Subscribe to Updates
Get the latest creative news from FooBar about art, design and business.
Author: kannadanewsnow09
ಉಪ್ಪಿಗೆ ಮಹಾಲಕ್ಷ್ಮಿ ಅಂಶವಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಗೆಯೇ, ಈ ಉಪ್ಪನ್ನು ನಮ್ಮ ಕೈಯಲ್ಲಿ ಇಟ್ಟುಕೊಂಡು, ನಾವು ಏನು ಪ್ರಾರ್ಥಿಸುತ್ತೇವೆ, ಅದು ಕೆಲಸ ಮಾಡುತ್ತದೆ ಎಂದು ನಮಗೆ ತಿಳಿದಿದೆ. ಕಲ್ಲು ಉಪ್ಪು ಕೆಟ್ಟ ಜನರ ಕಣ್ಣಿನ ಆಯಾಸವನ್ನು ಕಡಿಮೆ ಮಾಡುವ ವಸ್ತುವಾಗಿದೆ. ಈ ಪೋಸ್ಟ್ ಮೂಲಕ, ಈ ಕಲ್ಲುಉಪ್ಪಿನ ಬಗ್ಗೆ ನಮಗೆ ತಿಳಿದಿಲ್ಲದ ಕೆಲವು ಹೊಚ್ಚ ಹೊಸ ಆಧ್ಯಾತ್ಮಿಕ ಮಾಹಿತಿಯನ್ನು ನಾವು ತಿಳಿಯಲಿದ್ದೇವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ…
ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, 2025-26ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ (ಜುಲೈ 1, 2025 ರಿಂದ ಸೆಪ್ಟೆಂಬರ್ 30, 2025 ರವರೆಗೆ) ಪಿಪಿಎಫ್, ಎಸ್‌ಎಸ್‌ವೈ, ಎನ್‌ಎಸ್‌ಸಿ ಮತ್ತು ಅಂಚೆ ಕಚೇರಿ ಠೇವಣಿಗಳು ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಬದಲಾಗದೆ ಉಳಿಯುತ್ತವೆ ಎಂದು ಸರ್ಕಾರ ಸೋಮವಾರ, ಜೂನ್ 30, 2025 ರಂದು ಘೋಷಿಸಿತು. “ಜುಲೈ 1, 2025 ರಿಂದ ಸೆಪ್ಟೆಂಬರ್ 30, 2025 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ (ಏಪ್ರಿಲ್ 1, 2025 ರಿಂದ ಜೂನ್ 30, 2025) ಅಧಿಸೂಚನೆ ಮಾಡಲಾದ ದರಗಳಿಂದ ಬದಲಾಗದೆ ಉಳಿಯುತ್ತವೆ ಎಂದು ಹಣಕಾಸು ಸಚಿವಾಲಯ ಸೋಮವಾರ ಅಧಿಸೂಚನೆಯಲ್ಲಿ ತಿಳಿಸಿದೆ. ಸಣ್ಣ ಉಳಿತಾಯ ಯೋಜನೆಗಳ ಇತ್ತೀಚಿನ ಬಡ್ಡಿದರಗಳು ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿಗಳು: ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ 8.2% ಬಡ್ಡಿದರವನ್ನು ಆಕರ್ಷಿಸುವುದು ಮುಂದುವರಿಯುತ್ತದೆ.…
ಬೆಂಗಳೂರು: ರಾಜ್ಯದ ಗ್ರಾಮೀಣ ಪತ್ರಕರ್ತರಿಗೂ ಸಾರಿಗೆ ಬಸ್ ಪಾಸ್ ವಿತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು. ಅದರಂತೆ ಅಧಿಕೃತ ಆದೇಶ ಮಾಡಿದ್ದರು. ಈಗ ಶೀಘ್ರವೇ ಗ್ರಾಮೀಣ ಪತ್ರಕರ್ತರಿಗೆ ಸಾರಿಗೆ ಬಸ್ ಪಾಸ್ ವಿತರಣೆ ಮಾಡಲಿದ್ದಾರೆ. ಅದಕ್ಕೂ ಮುನ್ನಾ ಗ್ರಾಮೀಣ ಪತ್ರಕರ್ತರ ಉಚಿತ ಸಾರಿಗೆ ಬಸ್ ಪಾಸ್ ಮಾದರಿ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗ್ರಾಮೀಣ ಭಾಗದ ಪತ್ರಕರ್ತರಿಗೆ ಅನುಕೂಲವಾಗಲೆಂದು ಬಸ್ ಪಾಸ್ ಜಾರಿ ಸಂಬಂಧ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮನವಿ ಹಿನ್ನೆಲೆಯಲ್ಲಿ, ಹೊಸ ವರ್ಷದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ತಿಳಿಸಿದ್ದರು. