Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮೇಲೆ ಕರ್ತವ್ಯದ ವೇಳೆಯಲ್ಲಿ ನಡೆಯುವ ಹಲ್ಲೆ, ದೌರ್ಜನ್ಯ, ನಿಂದನೆ ಮಾಡುವವರ ಮೇಲೆ ಕಠಿಣ ಕ್ರಮ ಜಾರಿಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಮನವಿ ಮಾಡಿದ್ದಾರೆ. ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ಅವರ ನಿಯೋಗವು ಡಾ.ಶಾಲಿನಿ ರಜನೀಶ್, ಮುಖ್ಯಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ, ಅವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರಿ ನೌಕರರ ಮೇಲೆ ಕರ್ತವ್ಯದ ವೇಳೆಯಲ್ಲಿ ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರಿಂದ ನಡೆಯುವ ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿ ಕಿರುಕುಳ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಲಾಯಿತ್ತು ಹಾಗೂ ಈ ಸಂಬಂಧ ಕಠಿಣ ಕಾನೂನುಗಳನ್ನು ಜಾರಿಗೆ ತರಲು ಪ್ರಸ್ತಾವನೆಯನ್ನು ಸಲ್ಲಿಸಿದೆ. ನೌಕರರ ಸಂಘದ ಪ್ರಸ್ತಾವನೆಗೆ ಮುಖ್ಯ ಕಾರ್ಯದರ್ಶಿಗಳು ಈ ಹಿಂದೆ ವೈದ್ಯರ ಮೇಲೆ ಹಲ್ಲೆಯಾದಾಗ ರೂಪಿಸಲಾಗಿದ್ದ ಮಾದರಿಯಲ್ಲಿಯೇ ರಾಜ್ಯ ಸರ್ಕಾರಿ ನೌಕರರ ಮೇಲೆ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಆಪ್ತ ಮರಿಗೌಡಗೆ ಇಡಿ ಅಧಿಕಾರಿಗಳು ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣದಲ್ಲಿ ಬಿಗ್ ಶಾಕ್ ನೀಡಲಾಗಿದೆ. ಇಡಿ ಅಧಿಕಾರಿಗಳಿಂದ ಸಿಎಂ ಆಪ್ತ ಮರಿಗೌಡಗೆ ಸೇರಿದಂತೆ 10 ಸ್ಥಿರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಕುರಿತಂತೆ ಜಾರಿ ನಿರ್ದೇಶನಾಲಯದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಿದ್ದರಾಮಯ್ಯ ಮತ್ತು ಇತರರ (ಮುಡಾ ಹಗರಣ) ಪ್ರಕರಣದಲ್ಲಿ 2002 ರ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ, ಬೆಂಗಳೂರು ವಲಯ ಕಚೇರಿಯ ಜಾರಿ ನಿರ್ದೇಶನಾಲಯ (ಇಡಿ) 21.01.2026 ರಂದು 10 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ, ಅಂದರೆ 06 ಅಕ್ರಮವಾಗಿ ಮುಡಾ ನಿವೇಶನಗಳು, 03 ಸ್ಥಿರ ಆಸ್ತಿಗಳು ಮತ್ತು 20.85 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಒಂದು ವಾಣಿಜ್ಯ ಕಟ್ಟಡ ಇದಾಗಿದೆ ಎಂದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ ಅಕ್ರಮ ನಿವೇಶನ ಹಂಚಿಕೆಯಲ್ಲಿ ದೊಡ್ಡ ಪ್ರಮಾಣದ ಹಗರಣದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಮೈಸೂರಿನಲ್ಲಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮೇಲೆ ಕರ್ತವ್ಯದ ವೇಳೆಯಲ್ಲಿ ನಡೆಯುವ ಹಲ್ಲೆ, ದೌರ್ಜನ್ಯ, ನಿಂದನೆ ಮಾಡುವವರ ಮೇಲೆ ಕಠಿಣ ಕ್ರಮ ಜಾರಿಗೊಳಿಸುವಂತೆ ಸರ್ಕಾರವನ್ನು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಒತ್ತಾಯಿಸಿದ್ದಾರೆ. ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ಅವರ ನಿಯೋಗವು ಡಾ.ಶಾಲಿನಿ ರಜನೀಶ್, ಮುಖ್ಯಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ, ಅವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರಿ ನೌಕರರ ಮೇಲೆ ಕರ್ತವ್ಯದ ವೇಳೆಯಲ್ಲಿ ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರಿಂದ ನಡೆಯುವ ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿ ಕಿರುಕುಳ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಲಾಯಿತ್ತು ಹಾಗೂ ಈ ಸಂಬಂಧ ಕಠಿಣ ಕಾನೂನುಗಳನ್ನು ಜಾರಿಗೆ ತರಲು ಪ್ರಸ್ತಾವನೆಯನ್ನು ಸಲ್ಲಿಸಿದೆ. ನೌಕರರ ಸಂಘದ ಪ್ರಸ್ತಾವನೆಗೆ ಮುಖ್ಯ ಕಾರ್ಯದರ್ಶಿಗಳು ಈ ಹಿಂದೆ ವೈದ್ಯರ ಮೇಲೆ ಹಲ್ಲೆಯಾದಾಗ ರೂಪಿಸಲಾಗಿದ್ದ ಮಾದರಿಯಲ್ಲಿಯೇ ರಾಜ್ಯ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿದವರ ಮೇಲೆಯೂ ಕಠಿಣ ಕಾನೂನು ಕ್ರಮ ಕೈಗೊಳ್ಳುವ…
ಶಿವಮೊಗ್ಗ: ಸಾಗರದ ಗಣಪತಿ ದೇವಸ್ಥಾನಕ್ಕೆ ಭಕ್ತರ ಕಾಣಿಕೆಯ ಮಹಾಪೂರವೇ ಹರಿದು ಬಂದಿದೆ. ಇಂದು ನಡೆದಂತ ಹುಂಡಿ ಏಣಿಕೆ ಕಾರ್ಯದಲ್ಲಿ ಬರೋಬ್ಬರಿ 8 ಲಕ್ಷದ 80 ಸಾವಿರದ 910 ರೂಪಾಯಿ ನಗದು ಸಂಗ್ರಹವಾಗಿದೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಗಣಪತಿ ದೇವಸ್ಥಾನದ ಹುಂಡಿ ಏಣಿಕೆ ಕಾರ್ಯವು ಕಾರ್ಯನಿರ್ವಹಣಾಧಿಕಾರಿ ಪ್ರಮಿಳಾ ಕುಮಾರಿ ನೇತೃತ್ವದಲ್ಲಿ ನಡೆಯಿತು. ಇಂದು ನೋಟಿನ ಏಣಿಕೆ ಮಾತ್ರವೇ ನಡೆಸಲಾಗಿದ್ದು, ಬರೋಬ್ಬರಿ 8 ಲಕ್ಷದ 80 ಸಾವಿರದ 910 ರೂಪಾಯಿ ಹಣ ಸಂಗ್ರಹವಾಗಿ ಹರಿದು ಬಂದಿದೆ. ಇನ್ನೂ ಗಣಪತಿ ದೇವಸ್ಥಾನದ ಹುಂಡಿಯ ಕಾಣಿಕೆ ಏಣಿಕೆ ಬಾಕಿ ಇದ್ದು, ಅದರ ಏಣಿಕೆಯ ನಂತ್ರ ಎಷ್ಟು ಹಣ ಬಂದಿರುವುದು ಖಚಿತಗೊಳ್ಳಲಿದೆ. ಅಂದಹಾಗೇ ಈ ಹಿಂದೆ ಜುಲೈ.17, 2025ರಂದು ಗಣಪತಿ ದೇವಸ್ಥಾನದ ಹುಂಡಿಯನ್ನು ತೆರೆದು ಏಣಿಕೆ ಮಾಡಲಾಗಿತ್ತು. ಅದು 9 ಲಕ್ಷದ 42 ಸಾವಿರದ 895 ಹಣ ಸಂಗ್ರಹವಾಗಿತ್ತು. ಇಂದಿನ ಹುಂಡಿ ಹಣಕ್ಕೂ, ಈ ಹಿಂದಿನ ಹುಂಡಿ ಹಣಕ್ಕೂ ಭಕ್ತರ ಕಾಣಿಕೆಯು ಕೊಂಚ ಮಟ್ಟಿಗೆ ಹೆಚ್ಚಾಗಿರೋದು ಕಂಡು ಬಂದಿದೆ.…
