Author: kannadanewsnow09

ಬೆಂಗಳೂರು: ಜುಲೈ.6ರಂದು ನಿಗದಿತ ನಿರ್ವಹಣಾ ಕಾಮಗಾರಿಗಾಗಿ ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಆಗಲಿದೆ. ಈ ಬಗ್ಗೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜುಲೈ 06, 2025 ರಂದು ಭಾನುವಾರ ಬೆಳಿಗ್ಗೆ 7:00 ರಿಂದ 8:00ರ ಒಂದು ಗಂಟೆಯ ಅವಧಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ನಡುವಿನ ನೇರಳೆ ಮಾರ್ಗದಲ್ಲಿ ಅಗತ್ಯ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಿದೆ. ಈ ಕಾಮಗಾರಿಗಳನ್ನು ನಿರ್ವಹಿಸಲು, ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಈ ಮಾರ್ಗದಲ್ಲಿ ಬೆಳಿಗ್ಗೆ 08:00 ರಿಂದ ಸಾಮಾನ್ಯ ಸೇವೆಗಳನ್ನು ಪುನರಾರಂಭಿಸುತ್ತದೆ ಎಂದಿದೆ. ಇತರ ಎಲ್ಲಾ ಮಾರ್ಗಗಳಲ್ಲಿ ಮೆಟ್ರೋ ಸೇವೆಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲಿದ್ದು, ಚಲ್ಲಘಟ್ಟದಿಂದ ಇಂದಿರಾನಗರ, ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ (ಕಾಡುಗೋಡಿ), ಮತ್ತು ಮಾದಾವರದಿಂದ ರೇಷ್ಮೆ ಸಂಸ್ಥೆ ವರೆಗಿನ ಸೇವೆಗಳು ಬೆಳಿಗ್ಗೆ 07:00 ಗಂಟೆಯಿಂದ ನಿಗದಿತ ಸಮಯದಂತೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದೆ.…

Read More

ಬೆಂಗಳೂರು: ನೈಋತ್ಯ ರೈಲ್ವೆಯ ಮಹಾಪ್ರಬಂಧಕ ಮುಕುಲ್ ಸರಣ್ ಮಾಥುರ್ ಅವರು ಬೀರೂರು ಮತ್ತು ತಾಳಗುಪ್ಪ ನಡುವಿನ ಮಾರ್ಗದಲ್ಲಿ ವಿಂಡೋ ಟ್ರೇಲಿಂಗ್ ತಪಾಸಣೆ ನಡೆಸಿ ಮುಖ್ಯ ಸುರಕ್ಷತೆ ಹಾಗೂ ಕಾರ್ಯಚರಣೆ ಸಂಬಂಧಿತ ಅಂಶಗಳನ್ನು ಪರಿಶೀಲಿಸಿದರು. ಈ ತಪಾಸಣೆಯ ಉದ್ದೇಶ ನಿಲ್ದಾಣಗಳ ಪುನರಾಭಿವೃದ್ಧಿ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಪರಿಶೀಲಿಸುವುದಾಗಿದೆ. ತಪಾಸಣೆಯ ಸಮಯದಲ್ಲಿ, ಶಿವಮೊಗ್ಗ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆ (ABSS) ಅಡಿಯಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿಯನ್ನು ಪರಿಶೀಲಿಸಿದರು. ನಿಲ್ದಾಣದ ಸೌಂದರ್ಯ ಮತ್ತು ಪ್ರಯಾಣಿಕರ ಸೌಲಭ್ಯಗಳಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಪರಿಶೀಲಿಸಿದರು. ನಿಲ್ದಾಣದಲ್ಲಿ, ಮಾಥುರ್ ಅವರು ಹಳಿ ನಿರ್ವಹಣಾಕಾರರೊಂದಿಗೆ ಸಂವಹನ ನಡೆಸಿದರು, ದಿನನಿತ್ಯದ ಕೆಲಸಗಳಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ಪರಿಷೀಲನಾ ವೇಳೆ ಕೋಟೆಗಂಗೂರು ಕೋಚಿಂಗ್ ಡಿಪೋಗೆ ಭೇಟಿ ನೀಡಿ, ವಿಸ್ತರಿಸಲಾಗುತ್ತಿರುವ ಕೋಚಿಂಗ್ ಮೂಲಸೌಕರ್ಯದ ಪ್ರಗತಿಯನ್ನು ಪರಿಶೀಲಿಸಿದರು. ನಂತರ ಅವರು ಅರಸಾಳು ನಿಲ್ದಾಣವನ್ನು ಪರಿಶೀಲಿಸಿ, ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.…

