Author: kannadanewsnow09

ನವದೆಹಲಿ: ಸುಮಾರು 200 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಯುಎಸ್ ಮಿಲಿಟರಿ ವಿಮಾನವು ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಈ ಮೊದಲು, ವಿಮಾನವು ಬೆಳಿಗ್ಗೆ ಇಳಿಯುವ ನಿರೀಕ್ಷೆಯಿತ್ತು. ವಿಮಾನದಲ್ಲಿದ್ದವರ ವಿವರಗಳು ಇನ್ನೂ ಲಭ್ಯವಿಲ್ಲ. ವರದಿಗಳ ಪ್ರಕಾರ, ಯುಎಸ್ ಮಿಲಿಟರಿ ವಿಮಾನ ಸಿ -17 ಪಂಜಾಬ್ ಮತ್ತು ನೆರೆಯ ರಾಜ್ಯಗಳಿಂದ ಬಂದ 205 ಅಕ್ರಮ ವಲಸಿಗರನ್ನು ಹೊತ್ತೊಯ್ಯುತ್ತಿದೆ. ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಮಂಗಳವಾರ ರಾಜ್ಯ ಸರ್ಕಾರವು ವಲಸಿಗರನ್ನು ಸ್ವೀಕರಿಸುತ್ತದೆ ಮತ್ತು ವಿಮಾನ ನಿಲ್ದಾಣದಲ್ಲಿ ಕೌಂಟರ್ಗಳನ್ನು ಸ್ಥಾಪಿಸುತ್ತದೆ ಎಂದು ಹೇಳಿದರು.

Read More

ಬೆಂಗಳೂರು: ರಾಜ್ಯಾಧ್ಯಂತ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲಿಯ ನೀರು ಬಳಕೆ ಮಾಡದಂತೆ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಕೇವಲ ಗ್ಲಾಸ್ ನಲ್ಲಿ ನೀರು ಪೂರೈಕೆ ಮಾಡುವಂತೆ, ಪರಿಸರ ಮಾರಕವಾಗಿರುವಂತ ಪ್ಲಾಸ್ಟಿಕ್ ಬಾಟಲಿ ನೀರು ಪೂರೈಕೆ ಮಾಡದಂತೆ ಖಡಕ್ ಸೂಚನೆ ನೀಡಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದ್ದು, ಸರ್ಕಾರದ ಅಧಿಸೂಚನೆ ಸಂಖ್ಯೆ: ಅಪಜೀ 17 ಇಪಿಸಿ 2012, ದಿನಾಂಕ: 11.03.2016 ರಲ್ಲಿ ಪ್ಲಾಸ್ಟಿಕ್ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ ಸಚಿವಾಲಯ ಸೇರಿದಂತೆ ರಾಜ್ಯಾದ್ಯಾಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಸೌಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್ ನ (Single use packaged water bottles) ನೀರಿನ ಬಳಕೆ/ ಸರಬರಾಜು ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರನ್ನು…

Read More

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗಾಗಿ ಇಂದು ಮತದಾನ ನಡೆಯುತ್ತಿದೆ. ಇದೀಗ ತಿಳಿದು ಬಂದಿರುವ ಮಾಹಿತಿಯಂತೆ ಇಂದು ಬೆಳಿಗ್ಗೆ 11 ಗಂಟೆಯವರೆಗೆ ಶೇ.19.95ರಷ್ಟು ಮತದಾನ ಆಗಿರುವುದಾಗಿ ಹೇಳಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗದ ಮಾಹಿತಿಯಂತೆ ದೆಹಲಿ ವಿಧಾನಸಭಾ ಚುನಾವಣೆಗೆ ನಡೆಯುತ್ತಿರುವಂತ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಇಂದು ಬೆಳಗ್ಗೆ 11ರವರೆಗೆ ಶೇ.19.95ರಷ್ಟು ಆಗಿರುವುದಾಗಿ ಮಾಹಿತಿ ನೀಡಿದೆ. ಇಂದು ತಮ್ಮ ಮತ ಚಲಾಯಿಸಿ ಮಾತನಾಡಿದಂತ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್, ದೆಹಲಿಯ ಜನರು ತುಂಬಾ ಬುದ್ಧಿವಂತರಾಗಿದ್ದಾರೆ. ನಾವು ಅವರನ್ನು ನಂಬುತ್ತೇವೆ. ಗೂಂಡಾಗಿರಿಯನ್ನು ಅವರು ಸಹಿಸೋದಿಲ್. ದೆಹಲಿಯ ಜನರು ಸರಿಯಾದ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

