Author: kannadanewsnow09

ಬೆಂಗಳೂರು; ನೀವು ಉಪ ಮುಖ್ಯಮಂತ್ರಿಯೋ ಅಥವಾ ಬೀದಿ ರೌಡಿಯೋ? ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲಾ ಜನಸಾಮಾನ್ಯರಿಗೆ ಇದೆ ಎಂಬುದಾಗಿ ಜೆಡಿಎಸ್ ಹೇಳಿದೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜೆಡಿಎಸ್ ಪಕ್ಷವು, “ಕೆಲವರಿಗೆ ನಾನು ಯಾರು ಅನ್ನೋದೇ ಗೊತ್ತಿಲ್ಲ, ನನ್ನತ್ರ ಇದೆಲ್ಲಾ ಬೇಡ” ! ಡಿಕೆ ಶಿವಕುಮಾರ್ ಹೌದು.. ಮಿಸ್ಟರ್‌ ಧಮ್ಕಿ ಡಿಕೆಶಿ ಅವರೇ, ಆ ದಿನಗಳಲ್ಲಿ ನೀವು ಯಾರ ಜೊತೆ ಇದ್ದೀರಿ ? ನಿಮ್ಮ ಹಿನ್ನೆಲೆ ಏನು ? ಎಂಬುದು ಸಾಮಾನ್ಯ ಜನರಿಗೆ ಗೊತ್ತಿಲ್ಲ ಎಂದಿದೆ. ಉಪಮುಖ್ಯಮಂತ್ರಿಯಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಬೀದಿರೌಡಿಯಂತೆ ವೇದಿಕೆಯಲ್ಲೇ ನಾಗರಿಕರಿಗೆ ಹೆದರಿಸುವುದು, ಬೆದರಿಸುವುದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ ಎಂದಿದೆ. ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ. ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಜನಸಾಮಾನ್ಯರಿಗೂ ಇದೆ. “ಸಂವಿಧಾನ ರಕ್ಷಿಸುತ್ತೇವೆ” ಎಂದು ಸಂವಿಧಾನ ಪುಸ್ತಕ ಹಿಡಿದರೇ ಸಾಲದು. ಈ ನಿಮ್ಮ ದರ್ಪ, ದುರಂಹಕಾರಕ್ಕೆ ಮತಹಾಕುವ ಜನರೇ ಬುದ್ಧಿ ಕಲಿಸುತ್ತಾರೆ ಎಂದು ತಿಳಿಸಿದೆ. https://twitter.com/JanataDal_S/status/1999789362062795102 https://kannadanewsnow.com/kannada/mp-pankaj-chaudhary-elected-as-bjp-state-president-of-uttar-pradesh/ https://kannadanewsnow.com/kannada/dogital-arrest-man-1-crore/

Read More

ಉತ್ತರ ಪ್ರದೇಶ: ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಂಕಜ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತಂತೆ ಪಿಯೂಷ್ ಗೋಯಲ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮ್ಮುಖದಲ್ಲಿ ಯುಪಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಸಭೆ ನಡೆಯಿತು. ಈ ಸಭೆಯಲ್ಲಿ ಮಹಾರಾಜ್ ಗಂಜ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವಂತ ಪಂಕಜ್ ಚೌಧರಿ ಅವರನ್ನು ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಯುಪಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವಂತ ಪಂಕಜ್ ಚೌಧರಿ ಅವರು, 7 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. https://kannadanewsnow.com/kannada/it-is-ridiculous-that-bjp-members-are-bothering-about-the-congress-partys-chief-minister-minister-h-c-mahadevappa/ https://kannadanewsnow.com/kannada/dogital-arrest-man-1-crore/