ಬೆಂಗಳೂರು: ಗಂಭೀರ ಕರ್ತವ್ಯ ಲೋಪ, ಶಿಸ್ತು ನಿಯಮ ಉಲ್ಲಂಘನೆ ಆರೋಪದ ಹಿನ್ನಲೆಯಲ್ಲಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ನೋಟಿಸ್ ನೀಡಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚನೆಯ ಮೇರೆಗೆ ಕೆಪಿಟಿಸಿಎಲ್ ಎಂ.ಡಿಯಾಗಿರುವಂತ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ಸಿಎಸ್ ಶಾಲಿನಿ ರಜನೀಶ್ ಅವರು ನೋಟಿಸ್ ನೀಡಿದ್ದಾರೆ. ಸಿಎಂ ಸೂಚನೆ ಮೇರೆಗೆ ಪಂಕಜ್ ಕುಮಾರ್ ಪಾಂಡೆಗೆ ನೋಟಿಸ್ ನೀಡಲಾಗಿದ್ದು, ಉಕ್ಷಣವೇ ತಮ್ಮ ಮೇಲಿನ ಗಂಭೀರ ಕರ್ತವ್ಯ ಲೋಪ, ಶಿಸ್ತು ಕ್ರಮದ ಉಲ್ಲಂಘನೆಯ ಬಗ್ಗೆ ಉತ್ತರ ನೀಡುವಂತೆ ಸಿಎಸ್ ಶಾಲಿನಿ ರಜನೀಶ್ ಸೂಚಿಸಿದ್ದಾರೆ. ಜನವರಿ.20ರಂದು ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿಗೆ ಸೂಚಿಸಲಾಗಿತ್ತು. ಆದರೇ ಪಂಕಜ್ ಕುಮಾರ್ ಪಾಂಡೆ ಅವರು ಸರಿಯಾದ ಸಮಯಕ್ಕೆ ಸಿಎಂ ಭೇಟಿಯಾಗದೇ ಕಡೆಗಣಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದಂತ ಸಿಎಂ ಸಿದ್ಧರಾಮಯ್ಯ ಕೆಂಡಾಮಂಡಲರಾಗಿದ್ದರು. ಮುಖ್ಯಮಂತ್ರಿ ಕರೆ ಮೇರೆಗೆ ಹಾಜರಾಗದೇ ಕರ್ತವ್ಯಲೋಪ ಎಸಗಿದ್ದಂತ ಆರೋಪ ಪಂಕಜ್ ಕುಮಾರ್ ಪಾಂಡೆ ಮೇಲಿತ್ತು. ಗಂಭೀರ…
ಬೆಂಗಳೂರು: ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಇತ್ತೀಚೆಗಷ್ಟೇ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಮಂಜುನಾಥ ಪೂಜಾರಿ ಗುರುವಾರ ಸರಳವಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 26 ಪಂಗಡಗಳ ತಳ ಸಮುದಾಯದ ಹಿತಾಸಕ್ತಿಗಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯದಂತೆ ಉತ್ತಮವಾಗಿ ಸೇವೆ ಮಾಡುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುವುದಾಗಿ ಅವರು ಹೇಳಿದರು. ಸಮಾಜದ ಮುಖಂಡರು ಹಾಗೂ ಸ್ವಾಮೀಜಿಗಳ ವಿಶ್ವಾಸ ಪಡೆದು ಉತ್ತಮವಾಗಿ ಸಮಾಜದ ಅಭಿವೃದ್ಧಿ ಗೆ ಶ್ರಮಿಸುವುದಾಗಿ ಅವರು ನುಡಿದರು. ಇದೇ ಸಂದರ್ಭದಲ್ಲಿ ನಿಗಮದ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜೀವ ಎನ್.ಕೂಲೇರ ಹಾಗೂ ಸಿಬ್ಬಂದಿ ಹಾಜರಿದ್ದರು. https://kannadanewsnow.com/kannada/good-news-for-the-nomadic-semi-nomadic-community-from-the-state-government-assistance-for-house-construction-from-now-on/ https://kannadanewsnow.com/kannada/5-years-age-relaxation-for-all-candidates-in-government-recruitment-in-the-state-cabinet-decision/