Read More

ಬೆಂಗಳೂರು: ನಗರದಲ್ಲಿ ಹಾಡ ಹಗಲೇ ಪತ್ನಿಯ ಶೀಲ ಶಂಕಿಸಿದಂತ ಪತಿಯೊಬ್ಬ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿರುವಂತ ಘಟನೆ ಆನೇಕಲ್ ನಲ್ಲಿ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಮೋಹನ್ ರಾಜು ಎಂಬಾತ ತನ್ನ ಪತ್ನಿಯ ಶೀಲ ಶಂಕಿಸಿ, ಹಾಡ ಹಗಲೇ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಗೈದಿದ್ದಾನೆ. ಶ್ರೀಗಂಗಾ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾರೆ. ಶ್ರೀಗಂಗಾ ಅವರು ಪತಿ ಮೋಹನ್ ರಾಜು ಅವರ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದನ್ನು ಬಿಡುವಂತೆ ಪತ್ನಿಗೆ ತಿಳಿಸಿದ್ದರೂ ಚಾಳಿ ಮುಂದುವರೆಸಿದ್ದರಂತೆ. ಈ ಕಾರಣದಿಂದ ಚಾಕುವಿನಿಂದ ಇರಿದು ಹತ್ಯೆ ಗೈದಿದ್ದಾನೆ ಎನ್ನಲಾಗಿದೆ.

Read More

ಬೆಂಗಳೂರು:  ಪ್ರದೇಶದಲ್ಲಿನ ಜನರು ಕೃಷಿ ಬಿಡುವಿನ ಸಮಯದಲ್ಲಿ ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗದಂತೆ ತಡೆಯಲು ಕೇಂದ್ರ ಸರ್ಕಾರವು 02 ಫೆಬ್ರವರಿ 2006 ರಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಿದ ಅಂಗವಾಗಿ ಪ್ರತಿ ವರ್ಷ 02 ಫೆಬ್ರವರಿ ರಂದು ನರೇಗಾ ದಿವಸವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಜಿಲ್ಲೆಗಳಲ್ಲಿ ನರೇಗಾ ಯೋಜನೆಯಡಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ ಕೂಲಿಕಾರರನ್ನು ಹಾಗೂ ಕಾಯಕ ಬಂಧುಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ.  2023-24 ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 13.85  ಕೋಟಿ ಮಾನವ ದಿನಗಳ ಕೆಲಸವನ್ನು 30 ಲಕ್ಷ ಕುಟುಂಬಗಳ 54 ಲಕ್ಷಕ್ಕೂ ಹೆಚ್ಚು ಕೂಲಿಕಾರರಿಗೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 11  ಕೋಟಿ ಮಾನವ ದಿನಗಳ ಕೆಲಸವನ್ನು 26.78 ಲಕ್ಷ ಕುಟುಂಬಗಳ 47.27 ಲಕ್ಷಕ್ಕೂ ಹೆಚ್ಚು ಕೂಲಿಕಾರರಿಗೆ ನೀಡಲಾಗಿದೆ.  ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು, 2023-24 ನೇ ಸಾಲಿನಲ್ಲಿ 9.5 ಲಕ್ಷ ಕಾಮಗಾರಿಗಳನ್ನು ಸೃಜಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಇಲ್ಲಿಯವರೆಗೆ 8.30 ಲಕ್ಷ ಕಾಮಗಾರಿಗಳನ್ನು…

