Author: kannadanewsnow09

ಉಜಿರೆ: ಇಲ್ಲಿನ ರುಡ್ ಸೆಟ್ ಸಂಸ್ಥೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಸ್ವ ಉದ್ಯೋಗ ತರಬೇತಿಗಳಾದ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ, ದ್ವಿಚಕ್ರ ವಾಹನ ರಿಪೇರಿ ಹಾಗೂ ಮಹಿಳಾ ಬ್ಯೂಟಿ ಪಾರ್ಲರ್ ನಿರ್ವಹಣೆ ತರಬೇತಿಗಳ ಶಿಬಿರಾರ್ಥಿಗಳು, ರುಡ್ ಸೆಟ್ ಸಂಸ್ಥೆಗಳ ಅಧ್ಯಕ್ಷರೂ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆಗಿರುವ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅವರನ್ನು ಸೌಜನ್ಯ ಭೇಟಿ ಮಾಡಿ, ತಮ್ಮ ತರಬೇತಿ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇಂದಿನ ಜೀವನದಲ್ಲಿ ಈ ಮೂರು ತರಬೇತಿ ವಿಷಯಗಳು ಅತ್ಯಂತ ಅವಶ್ಯಕವಾಗಿವೆ. ಕಲಿತ ವೃತ್ತಿಯನ್ನು ಆತ್ಮವಿಶ್ವಾಸದಿಂದ ಸ್ವ ಉದ್ಯೋಗವಾಗಿ ಕೈಗೊಂಡು, ಸ್ವಾವಲಂಬಿ ಜೀವನ ನಡೆಸಬೇಕು. ಶ್ರಮ ಮತ್ತು ಶಿಸ್ತಿನಿಂದ ತೊಡಗಿಸಿಕೊಂಡರೆ ಯಶಸ್ಸು ಖಂಡಿತ ಎಂದು ಶಿಬಿರಾರ್ಥಿಗಳಿಗೆ ಪ್ರೇರಣಾದಾಯಕವಾಗಿ ಶುಭ ಹಾರೈಸಿದರು. ಈ ಭೇಟಿಯ ಸಂದರ್ಭದಲ್ಲಿ ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ. ವಿಜಯಕುಮಾರ್, ಉಜಿರೆ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ, ಹಿರಿಯ…

Read More

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರಿಷ್ಕೃತ ಕೇಂದ್ರ ಒಪ್ಪಂದ ವ್ಯವಸ್ಥೆಯನ್ನು ಪರಿಚಯಿಸಲು ಸಜ್ಜಾಗಿದ್ದು, ಇದರ ಅಡಿಯಲ್ಲಿ ಗ್ರೇಡ್ ಎ+ ವರ್ಗವನ್ನು ರದ್ದುಗೊಳಿಸಲಾಗುವುದು. ಹೀಗಾಗಿ ವಿರಾಟ್, ರೋಹಿತ್ ಅವರನ್ನು ಬಿಸಿಸಿಐ ಬಿ ದರ್ಜೆಗೆ ಇಳಿಸಿರುವುದರಿಂದ ವೇತನ ಕಡಿತವಾಗಲಿದೆ; ಎಂಬುದಾಗಿ ಮೂಲಗಳು ತಿಳುಸಿವೆ. ಹೊಸ ಮಾದರಿಯನ್ನು ಮಂಡಳಿಯು ಅನುಮೋದಿಸಿದರೆ, ಟೀಮ್ ಇಂಡಿಯಾದ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಬಿ ಗ್ರೇಡ್‌ಗೆ ಸೇರಿಸುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆಯ್ಕೆ ಸಮಿತಿಯ ಪ್ರಸ್ತಾವನೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕೇಂದ್ರ ಒಪ್ಪಂದ ರಚನೆಯಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಸಮಿತಿಯು ಎ+ ವರ್ಗವನ್ನು (ರೂ. 7 ಕೋಟಿ) ರದ್ದುಗೊಳಿಸಿ ಎ, ಬಿ ಮತ್ತು ಸಿ ಎಂಬ ಮೂರು ವಿಭಾಗಗಳನ್ನು ಮಾತ್ರ ಬಿಡಲು ಶಿಫಾರಸು ಮಾಡಿದೆ. ವಿತ್ತೀಯ ಬದಲಾವಣೆಗಳ ಕುರಿತು ಮತ್ತು ಬಿಸಿಸಿಐ ಈ ಹೊಸ ಮಾದರಿಯನ್ನು ಅನುಮೋದಿಸುತ್ತದೆಯೇ ಎಂಬುದರ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ಮುಂದಿನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ…