Read More

ಬೆಂಗಳೂರು: ಬಿಡದಿ ಯಾರ್ಡ್’ನಲ್ಲಿ ಸುರಕ್ಷತೆ ಮತ್ತು ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳಲಿರುವುದರಿಂದ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ಭಾಗಶಃ ರದ್ದುಗೊಳಿಸಲಾಗಿದೆ. ರದ್ದು: ಜುಲೈ 10, 2025 ರಂದು ರೈಲು ಸಂಖ್ಯೆ 56265 ಅರಸೀಕೆರೆ-ಮೈಸೂರು ಪ್ಯಾಸೆಂಜರ್, ರೈಲು ಸಂಖ್ಯೆ 06269 ಮೈಸೂರು – ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್, ಮತ್ತು ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು – ಮೈಸೂರು ಪ್ಯಾಸೆಂಜರ್ ಸ್ಪೆಷಲ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಹಾಗೂ ರೈಲು ಸಂಖ್ಯೆ 56266 ಮೈಸೂರು – ಅರಸೀಕೆರೆ ಪ್ಯಾಸೆಂಜರ್ ರೈಲನ್ನು ಸಹ ಜುಲೈ 11ರಂದು ರದ್ದುಗೊಳಿಸಲಾಗಿದೆ. ಭಾಗಶಃ ರದ್ದು: ಜುಲೈ 10, 2025 ರಂದು ಪ್ರಯಾಣ ಆರಂಭಿಸಲಿರುವ ರೈಲು ಸಂಖ್ಯೆ 66580 ಅಶೋಕಪುರಂ-ಕೆಎಸ್ಆರ್ ಬೆಂಗಳೂರು ಮೆಮು ರೈಲು ರಾಮನಗರಂ-ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ರಾಮನಗರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಜುಲೈ 11ರಂದು ಪ್ರಯಾಣ ಆರಂಭಿಸಲಿರುವ ರೈಲು ಸಂಖ್ಯೆ 66579 ಕೆಎಸ್ಆರ್ ಬೆಂಗಳೂರು- ಅಶೋಕಪುರಂ ಮೆಮು ರೈಲು ಕೆಎಸ್ಆರ್ ಬೆಂಗಳೂರು-ರಾಮನಗರಂ ನಡುವೆ ಭಾಗಶಃ…

Read More

ಮೈಸೂರು: ನಗರದ ಜನರು ಬೆಚ್ಚಿ ಬೀಳುವಂತ ಘಟನೆ ನಡೆದಿದೆ. ಅದೇ ಹಾಡಹಗಲೇ ಮಹಿಳೆಗೆ ಯುವಕನೊಬ್ಬ ಚಾಕುವಿನಿಂದ ಮನಬಂದಂತೆ ಇರಿದಿರುವಂತ ಘಟನೆ ನಡೆದಿದೆ. ಮೈಸೂರಿನ ಕೃಷ್ಣಮೂರ್ತಿಪುರಂನ ಅಂಬೇಡ್ಕರ್ ಪಾರ್ಕ್ ಮುಂದೆ ಯುವಕನೊಬ್ಬ ಮಹಿಳೆಗೆ ಚಾಕುವಿನಿಂದ ಇರಿದಿರುವಂತ ಬೆಟ್ಟಿ ಬೀಳಿಸುವಂತ ಘಟನೆ ನಡೆದಿದೆ. ಪಾರ್ಕ್ ಮುಂಭಾಗ ಇಬ್ಬರೂ ಒಟ್ಟಿಗೆ ಕುಳಿತು ಮದ್ಯ ಸೇವನೆ ಮಾಡಿದ್ದಾರೆ. ಮದ್ಯ ಸೇವನೆ ಬಳಿಕ ಗಲಾಟೆ ಶುರುವಾಗಿದೆ. ಈ ಗಲಾಟೆ ತಾರಕಕ್ಕೇರಿದಂತ ಸಂದರ್ಭದಲ್ಲಿ ಚಾಕುವಿನಿಂದ ಮಹಿಳೆಗೆ ಹಲ್ಲೆ ಮಾಡಿದ್ದಾನೆ. ಯುವಕ ಏಕಾಏಕಿ ಮಹಿಳೆಯ ತಲೆ, ಕುತ್ತಿಗೆ, ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ ಇರಿದ ಯುವಕನೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ. ಇದೀಗ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/tired-of-asi-harassment-in-chikkamagaluru-man-attempts-suicide-by-consuming-poison-in-front-of-sp-office/ https://kannadanewsnow.com/kannada/applications-invited-for-free-coaching-for-upsc-prelims-mains-exams/