Read More

ಭಾರತೀಯ ಸಂಸ್ಕೃತಿಯ ಉಳಿವಿಗೆ ಗೃಹಸ್ಥಜೀವನ ಸುಭದ್ರವಾದ ಅಡಿಪಾಯ ಒದಗಿಸುವಂಥದ್ದು. ಆದರೆ ಈಗೀಗ ಆ ಗೃಹಸ್ಥ ಜೀವನದಲ್ಲಿ ದಾಂಪತ್ಯಜೀವನದಲ್ಲಿ ಹೆಚ್ಚಾಗಿ ಬಿರುಕು ಕಾಣಿಸಿ ಕೊಳ್ಳುತ್ತಿದೆ. ಗಂಡ ಹೆಂಡತಿ ಬೇರೆ ಬೇರೆಯಾಗುತ್ತಿದ್ದಾರೆ. ಡಿವೋರ್ಸ ತೆಗೆದುಕೊಳ್ಳುತ್ತಿದ್ದಾರೆ. ತಮಗಾದ ಮಕ್ಕಳ ಮೇಲೆ, ಕುಟುಂಬಗಳ ಮೇಲೆ, ಸಮಾಜದ ಮೇಲೆ ಯಾವ ಪ್ರಭಾವ ಬೀರುತ್ತದೆ ಎನ್ನುವ ವಿಚಾರ ಯಾರಿಗೂ ಇಲ್ಲ. ಕೇವಲ ಸ್ವಾರ್ಥಕ್ಕಾಗಿ, ಕೇವಲ ತನ್ನ ಸುಖದ ಹಪಾಹಪಿಗಾಗಿ ಶಾಸ್ತ್ರಕ್ಕೆ ವಿರುದ್ಧವಾಗಿ ಹೋಗುತ್ತಿದ್ದಾನೆ. ಡಿವೋರ್ಸ ತೆಗೆದುಕೊಳ್ಳುವ ವ್ಯಕ್ತಿ ಬೇರೆಯಾಗುವದಕ್ಕೆ ಕಾರಣಗಳನ್ನು ಕೊಟ್ಟು ಪ್ರಬಲವಾಗಿ ಪ್ರತಿಪಾದಿಸುತ್ತಾನೆ. ಅವನು(ಳು) ಹಾಗಿದ್ದಾನೆ(ಳೆ) ಹೀಗಿದ್ದಾನೆ(ಳೆ) ಇಂತಹ ದೋಷಗಳು ಇವೆ. ಹೊಂದಾಣಿಕೆಯ ಸ್ವಭಾವ ಅವನ(ಳ)ದು ಅಲ್ಲ. ಇತ್ಯಾದಿ. ನಮ್ಮ ಹಿಂದಿನ ತಲೆಮಾರಿನಲ್ಲಿ ಯಾರೂ ಪರಿಪೂರ್ಣರು ಆಗಿದ್ದಿಲ್ಲ. ಹಿಂದಕ್ಕೂ ಜಗಳವಾಗುತ್ತಿದ್ದವು. ಆದರೂ ಅನ್ಯೋನ್ಯವಾಗಿಯೇ ಇರುತ್ತಿದ್ದರು. ನಾವು ಎಷ್ಟೇ ಮದುವೆಗಳಾಗೋಣ. ಆದರೆ ಸ್ವಲ್ಪವಾದರೂ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಜೊತೆಯಾಗಿ ಇರಲು ಸಾಧ್ಯವೇ ಇಲ್ಲ. ಹೊಂದಿಕೊಳ್ಳುವ ಸ್ವಭಾವವಿಲ್ಲ ಎಂದು ಕಾರಣ ಕೊಟ್ಟು ಮೂರು ಜನರನ್ನು ಬಿಟ್ಟು, ನಾಲ್ಕನೇ ಮದುವೆಯಾಗಿ ಅವನ ಜೊತೆಗಾದರೂ ಹೊಂದಾಣಿಕೆ…