Read More

ಮದುವೆ ಆಗುತ್ತಿಲ್ಲ ಎನ್ನುವವರು ಈ ಚಿಕ್ಕ ಕೆಲಸವನ್ನು ಮಾಡಿ ನೋಡಿ..?? ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ. ಶನಿ- ಮಂಗಳ- ಸೂರ್ಯ -ರಾಹು.ಮತ್ತು ಕೇತು ಮದುವೆಯಲ್ಲಿ ವಿಳಂಬವನ್ನು ಉಂಟು ಮಾಡುತ್ತವೆ, ಎಂದು ಹೇಳಲಾಗುತ್ತದೆ, ಮದುವೆಯಲ್ಲಿನ ವಿಳಂಬಕ್ಕೆ ಉತ್ತಮ ಪರಿಹಾರಗಳು ನಿರ್ಗತಕರಿಗೆ ಮತ್ತು ಬಡವರಿಗೆ ದಾನ ಮಾಡುವದು, ಹಾಗೂ ಶಿವನನ್ನು ಪೂಜಿಸುವುದು ಮದುವೆ ವಿಳಂಬವನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ, ಜಾತಕಕ್ಕೆ ಅನುಸಾರವಾಗಿ 3-7 ನೇ ಮನೆಯಲ್ಲಿ ಸೂರ್ಯನು.ನಿರ್ಧರಿಸುವ{ ಬಲವಾದ } ಗ್ರಹವಾಗಿದ್ದರೆ ಅದು ಮದುವೆಯಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ, ಮದುವೆಯಲ್ಲಿ ವಿಳಂಬವನ್ನು ತಪ್ಪಿಸಲು ಗೌರಿಶಂಕರ ಮಂತ್ರವು ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಮದುವೆಯಲ್ಲಿ ವಿಳಂಬ ಇರುವ ವ್ಯಕ್ತಿಗಳು. ಪೂರ್ಣ ಭಕ್ತಿ ಮತ್ತು ಶ್ರದ್ಧೆಯಿಂದ ಪ್ರತಿ ದಿನಪಠಿಸಿದರೆ. ಮದುವೆಯಲ್ಲಿನ ವಿಳಂಬವನ್ನು ತಪ್ಪಿಸಬಹುದು, ಶನಿ ಮದುವೆಯಲ್ಲಿ ವಿಳಂಬವನ್ನು ಉಂಟು ಮಾಡಿದರೆ. ಬಹುಷ್ಯ 32 ವರ್ಷದ ನಂತರ ಮದುವೆಯಾಗುವ ಸಾಧ್ಯತೆ ಇರುತ್ತದೆ, ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ…