Read More

ಬೆಂಗಳೂರು: ಅಸ್ಥಿರ ಸರ್ಕಾರದ ಜೊತೆಗೆ ಕೆಟ್ಟ ಆಡಳಿತವನ್ಬು ನೀಡಿ, ಜನರಿಂದ ಛೀಮಾರಿ ಹಾರಿಸಿಕೊಂಡ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ವಿಷಯಕ್ಕೆ ತಲೆ ಕೆಡಿಸಿಕೊಂಡಿರುವುದು ಹಾಸ್ಯಾಸ್ಪದ ಬೆಳವಣಿಗೆಯಾಗಿದೆ ಎಂಬುದಾಗಿ ಸಚಿವ ಹೆಚ್.ಸಿ ಮಹದೇವಪ್ಪ ಕಿಡಿಕಾರಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಜನಾದೇಶ ಪಡೆಯದೇ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿ, ಕೊನೆಗೆ ರಚಿಸಿದ ಸರ್ಕಾರದಲ್ಲಿ ನಾಲ್ಕೈದು ಮಂದಿ ಮುಖ್ಯಮಂತ್ರಿಗಳನ್ನು ಬದಲಿಸಿ, ಅಸ್ಥಿರ ಸರ್ಕಾರದ ಜೊತೆಗೆ ಕೆಟ್ಟ ಆಡಳಿತವನ್ಬು ನೀಡಿ, ಜನರಿಂದ ಛೀಮಾರಿ ಹಾರಿಸಿಕೊಂಡ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ವಿಷಯಕ್ಕೆ ತಲೆ ಕೆಡಿಸಿಕೊಂಡಿರುವುದು ಹಾಸ್ಯಾಸ್ಪದ ಬೆಳವಣಿಗೆ ಎಂದಿದ್ದಾರೆ. ಪಕ್ಷ ಏರ್ಪಡಿಸುವ ಸಭೆ, ಸಮಾರಂಭ ಮತ್ತು ಹೋರಾಟಗಳಿಗೆ ಸ್ವಪಕ್ಷೀಯರನ್ನೇ ಕರೆಸಲು ಸಾಧ್ಯವಾಗದ ವಿಜಯೇಂದ್ರ ಹಾಗೂ ಯತ್ನಾಳ್ ಅವರು ನಿಜವಾದ ವಿಪಕ್ಷ ನಾಯಕ ನಾನು ರೀ.. ಎಂದು ಸದನದಲ್ಲೇ ಹೇಳುತ್ತಿದ್ದರೂ, ವಿಪಕ್ಷ ನಾಯಕ ನಾನು ಎಂದು ಗಟ್ಟಿಯಾಗಿ ಹೇಳಲು ದನಿಯಿಲ್ಲದ ಆರ್.ಅಶೋಕ್ ಅಂತವರು ಕಾಂಗ್ರೆಸ್ ಪಕ್ಷದ ವಿಷಯಗಳ ಬಗ್ಗೆ ಮಾತನಾಡುವುದನ್ನು ಕೇಳುತ್ತಿದ್ದರೆ…

Read More

ಬೆಂಗಳೂರು; ನಗರದ ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ KSIIDC ಮತ್ತೊಂದು ಭರವಸೆಯ ಹೆಜ್ಜೆ ಯನ್ನು ಇರಿಸಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ಬೆಂಗಳೂರು ಹೊರವಲಯದಲ್ಲಿ ಆಯ್ಕೆ ಮಾಡಲಾದ 3 ಸ್ಥಳಗಳ ವಿವರವಾದ ಕಾರ್ಯತಂತ್ರ ಮತ್ತು ಕಾರ್ಯಸಾಧ್ಯತಾ ವರದಿ ಸಿದ್ದಪಡಿಸಲು ಟೆಂಡರ್ ಕರೆಯುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದಿದ್ದಾರೆ. ಈ ಕ್ರಮವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ನಡೆಸಿದ ಪ್ರಾಥಮಿಕ ಪರಿಶೀಲನೆಯ ನಂತರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತಾವಿತ ಗ್ರೀನ್‌ಫೀಲ್ಡ್ (ಹೊಸ) ವಿಮಾನ ನಿಲ್ದಾಣವು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ವಾಯು ಸಂಚಾರ ಬೇಡಿಕೆಯನ್ನು ಪೂರೈಸಲು ಮತ್ತು ಕರ್ನಾಟಕದ ದೀರ್ಘಕಾಲೀನ ವಾಯುಯಾನ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/coffee-thief-gang-active-in-chikkamagaluru-khadims-arrested-for-attacking-farmer/ https://kannadanewsnow.com/kannada/dogital-arrest-man-1-crore/