Read More

ಉತ್ತರ ಪ್ರದೇಶ: ಮಹಾ ಕುಂಭಮೇಳದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ಆಗಮಿಸಿದರು. ಅಲ್ಲಿಂದ ಅರೈಲ್ ಘಾಟ್ ಗೆ ತೆರಳಿದಂತ ಅವರು ಅಲ್ಲಿಂದ ದೋಣಿಯಲ್ಲಿ ಸಂಗಮ್ ಘಾಟ್ ಗೆ ತೆರಳಿ ಮಹಾ ಕುಂಭಮೇಳದ ಪ್ರಯುಕ್ತ ಪುಣ್ಯ ಸ್ನಾನ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಮಹಾ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ಇಂದು ದೆಹಲಿಯಿಂದ ಪ್ರಯಾಗ್ ರಾಜ್ ಗೆ ಆಗಮಿಸಿದಂತ ಅವರು, ಅಲ್ಲಿಂದ ಅರೈಲ್ ಘಾಟ್ ಗೆ ತೆರಳಿದರು. ಅವರಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು. ಅರೈಲ್ ಘಾಟ್ ನಿಂದ ಮಹಾ ಕುಂಭಮೇಳದ ಪ್ರಯುಕ್ತ ಪುಣ್ಯ ಸ್ನಾನ ಮಾಡಲು ಪ್ರಧಾನಿ ಮೋದಿ ಅವರು ದೋಣಿಯಲ್ಲಿ ಸಂಗಮ್ ಘಾಟ್ ಗೆ ತೆರಳಿದರು. ಸಂಗಮ್ ಘಾಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕುಂಭಮೇಳದ ಪ್ರಯುಕ್ತ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದರು.

Read More

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕುಂಭಮೇಳದಲ್ಲಿ ಪವಿತ್ರ ಸ್ನಾನಕ್ಕಾಗಿ ಪ್ರಯಾಗ್ ರಾಜ್ ಗೆ ಆಗಮಿಸಿದ್ದಾರೆ. ದೆಹಲಿಯಿಂದ ಪ್ರಯಾಗ್ ರಾಜ್ ಗೆ ಆಗಮಿಸಿರುವಂತ ಅವರು ಕೆಲವೇ ಕ್ಷಣಗಳಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ದೆಹಲಿಯಿಂದ ಪ್ರಯಾಗ್ ರಾಜ್ ಗೆ ವಿಶೇಷ ವಿಮಾನದಲ್ಲಿ ಆಗಮಿಸಿದಂತ ಪ್ರಧಾನಿ ನರೇಂದ್ರ ಮೋದಿಯವರು, ಪ್ರಯಾಗ್ ರಾಜ್ ಸಂಘಮ್ ಘಾಟ್ ಗೆ ತೆರಳುತ್ತಿದ್ದಾರೆ. ಪ್ರಧಾನಿ ಮೋದಿಗೆ ಯುವಿ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದಾರೆ. ಪ್ರಯಾಗ್ ರಾಜ್ ನಿಂದ ಸಂಗಮ್ ಘಾಟ್ ಗೆ ತೆರಳುತ್ತಿರುವಂತ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲಿ ಕುಂಭಮೇಳದ ಪ್ರಯುಕ್ತ ಪವಿತ್ರ ಸ್ನಾನವನ್ನು ಮಾಡಲಿದ್ದಾರೆ.