Read More

ಬೆಂಗಳೂರು : ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಹಣಕಾಸಿನ ಅಕ್ರಮ ನಡೆದಿಲ್ಲ ಎಂಬುದನ್ನು ಸಾಬೀತುಗೊಳಿಸಿರುವ ಲೋಕಾಯುಕ್ತ, ಈ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಇದರಿಂದಾಗಿ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಎದುರಿಸುತ್ತಿದ್ದ ನಿಗಮದ ಅಧ್ಯಕ್ಷ ನರೇಶ್‌ ಕುಮಾರ್‌ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧೀನದಲ್ಲಿರುವ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ 2020-21, 2021-22, 2022-23 ಈ ಅವಧಿಯಲ್ಲಿ “ಸಹಾಯ ಧನ ಯೋಜನೆಯ” ಹೆಸರಿನಲ್ಲಿ ಕೋಟ್ಯಾಂತರ ಹಣ ಅವ್ಯವಹಾರವಾಗಿದೆ. ಫಲಾನುಭವಿಗಳಿಗೆ ಸಿಗಬೇಕಾದ ಸಹಾಯ ಧನ ದುರುಪಯೋಗವಾಗಿದೆ ಎಂದು ಆರೋಪಿಸಿ ದೂರುದಾರರು ಲೋಕಾಯುಕ್ತದಲ್ಲಿ ಪ್ರಕರಣದ ದಾಖಲು ಮಾಡಿದ್ದರು. ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಿದ ಲೋಕಾಯುಕ್ತ, ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ದೂರಿನಲ್ಲಿ ನೀಡಿರುವ ಆರೋಪಗಳಿಗೆ ಯಾವುದೇ ಸಾಕ್ಷಾಧಾರಗಳಿಲ್ಲ. ಸಿಕ್ಕ ಸಾಕ್ಷಿಗಳು ಸಹಾಯ ಧನ ಸಿಕ್ಕಿರುವ ಬಗ್ಗೆ ಖಚಿತ ಮಾಹಿತಿ ನೀಡಿದ್ದು, ಈ ಎಲ್ಲ ವಿಷಯಗಳನ್ನು ಆಧರಿಸಿ ಈ ಪ್ರಕರಣವನ್ನು ಮುಕ್ತಾಯಗೊಳಿಸಿದೆ ಎಂದು ಲೋಕಾಯುಕ್ತ…

Read More

ನವದೆಹಲಿ: 2026ನೇ ಹಣಕಾಸು ವರ್ಷದಲ್ಲಿ ಭಾರತವು ಶೇ.7.3 ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ತಿಳಿಸಿದೆ. ಮುಖ್ಯವಾಗಿ, ವಿಶ್ವ ಹಣಕಾಸು ಸಂಸ್ಥೆಯು ಅಕ್ಟೋಬರ್‌ನಲ್ಲಿ ನೀಡಿದ್ದ ಮುನ್ಸೂಚನೆಗಿಂತ ಶೇ.0.7 ರಷ್ಟು ಏರಿಕೆ ಮಾಡಿದ್ದು, ಆರ್ಥಿಕತೆಯ ನಿರೀಕ್ಷೆಗಿಂತ ಉತ್ತಮ ಸಾಧನೆಯಿಂದಾಗಿ ಈ ಮುನ್ಸೂಚನೆ ದೊರೆತಿದೆ. ಆದಾಗ್ಯೂ, ಆವರ್ತಕ ಅಂಶಗಳು ಮಸುಕಾಗುವುದರಿಂದ ಮುಂದಿನ ಎರಡು 2026-27 ಮತ್ತು 2027-28ರಲ್ಲಿ ಭಾರತದ ಬೆಳವಣಿಗೆ 6.4% ಕ್ಕೆ ನಿಧಾನವಾಗುವ ಸಾಧ್ಯತೆಯಿದೆ. ಮಾರ್ಚ್ 31 ಕ್ಕೆ ಕೊನೆಗೊಂಡ ವರ್ಷದಲ್ಲಿ ಭಾರತದ ರಾಷ್ಟ್ರೀಯ ಅಂಕಿಅಂಶ ಕಚೇರಿಯು ಬೆಳವಣಿಗೆಯ ಅಂದಾಜನ್ನು 7.4% ಕ್ಕೆ ಏರಿಸಿದ ನಂತರ IMF ಈ ಮುನ್ಸೂಚನೆ ನೀಡಿದೆ. ಇದಕ್ಕೂ ಮೊದಲು, ಸರ್ಕಾರವು ಆರ್ಥಿಕತೆಯು ಶೇ.6.3 ರಿಂದ ಶೇ.6.8 ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಿತ್ತು. ಸೋಮವಾರ ಬಿಡುಗಡೆಯಾದ ವಿಶ್ವ ಆರ್ಥಿಕ ಮುನ್ನೋಟ ವರದಿಯಲ್ಲಿ, 2026 ರ ಆರ್ಥಿಕ ವರ್ಷದ ಏರಿಕೆಯ ಪರಿಷ್ಕರಣೆಯು “ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಬಲವಾದ…