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಗ್ರಾಮೀಣ ಬಸ್ ಪಾಸ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸತತ ಸಭೆಗಳು ಆಗಿದ್ದು, ತಾಲೂಕು ಮಟ್ಟದಲ್ಲಿರುವ ಪತ್ರಕರ್ತರಿಗೂ ಈ…
ನವದೆಹಲಿ : ಭಾರತೀಯ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ, ಚಂದಾದಾರರ ಸಂಖ್ಯೆಯಲ್ಲಿ ವಿಶ್ವದ ಅತಿದೊಡ್ಡ ಸ್ಥಿರ ವೈರ್ ಲೆಸ್ ಪ್ರವೇಶ ಪೂರೈಕೆದಾರನಾಗುವ ಹಾದಿಯಲ್ಲಿದೆ ಎಂದು ವಿಶ್ಲೇಷಕರ ವರದಿಯೊಂದು ತಿಳಿಸಿದೆ. ಟೆಲಿಕಾಂ ನಿಯಂತ್ರಕ ಟ್ರಾಯ್ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ರಿಲಯನ್ಸ್ ಜಿಯೋ ಒಟ್ಟು 5 ಜಿಎಫ್‌ಡಬ್ಲ್ಯೂಎ ಚಂದಾದಾರರ ಸಂಖ್ಯೆ (ಪರವಾನಗಿ ಪಡೆಯದ ಬ್ಯಾಂಡ್ ರೇಡಿಯೋ ಸೇರಿದಂತೆ) ಮೇ ತಿಂಗಳಲ್ಲಿ 6.88 ಮಿಲಿಯನ್ ತಲುಪಿದ್ದರೆ, ಟಿ-ಮೊಬೈಲ್ ಮಾರ್ಚನಲ್ಲಿ 6.85 ಮಿಲಿಯನ್ ಚಂದಾದಾರರನ್ನು ಹೊಂದಿತ್ತು. ರಿಲಯನ್ಸ್ ಜಿಯೋ ಸುಮಾರು 1 ಮಿಲಿಯನ್ ಫಿಕ್ಸೆಡ್ ವೈರ್ಲೆಸ್ ಆಕ್ಸೆಸ್ (ಎಫ್‌ಡಬ್ಲ್ಯೂಎ) ಪರವಾನಗಿ ಪಡೆಯದ ಬ್ಯಾಂಡ್ ರೇಡಿಯೋ (ಯುಬಿಆರ್) ಚಂದಾದಾರರನ್ನು ಎಫ್ಟಿಟಿಎಕ್ಸ್ ವರ್ಗಕ್ಕೆ ಮರು ವರ್ಗೀಕರಿಸಿದೆ. ಇದರ ನಂತರ ಅದರ ನಿವ್ವಳ ಎಫ್‌ಡಬ್ಲ್ಯೂಎ ಚಂದಾದಾರರ ಸಂಖ್ಯೆ ಮೇ ತಿಂಗಳಲ್ಲಿ 5.9 ಮಿಲಿಯನ್ ಆಗಿದ್ದು, ಮಾಸಿಕ 0.74 ಮಿಲಿಯನ್ ಗ್ರಾಹಕರನ್ನು ಸೇರಿಸಲಾಗಿದೆ. ಟ್ರಾಯ್ ದತ್ತಾಂಶದ ಆಧಾರದ ಮೇಲೆ ವಿಶ್ಲೇಷಕರಾದ ಸಂಜೇಶ್ ಜೈನ್, ಮೋಹಿತ್ ಮಿಶ್ರಾ ಮತ್ತು ಅಪರಾಜಿತಾ ಚಕ್ರವರ್ತಿ…
ಬೆಂಗಳೂರು: ಸದ್ಯ ರಾಜ್ಯದ ಹಲವೆಡೆ ಮಳೆ ಕೊಂಚ ಬಿಡುವು ನೀಡಿದೆ. ಇದರ ನಡುವೆ 7 ಜಿಲ್ಲೆಗಳಲ್ಲಿ ಮತ್ತೆ ಮಳೆ ಮುಂದುವರೆಯಲಿದೆ. ಭಾರೀ ಮಳೆಯಾಗುವ ಕಾರಣ 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ. ಜುಲೈ.3ರಿಂದ ಮತ್ತೆ ಮಳೆ ಚುರುಕು ಪಡೆಯಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಕಾರಣ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ. ಇನ್ನೂ ವಿಜಯಪುರ, ಹಾವೇರಿ, ಗದಗ, ಬೀದರ್, ಧಾರವಾಡ, ರಾಯಚೂರು, ಕಲಬುರ್ಗಿ, ಕೊಪ್ಪಳ, ರಾಮನಗರ, ವಿಜಯನಗರ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಚಿತ್ರದುರ್ಗ, ದಾವಣೆಗೆರೆ, ಬೆಂಗಳೂರು ಗ್ರಾಮಾಂತರ, ನಗರ, ಚಾಮರಾಜನಗರ, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. https://kannadanewsnow.com/kannada/state-wide-expansion-of-stemi-scheme-heart-attack-treatment-will-now-be-provided-at-taluk-centers/ https://kannadanewsnow.com/kannada/telangana-factory-blast/
ಬೆಂಗಳೂರು: ದಿನೇ ದಿನೇ ಕರ್ನಾಟಕದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹೃದಯಾಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅದೇ ರಾಜ್ಯಾಧ್ಯಂತ ಎಲ್ಲಾ ತಾಲ್ಲೂಕುಗಳಿಗೂ ಸ್ಟೆಮಿ ಯೋಜನೆ ವಿಸ್ತರಣೆಗೆ ನಿರ್ಧರಿಸಿರುವುದಾಗಿ ಆರೋಗ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾಹಿತಿ ನೀಡಿದ್ದಾರೆ. ರಾಜ್ಯಾಧ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಸ್ಟೆಮಿ ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ. ಈ ಮೊದಲು 86 ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವೇ ಸ್ಟೆಮಿ ಯೋಜನೆ ಇತ್ತು. ಮುಂದಿನ ವರ್ಷದೊಳಗೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಯೋಜನೆ ಆರಂಭಗೊಳ್ಳಲಿದೆ ಎಂದರು. ಅಂದಹಾಗೇ ರಾಜ್ಯ ಸರ್ಕಾರ ರಾಜ್ಯಾಧ್ಯಂತ ವಿಸ್ತರಿಸುತ್ತಿರುವಂತ ಸ್ಟೆಮಿ ಯೋಜನೆ ಅಂದರೆ ಹಬ್ ಆಂಡ್ ಸ್ಟೋಕ್ ಮಾಡೆಲ್ ಎಂಬುದಾಗಿದೆ. ಈ ಯೋಜನೆಯ ಅಡಿಯಲ್ಲಿ ತಾಲ್ಲೂಕು ಕೇಂದ್ರಗಳಲ್ಲೇ ಹೃದಯಾಘಾತಕ್ಕೆ ಒಳಗಾದವರಿಗೆ ತುರ್ತು ವೈದ್ಯಕೀಯ ನೆರವು ಸಿಗಲಿದೆ. ಆ ಮೂಲಕ ಪ್ರಾಣಾಪಾಯದಿಂದ ಹೃದಯಾಘಾತಕ್ಕೆ ಒಳಗಾದವರನ್ನು ಪಾರು ಮಾಡುವಂತ ಚಿಕಿತ್ಸಾ ವಿಧಾನ ಇದಾಗಿದೆ. ಹಾಸನದಲ್ಲಿ ಇಂದು ಒಂದೇ ದಿನ ‘ಹೃದಯಾಘಾತಕ್ಕೆ’ 3 ಬಲಿ :…
ಬೆಂಗಳೂರು : ಉದ್ಯಾನನಗರಿ, ನಿವೃತ್ತರ ಸ್ವರ್ಗ ಬೆಂಗಳೂರು ನಗರ ಕಾಂಕ್ರೀಟ್ ಕಾಡಾಗುತ್ತಿದ್ದು, ಹಸಿರು ಹೊದಿಕೆ ಸಂವರ್ಧನೆಗಾಗಿ ಕಾಡುಗೋಡಿ ಅರಣ್ಯ ಭೂಮಿ ಸಂರಕ್ಷಿಸಲು ಕ್ರಮ ವಹಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಕಾಡುಗೋಡಿ ಪ್ಲಾಂಟೇಷನ್ ನ 120 ಎಕರೆ ಅರಣ್ಯ ಭೂಮಿ ಮರುವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಇಂದು ಗಾಂಧೀ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರಣ್ಯಭೂಮಿಯನ್ನು ಹಂಚಿಕೆ, ಮಂಜೂರು ಮಾಡಲು ಬರುವುದಿಲ್ಲ. ಅರಣ್ಯೇತರ ಉದ್ದೇಶಕ್ಕೆ ಅರಣ್ಯಭೂಮಿ ಬಳಸಲು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಅನುಮತಿ ಕಡ್ಡಾಯ ಎಂದರು. ಬೆಂಗಳೂರು ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್ ಸರ್ವೆ ನಂ. 1ರಲ್ಲಿ 711 ಎಕರೆಯನ್ನು ನೆಡುತೋಪಿಗಾಗಿ 1896 ರಲ್ಲಿ ನೀಡಲಾಗಿರುತ್ತದೆ. ಬಳಿಕ 1901ರಲ್ಲಿ ಅರಣ್ಯ ನಿಯಮಗಳು 1900ರ ರೀತ್ಯ ರಾಜ್ಯ ಅರಣ್ಯ ಎಂದು ಅಧಿಸೂಚನೆ ಮಾಡಲಾಗಿರುತ್ತದೆ. ಅಧಿಸೂಚಿತ ಅರಣ್ಯ ಮೀಸಲು ಅರಣ್ಯವಾಗಿರುತ್ತದೆ ಎಂದರು.…
GOOD NEWS: ರಾಜ್ಯಾಧ್ಯಂತ ‘ಸ್ಟೆಮಿ ಯೋಜನೆ’ ವಿಸ್ತರಣೆ: ಇನ್ಮುಂದೆ ತಾಲ್ಲೂಕು ಕೇಂದ್ರಗಳಲ್ಲೇ ಹೃದಯಾಘಾತಕ್ಕೆ ಚಿಕಿತ್ಸೆ
ಬೆಂಗಳೂರು: ಹಾಸನದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚು ಹೆಚ್ಚು ಘಟಿಸುತ್ತಿವೆ. ಈ ಹಿನ್ನಲೆಯಲ್ಲಿ ರಾಜ್ಯಾಧ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಸ್ಟೆಮಿ ಯೋಜನೆಯನ್ನು ವಿಸ್ತರಿಸಿ ಸರ್ಕಾರ ಆದೇಶಿಸಿದೆ. ಈ ಮೂಲಕ ಇನ್ಮುಂದೆ ತಾಲ್ಲೂಕು ಕೇಂದ್ರಗಳಲ್ಲೂ ಹೃದಯಾಘಾತಕ್ಕೆ ಒಳಗಾದವರಿಗೆ ತಕ್ಷಣವೇ ಚಿಕಿತ್ಸೆ ದೊರಕಿಸಿಕೊಡುವಂತ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಮಾಹಿತಿ ಹಂಚಿಕೊಂಡಿದ್ದು, ರಾಜ್ಯಾಧ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಸ್ಟೆಮಿ ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ. ಈ ಮೊದಲು 86 ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವೇ ಸ್ಟೆಮಿ ಯೋಜನೆ ಇತ್ತು. ಮುಂದಿನ ವರ್ಷದೊಳಗೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಯೋಜನೆ ಆರಂಭಗೊಳ್ಳಲಿದೆ ಎಂದರು. ಅಂದಹಾಗೇ ರಾಜ್ಯ ಸರ್ಕಾರ ರಾಜ್ಯಾಧ್ಯಂತ ವಿಸ್ತರಿಸುತ್ತಿರುವಂತ ಸ್ಟೆಮಿ ಯೋಜನೆ ಅಂದರೆ ಹಬ್ ಆಂಡ್ ಸ್ಟೋಕ್ ಮಾಡೆಲ್ ಎಂಬುದಾಗಿದೆ. ಈ ಯೋಜನೆಯ ಅಡಿಯಲ್ಲಿ ತಾಲ್ಲೂಕು ಕೇಂದ್ರಗಳಲ್ಲೇ ಹೃದಯಾಘಾತಕ್ಕೆ ಒಳಗಾದವರಿಗೆ ತುರ್ತು ವೈದ್ಯಕೀಯ ನೆರವು ಸಿಗಲಿದೆ. ಆ ಮೂಲಕ ಪ್ರಾಣಾಪಾಯದಿಂದ ಹೃದಯಾಘಾತಕ್ಕೆ ಒಳಗಾದವರನ್ನು ಪಾರು ಮಾಡುವಂತ ಚಿಕಿತ್ಸಾ ವಿಧಾನ ಇದಾಗಿದೆ. https://kannadanewsnow.com/kannada/attention-sslc-students-you-are-allowed-to-travel-free-of-charge-on-the-bmtc-bus-for-exam-3/…
