಿ ರನ್ನರ್ ಆಗುವ ಸಾಧ್ಯತೆ ಇದೆ. ಈ ಎಲ್ಲದರ ನಡುವೆ ವಿನ್ನರ್ ಯಾರು ಆಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. https://kannadanewsnow.com/kannada/cm-siddaramaiah-calls-for-struggle-until-mnrega-is-reinstated-appeal-for-everyones-cooperation/
ಮೈಸೂರು :ವಿಬಿಜಿ ಗ್ರಾಮ್ ಜಿ ಕಾಯ್ದೆ ರದ್ದಾಗಿ MNREGA ಪುನ: ಸ್ಥಾಪನೆಯಾಗುವವರೆಗೆ ಮಾಡುವ ಹೋರಾಟಕ್ಕೆ ಎಲ್ಲರೂ ಸಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ಟಿ. ನರಸೀಪುರ ತಾಲೂಕಿನ ಕುಪ್ಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು. 2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಈ ಕಾನೂನು ಜಾರಿ ಮಾಡಿದರು. ಕೆಲಸದ ಹಕ್ಕು ಕೊಟ್ಟರು.ಅದನ್ನು ಕಿತ್ತುಹಾಕುತ್ತಿದ್ದಾರೆ. ಬಿಜೆಪಿಯವರು ಬಡವರು, ಹೆಣ್ಣುಮಕ್ಕಳು, ಕಾರ್ಮಿಕರಿಗೆ ಕೆಲಸ ಕೊಡಲು ಬಿಡುತ್ತಿಲ್ಲ. ನೀವು ಯಾವಾಗ ಕೇಳಿದರೂ ಉದ್ಯೋಗ ಕೊಡುವ ಕಾಯಿದೆಯನ್ನು ಜಾರಿ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರ ಅದನ್ನು ತೀರ್ಮಾನಿಸಲಿ ದೆ. ವಿಬಿಜಿ ಗ್ರಾಮ್ ಜಿ ರದ್ದಾಗಬೇಕು. ಜನರನ್ನು ತಪ್ಪು ದಾರಿ ಎಳೆಯಲು ರಾಮ್ ಜಿ ಸೇರಿಸಿದ್ದಾರೆ. ಎಲ್ಲರೂ ಚಳುವಳಿಗೆ ತಯಾರಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಕೇಂದ್ರ ಸರ್ಕಾರ ಇತೀಚೆಗೆ…
ನವದೆಹಲಿ: “ಕಾಲವೇ ಉತ್ತರ ನೀಡುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸಮಯವೇ ಪ್ರತಿಯೊಂದಕ್ಕೂ ಉತ್ತರಿಸುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಶಿವಕುಮಾರ್ ಅವರು ಭಾನುವಾರ ಉತ್ತರಿಸಿದರು. ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೀರಿ ಎಂದು ಕೇಳಿದಾಗ, “ನಾನು ಅದನ್ನು ಏಕೆ ಬಹಿರಂಗಗೊಳಿಸಬೇಕು. ನಾವು ಇಲ್ಲಿಗೆ ಬರುವುದೇ ಸರ್ಕಾರದ ಕೆಲಸಕ್ಕೆ ಪಕ್ಷದ ಕೆಲಸಕ್ಕೆ, ನಮ್ಮ ರಾಜಕೀಯಕ್ಕೆ” ಎಂದು ಹೇಳಿದರು. ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಇದ್ದಾರೆ ಎಂದರೆ ಹೈಕಮಾಂಡ್ ಭೇಟಿ ಚರ್ಚೆ ರಾಜ್ಯದಲ್ಲಿ ನಡೆಯುತ್ತಿದೆ ಎನ್ನುವ ಬಗ್ಗೆ ಕೇಳಿದಾಗ, “ನಾವು ರಾಜಕಾರಣಿಗಳು. ರಾಜಕಾರಣಿಗಳು ಏನು ರಾಜಕಾರಣ ಮಾಡಬೇಕೋ ಅದನ್ನು ಎಲ್ಲಾ ರಾಜಕಾರಣಿಗಳು ಮಾಡುತ್ತಾರೆ. ಇದರಲ್ಲಿ ಏನೂ ತಪ್ಪಿಲ್ಲ. ನಾವುಗಳು ನಮ್ಮ ಅನುಕೂಲಕ್ಕೆ ಯಾರನ್ನು ಭೇಟಿ ಮಾಡುಬೇಕೋ ಅವರನ್ನು ಕೇಳಿರುತ್ತೇವೆ, ಭೇಟಿ ಮಾಡುತ್ತೇವೆ. ನೀವು (ಮಾಧ್ಯಮಗಳು) ಏಕೆ ಇದನ್ನು ದೊಡ್ಡದು ಮಾಡುತ್ತೀರಿ” ಎಂದರು. ನರೇಗಾ ಹೆಸರು ಬದಲಾವಣೆ ವಿರೋಧಿಸಿ ಪ್ರತಿ ಕ್ಷೇತ್ರದಲ್ಲಿ ಐದು ಕಿ.ಮೀ. ಪಾದಯಾತ್ರೆ ನರೇಗಾ…