Read More

ಬೆಂಗಳೂರು: ಕಾಂಗ್ರೆಸ್  ಸರ್ಕಾರದ ನಿಷ್ಕ್ರಿಯ ಆಡಳಿತ ಹಾಗೂ ಅಸಮರ್ಥ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಂದ ನಮ್ಮ ರಾಜ್ಯದ ಹೆಮ್ಮೆಯ ಪೊಲೀಸ್‌ ಇಲಾಖೆಯ ಮಾನ ಮತ್ತೊಮ್ಮೆ ಹರಾಜಾಗಿದೆ ಎಂಬುದಾಗಿ ಜೆಡಿಎಸ್ ಕಿಡಿಕಾರಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜೆಡಿಎಸ್ ಗೃಹ ಸಚಿವ ಪರಮೇಶ್ವರ್‌ ಅವರ ಆಪ್ತ ಡಿಜಿಪಿ ರಾಮಚಂದ್ರ ರಾವ್‌ ರಾಸಲೀಲೆ ಬಯಲಾಗಿದ್ದು, ರಾಜ್ಯ ಪೊಲೀಸ್‌ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ಪೊಲೀಸ್‌ ಸಮವಸ್ತ್ರದ ಘನತೆ ಮರೆತು, ಕಚೇರಿಯಲ್ಲೇ ಮಹಿಳೆಯರೊಂದಿಗೆ ಇಂತಹ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧ ಎಂದಿದೆ. ಅಕ್ರಮ ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ನೆರವು ನೀಡಿದ ಆರೋಪವೂ ಸಹ ಡಿಜಿಪಿ ರಾಮಚಂದ್ರ ರಾವ್‌ ಮೇಲಿತ್ತು. ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯ ಆಡಳಿತ ಹಾಗೂ ಅಸಮರ್ಥ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಂದ ನಮ್ಮ ರಾಜ್ಯದ ಹೆಮ್ಮೆಯ ಪೊಲೀಸ್‌ ಇಲಾಖೆಯ ಮಾನ ಮತ್ತೊಮ್ಮೆ ಹರಾಜಾಗಿದೆ. ಸಿಎಂ ಸಿದ್ಧರಾಮಯ್ಯ  ಅವರು ತತಕ್ಷಣವೇ ಡಿಜಿಪಿ ರಾಮಚಂದ್ರ ರಾವ್‌ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.…

Read More

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಶನೀಶ್ವರ ದೇವಾಲಯಗಳಲ್ಲಿ ಒಂದು ಶ್ರೀ ಕ್ಷೇತ್ರ ಕಂಚಿಗದ್ದೆಯ ಶನೀಶ್ವರ ದೇವಾಲಯ. ಈ ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಆಗಮಿಸುತ್ತದೆ. ಇಂತಹ ಶ್ರೀ ಕ್ಷೇತ್ರದಲ್ಲಿ ಇದೇ ಜನವರಿ 29, 30ರಂದು 23ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವನ್ನು ನೆರವೇರಿಸಲಾಗುತ್ತಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಶ್ರೀ ಕ್ಷೇತ್ರ ಕಂಚಿಗದ್ದೆಯ ಶನೀಶ್ವರ ದೇವಾಲಯದ ಧರ್ಮದರ್ಶಿಗಳಾದಂತ ಬಂಗಾರಪ್ಪ ಅವರು, ಜನವರಿ.29ರಂದು ಬೆಳಗ್ಗೆ 8 ಗಂಟೆಯಿಂದ ಶ್ರೀ ದೇವರಿಗೆ ಫಲಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಹೋಮ, ದೇವನಾದಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ, ಆ ಬಳಿಕ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ ಯಾಗಶಾಲಾ ಪ್ರವೇಶ, ಮಂಡಲಾರಾಧನೆ, ಕಲಶಾ ಸ್ಥಾಪನಾ ಪೂಜಾ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ ಎಂದಿದ್ದಾರೆ. ದಿನಾಂಕ 30-01-2026ರ ಶುಕ್ರವಾರದಂದು ಗಣಪತಿ ಹೋಮ, ಪುಣ್ಯಾಹ, ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಪೂಜೆ ಹಾಗೂ ಶ್ರೀ ಶನೀಶ್ವರ…