Read More

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎಎಸ್ಐ ಒಬ್ಬರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಎಸ್ ಪಿ ಕಚೇರಿ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ನಡೆದಿದೆ. ಚಿಕ್ಕಮಗಳೂರಿನ ಆಲ್ದೂರು ಪೊಲೀಸ್ ಠಾಣೆಯ ಎಎಸ್ಐ ಶಿವಕುಮಾರ್ ವಿರುದ್ಧ ಖಾಲಿದ್ ಹುಸೇನ್ ಎಂಬಾತ ಕಿರುಕುಳ ಆರೋಪ ಮಾಡಿದ್ದಾರೆ. ಎಸ್ಎಐ ಶಿವಕುಮಾರ್ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಎಸ್ ಪಿ ಕಚೇರಿ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಲ್ದೂರು ಪಟ್ಟಣದ ಖಾಲಿದ್ ಹುಸೇನ್ ಎಂಬಾತ ಚಿಕ್ಕಮಗಳೂರಿನ ಎಸ್ ಪಿ ಕಚೇರಿ ಎದುರೇ ಡೆತ್ ನೋಟ್ ಹಿಡಿದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಸ್ಥಳದಲ್ಲಿದ್ದಂತ ಪೊಲೀಸರು ಆತನನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. https://kannadanewsnow.com/kannada/mlc-n-ravikumar-granted-bail-for-derogatory-remarks-against-cs-shalini-rajneesh/ https://kannadanewsnow.com/kannada/applications-invited-for-free-coaching-for-upsc-prelims-mains-exams/

Read More

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದಂತ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ತಮ್ಮ ವಿರುದ್ಧ ದಾಖಲಾಗಿದ್ದಂತ ಎಫ್ಐಆರ್ ಪ್ರಶ್ನಿಸಿ ಎಂ ಎಲ್ ಸಿ ಎನ್ ರವಿಕುಮಾರ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಪೀಠವು ಎನ್.ರವಿಕುಮಾರ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಆದೇಶಿಸಿತ್ತು. ಇನ್ನೂ ಈ ಪ್ರಕರಣದಲ್ಲಿ ಎಂಎಲ್ ಸಿ ಎನ್.ರವಿಕುಮಾರ್ ಅವರಿಗೆ ಹೈಕೋರ್ಟ್ ನ್ಯಾಯಪೀಠವು ಜಾಮೀನು ಮಂಜೂರು ಮಾಡಿದೆ. ಈ ಮೂಲದ ಎನ್.ರವಿಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. https://kannadanewsnow.com/kannada/state-government-extends-lokayukta-sit-appointed-to-probe-illegal-mining-by-one-year/ https://kannadanewsnow.com/kannada/applications-invited-for-free-coaching-for-upsc-prelims-mains-exams/