Read More

ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನೂತನ ಮುಖ್ಯ ಮಾರುಕಟ್ಟೆ ಅಧಿಕಾರಿ ಮತ್ತು ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಗಾಯತ್ರಿ ವಾಸುದೇವ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಯಾದವ್ ಅವರು ಪೀಕ್ ಎಕ್ಸ್ ವಿ ಪಾರ್ಟ್ನರ್ಸ್‌ನಿಂದ (ಹಿಂದೆ ಸಿಕ್ವೊಯಾ ಇಂಡಿಯಾ ಮತ್ತು ಎಸ್ಇಎ) ನಮ್ಮ ಕಂಪನಿಗೆ ಸೇರಿದ್ದಾರೆ ಎಂದು ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಪುತ್ರಿ ಮತ್ತು ಕಂಪನಿಯ ಮಂಡಳಿಯ ನಿರ್ದೇಶಕಿ ಇಶಾ ಅಂಬಾನಿ ಹೇಳಿದರು. ರಿಲಯನ್ಸ್‌ನ ಅಧ್ಯಕ್ಷರ ಕಚೇರಿಯ ಗ್ರೂಪ್ ಚೀಫ್ ಮಾರ್ಕೆಟಿಂಗ್ ಆಫೀಸರ್ ಮತ್ತು ಇವಿಪಿ ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್‌ನ ಹೊಸ ಪಾತ್ರದಲ್ಲಿ, ಗಾಯತ್ರಿ ನಮ್ಮ ಅಧ್ಯಕ್ಷರು, ರಿಲಯನ್ಸ್ ಫೌಂಡೇಶನ್ ಅಧ್ಯಕ್ಷರು, ಆಕಾಶ್, ಅನಂತ್, ಇ.ಸಿ. ಮತ್ತು ನನ್ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ ಎಂದು ಇಶಾ ತಿಳಿಸಿದರು. ‘ಗಾಯತ್ರಿ ನಮ್ಮ ತಂಡಗಳನ್ನು ಪ್ರೇರೇಪಿಸಲು ಹೊಸ ದೃಷ್ಟಿಕೋನಗಳು ಮತ್ತು ಕ್ರಿಯಾತ್ಮಕ ನಾಯಕತ್ವವನ್ನು ತರಲಿದ್ದಾರೆ. ಹೆಚ್ಚಿನ ಯಶಸ್ಸು ಮತ್ತು ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡುವ ವಿಶ್ವಾಸವಿದೆ’ ಎಂದು ಅವರು ಹೇಳಿದರು. https://kannadanewsnow.com/kannada/rahul-dravids-car-collides-with-goods-auto-in-bengaluru/…

Read More

ಬೆಂಗಳೂರು: ನಗರದಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಕಾರಿಗೆ ಹಿಂಬದಿಯಿಂದ ಗೂಡ್ಸ್ ಆಟೋವೊಂದು ಡಿಕ್ಕಿಯಾಗಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಕನ್ನಿಗ್ಯಾಂಮ್ ರಸ್ತೆಯಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಕಾರಿಗೆ ಹಿಂಬದಿಯಿಂದ ಗೂಡ್ಸ್ ಆಟೋವೊಂದು ಡಿಕ್ಕಿಯಾಗಿದೆ. ಈ ಘಟನೆಯಿಂದಾಗಿ ಕಾರಿನಿಂದ ಕೆಳಗಿಳಿದು ರಾಹುಲ್ ದ್ರಾವಿಡ್ ಪರಿಶೀಲಿಸಿದರು ಎನ್ನಲಾಗಿದೆ. ಇದಷ್ಟೇ ಅಲ್ಲದೇ ಗೂಡ್ಸ್ ಆಟೋ ಚಾಲಕ ಹಾಗೂ ರಾಹುಲ್ ದ್ರಾವಿಡ್ ನಡುವೆ ಕೆಲ ಕಾಲ ವಾಗ್ವಾದ ಕೂಡ ನಡೆದಿದೆ. ಆ ಬಳಿಕ ಹೈಗ್ರೌಂಡ್ ಠಾಣೆಗೆ ತೆರಳಿ ಗೂಡ್ಸ್ ಆಟೋ ಚಾಲಕನ ನಂಬರ್ ಪಡೆದು ಅಲ್ಲಿಂದ ತೆರಳಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. https://kannadanewsnow.com/kannada/home-minister-m-b-patil-invites-rajnath-singh-hdk-joshi-for-investors-meet/ https://kannadanewsnow.com/kannada/big-news-brother-has-no-right-over-married-sisters-property-supreme-court-landmark-verdict/

Read More