ಮಂಡ್ಯ : “ಕಾವೇರಿ ಜಲಾನಯನ ಪ್ರದೇಶಕ್ಕೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಪ್ರತಿ ಕ್ಷೇತ್ರವನ್ನೂ ಗಮದಲ್ಲಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ ಒಂದಕ್ಕೆ 1 ಸಾವಿರ ಕೋಟಿಗೂ ಹೆಚ್ಚು ಅನುದಾನಕ್ಕೆ ಅನುಮೋದನೆ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. 92 ವರ್ಷಗಳ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಭರ್ತಿಯಾಗಿರುವ ಕೆಆರ್ ಎಸ್ ಅಣೆಕಟ್ಟಿಗೆ ಸಿಎಂ ಹಾಗೂ ಡಿಸಿಎಂ ಅವರು ಬಾಗಿನ ಅರ್ಪಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. “ನಮ್ಮ ಸರ್ಕಾರ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶವನ್ನು ಹೆಚ್ಚು ಮಾಡಿದೆ. 80 ವರ್ಷಗಳ ಹಳೆಯ ಕಾಲುವೆಗಳನ್ನು ದುರಸ್ತಿಗೊಳಿಸಲಾಗಿದೆ. ತಮಿಳುನಾಡಿಗೆ 9 ಟಿಎಂಸಿ ನೀರು ಹೋಗಬೇಕಿತ್ತು ಹೆಚ್ಚು ಮಳೆ ಬಂದ ಕಾರಣಕ್ಕೆ 30 ಟಿಎಂಸಿಗಿಂತ ಹೆಚ್ಚು ನೀರು ಬಿಡಲಾಗಿದೆ. ಕಳೆದ ವರ್ಷವೂ 177 ಟಿಎಂಸಿಗಿಂತ ಹೆಚ್ಚುವರಿಯಾಗಿ 305 ಟಿಎಂಸಿ ನೀರು ಹರಿಸಲಾಗಿತ್ತು. 2022- 23 ರಲ್ಲಿ 400 ಟಿಎಂಸಿ ಹೆಚ್ಚುವರಿ ನೀರು ಹರಿಸಲಾಗಿದೆ. ಮೂರು ವರ್ಷಗಳಿಗೊಮ್ಮೆ ನೀರು…
ಮಂಡ್ಯ: ನಮ್ಮ ಸರ್ಕಾರ ಬಿದ್ದೋಗತ್ತೆ ಅಂತ ಸೋತ ಗಿರಾಕಿಗಳು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಐದು ವರ್ಷ ಬಂಡೆ ರೀತಿ ಇರತ್ತೆ. 2028 ರಲ್ಲೂ ನಾವೇ ಗೆದ್ದು ಅಧಿಕಾರಕ್ಕೆ ಬರ್ತೀವಿ ಎಂದು ಘೋಷಿಸಿದ ಮುಖ್ಯಮಂತ್ರಿಗಳು ನೀರಾವರಿಗೆ ನಮ್ಮ ಈ ಸರ್ಕಾರ 25 ಸಾವಿರ ಕೊಟ್ಟಿದೆ. ಬೇರೆ ಯಾವ ಸರ್ಕಾರವಾದರೂ ಈ ಮಟ್ಟದ ಅನುದಾನ ಕೊಟ್ಟಿತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನಗೂ , DCM ಶಿವಕುಮಾರ್ ಅವರಿಗೂ ಸರಿ ಇಲ್ಲ ಎಂದು ಬುರುಡೆ ಬಿಡುತ್ತಿದ್ದಾರೆ. ನಾನು ಮತ್ತು ಶಿವಕುಮಾರ್ ಇಬ್ಬರೂ ಒಟ್ಟಾಗಿ, ಗಟ್ಟಿಯಾಗಿದ್ದೀವಿ. ನಮ್ಮ ಸರ್ಕಾರವೂ ಐದು ವರ್ಷ ಗ್ಯಾರಂಟಿಯಾಗಿ ಗಟ್ಟಿಯಾಗಿ ಇರುತ್ತದೆ. 2028 ರಲ್ಲೂ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಘೋಷಿಸಿದರು. ಅಭಿವೃದ್ಧಿಗೆ ಹಣ ಇಲ್ಲ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬುರುಡೆ ಬಿಡುತ್ತಿರುವ…