Read More

ಬೆಂಗಳೂರು: ನಾಗರಿಕ ಸೇವಾ ಪರೀಕ್ಷೆ ಬರೆದು ಉನ್ನತ ಹುದ್ದೆಗೇರಲು ಬಯಸುವ ಪ್ರತಿಭಾನ್ವಿತ ಯುವತಿಯರಿಗಾಗಿ ಉಚಿತ ವಸತಿ ಸಹಿತ ಅಧ್ಯಯನ ಕೇಂದ್ರ ನಡೆಸುತ್ತಿರುವ ರಾಹ್ ಅಕಾಡೆಮಿ ‘ರಾಹ್ ಸೂಪರ್‌ 30’, 2025-26ನೇ ಶೈಕ್ಷಣಿಕ ಸಾಲಿಗೆ ಅರ್ಹ ಮಹಿಳಾ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಕಳೆದ ವರ್ಷ ಕನಕಪುರ ರಸ್ತೆಯ ಮ್ಯಾಂಗೋ ಗಾರ್ಡನ್ ಲೇಔಟ್‌ನಲ್ಲಿ ಪ್ರಾರಂಭವಾದ ‘ರಾಹ್ ಸೂಪರ್‌ 30’ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ, ಅರ್ಹ ಮಹಿಳಾ ಪದವೀಧರರಿಗೆ ಯುಪಿಎಸ್‌ಸಿ (ಪೂರ್ವಭಾವಿ ಮತ್ತು ಮುಖ್ಯ) ಪರೀಕ್ಷೆಗೆ ತರಬೇತಿ, ಪರಿಣಿತರ ಮಾರ್ಗದರ್ಶನ, ಗ್ರಂಥಾಲಯ ಸೇರಿದಂತೆ ವಸತಿ ಸಹಿತ ಅಧ್ಯಯನಕ್ಕೆ ಅಗತ್ಯ ಸೌಕರ್ಯಗಳನ್ನು ಉಚಿತವಾಗಿ ಒದಗಿಸುತ್ತಿದೆ. ಮೊದಲ ಬ್ಯಾಚ್‌ನ ವಿದ್ಯಾರ್ಥಿನಿ ಡಾ. ಅಲ್ಮಾಸ್ ಫಾತಿಮಾ ಅವರು ನಾಗರಿಕ ಸೇವೆಗಳ ಇತ್ತೀಚಿನ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸದ್ಯ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಅಲ್ಲದೆ, ತೆಲಂಗಾಣ ರಾಜ್ಯ ಸೇವೆಗಳ ಪರೀಕ್ಷೆಯಲ್ಲಿ 99ನೇ ರ‍್ಯಾಂಕ್ ಗಳಿಸಿದ್ದಾರೆ ಮತ್ತು ತೆಲಂಗಾಣ ಪೊಲೀಸ್ ಸೇವೆಗಳಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಹುದ್ದೆಯನ್ನು ಪಡೆದಿದ್ದಾರೆ. ಇದು…

Read More

ಬೆಂಗಳೂರು: ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆ ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಲೋಕಾಯುಕ್ತ ಎಸ್ಐಟಿ ನೇಮಿಸಿತ್ತು. ಈ ಎಸ್ಐಟಿ ಅವಧಿಯನ್ನು ರಾಜ್ಯ ಸರ್ಕಾರವು ಒಂದು ವರ್ಷ ವಿಸ್ತರಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ಲೋಕಾಯುಕ್ತ ಎಸ್ ಐ ಟಿ ಅವಧಿ ಒಂದು ವರ್ಷ ವಿಸ್ತರಣೆ ಮಾಡಲಾಗಿದೆ. ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಿದ ರಾಜ್ಯ ಸರ್ಕಾರ ಆದೇಶಿಸಿದೆ. ಅಂದಹಾಗೇ ಅಕ್ರಮ ಗಣಿಗಾರಿಕೆ ತನಿಖೆಗಾಗಿ ನೇಮಿಸಿರುವ ಎಸ್ಐಟಿ ಇದಾಗಿದೆ. ಇನ್ನೂ ತನಿಖೆ ನಡೆಸುವುದು ಬಾಕಿ ಇರುವ ಕಾರಣ ರಾಜ್ಯ ಸರ್ಕಾರವು ಒಂದು ವರ್ಷ ಮತ್ತೆ ವಿಸ್ತರಣೆ ಮಾಡಿ ಆದೇಶಿಸಿದೆ. https://kannadanewsnow.com/kannada/bbmp-suspends-revenue-inspector-for-pasting-stickers-without-conducting-scheduled-caste-survey/ https://kannadanewsnow.com/kannada/good-news-for-state-transport-bus-passengers-the-ticket-price-roundup-system-will-soon-be-abolished/

