ಕಲಬುರ್ಗಿ : ಕಲ್ಬುರ್ಗಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಹಾಡ ಹಗಲೇ ವ್ಯಕ್ತಿಯ ಮೇಲೆ ಗುಂಡು ಹಾರೀದಿ ನಂತರ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ಬಲರಾಮ ಚೌಕ್ ಬಳಿ ಇರ್ಫಾನ್ (42) ಎನ್ನುವ ವ್ಯಕ್ತಿಯ ಭೀಕರ ಹತ್ಯೆ ನಡೆದಿದೆ.
ಬಾಯ್ ಬಾಯ್ ಗ್ರೂಪ್ ಮುಖಂಡ ಇರ್ಫಾನ್ ಇದೀಗ ಕೊಲೆಯಾಗಿದ್ದಾರೆ. ಮೊದಲು ಇರ್ಫಾನ್ ಮೇಲೆ ಗುಂಡು ಹಾರಿಸಿ ನಂತರ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸೇವಾಲಾಲ್ ಮಂದಿರ ಬಳಿ ಬೈಕ್ ಅಡ್ಡಗಟ್ಟಿ ಈ ಒಂದು ದುಷ್ಕೃತ್ಯ ಎಸಗಿದ್ದಾರೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಇರ್ಫಾನನ್ನು ಕೊಂದಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