Read More

ಬೆಂಗಳೂರು: ರಾಜ್ಯದಲ್ಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹೊಸ ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆಯಿಂದ ಪ್ರಕಟಿಸಲಾಗಿದೆ. ಪ್ರಕಟಿತ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳು, ಶಿಕ್ಷಕರು ಸಹ ಪರೀಕ್ಷೆ ವೇಳೆ ಮೊಬೈಲ್ ಬಳಸುವಂತಿಲ್ಲ ಎಂಬುದಾಗಿ ತಿಳಿಸಲಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ-1ನ್ನು ದಿನಾಂಕ: 05.01.2026 ರಿಂದ 10.01.2026 ರವರೆಗೆ ನಡೆಸಲಾಗಿರುತ್ತದೆ. ಪೂರ್ವ ಸಿದ್ಧತಾ ಪರೀಕ್ಷೆಗೆ ಮುಖ್ಯ ಪರೀಕ್ಷೆಯ ಮಾದರಿಯಂತೆ ಪುಶ್ನೆ ಪತ್ರಿಕೆಗಳನ್ನು ಮಂಡಲಿಯಿಂದ ಸಿದ್ಧಪಡಿಸಿ, ಅಯಾ ದಿನದ ಪ್ರಶ್ನೆಪತ್ರಿಕೆಯನ್ನು ವೇಳಾಪಟ್ಟಿಯಂತೆ ವಿಷಯವಾರು ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ದಿನದಂದು ಪೂರ್ವಾಹ್ನ 07.00 ಗಂಟೆಗೆ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಸಂಬಂಧಿಸಿದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಪ್ರಶ್ನೆಪತ್ರಿಕೆಯನ್ನು ಮುದ್ರಿಸಿಕೊಂಡು ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮವಹಿಸಲು ಉಲ್ಲೇಖಿತ-1ರ ಮಾರ್ಗಸೂಚಿಯಲ್ಲಿ ವಿವರವಾಗಿ ತಿಳಿಸಲಾಗಿತ್ತದೆ ಎಂದಿದ್ದಾರೆ. ಡೌನ್‌ಲೋಡ್ ಮಾಡಿಕೊಂಡಿರುವ ಪ್ರಶ್ನೆಪತ್ರಿಕೆಯ ಮೇಲೆ ಸಂಬಂಧಿಸಿದ ಶಾಲಾ ಸಂಕೇತ Watermark ಬರುವಂತೆ ಕ್ರಮವಹಿಸಲಾಗಿತ್ತು. ಯಾವುದಾದರೂ ಶಾಲೆಯ ಪಶ್ನೆಪತ್ರಿಕೆಗಳು…