Read More

ಚಿಕ್ಕಮಗಳೂರು; ಜಿಲ್ಲೆಯಲ್ಲಿ ಕಾಫಿ ಕಳ್ಳರ ಗ್ಯಾಂಗ್ ಆಕ್ಟೀವ್ ಆಗಿದೆ. ಕಾಫಿ ಕದಿಯುತ್ತಿದ್ದ ವೇಳೆಯಲ್ಲಿ ಬೆದರಿಸೋದಕ್ಕೆ ತೆರಳಿದಂತ ಬೆಳೆಗಾರನ ಮೇಲೆಯೇ ಅಟ್ಯಾಕ್ ಮಾಡಿ ಕಾಫಿ ಕಳ್ಳತನ ಮಾಡಿರುವಂತ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರೇಹಳ್ಳಿ ಗ್ರಾಮದಲ್ಲಿ ಕಾಫಿ ಕಳ್ಳರ ಹಾವಳಿ ಹೆಚ್ಚಾಗಿದೆ. ಕಾಫಿ ಬೆಳೆಗಾರ ಜಗನ್ನಾಥ ಶೆಟ್ಟಿ ಮೇಲೆ ದಾಳಿಯನ್ನು ಖದೀಮರು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅರೇಹಳ್ಳಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಆಧರಿಸಿ ಅರೇಹಳ್ಳಿ ಠಾಣೆಯ ಪೊಲೀಸರು ಶಾಹಿದ್ ಮುಬಾರಕ್, ಜಹೀರ್, ಸಾಗರ್, ಪ್ರಜ್ವಲ್ ಹಾಗೂ ಹಜೀಜ್ ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. https://kannadanewsnow.com/kannada/a-man-who-was-harassing-a-woman-in-hubballi-was-tied-to-a-tree-and-beaten-up/ https://kannadanewsnow.com/kannada/dogital-arrest-man-1-crore/

Read More

ಹುಬ್ಬಳ್ಳಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಂತ ಕಾಮುಕನೊಬ್ಬನನ್ನು ಸ್ಥಳೀಯರು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿದಂತ ಘಟನೆ ನಡೆದಿದೆ. ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳವನ್ನು ಕಾಮುಕ ನೀಡುತ್ತಿದ್ದನು ಎನ್ನಲಾಗಿದೆ. ಕಾಮುಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಲೈಂಗಿಕ ಕಿರುಕುಳವನ್ನು ನೀಡುತ್ತಿದ್ದನಂತೆ. ಇಂದು ಕೂಡ ಅದೇ ಕೆಲಸ ಮಾಡಿದ ವೇಳೆಯಲ್ಲಿ ಮಹಿಳೆಯೊಂದಿಗೆ ಸ್ಥಳೀಯರು ಸೇರಿ ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. https://kannadanewsnow.com/kannada/dk-shivakumar-why-did-you-become-an-mla-minister-dcm-you-are-just-a-human-being-jds-sarcasm/ https://kannadanewsnow.com/kannada/dogital-arrest-man-1-crore/

Read More

ಬೆಂಗಳೂರು: ಡಿಕೆ ಶಿವಕುಮಾರ್ ಅವರೇ, ನೀವು ಶಾಸಕರಾದರೇನು ? ‌ಮಂತ್ರಿಯಾದರೇನು ? ಡಿಸಿಎಂ ಆದರೇನು ? ನೀನೊಬ್ಬ ಮನುಷ್ಯ ಅಷ್ಟೇ ಎಂಬುದಾಗಿ ಜೆಡಿಎಸ್ ಕುಟುಕಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜೆಡಿಎಸ್, ಜನರಿಂದ ಆಯ್ಕೆಯಾದ ನೀವು, ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನಿಮ್ಮ ಆದ್ಯ ಕರ್ತವ್ಯ. ಅದನ್ನು ಬಿಟ್ಟು ಪ್ರಶ್ನೆ ಮಾಡಿದವರಿಗೆ ಧಮ್ಕಿ, ಬೆದರಿಕೆ ಹಾಕುವುದು ಸಂವಿಧಾನದ ಪ್ರಕಾರ ಅಪರಾಧ ಎಂದಿದೆ. ನಾವು 80ರ ದಶಕದಲ್ಲಿ ಜೀವಿಸುತ್ತಿಲ್ಲ ಡಿಕೆಶಿ ಅವರೇ, ನಿಮ್ಮ ಬಳಿ ದುಡ್ಡಿದ್ದರೆ, ಅದು ” ನಾಯಿ ಮೊಲೆ ಹಾಲಿದ್ದಂಗೆ ”. ಯಾರಿಗೂ ಪ್ರಯೋಜನವಿಲ್ಲ. ಅಧಿಕಾರದ ಮದ, ದಬ್ಬಾಳಿಕೆ ನೆತ್ತಿಗೇರಿದೆ ಕೊತ್ವಾಲ್ ಶಿಷ್ಯನ ರೌಡಿಸಂ, ಗೂಂಡಾ ಪ್ರವೃತ್ತಿಗೆ ಕಡಿವಾಣ ಹಾಕದಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಇಂತಹವರು ಜನಪ್ರತಿನಿಧಿಯಾಗಿ ಮುಂದುವರಿಯಲು ನಾಲಾಯಕ್ಕು ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದೆ. ಸಂವಿಧಾನದ ರಕ್ಷಣೆ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್ ಗಾಂಧಿ, ಮೊದಲು ಡಿಕೆಶಿಯಂತಹ ರೌಡಿ…