ಬೆಂಗಳೂರು: ರಾಜ್ಯ ಸರ್ಕಾರದಿಂದ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಜನರಿಗೆ ಸಿಹಿಸುದ್ದಿ ನೀಡಲಾಗಿದೆ. ಅದೇನು ಅಂದ್ರೆ ಇನ್ಮುಂದೆ ಮನೆ ನಿರ್ಮಾಣಕ್ಕೆ ನೆರವು ನೀಡೋದಕ್ಕೆ ಇಂದಿನ ಸಂಪುಟ ಸಭೆಯಲ್ಲಿ 100 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇಂದಿನ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಿವಿಲ್ ಸೇವಾ ಹುದ್ದೆಗಳ ನೇಮಕಾತಿ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಡಿಸೆಂಬರ್.31, 2027ರವರೆಗೆ ಹೊರಡಿಸುವ ಅಧಿಸೂಚನೆಗೆ ಈ ನಿಯಮ ಅನ್ವಯವಾಗಲಿದೆ. ಸಾಮಾನ್ಯ ವರ್ಗಕ್ಕೆ 35 ರಿಂದ 40 ವರ್ಷ, ಎಸ್ಸಿ-ಎಸ್ಟಿಗಳಿಗೆ 38ರಿಂದ 43 ವರ್ಷಕ್ಕೆ ವಯೋಮಿತಿ ಸಡಿಲಿಕೆಯ ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೇ 22 ಹಿಂದುಳಿದ/ ದಲಿತ ಮಠಗಳಿಗೆ ಜಾಗ ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರು ನಗರ ಜಿಲ್ಲೆ, ಉತ್ತರ ತಾಲೂಕಿನ ದಾಸನಪುರ ಹೋಬಳಿಯಲ್ಲಿ ಜಾಗ ಮಂಜೂರಿಗೆ ಒಪ್ಪಿಗೆ ನೀಡಲಾಗಿದೆ. ರಾವುತ್ತನಹಳ್ಳಿ ಗ್ರಾಮದ ಸರ್ವೇ 57, 58 ರಲ್ಲಿರುವ ಸರ್ಕಾರಿ ಜಮೀನು ದಲಿತ,…
ಧಾರವಾಡ: ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿದ ಆರೋಪವು ಸಾಭೀತಾದ ಹಿನ್ನಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಗೆ 4 ವರ್ಷ ಜೈಲು ಶಿಕ್ಷೆಯಲ್ಲದೇ 1 ಲಕ್ಷ ದಂಡವನ್ನು ವಿಧಿಸಿ ಧಾರವಾಡದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶಿಸಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದಂತ ಆರೋಪದಡಿ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಅಂದಾನಗೌಡ ಪಾಟೀಲ್ ಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರಿಗೆ ಸಂಬಂಧಿಸಿದಂತ 51,72,003 ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆಗಸ್ಟ್.6, 2014ರಂದು ತುಂಗಾ ಮೇಲ್ದಂಡೆಯ ಸಿಇ ಅಂದಾನಗೌಡ ಪಾಟೀಲ್ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿತ್ತು. ಲೋಕಾಯುಕ್ತ ಎಸ್ಪಿ ಕೆ.ಪರಶುರಾಮ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು. ಇದೇ ಪ್ರಕರಣದಲ್ಲಿ ಕೋರ್ಟ್ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದು ಸಾಭೀತಾದ ಹಿನ್ನಲೆಯಲ್ಲಿ ನಾಲ್ಕು ವರ್ಷ ಜೈಲು, 1 ಲಕ್ಷ ದಂಡವನ್ನು ವಿಧಿಸಿ ಆದೇಶಿಸಿದೆ. https://kannadanewsnow.com/kannada/nita-ambani-donates-rs-5-crore-to-nab-from-reliance-foundation/ https://kannadanewsnow.com/kannada/5-years-age-relaxation-for-all-candidates-in-government-recruitment-in-the-state-cabinet-decision/