Read More

ಶಿವಮೊಗ್ಗ: ಫೆಬ್ರವರಿ.3ರಿಂದ ಸಾಗರದ ಪ್ರಸಿದ್ಧ ಮಾರಿಕಾಂಬ ಜಾತ್ರೆ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನಗರ ಪ್ರದಕ್ಷಿಣೆ ಮಾಡಿದರು. ಆ ಮೂಲಕ ಮಾರಿ ಜಾತ್ರೆಯ ಪ್ರಯುಕ್ತ ನಡೆಯುತ್ತಿರುವಂತ ಸಿದ್ಧತೆಗಳನ್ನು ವೀಕ್ಷಿಸಿದರು. ಇಂದು ಶಿವಮೊಗ್ಗದ ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಮಾರಿಕಾಂಬ ಜಾತ್ರೆಯ ಪ್ರಯುಕ್ತ ಉಳ್ಳೂರು, ಭೀಮನಕೋಣೆ, ಕಲ್ಮನೆ, ಯಡಜಿಗಳೆಮನೆ, ಖಂಡಿಕಾ, ಭೀಮನೇರೆ ಹಾಗೂ ನಾಡಕಲಸೆ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಪಿಡಿಓಗಳ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಾಗರದ ಮಾರಿಕಾಂಬ ಜಾತ್ರೆಯ ಪ್ರಯುಕ್ತ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು. ಈ ಬಳಿಕ ಮಾರಿಕಾಂಬ ದೇವಸ್ಥಾನದ ಬಳಿಗೆ ತೆರಳಿದಂತ ಅವರು, ಜಾತ್ರೆಯ ಪ್ರಯುಕ್ತ ನಡೆಯುತ್ತಿದ್ದಂತ ಸಿದ್ಧತೆಗಳನ್ನು ವೀಕ್ಷಿಸಿದರು. ಅಲ್ಲಿಂದ ನಡೆದುಕೊಂಡೇ ನಗರಸಭೆಯವರೆಗೆ ತೆರಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು, ಮಾರಿಕಾಂಬ ಜಾತ್ರೆಯ ಪ್ರಯುಕ್ತ ಏನೆಲ್ಲಾ ತಯಾರಿ ನಡೆಸಬೇಕು. ವಿದ್ಯುತ್ ದೀಪಾಲಂಕಾರ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ಆ ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು…

Read More

ಬೆಂಗಳೂರು : “ಸಿಎಂ ಸೇರಿ ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂದು ನಮಗೆ ಗೊತ್ತು, ಇದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. ನಿಮ್ಮ ಬೆಂಬಲಿಗರು ಹೈಕಮಾಂಡ್ ತೀರ್ಮಾನದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಕೇಳಿದಾಗ, “ಯಾರು ಹೇಳಿದರು? 140 ಶಾಸಕರು ಕೂಡ ನನ್ನ ಬೆಂಬಲಿಗರೇ. ಸಿಎಂ ಸಿದ್ದರಾಮಯ್ಯ ಅವರು ಕೂಡ ನನಗೆ ಬೆಂಬಲವಾಗಿದ್ದಾರೆ. ನಾನು ಹಾಗೂ ಸಿಎಂ ಅವರು ಏನು ಮಾತನಾಡಿದ್ದೇವೆ ಎಂದು ನಿಮಗೆ ಗೊತ್ತಿದೆಯಾ? ರಾಹುಲ್ ಗಾಂಧಿ ಸಮ್ಮುಖದಲ್ಲಿ ನಾವು ಏನು ಮಾತನಾಡಿಕೊಂಡಿದ್ದೇವೆ, ಹೈಕಮಾಂಡ್ ಸಮ್ಮುಖದಲ್ಲಿ ಏನು ಮಾತನಾಡಿದ್ದೇವೆ, ಎಲ್ಲ ಕೂತು ಏನು ತೀರ್ಮಾನ ಮಾಡಿದ್ದೇವೆ ಎಂದು ನಮಗೆ ಗೊತ್ತಿದೆ. ಈ ವಿಚಾರವನ್ನು ನಿಮ್ಮ ಮುಂದೆ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವೇ? ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ” ಎಂದರು. ರಾಹುಲ್ ಗಾಂಧಿ…

Read More