Read More

ಆಸ್ಟ್ರೇಲಿಯಾ: ಭಾನುವಾರ ಬೆಳಿಗ್ಗೆ ನಡೆದ ಸಾಮೂಹಿಕ ಗುಂಡಿನ ದಾಳಿಯ ವರದಿಗಳ ನಂತರ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಪ್ರಮುಖ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಗಮಿಸಿರುವಂತ NSW ಪೊಲೀಸರು, ಪರಿಸ್ಥಿತಿ ನಿಯಂತ್ರಿಸುತ್ತಿರುವುದಾಗಿ ದೃಢಪಡಿಸಿದ್ದಾರೆ ಮತ್ತು ಅಧಿಕಾರಿಗಳು ಘಟನಾ ಸ್ಥಳಕ್ಕೆ ಭದ್ರತೆ ಒದಗಿಸುವಾಗ ಆ ಪ್ರದೇಶವನ್ನು ತಪ್ಪಿಸಲು ಮತ್ತು ಮನೆಯೊಳಗೆ ಇರಲು ನಿವಾಸಿಗಳನ್ನು ಒತ್ತಾಯಿಸಿದ್ದಾರೆ. X ನಲ್ಲಿ ಪೋಸ್ಟ್ ಮಾಡಲಾದ ಎಚ್ಚರಿಕೆಯಲ್ಲಿ, NSW ಪೊಲೀಸರು ಹೀಗೆ ಹೇಳಿದರು: ಬೋಂಡಿ ಬೀಚ್ ನಲ್ಲಿ ನಡೆದ ಗಂಭೀರ ಘಟನೆಗೆ ಪೊಲೀಸರು ಪ್ರಸ್ತುತ ಪ್ರತಿಕ್ರಿಯಿಸುತ್ತಿದ್ದಾರೆ. ದಯವಿಟ್ಟು ಪ್ರದೇಶವನ್ನು ತಪ್ಪಿಸಿ ಮತ್ತು ತುರ್ತು ಸೇವೆಗಳ ನಿರ್ದೇಶನಗಳನ್ನು ಅನುಸರಿಸಿ. ಅದು ಲಭ್ಯವಾದಂತೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುವುದು ಎಂದಿದೆ. ಘಟನೆಯ ಸಮಯದಲ್ಲಿ ಸುಮಾರು 50 ಗುಂಡು ಹಾರಿಸುವ ಶಬ್ದಗಳು ಕೇಳಿಬಂದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದು ಪ್ರದೇಶದಲ್ಲಿ ವ್ಯಾಪಕ ಭೀತಿಯನ್ನುಂಟುಮಾಡಿತು. ದಿ ಜೆರುಸಲೆಮ್ ಪೋಸ್ಟ್ ಪ್ರಕಾರ, ಬೀಚ್ ಬಳಿ ನಡೆಯುತ್ತಿದ್ದ ಹನುಕ್ಕಾ ಪಾರ್ಟಿಯಲ್ಲಿ…