ನವದೆಹಲಿ: ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ (ಎನ್ಎಬಿ) ಇಂಡಿಯಾದ 75 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ, ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು ಎನ್‌ಎಬಿಗೆ ರಿಲಯನ್ಸ್ ಫೌಂಡೇಶನ್ ಪರವಾಗಿ 5 ಕೋಟಿ ರೂ.ಗಳ ವಿಶೇಷ ನೆರವು ಘೋಷಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಈ ನೆರವು ನೀಡಲಾಗುವುದು. ದೃಷ್ಟಿ ಕಳೆದುಕೊಂಡಿರುವ ದುಡಿಯುವ ಮಹಿಳೆಯರು ಮತ್ತು ಬಾಲಕಿಯರಿಗಾಗಿ ವಸತಿ ನಿಲಯಗಳನ್ನು ನವೀಕರಿಸಲಾಗುವುದು ಮತ್ತು ಪರಿವರ್ತಿಸಲಾಗುವುದು. ಈ ಹಾಸ್ಟೆಲ್ ಸುರಕ್ಷಿತ, ಗೌರವಯುತ ಮತ್ತು ಸ್ವಾವಲಂಬಿ ವರ್ಧಕವಾಗಿದೆ. ರಿಲಯನ್ಸ್ ಫೌಂಡೇಶನ್, ಎನ್ಎಬಿ ಇಂಡಿಯಾ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ಕೌಶಲ್ಯ ನಿರ್ಮಾಣ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಬ್ರೈಲ್ ಲಿಪಿಯಲ್ಲಿ ಓದುವುದು ಮತ್ತು ಬರೆಯುವುದು, ಕ್ರೀಡೆ, ಸಂಸ್ಕೃತಿ, ಸೃಜನಶೀಲ ಅಭಿವ್ಯಕ್ತಿ ಮತ್ತು ವಿಶೇಷ ಶಿಕ್ಷಕರ ತರಬೇತಿಗೆ ವಿಶೇಷ ಗಮನ ನೀಡಲಾಗುವುದು. ಮಕ್ಕಳಿಗಾಗಿ ಸುಂದರವಾದ ಹೊಸ ಆಟದ ಪ್ರದೇಶವನ್ನು ಸಹ ನಿರ್ಮಿಸಲಾಗುವುದು. ಈ ಸಂದರ್ಭದಲ್ಲಿ ಮಾತನಾಡಿದ ನೀತಾ ಅಂಬಾನಿ, ರಿಲಯನ್ಸ್ ಫೌಂಡೇಶನ್‌ನ ‘ದೃಷ್ಟಿ ಕಾರ್ಯಕ್ರಮ’ದ ಅಡಿಯಲ್ಲಿ, ಎನ್ಎಬಿ ಸಹಯೋಗದೊಂದಿಗೆ ಶಿಕ್ಷಣ,…
ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಡಿಸೆಂಬರ್ 31, 2027ರವರೆಗೆ ಎಲ್ಲಾ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಸೇರಿದಂತೆ ಇತರೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಆ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದಿನ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಿವಿಲ್ ಸೇವಾ ಹುದ್ದೆಗಳ ನೇಮಕಾತಿ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಡಿಸೆಂಬರ್.31, 2027ರವರೆಗೆ ಹೊರಡಿಸುವ ಅಧಿಸೂಚನೆಗೆ ಈ ನಿಯಮ ಅನ್ವಯವಾಗಲಿದೆ. ಸಾಮಾನ್ಯ ವರ್ಗಕ್ಕೆ 35 ರಿಂದ 40 ವರ್ಷ, ಎಸ್ಸಿ-ಎಸ್ಟಿಗಳಿಗೆ 38ರಿಂದ 43 ವರ್ಷಕ್ಕೆ ವಯೋಮಿತಿ ಸಡಿಲಿಕೆಯ ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೇ 22 ಹಿಂದುಳಿದ/ ದಲಿತ ಮಠಗಳಿಗೆ ಜಾಗ ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರು ನಗರ ಜಿಲ್ಲೆ, ಉತ್ತರ ತಾಲೂಕಿನ ದಾಸನಪುರ ಹೋಬಳಿಯಲ್ಲಿ…