Read More

ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಸಂಬಂಧ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಕಂದಾಯ ಪರಿವೀಕ್ಷಕರಾದ ಕವಿತ ರವರುನ್ನು ಅಮಾನತ್ತುಗೊಳಿಸಲಾಗಿದೆ. ಪೂರ್ವ ವಲಯದ ವಸಂತನಗರ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕರಾದ ಕವಿತ ಅವರನ್ನು ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದ ಭಾಗವಾದ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಈ ಹಿಂದೆ ಕರ್ತವ್ಯ ಲೋಪವೆಸಗಿದ ಮೂವರ ಅಮಾನತ್ತು ಈ ಹಿಂದೆ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಸಂಬಂಧ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಮೂರು ಜನ ಬಿಬಿಎಂಪಿ ನೌಕರರನ್ನು ಅಮಾನತುಗೊಳಿಸಲಾಗಿತ್ತು. ಹೆಚ್.ಬಿ.ಆರ್ ಲೇಔಟ್ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕರಾದ ರಮೇಶ್, ಕಂದಾಯ ವಸೂಲಿಗಾರರಾದ ಪೆದ್ದುರಾಜು ಹಾಗೂ ಕೆಂಗೇರಿ ಉಪ ವಿಭಾಗ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ವಸೂಲಿಗಾರರಾದ ಸಿ. ಸಂದಿಲ್ ಕುಮಾರ್ ಅವರನ್ನು ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತ್ತುಗೊಳಿಸಲಾಗಿತ್ತು https://kannadanewsnow.com/kannada/high-court-gives-big-relief-to-mlc-n-ravikumar-orders-to-refrain-from-taking-coercive-action-until-july-8/ https://kannadanewsnow.com/kannada/good-news-for-state-transport-bus-passengers-the-ticket-price-roundup-system-will-soon-be-abolished/

Read More

ಹಿಮಾಚಲ ಪ್ರದೇಶ: ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದ ಹಲವಾರು ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯು ಭಾರತದ ಬೆಟ್ಟ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಹಾನಿಯನ್ನುಂಟುಮಾಡಿದೆ. ಜೂನ್ 20 ರಿಂದ ಜುಲೈ 3 ರವರೆಗೆ ಕನಿಷ್ಠ 69 ಜನರು ಪ್ರಾಣ ಕಳೆದುಕೊಂಡಿದ್ದಾರೆ. 400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿ ಹಾನಿಯಾಗಿದೆ. ಬಲವಾದ ಪ್ರವಾಹದಲ್ಲಿ ಹಲವಾರು ಕಟ್ಟಡಗಳು ಕುಸಿದು ವಾಹನಗಳು ಕೊಚ್ಚಿ ಹೋಗಿರುವುದರಿಂದ ಮಂಡಿ ಜಿಲ್ಲೆ ಅತ್ಯಂತ ಹಾನಿಗೊಳಗಾಗಿದೆ. ನಮ್ಮ ವ್ಯವಸ್ಥೆಯಲ್ಲಿ ಪ್ರವೇಶಿಸಿದಂತೆ ಇಲ್ಲಿಯವರೆಗೆ 400 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವನ್ನು ನಾವು ದಾಖಲಿಸಿದ್ದೇವೆ. ಆದರೆ ನಿಜವಾದ ಹಾನಿ ಇನ್ನೂ ಹೆಚ್ಚಾಗಿರಬಹುದು” ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕಂದಾಯ ಇಲಾಖೆಯ ವಿಶೇಷ ಕಾರ್ಯದರ್ಶಿ ಡಿ.ಸಿ. ರಾಣಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿವರವಾದ ಹಾನಿಯ ಮೌಲ್ಯಮಾಪನಕ್ಕೆ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಮತ್ತಷ್ಟು ಹೇಳಿದರು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಮೂರು ದಿನಗಳವರೆಗೆ (ಜುಲೈ 7 ರವರೆಗೆ) ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುವ…

Read More