Read More

ಬೆಂಗಳೂರು: ವಿಮಾನದ ಪ್ರಯಾಣದ ವೇಳೆಯಲ್ಲಿ ಮಹಿಳೆಯೊಬ್ಬರಿಗೆ ಹೃದಯಾಘಾತ ಉಂಟಾಗಿತ್ತು. ಅವರನ್ನು ಅದೇ ವಿಮಾನದಲ್ಲಿದ್ದಂತ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಸಿಪಿಆರ್ ನೀಡಿ, ಬದುಕಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಸೇವಾ ಮನೋಭಾವವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಶ್ಲಾಘಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿಯಾದ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮೇರಿಕಾದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯತೆಯನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಸೇವಾ ಮನೋಭಾವ ಮತ್ತು ಸಮಯಪ್ರಜ್ಞೆ ಅತ್ಯಂತ ಶ್ಲಾಘನೀಯ ಎಂದಿದ್ದಾರೆ. ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕೈಲಾದ ಸಹಾಯಕ್ಕೆ ನಿಲ್ಲುವ ಅಂಜಲಿಯಂತವರು ಸಮಾಜಕ್ಕೆ ಮಾದರಿ. ನೂರುಕಾಲ ಅಂಜಲಿಯವರಿಗೆ ಆಯಸ್ಸು ಆರೋಗ್ಯ ನೀಡಿ, ಕಷ್ಟದಲ್ಲಿರುವ ಜೀವಗಳಿಗೆ ಅವರಿಂದ ಇನ್ನಷ್ಟು ನೆರವು ಸಿಗುವಂತಾಗಲಿ ಎಂದು…

Read More

ಶಿವಮೊಗ್ಗ: ಸಾಗರ ಉಪ ವಿಭಾಗದ ಅರಣ್ಯ ಸಂಚಾರಿದಳದ ಪಿಎಸ್ಐ ವಿನಾಯಕ್ ಅಂಡ್ ಟೀಂ ಮಿಂಚಿನ ಕಾರ್ಯಾಚರಣೆ ನಡೆಸಿ ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದಂತ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದದಿಂದ ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿನ ಯಡೆಹಳ್ಳಿ ವೃತ್ತಕ್ಕೆ ವ್ಯಕ್ತಿಯೊಬ್ಬ ಜಿಂಕೆ ಚರ್ಮವನ್ನು ಮಾರಾಟ ಮಾಡೋದಕ್ಕೆ ಆಗಮಿಸುತ್ತಿದ್ದನು. ಈ ಮಾಹಿತಿಯು ಸಾಗರ ಉಪ ವಿಭಾಗದ ಅರಣ್ಯ ಸಂಚಾರಿದಳದ ಪಿಎಸ್ಐ ವಿನಾಯಕ್ ಗೆ ಸಿಕ್ಕಿತ್ತು. ಕೂಡಲೇ ಅಲರ್ಟ್ ಆದಂತ ಅವರು, ತಮ್ಮ ಸಿಬ್ಬಂದಿಗಳೊಂದಿಗೆ ಮಫ್ತಿಯಲ್ಲಿ ಆನಂದಪುರದ ಯಡೆಹಳ್ಳಿ ವೃತ್ತಕ್ಕೆ ಹೋಗಿ ಕಾರ್ಯಾಚರಣೆಗೆ ಇಳಿದಿದ್ದರು. ನವಲಗುಂದದಿಂದ ಆನಂದಪುರದ ಯಡೆಹಳ್ಳಿ ಸರ್ಕಲ್ ಗೆ ಬಸ್ಸಿನಲ್ಲಿ ಬಂದು ಇಳಿದು ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸಿದ್ದಾನೆ. ಆ ವೇಳೆ ಕೂಡಲೇ ವಶಕ್ಕೆ ಪಡೆದು, ಆತ ತಂದಿದ್ದಂತ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಚಿಂಕೆ ಚರ್ಮ ಪರ್ತೆಯಾಗಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಧಾರವಾಡದ ನವಲಗುಂದದ ಅರ್ಜುನ್ ಬಿನ್ ರಾಮಪ್ಪ ಎಂಬುದಾಗಿ ಗುರುತಿಸಲಾಗಿದೆ. ಜಿಂಕೆ ಚರ್ಮದ…

Read More